11 ಸಾವಿರ ಎಕರೆ ಬಿಡಿಎ ಜಾಗ ಕಂಡವರ ಪಾಲು
Team Udayavani, Jul 18, 2021, 4:37 PM IST
ಬೆಂಗಳೂರು:ಬೆಂಗಳೂರು ಅಭಿವೃದ್ಧಿಪ್ರಾಧಿಕಾರ(ಬಿಡಿಎ)ದ ಸುಮಾರು 11 ಸಾವಿರಎಕರೆಪ್ರದೇಶಕಂಡವರ ಪಾಲಾಗಿದೆ. ಜತೆಗೆ ಪ್ರಾಧಿಕಾರವುಭೂಸ್ವಾಧೀನಪಡಿಸಿಕೊಂಡಿರುವ ಜಾಗದಲ್ಲಿಸುಮಾರು 75 ಸಾವಿರಕ್ಕೂ ಅಧಿಕ ಮನೆಗಳನ್ನುನಿರ್ಮಿಸಲಾಗಿದೆ!- ಇದನ್ನು Óತಃ Ì ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಬಹಿರಂಗಪಡಿಸಿದ್ದಾರೆ.
ಲ್ಯಾಂಡ್‌ಆಡಿಟಿಂಗ್‌ನಲ್ಲಿ ಗುರುತಿಸಲಾಗಿರುವ ಜಾಗದಬಗೆಗಿನ ಅಧಿಸೂಚನೆಗಳು ವಿವಿಧ ಹಂತದಲ್ಲಿವೆ.ನ್ಯಾಯಾಲಯಗಳಲ್ಲಿ ಪ್ರಕರಣಗಳೂ ನಡೆಯುತ್ತಿವೆ.ಈಹಿನ್ನೆಲೆಯಲ್ಲಿ ಭೂಮಾಲೀಕರಿಗೆ ಒಂದುಬಾರಿಯ ಪರಿಹಾರದ ರೂಪದ ಯೋಜನೆ ಅಡಿಪರಿಹಾರ ನೀಡಲು ಅವಕಾಶ ನೀಡುವಂತೆಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆಎಂದರು.ಪ್ರಾಧಿಕಾರಕ್ಕೆ ಸೇರಿದ ಲ್ಯಾಂಡ್ ಆಡಿಟಿಂಗ್‌ಪ್ರಗತಿಯಲ್ಲಿದ್ದು, ಆಸ್ತಿಯನ್ನು ಗುರುತಿಸುವಪ್ರಕ್ರಿಯೆ ಚಾಲ್ತಿಯಲ್ಲಿದೆ.
ಇದುವರೆಗೆ11 ಸಾವಿರಎಕರೆಯಷ್ಟು ಪ್ರದೇಶ ಬಿಡಿಎಗೆ ಸೇರಿದ್ದು ಎಂದುವರದಿಯಲ್ಲಿ ತಿಳಿಸಲಾಗಿದೆ. ಆಗಸ್ಟ್ 5ರ ನಂತರಈ ಜಾಗಗಳನ್ನು ಮರು ಸ್ವಾಧೀನಪಡಿಸಿಕೊಳ್ಳುವಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದುಹೇಳಿದರು.”ಕಳೆದ ಹಲವು ತಿಂಗಳಿಂದ ಪ್ರಾಧಿಕಾರಕ್ಕೆಸೇರಿದ ಆಸ್ತಿಯ ಪೈಕಿ 400ರಿಂದ 500 ಎಕರೆಯಷ್ಟು ಪ್ರದೇಶಗಳನ್ನು ವಿವಿಧ ಬಡಾವಣೆಗಳಲ್ಲಿಗುರುತಿಸಿದ್ದೇವೆ.
ಈಭೂಮಿಯ ಬಗ್ಗೆನ್ಯಾಯಾಲಯಗಳು ಬಿಡಿಎ ಪರ ತೀರ್ಪು ನೀಡಿದ್ದು,ತೆರವುಗೊಳಿಸಲು ಹಸಿರು ನಿಶಾನೆ ನೀಡಿವೆ.ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಯಾವುದೇಅಕ್ರಮವಾಗಿ ನಿರ್ಮಾಣವಾಗಿರುವಕಟ್ಟಡಗಳನ್ನುಜುಲೈ5ರವರೆಗೆ ನೆಲಸಮ ಮಾಡಬಾರದುಎಂದು ನ್ಯಾಯಾಲಯಆದೇಶ ನೀಡಿತ್ತು.ಇದೀಗಮತ್ತೆ ಈ ಅವಧಿಯನ್ನು ಆ.5ರವರೆಗೆ ವಿಸ್ತರಣೆಮಾಡಿದ್ದು, ಈ ಗಡುವಿನ ಬಗ್ಗೆ ನ್ಯಾಯಾಲಯಮುಂದಿನ ಆದೇಶ ನೀಡಿದ ನಂತರ ನೆಲಸಮಪ್ರಕ್ರಿಯೆ ಆರಂಭಿಸಲಾಗುÊುದ ು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.