ಕ್ಷೇತ್ರದ ಅಭಿವೃದ್ಧಿಗೆ ಅವಿರತ ಶ್ರಮ

Team Udayavani, Jul 24, 2021, 4:54 PM IST

bangalore news

ಒಂದು ಕಡೆ ಶಾಸಕರಾಗಿ ಕ್ಷೇತ್ರದಸರ್ವತೋಮುಖ ಅಭಿವೃದ್ಧಿಯ ಕಾಳಜಿ ಜತೆಗೆಸಚಿವರಾಗಿ ರಾಜ್ಯದ ಹಿತ ಚಿಂತನೆ, ಇಲಾಖೆಯಯೋಜನೆಗಳ ಪರಿಣಾಮಕಾರಿ ಅನುಷ್ಠಾನಬದ್ಧತೆಯೊಂದಿಗೆ ಸಾಗಿ ಬಂದವರು ಬೃಹತ್‌ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶಶೆಟ್ಟರ.

ಹುಬ್ಬಳ್ಳಿ-ಧಾರವಾಡ ಮಹಾನಗರ ಅಭಿವೃದ್ಧಿನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ರಾಜ್ಯಸರಕಾರದಿಂದ ಹತ್ತು ಹಲವು ಯೋಜನೆಗಳನ್ನುಹೊತ್ತು ತಂದಿದ್ದಾರೆ. ಕೇಂದ್ರ ಸರಕಾರದಿಂದಲೂಅಭಿವೃದ್ಧಿ ಯೋಜನೆಗಳ ಲಾಭ ಪಡೆಯುವನಿಟ್ಟಿನಲ್ಲಿ ತಮ್ಮದೇ ಶ್ರಮ ಹಾಕಿದ್ದಾರೆ. ರಸ್ತೆ,ಉದ್ಯಾನವನ, ಕುಡಿಯುವ ನೀರು ಸೇರಿದಂತೆ ವಿವಿಧ ಮೂಲ ಸೌಲಭ್ಯಕಲ್ಪಿಸುವಲ್ಲಿ ಪ್ರಾಮಾಣಿಕಯತ್ನ ತೋರಿದ್ದಾರೆ.

ಕೋವಿಡ್‌ ನಿರ್ವಹಣೆಗೆ ಅವಿರತ ಶ್ರಮ:ಕೋವಿಡ್‌ ಮೊದಲ-ಎರಡನೇ ಅಲೆ ನಿರ್ವಹಣೆನಿಟ್ಟಿನಲ್ಲಿ ಶಾಸಕರಾಗಿ ಕ್ಷೇತ್ರದಲ್ಲಿ, ಸಚಿವರಾಗಿರಾಜ್ಯದಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಆಮ್ಲಜನಕದ ಕೊರತೆ ಎದುರಾದಾಗ ಅದರ ನಿರ್ವಹಣೆ ಹೊಣೆಯನ್ನುಮುಖ್ಯಮಂತ್ರಿಬಿ.ಎಸ್‌.ಯಡಿಯೂರಪ್ಪ ಅವರು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದಜಗದೀಶ ಶೆಟ್ಟರ ಅವರಿಗೆ ವಹಿಸಿದ್ದರು.ಆಮ್ಲಜನಕ ಉತ್ಪಾದನೆ ಹೆಚ್ಚಿಸಲು ಹಾಗೂ ಕೈಗಾರಿಕಾ ಬಳಕೆಗೆಂದು ಇದ್ದ ಆಮ್ಲಜನಕವನ್ನು ಆಸ್ಪತ್ರೆ ಬಳಕೆಗೆ ವಿನಿಯೋಗಿಸುವ ನಿಟ್ಟಿನಲ್ಲಿಸಾಕಷ್ಟು ಶ್ರಮಿಸಿದ್ದರು.

ಸ್ಥಗಿತಗೊಂಡಿದ್ದ ಭದ್ರಾವತಿಯ ವಿಐಎಸ್‌ಎಲ್‌ ಆಮ್ಲಜನಕ ಘಟಕ ಪುನರಾರಂಭಗೊಳ್ಳುವಂತೆ ಮಾಡಿದ್ದರು. ಧಾರವಾಡಜಿಲ್ಲೆಯ ಸತ್ತೂರಿನಲ್ಲಿರುವ ಆಮ್ಲಜನಕ ವಿತರಣೆ ಘಟಕಕ್ಕೂ ಭೇಟಿನೀಡಿ ಪರಿಶೀಲಿಸಿದ್ದರು. ಧಾರವಾಡ ಜಿಲ್ಲೆಯಲ್ಲಿ ಆಮ್ಲಜನಕ ಕೊರತೆಆಗದಂತೆ ಅಗತ್ಯ ಕ್ರಮ ಕೈಗೊಂಡಿದ್ದರು.ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೋವಿಡ್‌ ನಿರ್ವಹಣೆನಿಟ್ಟಿನಲ್ಲಿ ನಿಗಾ ವಹಿಸುವುದು, ನಿರಂತರವಾಗಿ ಅಧಿಕಾರಿಗಳೊಂದಿಗೆಸಭೆ ನಡೆಸಿ ಮಾಹಿತಿ ಪಡೆಯುವ, ಅಗತ್ಯ ಸಲಹೆ-ಸೂಚನೆ ನೀಡುವಕಾರ್ಯ ಕೈಗೊಂಡಿದ್ದರು.

ಕಿಮ್ಸ್‌-ಜಿಲ್ಲಾಸ್ಪತ್ರೆಗಳಿಗೆ ಖುದ್ದಾಗಿ ಭೇಟಿನೀಡುವ ಮೂಲಕ ನಿರ್ವಹಣೆ ಹಾಗೂ ಚಿಕಿತ್ಸೆ ಕುರಿತು ವೀಕ್ಷಣೆಮಾಡುವ, ಮಾಹಿತಿ ಪಡೆಯುವ ಮೂಲಕ ಜನರಿಗೆ ಆತ್ಮಸ್ಥೆ çರ್ಯತುಂಬುವ ಕಾರ್ಯ ಮಾಡಿದ್ದರು.ಕೋವಿಡ್‌ ಲಸಿಕೆ ಬಗೆಗಿನ ವದಂತಿ, ಶಂಕೆ, ಗೊಂದಲ, ಅನುಮಾನನಿವಾರಣೆ ಹಾಗೂ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಜಗದೀಶಶೆಟ್ಟರ ಅವರು ಕಿಮ್ಸ್‌ ಆಸ್ಪತ್ರೆಯಲ್ಲಿ ಲಸಿಕೆ ಪಡೆಯುವ ಮೂಲಕಸಾರ್ವಜನಿಕರು ಲಸಿಕೆ ಪಡೆಯುವುದಕ್ಕೆ ಪ್ರೇರಣೆ ನೀಡಿದ್ದರು.ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ಕೊರತೆ ಆಗದಂತೆ ನೋಡಿಕೊಳ್ಳುವಲ್ಲಿಶ್ರಮಿಸಿದ್ದರು. ಕೋವಿಡ್‌ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಅಸಂಘಟಿತ ಕಾರ್ಮಿಕರು, ಜನರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯಸರಕಾರದ ಕಾರ್ಮಿಕ ಇಲಾಖೆಯಿಂದ ಬಂದ ಆಹಾರಧಾನ್ಯಗಳ ಕಿಟ್‌ಗಳ ವಿತರಣೆ ಸಮರ್ಪಕವಾಗಿ ನಡೆಯುವಂತೆ ನೋಡಿ ಕೊಂಡಿದ್ದರು.

ತಮ್ಮದೇ ಕುಟುಂಬದ ಎಸ್‌.ಎಸ್‌.ಶೆಟ್ಟರ ಫೌಂಡೇಶನ್‌ನಿಂದಸಾವಿರಾರು ಜನರಿಗೆ ಆಹಾರಧಾನ್ಯಗಳ ಕಿಟ್‌ಗಳನ್ನು ವಿತರಿಸಿದ್ದಲ್ಲದೆ,ಇನ್ಫೋಸಿಸ್‌ ಪ್ರತಿಷ್ಠಾನ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು,ಕಂಪನಿಗಳು ನೀಡಿದ ಆಹಾರಧಾನ್ಯಗಳ ಕಿಟ್‌, ಔಷಧ ಕಿಟ್‌ಗಳವಿತರಣೆಯಲ್ಲೂ ಪಾಲ್ಗೊಂಡಿದ್ದರು.ಲಾಕ್‌ಡೌನ್‌ ನಡುವೆಯೇ ಕೃಷಿ ಕಾರ್ಯಕ್ಕೆ ತೊಂದರೆಯಾಗದಂತೆಅಗತ್ಯ ಕ್ರಮ ಕೈಗೊಂಡಿದ್ದಲ್ಲದೆ ಕಂದಾಯ, ಕೃಷಿ,ತೋಟಗಾರಿಕಾ ಇಲಾಖೆ ಅಧಿಕಾರಿಗಳೊಂದಿಗೆಸಭೆ ನಡೆಸಿ, ಕೃಷಿ ಚಟುವಟಿಕೆಗೆ ಯಾವುದೇತೊಂದರೆಯಾಗದಂತೆ ರೈತರಿಗೆ ಸಕಾಲಕ್ಕೆ ಬಿತ್ತನೆಬೀಜ, ರಸಗೊಬ್ಬರ ವಿತರಣೆಗೆ ತೊಂದರೆ-ಕೊರತೆ ಆಗದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನಸೂಚನೆ ನೀಡಿದ್ದರು.

ಜಿಲ್ಲೆಯಲ್ಲಿ ಸುಮಾರು 28ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆನೆರವಾಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆಸೂಚಿಸಿದ್ದರು.ಅಭಿವೃದ್ಧಿಯ ಹರಿಕಾರ: ಹುಬ್ಬಳ್ಳಿ-ಧಾರವಾಡಮಹಾನಗರದಲ್ಲಿ ಮೂಲಸೌಕರ್ಯ ಸೇರಿದಂತೆವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆನೀಡುವ, ಉದ್ಘಾಟನೆಗೊಳಿಸುವ ಮೂಲಕಸಚಿವ ಜಗದೀಶ ಶೆಟ್ಟರ ಅವರು ಅಭಿವೃದ್ಧಿಹರಿಕಾರ ಎನಿಸಿದ್ದಾರೆ.

ಅವಳಿನಗರದಲ್ಲಿ 24/7ನೀರು ಪೂರೈಕೆ ಯೋಜನೆ ವಿಸ್ತರಣೆ, ಮಲಪ್ರಭಾನದಿಯಿಂದ ಅವಳಿನಗರಕ್ಕೆ ಸಗಟು ನೀರುತರುವ, ಹುಬ್ಬಳ್ಳಿ-ಧಾರವಾಡದ ಎಲ್ಲ ವಾರ್ಡ್‌ಗಳಿಗೆ 24/7 ನೀರು ಪೂರೈಕೆ ಯೋಜನೆ ವಿಸ್ತರಣೆ, ಕಾಮಗಾರಿಟೆಂಡರ್‌ ಪಡೆದ ಎಲ್‌ ಆ್ಯಂಡ್‌ ಟಿ ಕಂಪನಿಯೊಂದಿಗೆ ಚರ್ಚೆ,ಜೀವಜಲ ಯೋಜನೆಯಡಿ ಧಾರವಾಡ ಜಿಲ್ಲೆಯ ಪ್ರತಿ ಮನೆಗೂಶುದ್ಧ ಕುಡಿಯುವ ನೀರು ತಲುಪಿಸುವ ಅಂದಾಜು 1,032 ಕೋಟಿರೂ.ಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ರಾಜ್ಯಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಮಂಜೂರಾತಿ ಪಡೆಯುವಲ್ಲಿತೋರಿದ ಮುತುವರ್ಜಿ ಅಪಾರ.

ಅವಳಿನಗರದ ಮಧ್ಯದ ಬಿಆರ್‌ಟಿಎಸ್‌ ಯೋಜನೆ, ಕೇಂದ್ರಸರಕಾರದ ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ಮಾರುಕಟ್ಟೆಗಳಅಭಿವೃದ್ಧಿ, ಸಿಆರ್‌ಎಫ್‌ ನಿಧಿಯಡಿ ರಸ್ತೆಗಳ ದುರಸ್ತಿ, ಟೆಂಡರ್‌ಶ್ಯುರ್‌ ರಸ್ತೆ, ತೋಳನಕರೆ, ಇಂದಿರಾ ಗಾಜಿನ ಮನೆ-ಮಹಾತ್ಮಗಾಂಧಿಉದ್ಯಾನವನ, ಕೆಲಗೇರಿ ಕೆರೆ, ಕೋಳಿಕೆರೆ, ಉಣಕಲ್ಲ ಕೆರೆ, ನೆಹರುಮೈದಾನ ಅಭಿವೃದ್ಧಿ, ಗೋಕುಲ ಬಳಿ ಕ್ರೀಡಾ ಸಮುತ್ಛಯನಿರ್ಮಾಣ, ಚನ್ನಮ್ಮ ವೃತ್ತದ ಬಳಿ ಕೇಂದ್ರ ನೆರವಿನ ಫ್ಲೆ ç ಓವರ್‌ನಿರ್ಮಾಣ ಶ್ರೀಕಾರ ಹೀಗೆ ವಿವಿಧ ಅಭಿವೃದ್ಧಿ ಕಾರ್ಯಗಳ ಹಿಂದೆಶೆಟ್ಟರ ಅವರ ದೂರದೃಷ್ಟಿ, ಶ್ರಮ ಗೋಚರಿಸುತ್ತದೆ. ಬೃಹತ್‌ ಮತ್ತುಕೈಗಾರಿಕಾ ಸಚಿವರಾಗಿ ಹುಬ್ಬಳ್ಳಿಯಲ್ಲಿ ಇನ್ವೆಸ್ಟ್‌ ಕರ್ನಾಟಕ ಕೈಗೊಳ್ಳುವಮೂಲಕ ಸ್ಥಳೀಯ ಉದ್ಯಮ ವಲಯಕ್ಕೆ ಚೇತನ ನೀಡುವ,ಹೊರಗಿನ ಉದ್ಯಮಿಗಳನ್ನು ಹೂಡಿಕೆಗೆ ಆಕರ್ಷಿಸುವ ಮಹತ್ವದಯತ್ನ ತೋರಿದ್ದರು.

ಅದರ ಫಲವಾಗಿ ಏಕಸ್‌ ಸೇರಿದಂತೆ ವಿವಿಧಕಂಪನಿಗಳು ಹುಬ್ಬಳ್ಳಿ-ಧಾರವಾಡದಲ್ಲಿ ಹೂಡಿಕೆಗೆ ಮುಂದಾಗಿವೆ.ಸಾವಿರಾರು ಕೋಟಿ ರೂ.ಗಳ ಹೂಡಿಕೆ ಜತೆಗೆ, 25-30 ಸಾವಿರಉದ್ಯೋಗ ಸೃಷ್ಟಿ ಆಗಲಿದೆ. ಉದ್ಯಮಕ್ಕೆ ಪೂರಕವಾಗಿ ಮಮ್ಮಿಗಟ್ಟಿಯಲ್ಲಿಕೈಗಾರಿಕಾ ಪ್ರದೇಶಕ್ಕೆ ಚಾಲನೆ ನೀಡಲಾಗಿದೆ. ಹೀಗೆ ಸಚಿವ ಜಗದೀಶಶೆಟ್ಟರ ಅವರ ಪ್ರಯತ್ನದ ಫಲವಾಗಿ ಅನೇಕ ಅಭಿವೃದ್ಧಿ ಯೋಜನೆಗಳುಅವಳಿನಗರಕ್ಕಾಗಮಿಸಿವೆ, ಇನ್ನಷ್ಟು ಹರಿದು ಬರುತ್ತಿವೆ.

ಟಾಪ್ ನ್ಯೂಸ್

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬಸ್‌ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್‌ ಬಂಧನ

Bengaluru: ಬಸ್‌ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್‌ ಬಂಧನ

Theft Case: ಕದ್ದ ಚಿನ್ನ ಜ್ಯುವೆಲ್ಲರಿಗೆ ಮಾರುವಾಗ ಸಿಕ್ಕಿಬಿದ್ದ!

Theft Case: ಕದ್ದ ಚಿನ್ನ ಜ್ಯುವೆಲ್ಲರಿಗೆ ಮಾರುವಾಗ ಸಿಕ್ಕಿಬಿದ್ದ!

5

Arrested: ಫಾರೆಸ್ಟ್‌ ಗಾರ್ಡ್‌ ಹುದ್ದೆ ತೊರೆದು ಕಳ್ಳತನಕ್ಕಿಳಿದವ ಸೆರೆ

Thefte Case: ಕೆಲಸಕ್ಕಿದ್ದ ಮನೆಯಲ್ಲೇ ರೂ. 12 ಲಕ್ಷ. ಚಿನ್ನ ಕದ್ದಳು

Thefte Case: ಕೆಲಸಕ್ಕಿದ್ದ ಮನೆಯಲ್ಲೇ ರೂ. 12 ಲಕ್ಷ. ಚಿನ್ನ ಕದ್ದಳು

Crime: ಹೆತ್ತ ತಾಯಿಯನ್ನೇ ಕೊಂದ ಮಗ!

Crime: ಹೆತ್ತ ತಾಯಿಯನ್ನೇ ಕೊಂದ ಮಗ!

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.