ಬೆಂಗಳೂರು ನಿರ್ಮಾತೃ ಕೆಂಪೇಗೌಡ
Team Udayavani, Jun 27, 2017, 3:47 PM IST
ಕೆಂಪೇಗೌಡರ ವಂಶಸ್ಥರನ್ನು ಯಲಹಂಕ ಪ್ರಭುಗಳೆಂದೇ ಕರೆಯಲಾಗುತ್ತದೆ. ಯಲಹಂಕ ನಾಡು ವಿಜಯನಗರದ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಫಲವಾಗಿ ಉದಯಿಸಿತು. ಕರ್ನಾಟಕದ ದಕ್ಷಿಣ ಭಾಗದಲ್ಲಿ ಕ್ರಿ.ಶ. ಸುಮಾರು 1420 ರಿಂದ 1728ರವರೆಗೆ ಆವತಿ, ಯಲಹಂಕ, ಬೆಂಗಳೂರು, ಮಾಗಡಿ ಮತ್ತು ಸಾವನದುರ್ಗಗಳನ್ನು ಪ್ರಮುಖ ಆಡಳಿತ ಕೇಂದ್ರಗಳನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ಯಲಹಂಕ ನಾಡಪ್ರಭುಗಳು ರಾಜ್ಯದ ಇತಿಹಾಸದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದಾರೆ.
ನಾಡಪ್ರಭುಗಳ ಬಗ್ಗೆ ಅಲ್ಲಲ್ಲಿ ತೆಳುವಾದ ಸುಳುಹುಗಳು ವಿಜಯನಗರದ ಅರಸರ ಕಾಲದ ಶಾಸನದಲ್ಲಿ ಕಂಡುಬರುತ್ತದೆ. ಆದರೆ, ಕೆಂಪೇಗೌಡರ ವಂಶಸ್ಥರ ಮೂಲಪುರುಷ, ಮೂಲಸ್ಥಳ ಇವುಗಳ ಬಗ್ಗೆ ವಿದ್ವಾಂಸರಲ್ಲಿ ಏಕಾಭಿಪ್ರಾಯ ಇರುವುದಿಲ್ಲ. ಯಲಹಂಕ ನಾಡಪ್ರಭುಗಳ ಬಗ್ಗೆ ಖಚಿತವಾದ ಐತಿಹಾಸಿಕ ಸಾಕ್ಷಾÂಧಾರಗಳು ದೊರೆಯದಿರುವುದು ಇದಕ್ಕೆ ಕಾರಣವಾಗಿದೆ. ಜನಪದ ಮೌಖೀಕ ಕಥನಗಳಲ್ಲಿ ಹರಿದು ಬಂದ ವಿಷಯಗಳನ್ನೆ ಕೆಲವರು ತಮ್ಮ ಕೃತಿಗಳಲ್ಲಿ ಆಧಾರವೆಂಬಂತೆ ಪ್ರತಿಪಾದಿಸಿದ್ದಾರೆ. ಇಲ್ಲಿಯೂ ಅಭಿಪ್ರಾಯಬೇಧಗಳು ಗೋಚರವಾಗುತ್ತವೆ.
ವಿಶ್ವ ಭೂಪಟದ ಅತಿ ಮುಖ್ಯ ನಗರಗಳಲ್ಲೊಂದು ಎಂಬಂತೆ ಗುರುತಿಸಿಕೊಂಡಿ ರುವ ಭಾರತದ ದೇಶದ ಅತಿದೊಡ್ಡ ನಗರವೆಂಬ ಖ್ಯಾತಿಯುಳ್ಳ ನಮ್ಮ ಬೆಂಗಳೂರು ಮಹಾನಗರದ ಇತಿಹಾಸವನ್ನು ಕೆದಕುತ್ತಾ ಹೋದಂತೆ ನಮಗೆ ಮಹತ್ವದ ಸಂಗತಿಗಳು ಬೆಳಕು ಚೆಲ್ಲುತ್ತವೆ. ಅವುಗಳಲ್ಲಿ ಪ್ರಮುಖವಾಗಿ ಈ ಸುಂದರ ನಗರ ನಿರ್ಮಾಣಕ್ಕೆ ಕಾರಣಕರ್ತರ ಹೆಸರುಗಳು ದೊರೆಯುತ್ತವೆ.
ಯಲಹಂಕ ಪ್ರಭು ಹಿರಿಯ ಅಥವಾ ಒಂದನೇ ಕೆಂಪೇಗೌಡರು ಹಾಗೂ ಕೆಂಪೇಗೌಡರ ಮೊಮ್ಮಗ ಮಾಗಡಿಯ ಕೆಂಪೇಗೌಡ ಅಥವಾ ಇಮ್ಮಡಿ ಕೆಂಪೇಗೌಡ. ದಾಖಲೆಗಳ ಪ್ರಕಾರ, ಗಂಗರ ಅವನೀತನ ಕಾಲದ ಶಾಸನ (ಕ್ರಿ.ಶ. 469-520)ದ ಪ್ರಕಾರ ಗಂಗರಸರು ಕೆಂಗೇರಿಯ ಬಳಿ ತಮ್ಮ ಬೆಂಗಾವಲು ಆಳುಗಳಿಗಾಗಿ “ಬೆಂಗಾವಲಾಳೂರು’ ಎಂಬ ಊರನ್ನು ಕಟ್ಟಿದರೆಂಬ ಮಾಹಿತಿಯೂ ಇದೆ. ಹಾಗೇಯೇ ಯಲಹಂಕ ಪ್ರಭು ಕೆಂಪೇಗೌಡರ ತಾಯಿ ಲಿಂಗಮ್ಮಾಂಬೆಯ ಊರು ಕೊಡಿಗೇಹಳ್ಳಿಯ ಬಳಿ ಇದ್ದ “ಬೆಂಗುಳೂರು’.
ಅದೇ ಊರಿನ ಸೋದರ ಮಾವನ ಮಗಳು ಚಿನ್ನಾಂಬೆಯನ್ನೇ ಮದುವೆಯಾಗಿದ್ದ. ತನ್ನ ಬಾಲ್ಯದ ನೆನಪುಗಳಿಂದ ಹೊರಬಾರದ ಆತ ಅದೇ ಪ್ರೀತಿಯ ಬೆಸುಗೆಯಿಂದ ತಾನು ಕಟ್ಟಿದ ಊರಿಗೆ “ಬೆಂಗುಳೂರು’ ಎಂದೇ ಹೆಸರಿಟ್ಟ ಎಂದು ಚರಿತ್ರಕಾರರು ಅಭಿಪ್ರಾಯಪಡುತ್ತಾರೆ. ಮಡಿವಾಳದ ಸಮೀಪದ ತಾವರೆಕೆರೆಯ ಸೋಮೇಶ್ವರ ದೇವಾಲಯದಲ್ಲಿರುವ 1247ರ ತಮಿಳು ಶಾಸನದಲ್ಲಿ “ಬೆಂಗುಳೂರು’ ಎಂಬ ಉಲ್ಲೇಖವಿದೆ.
ಹಿರಿಯ ಕೆಂಪೇಗೌಡರು ಕೆಂಪನಂಜೇಗೌಡರ ಮಗನಾಗಿದ್ದು, ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದವರು. ಅವರು ಇಂದಿನ ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರನ್ನು ಸ್ಥಾಪಿಸಿದವರು. 1537ರಲ್ಲಿ ಎಂದರೆ 480 ವರ್ಷಗಳ ಹಿಂದೆ ಅವರು ತಮ್ಮ ಕನಸಿನ ಬೆಂಗಳೂರನ್ನು ಕಟ್ಟಿ ಬೆಳೆಸಿದರು. ಬೆಂಗಳೂರು ನಗರ ಇಂದು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದಿದೆ. ಎಲ್ಲ ಜಾತಿ, ಮತ, ಧರ್ಮ, ಪಂಥಗಳಿಗೆ ಸೇರಿದ ಜನರನ್ನು ಇದು ಒಳಗೊಂಡಿದೆ.
ಎಲ್ಲರನ್ನೂ ಎಲ್ಲವನ್ನೂ ಸದಾ ತನ್ನೆಡೆಗೆ ಬೆಂಗಳೂರು ಸೆಳೆಯುತ್ತಿರುವ ಕಾರಣ, ಇಲ್ಲಿಯ ಆಹ್ಲಾದಕರ ಹವಾಗುಣ. ಇದಕ್ಕೆ ಬಹುಮುಖ್ಯ ಕಾರಣ ಬೆಂಗಳೂರು ನಗರವನ್ನು ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಿರುವುದು. ಬೆಂಗಳೂರು ಸಮುದ್ರ ಮಟ್ಟಕ್ಕಿಂತ ಮೂರು ಸಾವಿರ ಅಡಿಗಳ ಮೇಲಿದ್ದು ಸುತ್ತಲೂ ಬಹು ಸಂಖ್ಯೆಯ ಕೆರೆಗಳನ್ನು ಹೊಂದಿತ್ತು. ಇಂತಹ ಪ್ರಶಸ್ತವಾದ ಸ್ಥಳದಲ್ಲಿ ಬೆಂಗಳೂರನ್ನು ಸ್ಥಾಪಿಸಿದ ಕೀರ್ತಿ ಹಿರಿಯ ಕೆಂಪೇಗೌಡರಿಗೆ ಸಲ್ಲುತ್ತದೆ.
ಇತಿಹಾಸದಲ್ಲಿ ಹಿರಿಯ ಕೆಂಪೇಗೌಡ ಅಥವಾ 1ನೇ ಕೆಂಪೇಗೌಡರನ್ನು ಬೆಂಗಳೂರು ನಗರ ನಿರ್ಮಾತƒ ಎಂದೇ ಗುರುತಿಸಲಾಗುತ್ತದೆ. ಇಂದು ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ ಎಂದರೆ ಅದಕ್ಕೆ ಕಾರಣ ಕೆಂಪೇಗೌಡರೇ. 1531ರಿಂದ 1569ರವರೆಗೆ ಸುಮಾರು ಮೂವತ್ತೆಂಟು ವರ್ಷಗಳ ದೀರ್ಘ ಆಳ್ವಿಕೆಯಲ್ಲಿ ಕೆಂಪೇಗೌಡರು ದೂರದರ್ಶಿತ್ವ, ಕತೃìತ್ವ ಶಕ್ತಿ, ರಾಜಕೀಯ ನೈಪುಣ್ಯತೆ, ಅಭಿವೃದ್ಧಿಯ ಮುನ್ನೋಟ, ವ್ಯಾವಹಾರಿಕ ಮನೋಭಾವ, ಕಲೆಗೆ ನೀಡಿದ ಪ್ರೋತ್ಸಾಹ ಮುಂತಾದ ಅಂಶಗಳಿಂದ ಚರಿತ್ರೆಯ ಪುಟಗಳಲ್ಲಿ ಅಮರರಾಗಿದ್ದಾರೆ.
ಅಂದು ಕೆಂಪೇಗೌಡರು ಸ್ಥಾಪಿಸಿದ ಬೆಂಗಳೂರು ಇಂದು ವಿರಾಟ್ ಸ್ವರೂಪದಲ್ಲಿ ಬೆಳೆದು ಅವರು ಕಂಡ ಕನಸುಗಳನ್ನು ನನಸಾಗಿಸಿ ವಿಶ್ವಮಾನ್ಯತೆ ಪಡೆದುವುದರಿಂದ ನಗರದ ಬೆಳವಣಿಗೆಯ ಜೊತೆಜೊತೆಗೆ ಸ್ಥಾಪಕ ಕೆಂಪೇಗೌಡರ ಹೆಸರು ಕೂಡಾ ಜಗದ್ವಿಖ್ಯಾತವಾಗಿದೆ. ಬೆಂಗಳೂರು ಅಂದಿನ ಕಾಲದಲ್ಲೂ ಒಂದು ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಇಂದೂ ಸಹ ಅದು ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಇದಕ್ಕೆ ಕಾರಣ ಕೆಂಪೇಗೌಡರ ದೂರದರ್ಶಿತ್ವ.
ಇಂತಹ ಅವರ ವಿವೇಚನಾಯುತ ಯೋಜನೆಗೆ ಮತ್ತು ಕತƒìತ್ವ ಶಕ್ತಿಯುಳ್ಳ ವ್ಯಕ್ತಿತ್ವಕ್ಕೆ ಜನತೆ ಇಂದಿಗೂ ಅವರನ್ನು ಋಣಪೂರ್ವಕವಾಗಿ ನೆನೆಯುತ್ತಲೇ ಇರುತ್ತದೆ. ಅವುಗಳಿಗೆ ಉದಾಹರಣೆ ಎಂಬಂತೆ ಇಂದು ಬೆಂಗಳೂರಿನ ಹೊರಭಾಗದಲ್ಲಿ ತಲೆಯೆತ್ತಿರುವ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗೌರವ ಪೂರ್ವಕವಾಗಿ ಅವರ ಹೆಸರನ್ನೇ ಇಡಲಾಗಿದೆ. ಬೆಂಗಳೂರಿನ ಒಳಗೂ ಸಹ ಅವರ ಹೆಸರಿನಲ್ಲಿ ಹಲವಾರು ಸಂಘ ಸಂಸ್ಥೆಗಳು ಗೌರವ ಸ್ಮಾರಕಗಳಂತೆ ಸದಾ ನಿರ್ಮಾತƒವಿನ ಹೆಸರನ್ನು ನೆನಪಿಸಿ ಕೊಂಡಾಡುತ್ತಿವೆ.
ಕೆಂಪೇಗೌಡ ಅಧ್ಯಯನ ಕೇಂದ್ರ ಸ್ಥಾಪಿಸುವ ಉದ್ದೇಶ ಸರ್ಕಾರಕ್ಕೆ: ಕೆಂಪೇಗೌಡರ ಜಯಂತ್ಯುತ್ಸವದ ಅಂಗವಾಗಿ ಇಂದಿನ ಸರ್ಕಾರ ಬೆಂಗಳೂರಿನ ಗತ ವೈಭವ ಸಾರುವ ಹಾಗೂ ಬೆಂಗಳೂರು ನಿರ್ಮಾಣಕ್ಕೆ ಅಮೂಲ್ಯ ಕೊಡುಗೆ ನೀಡಿದ ಬೆಂಗಳೂರು ನಿರ್ಮಾಪಕ ಒಂದನೇ ಕೆಂಪೇಗೌಡರ ಇತಿಹಾಸ ಹಾಗೂ ಅವರ ಸಾಧನೆಗಳನ್ನು ತಿಳಿಹೇಳುವ ಛಾಯಾಚಿತ್ರಗಳು, ಅಮೂಲ್ಯ ದಾಖಲೆಗಳುಳ್ಳ ಸ್ಮಾರಕ ವಸ್ತು ಸಂಗ್ರಹಾಲಯ “ನಾಡಪ್ರಭು ಕೆಂಪೇಗೌಡ ಅಧ್ಯಯನ ಕೇಂದ್ರ’ವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸ್ಥಾಪಿಸುವ ಉದ್ದೇಶ ರಾಜ್ಯ ಸರ್ಕಾರಕ್ಕಿದೆ. ಇದು ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ.
ಇದು “ಗಂಡು ಭೂಮಿ’: ಕೆಂಪೇಗೌಡರಿಗೆ ಬಾಲ್ಯದಲ್ಲೇ ದೊರೆಯಾಗುವ ಎಲ್ಲಾ ಲಕ್ಷಣಗಳಿದ್ದವು. ನೆಲ, ಜಲ, ಭಾಷೆ ಹಾಗೂ ಪ್ರಜೆಗಳ ರಕ್ಷಣೆ, ಸರ್ವ ಧರ್ಮ ಸಮನ್ವಯತೆ, ದೇಶ ಕಟ್ಟುವ ಧ್ಯೇಯ, ಯೋಜನೆಗಳನ್ನು ರೂಪಿಸುವ ಚಾಕಚಕ್ಯತೆ ಮುಂತಾದ ಗುಣಗಳಿದ್ದವು. ಈ ಎಲ್ಲ ಗುಣಗಳನ್ನು ಯಲಹಂಕ ಪ್ರದೇಶದ ಆಳ್ವಿಕೆಗೆ, ಪ್ರಜೆಗಳ ಹಿತಕ್ಕಾಗಿ ಬಳಸಿಕೊಂಡು ಯಲಹಂಕ ಪ್ರಭುಗಳೆನಿಸಿದ್ದರು. ಒಮ್ಮೆ ಅವರು ಭೇಟೆ ಅರಸಿ ಯಲಹಂಕದಿಂದ ಬೆಂದಕಾಳೂರಿನ ಕಡೆಗೆ ಬರುತ್ತಿದ್ದಾಗ, ಮಾರ್ಗ ಮಧ್ಯದಲ್ಲಿ ಮೊಲವೊಂದು ನಾಯಿಯನ್ನು ಓಡಿಸಿಕೊಂಡು ಹೋಗುತ್ತಿದ್ದನ್ನು ಕಂಡರು. ಆಶ್ಚರ್ಯಚಕಿತರಾದ ಗೌಡರು ಇದು “ಗಂಡು ಭೂಮಿ’ ಇರಲೇಬೇಕು ಎಂದು, ತೀರ್ಮಾನಿಸಿ ಮಣ್ಣಿನ ಕೋಟೆ ನಿರ್ಮಿಸಿ ಬೆಂಗಳೂರು ನಗರವನ್ನಾಗಿಸಿದರು.
ನಾಡಪ್ರಭು ವ್ಯಕ್ತಿತ್ವ: ಜನಪದ ಲಾವಣಿಗಳಲ್ಲಿ ಒಂದನೆ ಕೆಂಪೇಗೌಡರ ವ್ಯಕ್ತಿತ್ವ ಅನುಪಮವಾಗಿ ಕಂಡುಬರುತ್ತದೆ. ಎತ್ತರವಾದ ನಿಲುವಿನ ಆಜಾನುಬಾಹು. ಸಾಧನೆಯಿಂದ ಹುರಿಗಟ್ಟಿದ ದೇಹ, ಗೋಧಿ ಬಣ್ಣ, ದುಂಡು ಮುಖ, ನೀಳ ನಾಸಿಕ, ಮಿಂಚುಗಣ್ಣು, ಹುರಿಬಿಟ್ಟ ಮೀಸೆ ಹೀಗೆ ಅವರ ವರ್ಣನೆ ಇದೆ. ಇವೆಲ್ಲದಕ್ಕೂ ಮಿಗಿಲಾಗಿ ಕೆಂಪೇಗೌಡರು ಪ್ರಜಾವತ್ಸಲ, ಉದಾರಿ ಮತ್ತು ಪರೋಪಕಾರಿ ಎಂದು ಇತಿಹಾಸ ತಿಳಿಸುತ್ತದೆ. ಇತಿಹಾಸದ ಪುಟಗಳಲ್ಲಿನ ಅವರ ಸ್ಥಾನಕ್ಕಿಂತ ಬೆಂಗಳೂರಿನ ಜನರ ಹೃದಯ ಸಿಂಹಾಸನದಲ್ಲಿ ಕೆಂಪೇಗೌಡರು ಸದಾ ಋಣಪೂರ್ವಕವಾಗಿ ರಾರಾಜಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.