ಪೊಲೀಸ್ ಬಲೆಗೆ ಬಿದ್ದ ಬೆಂಗಳೂರಿನ ಬೆತ್ತಲೆ ಸೈಕೋ!
Team Udayavani, Mar 22, 2017, 9:57 AM IST
ಬೆಂಗಳೂರು: ಮಹಾರಾಣಿ ಕಾಲೇಜಿನ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರಿಗೆ ಕಾಟ ಕೊಡುತ್ತಿದ್ದ ವಿಕೃತ ಕಾಮಿಯನ್ನು ಹೈಗ್ರೌಂಡ್ಸ್ ಠಾಣಾ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಅಬುತಾಲೀಮ್ ಎಂದು ತಿಳಿದು ಬಂದಿದ್ದು, ರೇಸ್ ಕೋರ್ಸ್ ನಲ್ಲಿ ಕುದುರೆಗಳಿಗೆ ಮಾಲಿಷ್ ಕೆಲಸ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ.
ಅಬುತಾಲೀಮ್ ಬಿಹಾರ ಮೂಲದವನಾಗಿದ್ದು 15 ವರ್ಷಗಳಿಂದ ಹಿಂದೆ ಬೆಂಗಳೂರಿಗೆ ಬಂದಿದ್ದ . ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.
ಮಹಾರಾಣಿ ಹಾಸ್ಟೆಲ್ ಒಳಗೆ ಮಧ್ಯರಾತ್ರಿ 12ರಿಂದ 2ಗಂಟೆಯೊಳಗೆ ಆವರಣ ಮತ್ತು ಟೆರೆಸ್ ಗೆ ಬರುತ್ತಿದ್ದ ಅಬುತಾಲೀಮ್ ವಿದ್ಯಾರ್ಥಿನಿಯರ ಒಳ ಉಡುಪು ಕದ್ದು ಧರಿಸಿ ವಿಕೃತವಾಗಿ ವರ್ತಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಹಾಸ್ಟೆಲ್ ಹೊರಗಡೆ ಒಣಹಾಕಿದ್ದ ವಿದ್ಯಾರ್ಥಿನಿಯರ ಒಳ ಉಡುಪನ್ನು ಧರಿಸಿ ಕಾಟ ಕೊಡುತ್ತಿದ್ದ ಅಬುತಾಲೀಮ್ ನನ್ನು ವಿದ್ಯಾರ್ಥಿನಿಯರು ದೊಣ್ಣೆ ಹಿಡಿದು ಓಡಿಸಿದ್ದರು.
ಟರ್ಫ್ ಕ್ಲಬ್ ನಿಂದ ಹಾಸ್ಟೆಲ್ ಆವರಣದೊಳಗೆ ನುಗ್ಗುತ್ತಿದ್ದ ಅಬುತಾಲೀಮ್ ರಾತ್ರಿ ಹೊತ್ತು ಕಾಟ ಕೊಡುತ್ತಿದ್ದ. ಈ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.