ಉತ್ತಮ ರ್‍ಯಾಂಕ್ ಪಡೆಯುವುದೇ ಬೆಂಗಳೂರು?
Team Udayavani, Nov 4, 2018, 11:47 AM IST
ಬೆಂಗಳೂರು: ಬಯಲು ಬಹಿರ್ದೆಸೆ ಮುಕ್ತವಾಗದ ವಾರ್ಡ್‌ಗಳು, ಶೌಚಾಲಯಗಳ ಕೊರತೆ ಹಾಗೂ ಅವೈಜ್ಞಾನಿಕ ನಿರ್ವಹಣೆ, ನಿಯಂತ್ರಣಕ್ಕೆ ಬಾರದ ಬ್ಲಾಕ್‌ಸ್ಪಾಟ್, ಅಸಮರ್ಪಕ ಘನತ್ಯಾಜ್ಯ ವಿಲೇವಾರಿಯಂತಹ ಸವಾಲುಗಳು ಬಿಬಿಎಂಪಿ ಮುಂದಿದ್ದು, ಅವುಗಳನ್ನು ಮೀರಿ 2019ರ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಉತ್ತಮ ರ್‍ಯಾಂಕಿಂಗ್ ಪಡೆಯುವುದೇ ಎಂಬ ಪ್ರಶ್ನೆ ಮೂಡಿದೆ.
ಕೇಂದ್ರ ಸರ್ಕಾರದ 2018ನೇ ಸಾಲಿನ ಸ್ವಚ್ಛ ಸವೇಕ್ಷಣ್ ಅಭಿಯಾನದಲ್ಲಿ ಬೆಂಗಳೂರಿಗೆ ಯಾವ ವಿಭಾಗದಲ್ಲೂ ಪ್ರಶಸ್ತಿ ಲಭ್ಯವಾಗಿಲ್ಲ. ಜತೆಗೆ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಅತ್ಯಂತ ಕಳಪೆ ಸ್ಥಾವನ್ನು ಪಡೆದುಕೊಂಡಿತ್ತು. ಆದರೆ, 2019ರಲ್ಲಿ ಉತ್ತಮ ರ್‍ಯಾಂಕಿಂಗ್ ಪಡೆಯಲು ಪಣ ತೊಟ್ಟಿರುವ ಬಿಬಿಎಂಪಿ, ಈಗಾಗಲೇ ಸಕಲ ಸಿದ್ಧತೆಗಳನ್ನು ಆರಂಭಿಸಿದೆ.
ನಗರಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಉತ್ತಮಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2016ರಿಂದ ಸ್ವಚ್ಛ ಸವೇಕ್ಷಣ್ ಅಭಿಯಾನ ನಡೆಸುತ್ತಿದೆ. ಅದರಂತೆ ನಗರದಲ್ಲಿನ ಸ್ವಚ್ಛತೆ, ಘನತ್ಯಾಜ್ಯ ನಿರ್ವಹಣೆಗೆ ಕೈಗೊಂಡ ಕ್ರಮಗಳು, ನಾಗರಿಕರ ಸಮಸ್ಯೆಗಳಿಗೆ ನಗರ ಸ್ಥಳೀಯ ಸಂಸ್ಥೆಗಳು ಸ್ಪಂದಿಸುವುದರ ಆಧಾರದ ಮೇಲೆ ಅಂಕಗಳನ್ನು ನೀಡಿ ರ್‍ಯಾಂಕಿಂಗ್ ನೀಡಲಾಗುತ್ತದೆ.
ಕಳೆದ ಮೂರು ವರ್ಷಗಳಿಂದ ದೇಶದ 10 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಬೆಂಗಳೂರು ವಿಫಲವಾಗಿದೆ. ಈ ಬಾರಿ ಉತ್ತಮ ಸ್ಥಾನ ಪಡೆಯಲು ಸಿದ್ಧತೆ ನಡೆಸುತ್ತಿದ್ದರೂ, ಅದು ಕಠಿಣ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ 4,023 ನಗರಗಳು ಅಭಿಯಾನದಲ್ಲಿ ಭಾಗಿಯಾಗಿದ್ದವು. ಆದರೆ, ಈ ಬಾರಿ ದೇಶದ ಎಲ್ಲ ನಗರಗಳು ಅಭಿಯಾನದಲ್ಲಿ ಭಾಗಿಯಾಗುತ್ತಿವೆ. ಜತೆಗೆ ಅಭಿಯಾನದ ಅಂಕಗಳನ್ನು 4 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸಿದ್ದು, ನಗರಗಳ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.
ಬಯಲು ಶೌಚ ಮುಕ್ತವಾಗುವುದೇ?: ಸ್ವಚ್ಛ ಸರ್ವೇಕ್ಷಣ್ ಅಭಿಯಾನಕ್ಕೆ 2018ನೇ ಸಾಲಿನಲ್ಲಿ ಬಿಬಿಎಂಪಿಯಿಂದ ಸಲ್ಲಿಕೆಯಾಗಿರುವ ವರದಿಯಲ್ಲಿ 198 ವಾರ್ಡ್‌ಗಳ ಪೈಕಿ 109 ವಾರ್ಡ್‌ಗಳು ಬಯಲು ಬಹಿರ್ದೆಸೆ ಮುಕ್ತವಾಗಿವೆ (ಒಡಿಎಫ್) ಎಂದು ತಿಳಿಸಲಾಗಿದೆ. ಉಳಿದ 89 ವಾರ್ಡ್‌ಗಳ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.
ನಗರದ ಎಲ್ಲ ವಾರ್ಡ್‌ಗಳು ಒಡಿಎಫ್ ಎಂದು ಘೋಷಿಸಿಕೊಂಡರೆ ಒಟ್ಟು 250 ಅಂಕಗಳು ದೊರೆಯುತ್ತವೆ. ಇದರೊಂದಿಗೆ ಪಾಲಿಕೆಯಿಂದ ನೀಡಿರುವ ಮಾಹಿತಿ ಪ್ರಮಾಣೀಕರಿಸುವ 3ನೇ ವ್ಯಕ್ತಿ ಸಂಸ್ಥೆಯು 1000 ಅಂಕಗಳಿಗೆ ಸ್ಟಾರ್ ರೇಟಿಂಗ್ ನೀಡಲಿದ್ದು, ಪಾಲಿಕೆ 2019ರ ಜನವರಿ 31ರ ವೇಳೆಗೆ ಎಲ್ಲ ವಾರ್ಡ್‌ಗಳನ್ನು ಒಡಿಎಫ್ ಎಂದು ಘೋಷಿಸಿಕೊಳ್ಳಬೇಕಿದೆ.
ಶೌಚಾಲಯ, ತ್ಯಾಜ್ಯ ವಿಲೇವಾರಿಗೆ ಆದ್ಯತೆ: ಸ್ವಚ್ಛ ಸವೇಕ್ಷಣ್ ಅಭಿಯಾನದಲ್ಲಿ ಘನತ್ಯಾಜ್ಯ ವಿಲೇವಾರಿ, ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳ ನಿರ್ಮಾಣ, ವಯಕ್ತಿಕ ಹಾಗೂ ಸಮುದಾಯ ಶೌಚಾಲಯ, ತ್ಯಾಜ್ಯ ವಿಂಗಡಣೆ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಆ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತವಾಗಿರುವ ಬಿಬಿಎಂಪಿ, ಪಾಲಿಕೆಯಲ್ಲಿನ ಬ್ಲಾಕ್‌ಸ್ಪಾಟ್‌ಗಳ ನಿವಾರಣೆಗೆ ಕ್ರಮ ಕೈಗೊಂಡಿದೆ.
ಅದರಂತೆ 1500 ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಿದ್ದು, ಅವುಗಳ ಸ್ವಚ್ಛತೆ ನಡೆಸುತ್ತಿದೆ. ಇದರೊಂದಿಗೆ ನಗರದಲ್ಲಿ ಶೌಚಾಲಯಗಳ ಸಂಖ್ಯೆ ಹೆಚ್ಚಿಸಲು ಕ್ರಮಕೈಗೊಂಡಿದೆ. ಅದರಂತೆ ಪಾಲಿಕೆಯಲ್ಲಿ 444 ಸಾರ್ವಜನಿಕ ಹಾಗೂ 79 ಸಮುದಾಯ ಶೌಚಾಲಯಗಳ ನಿರ್ಮಾಣವಾಗಬೇಕಿದೆ ಎಂದು ಅಧೀಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿಗೆ ವ್ಯಾಪ್ತಿ, ಜನಸಂಖ್ಯೆಯದ್ದೆ ಚಿಂತೆ: ಸ್ವಚ್ಛ ಸವೇಕ್ಷಣ್ ಅಭಿಯಾನದಲ್ಲಿ ನಗರಗಳನ್ನು ಎರಡು ವಿಭಾಗಗಳಲ್ಲಿ ವಿಂಗಡಿಸಲಾಗುತ್ತದೆ. 1 ಲಕ್ಷಕ್ಕಿಂತ ಕಡಿಮೆ ಹಾಗೂ 1 ಲಕ್ಷಕ್ಕಿಂತ ಹೆಚ್ಚಿನ ಜನರಿರುವ ನಗರಗಳು ಪರಸ್ಪರ ಸ್ಪರ್ಧೆ ನಡೆಸಲಿದ್ದು, ಸ್ವಚ್ಛತೆಗೆ ಕೈಗೊಂಡಿರುವ ಕ್ರಮಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ.
ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ವ್ಯಾಪ್ತಿಯಲ್ಲಿ ದೊಡ್ಡ ನಗರವಾಗಿದ್ದು, ಜನಸಂಖ್ಯೆ ಸಹ 1.20 ಕೋಟಿ ಮೀರಿದೆ. ಬೆಂಗಳೂರಿನೊಂದಿಗೆ 2-3 ಲಕ್ಷ ಜನಸಂಖ್ಯೆಯಿರುವ ನಗರಗಳು ಸ್ಪರ್ಧಿಸುವುದರಿಂದ ಪಾಲಿಕೆಗೆ ಹಿನ್ನಡೆಯಾಗುತ್ತಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.
ಹಿಂದೆ ಬೆಂಗಳೂರಿಗೆ ಸಿಕ್ಕ ರ್‍ಯಾಂಕ್
ವರ್ಷ ಭಾಗವಹಿಸಿದ ನಗರಗಳು ರ್‍ಯಾಂಕ್
-2016 73 16
-2017 434 210
-2018 4,023 126
ಅಭಿಯಾನ ಪರಿಶೀಲನೆ ಹಾಗೂ ಅಂಕ ನೀಡುವ ವಿಧಾನ
ಸೇವಾ ಹಂತದ ಪ್ರಗತಿ: 1250 ಅಂಕ – ಮನೆ ಮನೆ ತ್ಯಾಜ್ಯ ಸಂಗ್ರಹದ ವಿವರ, ತ್ಯಾಜ್ಯ ವಿಂಗಡಣೆ ಪ್ರಮಾಣ, ಕಸದ ಬುಟ್ಟಿಗಳ ಅಳವಡಿಕೆ, ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಪ್ರಮಾಣ
ನೇರನಿಗಾ: 1250 ಅಂಕ – ವಸತಿ, ವಾಣಿಜ್ಯ ಪ್ರದೇಶಗಳು, ಬಸ್, ರೈಲ್ವೆ, ವಿಮಾನ ನಿಲ್ದಾಣ, ಸಗಟು ತ್ಯಾಜ್ಯ ಉತ್ಪಾದನಾ ಪ್ರದೇಶ, ಮಾರುಕಟ್ಟೆಗಳಲ್ಲಿ ಸ್ವಚ್ಛತೆ ಪರಿಶೀಲನೆ
ಪ್ರಮಾಣೀಕರಣ: 1250 ಅಂಕ – ನಗರಗಳ ನಗರಾಡಳಿತ ನೀಡುವ ದಾಖಲೆ, ಮಾಹಿತಿ ಪ್ರಮಾಣೀಕರಿಸಿ ಸ್ಟಾರ್‌ಗಳನ್ನು ನೀಡುವ ಹಾಗೂ ಒಡಿಎಫ್ಗೆ ಅಂಕ ನೀಡಲಾಗುತ್ತದೆ
ಸಾರ್ವಜನಿಕರ ಅಭಿಪ್ರಾಯ: 1250 ಅಂಕ – ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಕುರಿತು ನಿಮಗೆ ತಿಳಿದಿದೆಯೇ? ನಗರದಲ್ಲಿನ ತ್ಯಾಜ್ಯ ಸಂಸ್ಕರಣೆ ಸೇರಿ ಇನ್ನಿತರ ವಿಷಯಗಳ ಕುರಿತು 7 ಪ್ರಶ್ನೆಗಳಿಗೆ ಸಾರ್ವಜನಿಕರು ಅಭಿಪ್ರಾಯ ತಿಳಿಸಬೇಕು
* ವೆಂ.ಸುನೀಲ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.