![Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು](https://www.udayavani.com/wp-content/uploads/2025/02/BASSI-415x234.jpg)
![Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು](https://www.udayavani.com/wp-content/uploads/2025/02/BASSI-415x234.jpg)
Team Udayavani, Jan 29, 2025, 10:47 AM IST
ಬೆಂಗಳೂರು: ಜಾತ್ರೆ, ದೇವಾಲಯಗಳ ಉತ್ಸವ, ಸಮಾರಂಭಗಳಲ್ಲಿ ಜನಸಂದಣಿ ಇರುವ ಸಂದರ್ಭ ನೋಡಿ ಮಹಿಳೆಯರ ಸರ ಲಪಟಾಯಿಸುತ್ತಿದ್ದ ತಮಿಳುನಾಡು ಮೂಲದ ಮಹಿಳೆಯನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಮಹಬಲಿಪುರಂನ ಈಝಬಾಕಂ ನಿವಾಸಿ ಸುಭದ್ರಾ (27) ಬಂಧಿತೆ.
ಆಕೆಯಿಂದ 9 ಲಕ್ಷ ರೂ. ಮೌಲ್ಯದ 125 ಗ್ರಾಂ ಚಿನ್ನದ ಸರ ಜಪ್ತಿ ಮಾಡಿಕೊಳ್ಳಲಾಗಿದೆ. ಕೃತ್ಯದಲ್ಲಿ ಈಕೆಯೊಂದಿಗೆ ಶಾಮೀಲಾಗಿರುವ ಈಕೆಯ ಅಜ್ಜಿ ಹಾಗೂ ಗ್ಯಾಂಗ್‌ನ ನಾಲ್ವರು ಮಹಿಳೆಯರು ತಲೆಮರೆ ಸಿಕೊಂಡಿ ದ್ದು, ಅವರಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಸುಭದ್ರಾ ಹಾಗೂ ಆಕೆಯ ಅಜ್ಜಿ ಸೇರಿದಂತೆ ಈ ತಂಡದಲ್ಲಿರುವ ಐದಾರು ಮಂದಿ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ನಡೆಯುವ ಜಾತ್ರೆ, ಉತ್ಸವ, ಸಮಾರಂಭಗಳಲ್ಲಿ ಜನಸಂದಣಿ ಇರುವ ಕಡೆ ತೆರಳುತ್ತಿದ್ದರು. ಜಾತ್ರೆಯಲ್ಲಿ ತೇರು ಎಳೆಯುವ ವೇಳೆ, ನೂಕು ನುಗ್ಗಲಿನ ಸಂದರ್ಭದಲ್ಲಿ ಮಹಿಳೆಯರ ಚಿನ್ನದ ಸರವನ್ನು ಕೈಯಲ್ಲೆ ತುಂಡರಿಸಿ ಲಪಟಾಯಿಸಿ ಕ್ಷಣ ಮಾತ್ರದಲ್ಲಿ ಪರಾರಿಯಾಗುತ್ತಿದ್ದರು.
ಸುಭದ್ರಾ ಗ್ಯಾಂಗ್‌ನಲ್ಲಿ ಐದಾರು ಮಂದಿ ಸದಸ್ಯರಿದ್ದು, ಎಲ್ಲರೂ ಸಂಚು ರೂಪಿಸಿ ಬೇರೆ ಬೇರೆ ಕಡೆ ನಡೆಯುವ ಸಮಾರಂಭಗಳಲ್ಲಿ ಕೈ ಚಳಕ ತೋರಿಸುತ್ತಾರೆ ಎಂಬುದು ತನಿಖೆಯಲ್ಲಿ ಕಂಡು ಬಂದಿದೆ. ಸಿಕ್ಕಿ ಬಿದ್ದಿದ್ದು ಹೇಗೆ?: ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ಸರಹದ್ದಿನ ಪ್ರಗತಿಪುರ ಬಡಾವಣೆಯಲ್ಲಿ ವಾಸವಿದ್ದ ಮಹಿಳೆಯೊಬ್ಬರು ಜ.13ರಂದು ಬನಶಂಕರಿ ದೇವಸ್ಥಾನದಲ್ಲಿ ದೇವರಿಗೆ ನಮಸ್ಕಾರ ಮಾಡಿ, ಎದ್ದು ನೋಡುವಷ್ಟರಲ್ಲಿ ಕತ್ತಿನಲ್ಲಿದ್ದ 70 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಅಪರಿಚಿತರು ಅಪಹರಣ ಮಾಡಿಕೊಂಡು ಹೋಗಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ಕೆಎಸ್ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಇತ್ತ ಪೊಲೀಸರು ಕೃತ್ಯ ನಡೆದ ಸ್ಥಳದ ಆಸು-ಪಾಸಿನಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿತೆ ಸುಭದ್ರಾಳ ಮುಖಚಹರೆ ಪತ್ತೆ ಯಾಗಿತ್ತು. ಕೂಡಲೇ ತಾಂತ್ರಿಕ ಕಾರ್ಯಾಚರಣೆ ನಡೆಸಿ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಜ್ಜಿಯೊಂದಿಗೆ ಸೇರಿ ಕೃತ್ಯ: ವಿಚಾರಣೆ ವೇಳೆ, “ತನ್ನ ಅಜ್ಜಿಯೊಂದಿಗೆ ತಮಿಳುನಾಡಿ ನಿಂದ ಬಂದಿದ್ದೆ. ಇತರೆ ನಾಲ್ವರು ಕೃತ್ಯದಲ್ಲಿ ನಮ್ಮೊಂದಿಗೆ ಸೇರಿಕೊಂಡಿದ್ದು, ತನಗೆ ಅವರ ಪರಿಚಯವಿಲ್ಲ. ತನ್ನ ಅಜ್ಜಿಗೆ ಅವರ ಪರಿಚಯ ವಿದೆ. ಆ ನಾಲ್ವರು ಮಹಿಳೆಯ ರೊಂದಿ ಗೆ ಸೇರಿಕೊಂಡು, ಸರ ಅಪಹರಣ ಮಾಡಿರುವುದಾಗಿ ತಿಳಿಸಿದ್ದಾಳೆ. ಆರೋಪಿತೆಯು ಮತ್ತೆರಡು ಚಿನ್ನದ ಸರಗಳ ಅಪಹರಣದ ಬಗ್ಗೆ ಮಾಹಿತಿ ನೀಡಿದ್ದು, ಈ 2 ಚಿನ್ನದ ಸರಗಳನ್ನು ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿರುವ ಸ್ನೇಹಿತನಿಗೆ ನೀಡಿರುವುದಾಗಿ ತಿಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ: ಮೇ 30 ರೊಳಗೆ ಮೀಸಲಾತಿ ಪಟ್ಟಿ ಸಲ್ಲಿಕೆ
Bengaluru: ನೀರಿನ ಸಮಸ್ಯೆಯಾಗದಂತೆ ಜಲಮಂಡಳಿ ಸಿದ್ಧತೆ
Bengaluru: ಈ ವಾರವೇ ಕಾವೇರಿ ನೀರಿನ ದರ ಏರಿಕೆ ಬಿಸಿ?
Theft Case: ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ 2 ಕೆ.ಜಿ. ಚಿನ್ನ ಕಳವು ಮಾಡಿದ್ದವರ ಸೆರೆ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು
Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್ ಪತ್ರಿಕೆ
Mangaluru: ನದಿ-ಕಡಲು ಸಂಗಮದ ಸನಿಹದಲ್ಲೇ ಪ್ರವಾಸಿ ಸೇತುವೆ!
ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ
Bollywood: ರೀ-ರಿಲೀಸ್ ಗಳಿಕೆಯಲ್ಲಿ ʼತುಂಬಾಡ್ʼ ಮೀರಿಸಿದ ʼಸನಮ್ ತೇರಿ ಕಸಮ್ʼ
You seem to have an Ad Blocker on.
To continue reading, please turn it off or whitelist Udayavani.