“ಕಣಜ’ ಈಗ ಮೊಬೈಲ್‌, ಟ್ಯಾಬ್ಲೆಟ್‌ ಸ್ನೇಹಿ

Team Udayavani, Jan 12, 2017, 3:45 AM IST

kanaja.jpg

ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿ ರುವ ಮೊಬೈಲ್‌ ಮತ್ತು ಟ್ಯಾಬ್ಲೆಟ್‌ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ “ಕಣಜ’ ಮರುವಿನ್ಯಾಸ ಗೊಂಡಿದ್ದು, ರೆಸ್ಪಾನ್ಸಿವ್‌ ಮೋಡ್‌ನ‌ಲ್ಲಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿ ಪ್ರಕಟಗೊಳ್ಳುತ್ತಿರುವ ಅಂತರ್ಜಾಲ ಕನ್ನಡ ಜ್ಞಾನಕೋಶ “ಕಣಜ’ಕ್ಕೆ ಇತ್ತೀಚೆಗೆ ಶಾಲಾ ಪಠ್ಯಪುಸ್ತಕಗಳು ಮತ್ತು ಕರ್ನಾಟಕ ಗೆಜೆಟಿಯರ್‌ ಅನ್ನು ಅಳವಡಿಸಲಾಗಿದೆ. ಜತೆಗೆ “ಕಣಜ’ಕ್ಕೆ ಭೇಟಿ ನೀಡಿದವರು ಮಾಹಿತಿಯನ್ನು ಸುಲಭವಾಗಿ ಪಡೆಯುವಂತಾಗಲು ಈಗ ವೆಬ್‌ಸೈಟ್‌ ಅನ್ನು ಮರುವಿನ್ಯಾಸಗೊಳಿಸಲಾಗಿದೆ.

ವೆಬ್‌ಸೈಟ್‌ ಪೇಜ್‌ ದೊಡ್ಡದಿದ್ದು ಮೊಬೈಲ್‌, ಕಂಪ್ಯೂಟರ್‌, ಟ್ಯಾಬ್ಲೆಟ್‌ ಸ್ಕ್ರೀನ್‌ ಚಿಕ್ಕದಿದೆ ಎಂದು ಅತ್ತಿಂದಿತ್ತ ಪೇಜ್‌ ಎಳೆದಾಡಬೇಕಿಲ್ಲ. “ಕಣಜ’ದಲ್ಲಿ ಲಭ್ಯವಿರುವ ಎಲ್ಲಾ ಮಾಹಿತಿಗಳು ಓದುಗರ ಬಳಕೆಯ ಮಾಧ್ಯಮದ ಅನುಕೂಲತೆಗೆ ಸ್ಕ್ರೀನ್‌ ಸೈಜ್‌ಗೆ ಹೊಂದಾಣಿಕೆಯಾಗುವಂತೆ ರೆಸ್ಪಾನ್ಸಿವ್‌ ಮೋಡ್‌ ಅಳವಡಿಸಲಾಗಿದೆ.

ಇದರಿಂದ ಲಭ್ಯವಿರುವ ಸ್ಕ್ರೀನ್‌ ಸೈಜಿಗೆ ತಕ್ಕಂತೆ ಕಣಜದ ಪುಟಗಳು ತೆರೆದುಕೊಳ್ಳಲಿದ್ದು, ಎಲ್ಲ ಮಾಹಿತಿ ಸುಲಭವಾಗಿ ಸಿಗುವಂತೆ ಓದುಗರ ಸ್ನೇಹಿಯಾಗಿ ಕಣಜದಲ್ಲಿ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗಿದೆ.

ಈ ಹಿಂದಿನ ವಿನ್ಯಾಸದಲ್ಲಿ ಕಣಜದ ಪುಟಗಳನ್ನು ತೆರೆದಾಗ ಸ್ಕ್ರೀನ್‌ನಲ್ಲಿ ಪುಟದ ಮೂರನೇ ಒಂದು ಭಾಗ ಮಾತ್ರ ನೋಡಬಹುದಾಗಿತ್ತು. ಇದರಿಂದ ಓದುಗರಿಗೆ ಅನಾನುಕೂಲವಾಗಿತ್ತು. ಜತೆಗೆ ಬಳಕೆಗೂ ಹಿತಕರವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮರುವಿನ್ಯಾಸಗೊಳಿಸಿದ್ದು, ಉತ್ತಮ ಪ್ರತಿಕ್ರಿಯೆ ದೊರಕಿದೆ.

“ಇ-ದಿನ’ ವಿಶೇಷ: ಕನ್ನಡ ಜ್ಞಾನಕೋಶ ಇದೀಗ ವಿನೂತನವಾದ “ಇ-ದಿನ’ ಎಂಬ ವಿಭಾಗವನ್ನು ಓದುಗರಿಗಾಗಿ ಆರಂಭಿಸಿದೆ. ಜಗತ್ತಿನೆಲ್ಲೆಡೆ ಈ ದಿನದಂದು ನಡೆದ ವಿಚಾರಗಳನ್ನು ಒಂದು ಲೈನ್‌ ಸುದ್ದಿಯಂತೆ ಒಂದು ಪ್ಯಾರಾದಷ್ಟು ಮಾಹಿತಿಯನ್ನು ಒದಗಿಸಲಾಗುತ್ತಿದೆ. ಕ್ರಿಸ್ತಪೂರ್ವ, ಕ್ರಿಸ್ತ ಶಕದ ಸುದ್ದಿಗಳು ಇಲ್ಲಿ ಲಭ್ಯ. ವಿವಿಧ ಇಸವಿಗಳಲ್ಲಿ ಆಯಾ ದಿನದಂದು ನಡೆದ ಮಹತ್ವದ ಘಟನೆಗಳು, ಅನ್ವೇಷಣೆ, ಹಬ್ಬಗಳು, ಆಚರಣೆ, ಸಂಶೋಧನೆ, ಮಹಾತ್ಮರ ಜನ್ಮದಿನ ಹೀಗೆ ಪ್ರತಿಯೊಂದು ವಿಷಯಗಳನ್ನು ಈ ವಿಭಾಗದಲ್ಲಿ ಕಾಣಬಹುದು.

50 ಲಕ್ಷ ವೀಕ್ಷಕರು!: ವಿಶೇಷವೆಂದರೆ ಇದುವರೆಗೂ ವಿಶ್ವದಾದ್ಯಂತ ಇರುವ ಕನ್ನಡಿಗರಲ್ಲಿ ಸುಮಾರು 46,14,132 ಮಂದಿ ಈ “ಕಣಜ’ ವೆಬ್‌ಸೈಟ್‌ ವೀಕ್ಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಎಂಟು ಹೊಸ ವಿಭಾಗಗಳನ್ನು ಆರಂಭಿಸುವ ತಯಾರಿಯಲ್ಲಿರುವ ಕಣಜ ತಂಡವು ಪ್ರತಿ ತಿಂಗಳು ಕನಿಷ್ಠ ಐದು ಲಕ್ಷ ಮಂದಿಯಾದರೂ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯುವಂತಾಗಬೇಕು ಎಂಬ ಗುರಿ ಹೊಂದಿದೆ. ಅದಕ್ಕಾಗಿ ಟ್ವೀಟರ್‌, ಫೇಸ್‌ ಬುಕ್‌ ಇತ್ಯಾದಿ ಸಾಮಾಜಿಕ ಜಾಲತಾಣಗಳಿಗೆ ಲಿಂಕ್‌ ಮಾಡಲು ಉತ್ಸುಕವಾಗಿದೆ. ಶೀಘ್ರವೇ ಕಣಜ 50 ಲಕ್ಷ ವೀಕ್ಷಕರ ಗುರಿ ಮುಟ್ಟಲಿದೆ ಎಂಬುದಾಗಿ ಪ್ರಾಜೆಕ್ಟ್ ಮ್ಯಾನೇಜರ್‌ ರಾಧಾಕೃಷ್ಣ ಸಂತಸ ವ್ಯಕ್ತಪಡಿಸಿದ್ದಾರೆ.

ಕಣಜದ ಹಳೆ ವಿನ್ಯಾಸ ಮೊಬೈಲ್‌ ಮಾಧ್ಯಮಕ್ಕೆ ಸರಿ ಹೊಂದುತ್ತಿರಲಿಲ್ಲ. ಆದ್ದರಿಂದ ಹೊಸದಾಗಿ ಪೋರ್ಟಲ್‌ ಬಳಸಿ ಸುಲಭವಾಗಿ ಸರ್ಚ್‌ ಆಗುವಂತೆ, ಮೊಬೈಲ್‌ ಇತ್ಯಾದಿ ಮಾಧ್ಯಮಕ್ಕೆ ಹೊಂದಿಕೆ ಆಗುವಂತೆ ವಿನ್ಯಾಸ ಮಾಡಲಾಗಿದೆ. ಮುಖ್ಯವಾಗಿ ಎಲ್ಲ ವಿಭಾಗಗಳನ್ನು ಸುಲಭವಾಗಿ ಗುರುತಿಸಲಾಗುವಂತೆ ವಿಭಾಗಗಳನ್ನು ಮರು ವಿನ್ಯಾಸಗೊಳಿಸಲಾಗಿದೆ.
– ಕೆ.ಎ.ದಯಾನಂದ್‌, ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

– ಸಂಪತ್‌ ತರೀಕೆರೆ

ಟಾಪ್ ನ್ಯೂಸ್

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.