ಬಸವಣ್ಣನ ದಾಸೋಹ ಪ್ರಸ್ತುತ ಆದರ್ಶ
Team Udayavani, Apr 27, 2020, 3:30 PM IST
ಬೆಂಗಳೂರು: ಜಗಜ್ಯೋತಿ ಬಸವೇಶ್ವರರ ಸಂದೇಶ ಎಲ್ಲ ಕಾಲಕ್ಕೂ ಪ್ರಸ್ತುತ ಎಂಬುದಕ್ಕೆ ಕೋವಿಡ್ ಸಮಯದಲ್ಲಿ ಅವರ ದಾಸೋಹ ಕಾರ್ಯ ಮುಂದುವರಿಯುತ್ತಿರುವುದೇ
ಉದಾಹರಣೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ. ಬಸವ ಜಯಂತಿ ಪ್ರಯುಕ್ತ ನಗರದ ರಾಮಯ್ಯ ಸರ್ಕಲ್ ಬಳಿಯ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಬಡ ಜನರಿಗೆ ದಿನಸಿ ಕಿಟ್ ವಿತರಿಸಿ, ಸುದ್ದಿಗಾರರ ಜತೆ ಅವರು ಮಾತನಾಡಿದರು. ಉಳ್ಳವರು ಇಲ್ಲದವರೊಂದಿಗೆ ಹಂಚಿಕೊಂಡು ಬದುಕುವಂಥ ಆದರ್ಶದ ಮಾರ್ಗ ಹಾಕಿಕೊಟ್ಟವರು ಅಣ್ಣ ಬಸವಣ್ಣ. ಕೋವಿಡ್ ಸಂಕಷ್ಟದಲ್ಲಿ ಜನರು, ಬಸವಣ್ಣನ ಮಾತಿನಂತೆ ದಾಸೋಹ ಕಾರ್ಯ ನಡೆಸುತ್ತಿದ್ದಾರೆ.
ಬಸವೇಶ್ವರರು ಸಾರಿದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಇತತರಿಗೆ ಮಾದರಿಯಾಗಿದ್ದಾರೆ. ಬಸವಣ್ಣನವರ ಪ್ರೇರಣೆ ಸದಾ ಕಾಲ ಇರಲಿ ಎಂದು ಅವರು ಆಶಿಸಿದರು. ಕನ್ನಡ ನಾಡು ಸೇರಿದಂತೆ ವಿಶ್ವದ ನಾನಾ ಭಾಗಗಳಲ್ಲಿ ಇಂದು ಶ್ರದ್ಧಾ ಭಕ್ತಿಯಿಂದ ಬಸವ ಜಯಂತಿ ಆಚರಿಸಲಾಗುತ್ತಿದೆ. ಬಸವಣ್ಣನವರು ಮನುಕುಲಕ್ಕೆ ನೀಡಿದ ಸಂದೇಶವನ್ನು ನಮ್ಮ ಜೀವನ, ಸಮಾಜ, ವ್ಯವಸ್ಥೆಯಲ್ಲಿ ಅಳವಡಿಸಿಕೊಂಡರೆ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳೇ ಇರದು. ನಮ್ಮ ಬದುಕು ಮತ್ತಷ್ಟು ಅರ್ಥಪೂರ್ಣವಾಗಿ, ಪ್ರೀತಿ, ವಿಶ್ವಾಸ, ಸುಖ, ಸಮೃದ್ಧಿಯಿಂದ
ಕೂಡಿರುತ್ತದೆ. ತಾರತಮ್ಯ ರಹಿತವಾದ ಸಮಾಜವನ್ನು ಕಾಣಲು ಸಾಧ್ಯ ಎಂದರು ಹೇಳಿದರು.
ಕಾಯಕವೇ ಕೈಲಾಸ ಎಂಬ ತಣ್ತೀವನ್ನು ಅಳವಡಿಸಿಕೊಂಡಾಗ ಎಲ್ಲರಿಗೂ ಸಲ್ಲುವಂಥ ‘ಹಸಿವು ಮುಕ್ತ’ ‘ಜಾತ್ಯತೀತ ಸಮಾಜ’ ಕಟ್ಟಬಹುದು. ಅವರ ಸಂದೇಶ ಎಲ್ಲ ಸಮಾಜಕ್ಕೂ ಎಲ್ಲ ಕಾಲಕ್ಕೂ ಪ್ರಸ್ತುತ. ಅವರ ಮಾತುಗಳನ್ನು ಪಾಲಿಸಿ ಅವರಿಗೆ ಗೌರವ ಸಲ್ಲಿಸೋಣ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.