ಬಿಎಸ್‌ವೈ ಪರ ಬಿಜೆಪಿ ನಾಯಕರ ಬ್ಯಾಟಿಂಗ್
Team Udayavani, Aug 20, 2017, 6:25 AM IST
ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ
ನಾಯಕರು ಬಿ.ಎಸ್.ಯಡಿಯೂರಪ್ಪ ಪರ ನಿಂತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದಟಛಿ ಟೀಕಾ ಪ್ರಹಾರ
ನಡೆಸಿದ್ದಾರೆ.
ಬಿಜೆಪಿ ನಾಯಕರಾದ ಬಸವರಾಜ ಬೊಮ್ಮಾಯಿ, ಸಿ.ಎಂ.ಉದಾಸಿ, ಎನ್. ರವಿಕುಮಾರ್, ಬಿ.ಜಿ.ಪುಟ್ಟಸ್ವಾಮಿ, ಶಾಸಕ ಅಶ್ವತ್ ನಾರಾಯಣ, ಡಾ. ವಾಮನಾಚಾರ್ಯ ಮೊದಲಾದವರು ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಕರೆದು, ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಸಂಬಂಧ ಸೂಕ್ತ ಸ್ಪಷ್ಟನೆ ನೀಡುವ ಮೂಲಕ ಬಿಎಸ್‌ವೈಗೆ ಬೆಂಬಲವಾಗಿ ನಾವಿದ್ದೇವೆ ಎಂಬುದನ್ನು ತೋರಿಸಿಕೊಂಡಿದ್ದಾರೆ.
ರಾಜಕೀಯ ಉದ್ದೇಶಕ್ಕಾಗಿ ಎಸಿಬಿ ಬಳಕೆ: ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಶಿವರಾಮ ಕಾರಂತ ಬಡಾವಣೆ ಡಿನೋಟಿμಕೇಷನ್ ಹೆಸರಿನಲ್ಲಿ ಬಿಎಸ್‌ವೈ ವಿರುದ್ಧ ಎಸಿಬಿ ಅಸOಉ ಬಳಸುತ್ತಿರುವ ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿ ಕಾನೂನು ಹೋರಾಟದ ಜತೆಗೆ ರಾಜಕೀಯ ಹೋರಾಟ ಕೂಡ ಮಾಡಲಿದ್ದೇವೆ. ಎಸಿಬಿ ಅಸ್ತಿತ್ವವನ್ನು ಪ್ರಶ್ನಿಸಿರುವ ಅರ್ಜಿ ಹೈಕೋರ್ಟ್‌ನಲ್ಲಿ ಇತ್ಯರ್ಥವಾಗದೆ ಉಳಿದಿರುವಾಗ ಈ ಪ್ರಕರಣದ ವಿಚಾರಣೆಯನ್ನು ಎಸಿಬಿ ಹೇಗೆ ಮಾಡುತ್ತದೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಎಸಿಬಿಯಲ್ಲಿ ದೂರಿದೆ. ಅದನ್ನು ಏಕೆ ವಿಚಾರಣೆ ಮಾಡುತ್ತಿಲ್ಲ? ಶಿವರಾಮ ಕಾರಂತ ಬಡಾವಣೆಯ ಡಿನೋಟಿಫಿಕೇಶನ್‌ಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಒಂದು ಸಂಸ್ಥೆಯಿಂದ ತನಿಖೆ ನಡೆಯುತ್ತಿರುವಾಗ ಇನ್ನೊಂದು ತನಿಖೆ ಹೇಗೆ ನಡೆಸುತ್ತಾರೆ?. ರಾಜ್ಯ ಸರ್ಕಾರ ರಾಜಕೀಯ ಉದ್ದೇಶಕ್ಕಾಗಿ ಎಸಿಬಿಯನ್ನು ಬಳಸಿಕೊಳ್ಳುತ್ತಿದೆ ಎಂದು ದೂರಿದರು.
ಶಿವರಾಮ ಕಾರಂತ ಬಡಾವಣೆ ಸಂಬಂಧ ಪ್ರಿಲಿಮಿನರಿ ನೋಟಿಕೇಷನ್ ಆಗಿದೆಯೇ ಹೊರತು, ಅಂತಿಮ ನೋಟಿಫಿಕೇಷನ್ ಆಗಿಯೇ ಇಲ್ಲ. ಜಮೀನು ಡಿನೋಟಿಫಿಕೇಷನ್ ಆಗಿದೆ ಎಂದು ಅಯ್ಯಪ್ಪ ಎಂಬುವರು ಎಸಿಬಿಗೆ ದೂರು ನೀಡಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ದೂರಾಗಿದೆ. ಬಡಾವಣೆ ನಿರ್ಮಾಣದ ಸಂದರ್ಭದಲ್ಲಿ
ಗುರುತಿಸಿರುವ ಜಮೀನಿನಲ್ಲಿ ಹೆಚ್ಚುವರಿ ಜಮೀನನ್ನು ಕೈ ಬಿಡುವ ಪ್ರಕ್ರಿಯೆ ಅನೇಕ ವರ್ಷದಿಂದ ನಡೆದುಕೊಂಡು ಬಂದಿದೆ. ಬಿಡಿಎ ಅಸ್ತಿತ್ವಕ್ಕೆ ಬರುವ ಮೊದಲು ಸಿಐಟಿಬಿ ಕೂಡ ಇದೇ ಕಾರ್ಯ ಮಾಡುತ್ತಿತ್ತು. ಬಡಾವಣೆ ನಿರ್ಮಾಣದ ಇತಿಹಾಸ ಗಮನಿಸಿದರೆ, ಹೆಚ್ಚುವರಿ ಜಮೀನು ಕೈಬಿಟ್ಟಿರುವ ಮಾಹಿತಿ ಸಿಗುತ್ತದೆ ಎಂದರು.
ಅರ್ಕಾವತಿ ಬಡಾವಣೆ ನಿರ್ಮಾಣದ ಸಂದರ್ಭದಲ್ಲಿ ನೋಟಿಫಿಕೇಷನ್ ಮಾಡಿರುವ ಒಟ್ಟು ಭೂಮಿಯಲ್ಲಿ ಬಿಡಿಎ
ಬೋರ್ಡ್ ತೀರ್ಮಾನದಂತೆ 440 ಎಕರೆ ಭೂಮಿಯನ್ನು ಕೈ ಬಿಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ
ಅವಧಿಯಲ್ಲೂ ಜಮೀನು ಕೈ ಬಿಡಲಾಗಿದೆ. ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಕಾರ್ಯ ವಿಳಂಬಕ್ಕೂ ಡಿನೋಟಿಫಿಕೇಷನ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ ಎಂದು ಮಾಹಿತಿ ನೀಡಿದರು.
ಲೋಕಾಯುಕ್ತವಿದ್ದಿದ್ದರೆ ಸಿಎಂ ಜೈಲಿಗೆ ಹೋಗುತ್ತಿದ್ದರು: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಬಿ.ಜಿ.ಪುಟ್ಟಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ರಾಜಕಾರಣ ಮಾಡಲಿ. ಆದರೆ, ದ್ವೇಷ ರಾಜಕಾರಣ ಮಾಡುವುದು, ಅಧಿಕಾರಿಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವುದು, ಸುಳ್ಳು ಕೇಸು ದಾಖಲಿಸುವುದನ್ನು ನಿಲ್ಲಿಸಬೇಕು. ಚುನಾವಣೆ ಸಮೀಪಿಸುತ್ತಿರುವುದರಿಂದ ಸರ್ಕಾರ ಹೀಗೆಲ್ಲ ಮಾಡುತ್ತಿದ್ದು, ಸಿದ್ದರಾಮಯ್ಯನವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಲಾಯಕ್ ಮುಖ್ಯಮಂತ್ರಿಯಾಗಿದ್ದಾರೆ. ಡೋಂಗಿ ರಾಜಕಾರಣವನ್ನು ಅವರು ನಿಲ್ಲಿಸಬೇಕು ಎಂದು ಆರೋಪಿಸಿದರು.
ಲೋಕಾಯುಕ್ತ ಇದ್ದಿದ್ದರೆ ಸಿದ್ದರಾಮಯ್ಯ ಸೇರಿ ಮಂತ್ರಿಮಂಡಲದ ಹಲವು ಸಚಿವರು ಸಾಲು ಸಾಲಾಗಿ ಜೈಲಿಗೆ ಹೋಗುತ್ತಿದ್ದರು. 2012ರಲ್ಲಿ ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ಸೂಚಿಸಿದ್ದರು. ಕಾಂಗ್ರೆಸ್ ಸರ್ಕಾರ ಬಂದು ನಾಲ್ಕುವರ್ಷ ಕಳೆದಿದೆ. ಸಿಐಡಿ ವರದಿಯನ್ನು ಇನ್ನು ಏಕೆ ಜನರ ಮುಂದೆ ಇಟ್ಟಿಲ್ಲ. ಮುಖ್ಯಮಂತ್ರಿಯವರು ತಮ್ಮ ಭ್ರಷ್ಟಾಚಾರವನ್ನ ಮುಚ್ಚಿ, ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಈ ರೀತಿಯ ನಾಟಕ ಆಡುತ್ತಿದ್ದಾರೆ ಎಂದು ದೂರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.