ಕಂಪನಿ- ಪಾಲಿಕೆ “ಕಸ’ ಜವಾಬ್ದಾರಿ ಸವಾಲು

ವೇಗ ಪಡೆದುಕೊಂಡ ಪ್ರತ್ಯೇಕ ಕಂಪನಿ ರಚನೆ ಪ್ರಕ್ರಿಯೆ

Team Udayavani, Mar 23, 2021, 6:08 PM IST

ಕಂಪನಿ- ಪಾಲಿಕೆ “ಕಸ’ ಜವಾಬ್ದಾರಿ ಸವಾಲು

ಬೆಂಗಳೂರು: ನಗರದ ಕಸ ಸಂಗ್ರಹ ಹಾಗೂ ಕಸ ಸಂಸ್ಕರಣಾ ಘಟಕಗಳ ನಿರ್ವಹಣೆಗೆ ಪ್ರತ್ಯೇಕ ಕಂಪನಿ ರಚನೆ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ಆದರೆ, ಕಂಪನಿ ಮತ್ತು ಪಾಲಿಕೆಯ ನಡುವೆ ಅಧಿಕಾರ ಹಾಗೂ ನಿರ್ವಹಣೆ ಹಂಚಿಕೆ ಇದೀಗ ಸವಾಲಾಗಿ ಪರಿಣಮಿಸಿದೆ.

ಬೆಂಗಳೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಎಲ್ಲ ಘನತ್ಯಾಾಜ್ಯ ಸಂಗ್ರಹ, ಸಾಗಾಣಿಕೆ ಹಾಗೂ ಕಸ ವಿಲೇವಾರಿಗೆ ಸರ್ಕಾರಿ ಸ್ವಾಾಮ್ಯದ ‘ಬೆಂಗಳೂರು ಘನತ್ಯಾಾಜ್ಯ ನಿರ್ವಹಣೆ ಲಿ. ಕಂಪನಿ’ಸ್ಥಾಪನೆ ಆಗಲಿದೆ.  ಆದರೆ, ಕಂಪನಿ ರಚನೆ ಮಾಡುವ ಸಂಬಂಧ ಸರ್ಕಾರದ ಆದೇಶದಲ್ಲಿ ನಗರದ ಸ್ವಚ್ಛತೆ ಜವಾಬ್ದಾಾರಿಯ ಬಗ್ಗೆ ವಿವರಣೆ ನೀಡಿಲ್ಲ. ಕಸ ಸಂಗ್ರಹ ಮತ್ತು ಸಂಸ್ಕರಣೆಯನ್ನು ಕಂಪನಿಗೆ ನೀಡುವುದಾಗಿ ಉಲ್ಲೇಖಿಸಿದೆ.

ನಗರದಲ್ಲಿ ಈಗಾಗಲೇ ಒಳಚರಂಡಿ ಮತ್ತು ನೀರು ಸರಬರಾಜು, ವಿದ್ಯುತ್ ಪೂರೈಕೆ ಮಾಡುವುದು ಸೇರಿದಂತೆ ವಿವಿಧ ಮಂಡಳಿಗಳು ರಚನೆ ಆಗಿವೆ. ಈ ಮಂಡಳಿಗಳನ್ನು ಪಾಲಿಕೆಯ ಅಧೀನವೇ ತರುವ ಮೂಲಕ ಸಮನ್ವಯ ಕೊರತೆ ತಪ್ಪಿಸುವುದು ಹಾಗೂ ಸುಗಮ ವ್ಯವಸ್ಥೆಗೆ ಅವಕಾಶ ಮಾಡಿಕೊಡಬೇಕು ಎನ್ನುವ ಬೇಡಿಕೆ ಬಹು ವರ್ಷಗಳಿಂದ ಇದೆ. ಆದರೆ, ಸರ್ಕಾರ ಪಾಲಿಕೆಯ ನೂತನ ಕಾಯ್ದೆಯಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಾವನೆ ಮಾಡಿಲ್ಲ. ಇದರ ನಡುವೆ ಕಸ ಸಂಗ್ರಹ ಹಾಗೂ ವಿಲೇವಾರಿಗೆ ಕಂಪನಿ ರಚನೆ ಮುನ್ನೆಲೆಗೆ ಬಂದಿದೆ.

ಯಾವ ವಿಷಯಗಳಲ್ಲಿ ಗೊಂದಲ ಸಾಧ್ಯತೆ:

ಪಾಲಿಕೆ ಮತ್ತು ಕಂಪನಿ ನಡುವೆ ಕೆಲವು ನಿರ್ದಿಷ್ಟ ವಿಷಯಗಳ ಹಂಚಿಕೆ ಆಗದೆ ಇದ್ದರೆ, ನಗರದಲ್ಲಿ ಮತ್ತೊಂದು ಸಮಸ್ಯೆ ಸೃಷ್ಟಿ ಆಗುವ ಸಾಧ್ಯತೆ ಇದೆ. ಮುಖ್ಯವಾಗಿ ಕಸ ವಿಂಗಡಣೆ ಪ್ರಮಾಣ ಹೆಚ್ಚಳ ಹಾಗೂ ಬ್ಲಾಾಕ್‌ಸ್ಪಾಾಟ್‌ಗಳ ನಿರ್ಮೂಲನೆಯಲ್ಲಿ ತೊಡಕಾಗಲಿದೆ. ಕಸ ಸಮರ್ಪಕವಾಗಿ ವಿಲೇವಾರಿ ಆಗದೆ ಇರುವುದರಿಂದ ಬ್ಲಾಾಕ್‌ಸ್ಪಾಾಟ್ ಹೆಚ್ಚಾಗುತ್ತಿದೆ ಎಂದು ಪಾಲಿಕೆ, ಸ್ವಚ್ಛತೆ ಕಾಪಾಡಿಕೊಳ್ಳದೆ ಇರುವುದರಿಂದ ಬ್ಲಾಾಕ್‌ಸ್ಪಾಾಟ್ ನಿರ್ಮಾಣವಾಗಿದೆ ಎಂದು ಕಂಪನಿ ದೂರುವ ಪರಿಸ್ಥಿತಿ ನಿರ್ಮಾಣವಾಗುವುದನ್ನೂ ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ತಜ್ಞರು.

ಸಗಟು ತ್ಯಾಾಜ್ಯ ಉತ್ಪಾಾದಕರ ಬಗ್ಗೆ ಗೊಂದಲ:

ನಗರದಲ್ಲಿ ಕಸ ಸಂಗ್ರಹವನ್ನು ಒಣ ಹಾಗೂ ಹಸಿಕಸದ ಮಾದರಿಯಲ್ಲಿ ಸಂಗ್ರಹಿಸುವ ರೀತಿಯೇ ಪಾಲಿಕೆ ಮನೆ -ಮನೆ ಕಸ ಸಂಗ್ರಹ ಮತ್ತು ಸಗಟು ತ್ಯಾಜ್ಯ ಉತ್ಪಾದಕರಿಂದ ಸಂಗ್ರಹ ಎಂದು ಎರಡು ವಿಭಾಗವಾಗಿ ವಿಂಗಡಿಸಿಕೊಂಡಿದೆ. ಸಗಟು ತ್ಯಾಜ್ಯ ಉತ್ಪಾಾದಕರ ಸರ್ವೇ ಹಲವು ವರ್ಷಗಳಿಂದ ಆಗಿಲ್ಲ. ಇದರ ಪರಿಶೀಲನೆ ಮತ್ತು ಪರವಾನಗಿ ಅಧಿಕಾರ ಪಾಲಿಕೆಯ ಆರೋಗ್ಯ ವಿಭಾಗಕ್ಕೆ ನೀಡಲಾಗಿದೆ. ಹೀಗಾಗಿ, ಕಂಪನಿ ಮತ್ತು ಪಾಲಿಕೆ ನಡುವೆ ಕಸ ಸಂಗ್ರಹ ಹಾಗೂ ವಿಲೇವಾರಿ ಜವಾಬ್ದಾಾರಿಗೆ ಹಲವು ಹಂತದ ಸಭೆ ಮತ್ತು ಪರಿಷ್ಕರಣೆ ಆಗಬೇಕಿದೆ.

ಸಮನ್ವಯತೆ ಸವಾಲು: ಸರ್ಕಾರ ಕಂಪನಿಯನ್ನು ಪ್ರತ್ಯೇಕ ಮಂಡಳಿ ಮಾದರಿಯಲ್ಲಿ ರಚನೆ ಮಾಡಿಲ್ಲ. ಇದರಿಂದ ಅಧಿಕಾರ ಹಂಚಿಕೆಯಲ್ಲೂ ಗೊಂದಲ ಸೃಷ್ಟಿ ಸಾಧ್ಯತೆ ಇದೆ. ಇಲ್ಲಿಯವರೆಗೆ ಪಾಲಿಕೆಯ ಒಟ್ಟಾಾರೆ ಕಸ ನಿರ್ವಹಣೆಯ ಬಗ್ಗೆ ಪಾಲಿಕೆಯ ಘನತ್ಯಾಾಜ್ಯ ನಿರ್ವಹಣೆಯ ವಿಶೇಷ ಆಯುಕ್ತರು ಪಾಲಿಕೆಯ ಆಯುಕ್ತರಿಗೆ ವರದಿ ಮಾಡಿಕೊಳ್ಳುತ್ತಿದ್ದರು. ಆದರೆ, ಇನ್ನು ಮುಂದೆ ಹಲವರಿಗೆ ವರದಿ ನೀಡಬೇಕು ಮತ್ತು ಒಂದು ನಿರ್ದಿಷ್ಟ ನಿರ್ಧಾರಕ್ಕೆ ಹಲವು ಹಂತದಲ್ಲಿ ಒಪ್ಪಿಗೆ ಪಡೆದುಕೊಳ್ಳಬೇಕಾದ ಅವಶ್ಯಕತೆ ಇರುತ್ತದೆ.

ಮಧ್ಯವರ್ತಿಗಳಿಗೆ ಕಡಿವಾಣ:

ಕಂಪನಿ ರಚನೆ ಮಾಡುವುದರಿಂದ ಮೋಸದಾಟಕ್ಕೆ ಕಡಿವಾಣ ಬೀಳಲಿದೆ. ಅಲ್ಲದೆ, ಆಟೋಟಿಪ್ಪರ್ ಮತ್ತು ಕಾಂಪ್ಯಾಾಕ್ಟರ್‌ಗಳಿಗೆ ಜಿಪಿಎಸ್ ಅಳವಡಿಕೆ, ಮಧ್ಯವರ್ತಿಗಳಿಂದ ಮುಕ್ತಿ ಹಾಗೂ ಕಸದ ವಿಚಾರದಲ್ಲಿ ಪರಾದರ್ಶಕತೆ ಸಾಧ್ಯವಾಗಲಿದೆ. ಗುತ್ತಿಿಗೆದಾರರಿಗೆ ಸಕಾಲದಲ್ಲಿ ಬಿಲ್ ಬಿಡುಗಡೆ ಸಹ ಆಗಲಿದೆ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ತಿಳಿಯುವುದಿಲ್ಲ ಎನ್ನುವಂತೆ ಕಸ ಗುತ್ತಿಗೆಯಲ್ಲಿ ಕೆಲವು ಪ್ರಭಾವಿಗಳೇ ಇದ್ದಾಾರೆ. ನೇರವಾಗಿ ಮೂರನೇ ಹಂತದಲ್ಲಿ ಕಂಪನಿ ರಚನೆ ಆಗುತ್ತಿರುವುದರಿಂದ ಇಂತಹ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ. ಕಸ ಸಂಗ್ರಹ ಹಾಗೂ ವಿಲೇವಾರಿಗೆ ಕಡ್ಡಾಾಯ ಜಿಪಿಎಸ್ ಹಾಗೂ ಪರವಾನಗಿ ಪರಿಶೀಲನೆಯಲ್ಲಿ ಸುಧಾರಣೆ ಸಾಧ್ಯವಾಗಲಿದೆ.

ಕಸ ಕಂಪನಿ ಅಧಿಕಾರ ಹಂಚಿಕೆ ಸರ್ಕಾರದ ಆದೇಶ ಕಂಪನಿ ಅಧ್ಯಕ್ಷರಾಗಿ ನಗರಾಭಿವೃದ್ಧಿಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ. ಬಿಬಿಎಂಪಿ ಆಯುಕ್ತರು ಸಹ ಅಧ್ಯಕ್ಷರಾಗಿರಲಿದ್ದಾಾರೆ. ನಿಗದಿತ ಅರ್ಹತೆ ಹೊಂದಿರುವ ಅಧಿಕಾರಿಯನ್ನು ಆಡಳಿತ ಮಂಡಳಿಯು ಸಂಸ್ಥೆಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ಯನ್ನಾಾಗಿ ನೇಮಕವಾಗಲಿದ್ದಾಾರೆ.  ಬಿಬಿಎಂಪಿಯಿಂದ ಘನತ್ಯಾಾಜ್ಯ ನಿರ್ವಹಣೆಯ ವಿಶೇಷ ಆಯುಕ್ತ ಮತ್ತು ಜಂಟಿ ಆಯುಕ್ತರು ಪದನಿಮಿತ್ತ ನಿರ್ದೇಶಕರಾಗಿರುತ್ತಾರೆ. ಸರ್ಕಾರದಿಂದ ನಾಮ ನಿರ್ದೇಶಿತ ಸದಸ್ಯರಾಗಿ ಘನತ್ಯಾಜ್ಯ ನಿರ್ವಹಣೆಯಲ್ಲಿ ನುರಿತ ಇಬ್ಬರು ತಜ್ಞರು ಹಾಗೂ ಪರಿಸರ ಇಲಾಖೆ ಕಾರ್ಯದರ್ಶಿ, ಆರ್ಥಿಕ ಇಲಾಖೆ ಕಾರ್ಯದರ್ಶಿ, ಬೆಂಗಳೂರು ಪ್ರಾಾದೇಶಿಕ ಆಯುಕ್ತರು ಪದನಿಮಿತ್ತ ನಿರ್ದೇಶಕರಾಗಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಕಂಪನಿಗೆ ಪ್ರತ್ಯೇಕವಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇರಲಿದ್ದಾಾರೆ.

ಕಟ್ಟುನಿಟ್ಟಾಾಗಿ ಜಾರಿಯಾದರೆ ದಶಕಗಳ ಸಮಸ್ಯೆ ಮುಕ್ತಿ: ಕೆಲವು ನಿರ್ದಿಷ್ಟ ಸವಾಲುಗಳ ಹೊರತಾಗಿಯೂ ಕಂಪನಿ ಮತ್ತು ಪಾಲಿಕೆಗೆ ಸಮಾನವಾಗಿ ಜವಾಬ್ದಾಾರಿ ಹಂಚಿಕೆ ಮಾಡಿದರೆ, ನಗರದಲ್ಲಿ ದಶಕಗಳಿಗೂ ಹೆಚ್ಚು ಕಾಲದಿಂದ ಸಮಸ್ಯೆೆ ಆಗಿ ಉಳಿದಿರುವ ಕಸ ಸಮಸ್ಯೆಗೆ ಪರಿಹಾರ ಸಿಗಲಿದೆ. ಅಲ್ಲದೆ, ಮಹತ್ವದ ನಿರ್ಣಯಗಳು ಕೌನ್ಸಿಿಲ್‌ನಿಂದ ದೂರ ಉಳಿಯಲಿದ್ದು, ಸರ್ಕಾರದ ಹಂತದಲ್ಲಿ ಯಾವುದೇ ಆಕ್ಷೇಪಣೆ ಇಲ್ಲದೆ ನಿರ್ಣಯವಾಗುವ ಸಾಧ್ಯತೆಯೂ ಇದೆ.

ಕಸದ ನಿರ್ವಹಣೆ ಅಧಿಕಾರ ಹಂಚಿಕೆ (ನಿರೀಕ್ಷಿತ) ಪಾಲಿಕೆ :

– ನಗರದ ರಸ್ತೆಗಳ ಸ್ವಚ್ಛತೆ ಮತ್ತು ಕಸ ಗುಡಿಸುವ ಯಂತ್ರಗಳ ನಿರ್ವಹಣೆ.  

– ಪೌರಕಾರ್ಮಿಕರ ವೇತನ ಹಾಗೂ ಜವಾಬ್ದಾರಿ

– ಸಿ ಮತ್ತು ಡಿ ತ್ಯಾಜ್ಯ (ಕಟ್ಟಡ ಮತ್ತು ಕಾಮಗಾರಿ ವೇಳೆ ಉತ್ಪತ್ತಿ ಆಗುವ ತ್ಯಾಾಜ್ಯ).

– ನಗರದ ಎಲ್ಲ ಶೌಚಾಲಯಗಳ ನಿರ್ವಹಣೆ.

ಕಂಪನಿ  :

ಬಯೋಮೆಡಿಕಲ್ ತ್ಯಾಜ್ಯ, ಸಾರ್ವಜನಿಕ ಶೌಚಾಲಯ ತ್ಯಾಜ್ಯ ಹೊರತುಪಡಿಸಿ, ಎಲ್ಲ ಪ್ರಕಾರದ ಘನತ್ಯಾಜ್ಯ ಸಂಗ್ರಹಣೆ, ವಿಂಗಡಣೆ, ಸಾಗಣೆ, ವ್ಯಾಪಾರ, ಸಂಸ್ಕರಣೆ, ಗೊಬ್ಬರ ತಯಾರಿಕೆ, ಮರುಬಳಕೆ ಮತ್ತು ವಿಲೇವಾರಿಯ ವ್ಯವಸ್ಥೆ ನಿರ್ವಹಿಸಲಿದೆ.

ಕಂಪನಿ ರಚನೆ ಮತ್ತು ಅಧಿಕಾರ ಹಂಚಿಕೆಯ ಬಗ್ಗೆ ಪೂರ್ಣ ಪ್ರಮಾಣದ ಮಾರ್ಗಸೂಚಿ ಸರ್ಕಾರದಿಂದ ಇನ್ನಷ್ಟೇ ಬರಬೇಕಿದ್ದು, ಬಂದ ಮೇಲೆ ಕ್ರಮ ವಹಿಸಲಾಗುವುದು. ಅಲ್ಲಿಯವರೆಗೆ ಪಾಲಿಕೆಯೇ ಸಂಪೂರ್ಣ ಕಸ ಸಂಗ್ರಹ ಹಾಗೂ ವಿಲೇವಾರಿ ಮಾಡಲಿದೆ. -ಡಿ.ರಂದೀಪ್, ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ)

ಟಾಪ್ ನ್ಯೂಸ್

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

4

Arrested: ದುಬೈ ಸೈಬರ್‌ ವಂಚಕರಿಗೆ ನೆರವು: 10 ಮಂದಿ ಸೆರೆ

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

11

Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.