ಬಿಬಿಎಂಪಿ ಬಿಎಂಟಿಸಿ; ಸುಂಕ ಸಂಕಟ!
Team Udayavani, Jan 31, 2020, 10:34 AM IST
ಬೆಂಗಳೂರು: ಆಸ್ತಿ ತೆರಿಗೆ ವಿಚಾರದಲ್ಲಿ ಬಿಬಿಎಂಪಿ ಮತ್ತು ಬಿಎಂಟಿಸಿ ನಡುವೆ “ನಾ ಕೊಡೆ, ನೀ ಬಿಡೆ’ ಎಂಬ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ಎಲ್ಲ 42 ಸ್ವತ್ತುಗಳಿಗೆ ಆಸ್ತಿ ತೆರಿಗೆಯಿಂದ ವಿನಾಯ್ತಿ ನೀಡುವಂತೆ ನಾಲ್ಕು ಬಾರಿ ಪತ್ರ ಬರೆದಿದೆ. ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಿಂದ “ಆಗಲ್ಲ’ ಎಂಬ ಅದೇ ಸಿದ್ಧ ಉತ್ತರ ದೊರೆಯುತ್ತಿದೆ.
ಇದೊಂದು ರೀತಿ, “ಸುಂಕ’ ಕಟ್ಟಿಸಿಕೊಳ್ಳುವವರ ಮುಂದೆ “ಸಂಕಟ’ ಹೇಳಿಕೊಂಡರೆ ಏನು ಪ್ರಯೋಜನ ಎಂಬಂತಾಗಿದೆ. ಈ ಮಧ್ಯೆ ಆಸ್ತಿ ತೆರಿಗೆ ಮೊತ್ತದ ಬಾಕಿ ಮಾತ್ರ ಬೆಟ್ಟದಂತೆ ಬೆಳೆಯುತ್ತಿದೆ. ಬಿಎಂಟಿಸಿಯು 42 ಸ್ವತ್ತುಗಳಿಂದ ಪಾಲಿಕೆಗೆ 2.71 ಕೋಟಿ ರೂ.ಆಸ್ತಿ ತೆರಿಗೆ ಪಾವತಿಸಬೇಕಾಗಿದ್ದು, ಕೇವಲ ಸೇವಾ ತೆರಿಗೆ ತೆಗೆದುಕೊಂಡು, ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡುವಂತೆ ಸರ್ಕಾರ ಮತ್ತು ಪಾಲಿಕೆಗೆ ಮನವಿ ಮಾಡಿದೆ. ಬಿಎಂಟಿಸಿಯು ಆರ್ಥಿಕ ಸಂಕಷ್ಟದಲ್ಲಿದ್ದು, ಈ ಹಿನ್ನೆಲೆಯಲ್ಲಿ ಮನವಿ ಮಾನ್ಯ ಮಾಡಬೇಕು ಎಂದು ಸಂಸ್ಥೆ ಕೋರಿದೆ. ಆದರೆ, ಇದು ಪದೇ ಪದೇ ತಿರಸ್ಕೃತವಾಗುತ್ತಿದೆ. “ಪಾಲಿಕೆಯ ಆರ್ಥಿಕ ದೃಷ್ಟಿಯಿಂದ ಸೇವಾ ತೆರಿಗೆಗೆ ಸೀಮಿತ ಮಾಡಲು ಸಾಧ್ಯವಿಲ್ಲ’ ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಬಿಎಂಟಿಸಿಯ ಮನವಿ ತಳ್ಳಿಹಾಕಿದ್ದಾರೆ.
ಬಿಎಂಟಿಸಿಯ ಕೆಂಗೇರಿ ಉಪನಗರ, ಮೈಸೂರು ರಸ್ತೆ, ವಿಜಯನಗರ, ಕೆ.ಆರ್.ಪುರ, ಶಾಂತಿನಗರ, ಬನಶಂಕರಿ ಸೇರಿದಂತೆ ಹಲವು ಪ್ರಮುಖ ಘಟಕಗಳು ಹಾಗೂ ಇತರೆ ಪ್ರಕಾರದ ಸ್ವತ್ತುಗಳಿಂದ ತೆರಿಗೆ ಬಾಕಿ ಇದೆ. ಬಿಎಂಟಿಸಿ ಸಂಸ್ಥೆಯ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡಿ ಸೇವಾ ಶುಲ್ಕ ನಿಗದಿಪಡಿಸುವಂತೆ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಬೇಡಿಕೆ ಮಂಡಿಸುತ್ತಿದೆ. ಈ ಬಾರಿ ಸರ್ಕಾರ ಸೇವಾ ತೆರಿಗೆ ವ್ಯಾಪ್ತಿಗೆ ಬಿಎಂಟಿಸಿಯನ್ನು ತರುವ ಸಾಧ್ಯತೆ ಇದೆ ಎಂಬ ಭರವಸೆ ಇದೆ. ಹಾಗಾದಲ್ಲಿ, ಸಹಜವಾಗಿ ಆಸ್ತಿ ತೆರಿಗೆಯಿಂದ ವಿನಾಯ್ತಿ ಸಿಕ್ಕಂತಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಟಿಸಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು ಎಂದರು.
ವಿನಾಯಿತಿ ಸಾಧ್ಯವಿಲ್ಲ: ಬಿಬಿಎಂಪಿಯ ಆದಾಯದ ದೃಷ್ಟಿಯಿಂದ ಕಾಯ್ದೆಗೆ ತಿದ್ದುಪಡಿ ತಂದು ವಿನಾಯಿತಿ ಸಾಧ್ಯವಿರುವುದಿಲ್ಲ. ಹೀಗಾಗಿ, ಬಿಎಂಟಿಸಿಯು ಎಲ್ಲ ಸ್ವತ್ತುಗಳಿಗೂ ಆಸ್ತಿತೆರಿಗೆ ಪಾವತಿ ಮಾಡಬೇಕು. ಈ ಸಂಬಂಧ ಈ ಹಿಂದೆ ಪತ್ರ ಬರೆದಿದ್ದರೂ, ಬಿಎಂಟಿಸಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಈ ಬಗ್ಗೆ ಪಾಲಿಕೆಯ ಅಧಿಕಾರಿಗಳು ಬಿಎಂಟಿಸಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖೀಸಿದ್ದಾರೆ. ಅಲ್ಲದೆ, ಬಿಎಂಟಿಸಿಯೂ ಪಾಲಿಕೆಗೆ “ನ್ಯಾಯಯುತ’ವಾಗಿ ಪಾವತಿಸಬೇಕಾಗಿ ರುವ ಆಸ್ತಿ ತೆರಿಗೆಯನ್ನು ಕೂಡಲೇ ಪಾವತಿಸುವಂತೆ ಸೂಚಿಸಿದ್ದಾರೆ.
ಬಿಎಂಟಿಸಿ ಸ್ವತ್ತುಗಳಿಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಸೇವಾ ಶುಲ್ಕವನ್ನು ಮಾತ್ರ ನಿಗದಿ ಪಡಿಸುವಂತೆ ಬಿಎಂಟಿಸಿಯು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು ಮನವಿ ಮಾಡಿತ್ತು. ಬಿಎಂಟಿಸಿ ಈಗ ಸಂಪೂರ್ಣ ಆಸ್ತಿ ತೆರಿಗೆ ಪಾವತಿ ಮಾಡುತ್ತಿದ್ದು, ಸಾರ್ವಜನಿಕ ಸೇವಾ ಸಂಸ್ಥೆಯಾಗಿರುವುದರಿಂದ ಸೇವಾ ತೆರಿಗೆಯನ್ನು ಮಾತ್ರ ಪಾವತಿ ಮಾಡಲು 1976 ಕೆ.ಎಂ.ಸಿ ಕಾಯ್ದೆಗೆ ತಿದ್ದುಪಡಿ ಮಾಡುವಂತೆ ಬಿಎಂಟಿಸಿ ಕೋರಿತ್ತು. ಆದರೆ, ಬಿಎಂಟಿಸಿಯ ಮನವಿಯನ್ನು ನಗರಾಭಿವೃದ್ಧಿ ಇಲಾಖೆಯು ನಿರಾಕರಿಸಿದೆ.
ಈ ನಡುವೆ ಬಿಬಿಎಂಪಿಯು ಆಸ್ತಿ ತೆರಿಗೆ ಹಾಗೂ ಸೇವಾ ತೆರಿಗೆ ಉಳಿಸಿಕೊಂಡಿರುವವರ ಮೇಲೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದ್ದು, ಸರ್ಕಾರಿ ಇಲಾಖೆ ಗಳಿಗೂ ಚುರುಕು ಮುಟ್ಟಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಬಿಎಂಟಿಸಿ, ಬಿಎಂಆರ್‌ಸಿಎಲ್ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದ್ದು, ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಇದುವರೆಗೆ ಎರಡು ಬಾರಿ ಪತ್ರ ಬರೆದಿದ್ದಾರೆ.
ಸರ್ಕಾರಿ ಆಸ್ತಿ ಜಪ್ತಿಗೂ ಚಿಂತನೆ! : ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರಿ ಸಂಸ್ಥೆಗಳಿಂದ 407 ಆಸ್ತಿಗಳಿಂದ ಪಾಲಿಕೆಗೆ ಅಂದಾಜು 120 ಕೋಟಿ ರೂ. ಮೊತ್ತದ ಆದಾಯ ಪಾಲಿಕೆಗೆ ಬಾಕಿ ಇದೆ. ಈ ಮೊತ್ತವನ್ನು ಪಾವತಿ ಮಾಡುವ ಸಂಬಂಧ ಪಾಲಿಕೆಯೂ ಹಲವು ಬಾರಿ ನೋಟಿಸ್ ಜಾರಿ ಮಾಡಿದೆ. ನೋಟಿಸ್ ಜಾರಿ ಮಾಡಿದ ಮೇಲೂ ಬಾಕಿ ಮೊತ್ತ ಪಾವತಿ ಮಾಡದೆ ಇರುವವರ ಆಸ್ತಿ ಜಪ್ತಿ ಮಾಡುವ ನಿಟ್ಟಿನಲ್ಲೂ ಚಿಂತನೆ ನಡೆದಿದೆ ಎಂದು ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಉಳಿದ ಸಂಸ್ಥೆಗಳಿಂದ ಹಾಗೂ ಸಾರ್ವಜನಿಕರಿಂದ ಆಸ್ತಿ ತೆರಿಗೆ ಸಂಗ್ರಹಿಸುವ ರೀತಿಯಲ್ಲೇ ಸರ್ಕಾರಿ ಇಲಾಖೆಗಳಿಂದಲೂ ಆಸ್ತಿ ತೆರಿಗೆ ಹಾಗೂ ಸೇವಾ ತೆರಿಗೆ ವಸೂಲಿ ಮಾಡಲಾಗುವುದು. –ಬಿ.ಎಚ್. ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ
-ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್ ನಕಾರ
Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.