ವರ್ಗಾವಣೆ ಬೈಲಾ ತಂದ ಪಾಲಿಕೆ
Team Udayavani, Feb 16, 2020, 3:07 AM IST
ಬೆಂಗಳೂರು: ಸರ್ಕಾರದಿಂದ ಎರವಲು ಸೇವೆ ಮೇಲೆ ಪಾಲಿಕೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರು ಇನ್ನುಮುಂದೆ ಪಾಲಿಕೆಯ ಖಾಲಿ ಹುದ್ದೆಗಳಿಗೆ ಮಾತ್ರ ಅರ್ಜಿ ಸಲ್ಲಿಸಬೇಕು. ಪಾಲಿಕೆ ಆಯ್ದ ಹುದ್ದೆಗಳಿಗೆ ಸರ್ಕಾರದಿಂದ ಎರವಲು ಸೇವೆ ಆಧಾರದಲ್ಲಿ ನೌಕರರು ನೇಮಕವಾಗುತ್ತಿದ್ದು, ಇದರಿಂದ ಪಾಲಿಕೆ ಮೂಲ ಸಿಬ್ಬಂದಿ ಕರ್ತವ್ಯ ಹಾಗೂ ಬಡ್ತಿಗೆ ಅಡ್ಡಿಯಾಗುತ್ತಿದೆ.
ಇದು ಕಾನೂನು ಸಂಘರ್ಷಕ್ಕೆ ಎಡೆಮಾಡಿಕೊಡುವುದು ತಪ್ಪಿಸಲು ಪಾಲಿಕೆಯು ನೌಕರರ ವರ್ಗಾವಣೆ ಬೈಲಾ ರಚಿಸಿದೆ. ಬೈಲಾದಲ್ಲಿ ಎರವಲು ಸೇವೆಯ ಮೇಲೆ ಕೆಲಸ ಮಾಡಲು ಬರುವವರು ನಿರ್ದಿಷ್ಟ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ) ಅನುºಕುಮಾರ್, ಎರವಲು ಸೇವೆ ಮೇಲೆ ಪಾಲಿಕೆ ಕೆಲಸ ಮಾಡಲು ಇಚ್ಛಿಸುವ ನೌಕರರು ಖಾಲಿ ಹುದ್ದೆಗಳಿಗಷ್ಟೇ ಅರ್ಜಿ ಸಲ್ಲಿಸಬೇಕು ಎಂಬ ನಿಯಮ ಸೇರ್ಪಡೆ ಮಾಡಿ ಮಾರ್ಗಸೂಚಿ ರೂಪಿಸಲಾಗಿದೆ.
ಆಡಳಿತಾತ್ಮಕ ಸುಧಾರಣೆ ಹಾಗೂ ಗೊಂದಲಗಳನ್ನು ತಪ್ಪಿಸುವ ಉದ್ದೇಶದಿಂದ ವರ್ಗಾವಣೆ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಶಿಫಾರಸು ಆಧಾರದಲ್ಲಿ ವರ್ಗಾವಣೆ ಮಾಡುವುದಕ್ಕೆ ಇತ್ತೀಚೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.
ವರ್ಗಾವಣೆ ನೀತಿ ಮುಖ್ಯಾಂಶಗಳು: ಬಿಬಿಎಂಪಿಯ ಕಾಯಂ ಅಧಿಕಾರಿ ಅಥವಾ ನೌಕರರಿಗೆ, ಸೇವಾ ಹಿರಿತನ ಹೊಂದಿರುವವರಿಗೆ ವರ್ಗಾವಣೆ ವೇಳೆ ಆದ್ಯತೆ ಮಂಜೂರಾದ ಹುದ್ದೆಗಳಲ್ಲಿ ವರ್ಗಾವಣೆ ಶೇ.15 ಮೀರದಂತೆ ನೋಡಿಕೊಳ್ಳುವುದು ವರ್ಗಾವಣೆ ನೀತಿಯಲ್ಲಿ ಸೇವಾ ಅವಧಿಯನ್ನು ನಿಗದಿ ಮಾಡಿದ್ದು, ಈ ಅವಧಿಗೆ ಮುನ್ನ ವರ್ಗಾವಣೆ ಮಾಡಲು ಅವಕಾಶ ಇರುವುದಿಲ್ಲ
ವಲಯವಾರು ನೌಕರರ ಅದಾಲತ್
ಬೆಂಗಳೂರು: ಬಿಬಿಎಂಪಿ ಸಿಬ್ಬಂದಿಗೆ ನಿವೃತ್ತಿ ದಿನದಂದೇ ಪಾಲಿಕೆಯಿಂದ ನೀಡುವ ಸೌಲಭ್ಯಗಳು ಸರಳವಾಗಿ ಸಿಗುವಂತೆ ಮಾಡುವ ಉದ್ದೇಶದಿಂದ ವಲಯವಾರು “ನೌಕರರ ಅದಾಲತ್’ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ಅನುºಕುಮಾರ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿವೃತ್ತಿ ಹೊಂದಿರುವ ನೌಕರರು ತಮ್ಮ ಸೇವೆ ಪಡೆದುಕೊಳ್ಳಲು ಪಾಲಿಕೆಯ ಕೇಂದ್ರ ಕಚೇರಿಗೆ ತಿಂಗಳು ಗಟ್ಟಲೆ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ, ನೌಕರರ ಅದಾಲತ್ ನಡೆಸಲಾಗುತ್ತಿದೆ ಎಂದು ಹೇಳಿದರು.
ಮೊದಲ ಹಂತದಲ್ಲಿ ಪಾಲಿಕೆ ಎಂಟು ವಲಯದ “ಡಿ’ ಗ್ರೂಪ್‌ನ ನೌಕರರ ಅದಾಲತ್ ನಡೆಸಲಾಗಿದ್ದು, ಅದಾಲತ್‌ನಲ್ಲಿ 1,917 “ಡಿ’ ಗ್ರೂಪ್ ಸಿಬ್ಬಂದಿಯ ಎಚ್‌ಆರ್‌ಎಂಎಸ್, ವೈದ್ಯಕೀಯ ಸೌಲಭ್ಯ, ಸೇವಾವಧಿ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲಾಗಿದೆ.ಇನ್ನು ಮುಂದಿನ ದಿನಗಳಲ್ಲಿ “ಬಿ’ ಹಾಗೂ “ಸಿ’ ಗ್ರೂಪ್ ನೌಕರರ ಅದಾಲತ್ ನಡೆಸುವ ಚಿಂತನೆ ಇದೆ ಎಂದರು.
ಮುಂದಿನ ಎರಡು ಅಥವಾ ಮೂರು ತಿಂಗಳು ಈ ರೀತಿ ಅದಾಲತ್ ನಡೆಸಿದರೆ. ಬಿಬಿಎಂಪಿಯ ಎಲ್ಲ ಅಧಿಕಾರಿ ಸಿಬ್ಬಂದಿಗೆ ಸಂಬಂಧಿಸಿದ ಆಡಳಿತಾತ್ಮಕ ಸಮಸ್ಯೆ ಪರಿಹಾರಗೊಳ್ಳಲಿದೆ. ಅಲ್ಲದೆ, ಇದಕ್ಕೆ ಸಂಬಂಧಿಸಿದ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಾಗಲಿವೆ ಎಂದು ಮಾಹಿತಿ ನೀಡಿದರು.
ನಿಗದಿತ ಕನಿಷ್ಠ ಸೇವಾವಧಿ
ನೌಕರರು ಸೇವಾವಧಿ
ಎ ಮತ್ತು ಬಿ ಗ್ರೂಪ್ 2 ವರ್ಷ
ಸಿ ಗ್ರೂಪ್ 3 ವರ್ಷ
ಡಿ ಗ್ರೂಪ್ 5 ವರ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.