ಪ್ರತಿನಿಧಿಗಳಿಲ್ಲದೆ ಬಿಬಿಎಂಪಿ 2ನೇ ಬಜೆಟ್
Team Udayavani, Feb 20, 2022, 8:50 AM IST
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲದೆ ಮತ್ತೂಂದು ಬಜೆಟ್ ಮಂಡನೆಗೆ ಸಿದ್ಧತೆ ನಡೆಯುತ್ತಿದ್ದು ಮತ್ತೂಂದೆಡೆ ಹೊಸ ಯೋಜನೆಗಳಿಗೆ ಹಣಕಾಸು ಹೊಂಚುವುದು ಸವಾಲಾಗಿ ಪರಿಣಮಿಸಿದೆ.
ಜನಪ್ರತಿನಿಧಿಗಳ ಅವಧಿ ಮುಗಿದ ನಂತರ ಕಳೆದ ಒಂದೂವರೆ ವರ್ಷದಲ್ಲಿ ಚಾಲ್ತಿಯಲ್ಲಿರುವ ವೈಟ್ ಟಾಪಿಂಗ್, ಸ್ಮಾರ್ಟ್ ಸಿಟಿ ಕಾಮಗಾರಿ ಬಿಟ್ಟರೆ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಹೊಸ ಯೋಜನೆ ರೂಪಿಸಿಲ್ಲ. ಇದರಿಂದಾಗಿ ಒಂದು ರೀತಿಯಲ್ಲಿ `ಅಭಿವೃದ್ಧಿಗೂ “ಗ್ರಹಣ’ ಹಿಡಿದಂತಾಗಿದೆ.
ಇದರ ನಡುವೆ, ಸಾವಿರಾರು ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದರೂ ರಸ್ತೆಗುಂಡಿಮಚ್ಚುವಲ್ಲೂ ವಿಫಲವಾಗಿ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿರುವುದು, ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಬಗ್ಗೆ ನ್ಯಾಯಾಲಯ ಎಚ್ಚರಿಕೆ ನೀಡಿರುವುದು. ಸಮನ್ವಯ ಕೊರತೆಯಿಂದ ಆಗ್ಗಾಗ್ಗೆ ಎದುರಾಗುತ್ತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ, ರಸ್ತೆ ಅಗೆತ ಸಾರ್ವಜನಿಕರ ಆಕ್ರೋಶಕ್ಕೂ ಗುರಿಯಾಗಿದೆ. ಸಿಲಿಕಾನ್ ಸಿಟಿಯ ರಸ್ತೆ ಗುಂಡಿ ವಿಚಾರದಲ್ಲಿ ಪಾಲಿಕೆ ಮುಖ್ಯ ಎಂಜಿನಿಯರ್ ಹೈಕೋರ್ಟ್‌ಗೆ ಹೋಗಿ ಕೈ ಮುಗಿಯುವ ಪರಿಸ್ಥಿತಿ ಬಂದೊದಗಿದೆ.
ಜನರಿಂದ ಆಯ್ಕೆಯಾದ ಪ್ರತಿನಿಧಿ ಗಳು ಇದ್ದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರಸಕಾಲದಲ್ಲಿ ಸಿಗುತ್ತದೆ ಎಂದು ತಜ್ಞರು ಹೇಳುತ್ತಾರೆ. ವಿಶ್ವದ ಗಮನ ಸೆಳೆಯುವ ಬೆಂಗಳೂರಿನಂತಹನಗರದಲ್ಲಿ ಇಷ್ಟು ದೀರ್ಘಕಾಲ ಜನಪ್ರತಿನಿಧಿಗಳು ಪಾಲಿಕೆಯಲ್ಲಿ ಇಲ್ಲಂದರೆ, ದೂರದೃಷ್ಟಿಯ ಅಭಿವೃದ್ಧಿಯನ್ನು ಯೋಜನೆಗಳು ಕುಂಠಿತವಾದಂತೆ. ಜನಪ್ರತಿನಿಧಿಗಳು ಹೊಸ ಹೊಸ ಯೋಜನೆಗಳನ್ನುರೂಪಿಸುತ್ತಾರೆ. ಸಂಪನ್ಮೂಲ ಕ್ರೋಢೀಕರಣಕ್ಕೆಹೆಚ್ಚಿನ ಮಹತ್ವ ನೀಡುತ್ತಾರೆ. ಪಾಲಿಕೆಯ ಎಲ್ಲಸಮಸ್ಯೆಗಳಿಗೆ ಚುನಾವಣೆ ಒಂದೇ ಪರಿಹಾರ ಎಂದು ತಿಳಿದುತ್ತಾರೆ.
ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ತರಲು ಆಗಲ್ಲ: “ನನ್ನ ನಗರ ನನ್ನ ಬಜೆಟ್ ಬೆಂಗಳೂರು’ನ ಉಸ್ತುವಾರಿ ಮಂಜುನಾಥ್ ಮಾತನಾಡಿ, ಬಿಬಿಎಂಪಿ ವಾರ್ಡ್ ಕಮಿಟಿ ರಚನೆಮಾಡಿ 60 ಲಕ್ಷ ರೂ. ಅನುದಾನ ನೀಡಲಾಗಿದೆ. ಆದರೆ, ಅದರ ವಿನಿಯೋಗ ಸರಿಯಾಗಿ ಆಗುತ್ತಿಲ್ಲ.ಇದಕ್ಕೆ ಕಾರಣ ಜನಪ್ರತಿನಿಧಿಗಳು ಇಲ್ಲದಿರುವುದು.ಬಜೆಟ್ ವಿಚಾರಕ್ಕೂ ಬಂದಾಗಲೂ ಅಧಿಕಾರಿಗಳು ತಮ್ಮಲ್ಲಿರುವ ಅನುದಾನಕ್ಕೆ ತಕ್ಕಂತೆ ಬಜೆಟ್‌ರೂಪಿಸುತ್ತಾರೆ. ಆದರೆ, ಜನಪ್ರತಿನಿಧಿಗಳು ಇದ್ದರೆಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ತರುತ್ತಾರೆ. ಇದರಿಂದ ಹೊಸ ಯೋಜನೆಗಳುಬರಲು ಸಹಕಾರಿಯಾಗುತ್ತದೆ ಎಂದು ತಿಳಿಸುತ್ತಾರೆ.
ಸಮಸ್ಯೆ ಬಗೆಹರಿಯುವುದಿಲ್ಲ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಧಾನಿ ಮತ್ತು ಮುಖ್ಯಮಂತ್ರಿಗಳುಆಡಳಿತದ ನಿರ್ವಹಣೆ ಮಾಡುತ್ತಾರೆ. ಸಂಸದರು ಮತ್ತು ಶಾಸಕರ ಜನರನ್ನು ಪ್ರತಿನಿಧಿಸುತ್ತಾರೆ. ಇವರು ಆಯಾ ಭಾಗದ ಸಮಸ್ಯೆಗಳನ್ನು ಸರ್ಕಾರಇಲ್ಲವೆ ಅಧಿಕಾರಿಗಳ ಗಮನಕ್ಕೆ ತಂದುಸರಿಪಡಿಸುತ್ತಾರೆ. ಆದರೆ ಸಮಸ್ಯೆಗಳನ್ನು ಆಡಳಿತಯಂತ್ರಕ್ಕೆ ತಲುಪಿಸುವವರೇ ಇಲ್ಲ ಎಂದರೆ ಹೇಗೆಎಂದು ಸಿಟಿಜನ್ ಪಾರ್ಟಿಸಿಪೇಶನ್, ಬೆಂಗಳೂರುಘಟಕದ ಮುಖ್ಯಸ್ಥ ಶ್ರೀನಿವಾಸ್ ಅಲವಿಲ್ಲ ಪ್ರಶ್ನಿಸುತ್ತಾರೆ.
ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಇಲ್ಲದಿದ್ದರೆ ಅಲ್ಲಿ ಪ್ಲಬಿಕ್ ವಾಯ್ಸ ಇರುವುದಿಲ್ಲ. ಪಾಲಿಕೆಗೆ ಚುನಾವಣೆ ನಡೆಸುವ ವಿಚಾರದಲ್ಲಿ ಆಡಳಿತ ಪಕ್ಷ ಬಿಜೆಪಿ ಮೌನ ವಹಿಸಿದೆ. ಆದರೆ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸಹ ಆ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಶಾಸಕರಿಗೆ ಚುನಾವಣೆ ಬೇಡವೋ ಅಥವಾ ಪಕ್ಷಗಳಿಗೆ ಬೇಡವೋ ಎಂಬುದೇ ಅರ್ಥವಾಗುತ್ತಿಲ್ಲ.ಕಳೆದ ಒಂದೂವರೆ ವರ್ಷಗಳಿಂದ ಕೌನ್ಸಿಲ್‌ನಲ್ಲಿಸಭೆಗಳಿಲ್ಲ. ಜನಸಾಮಾನ್ಯರ ಸಮಸ್ಯೆಗಳನ್ನುಕೇಳುವವರು, ಹೇಳುವವರೇ ಇಲ್ಲ. ಕಮೀಷನರ್,ಆಡಳಿತಾಧಿಕಾರಿ ಪಾಲಿಕೆಯ ಎಲ್ಲಾ ವಾರ್ಡ್‌ಗಳಸಮಸ್ಯೆಗಳಿಗೆ ಗಮನ ಕೊಡಲು ಆಗುತ್ತಾ ಎಂದು ಹೇಳುತ್ತಾರೆ.
ಐಎಎಸ್, ಕೆಎಎಸ್‌ಅಧಿಕಾರಿಗಳು ಆಡಳಿತಯಂತ್ರವನ್ನು ನಿರ್ವಹಣೆಮಾಡಿದರೂ ಜನಪ್ರತಿನಿಧಿಗಳ ರೀತಿಯಲ್ಲಿ ಕೆಲಸ ಮಾಡಲುಆಗುವುದಿಲ್ಲ. ತಕ್ಷಣದ ಸ್ಪಂದನೆಪ್ರತಿನಿಧಿಗಳಿಂದ ಮಾತ್ರ ಸಾಧ್ಯ. –ಮಂಜುನಾಥ್, ನನ್ನ ನಗರ ನನ್ನ ಬಜೆಟ್ ಬೆಂಗಳೂರು ಉಸ್ತುವಾರಿ
-ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.