BBMP: ವಾರ್ಡ್ ವಿಂಗಡಣೆ ವಿರುದ್ಧ ಹೈ ಮೊರೆ ಸಾಧ್ಯತೆ
Team Udayavani, Aug 24, 2023, 12:58 PM IST
ಬೆಂಗಳೂರು: ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ ಸಂಬಂಧ ಅಪಸ್ವರ ಕೇಳಿಬಂದಿದ್ದು, ಮತ್ತೂಮ್ಮೆ ಹೈಕೋರ್ಟ್ ಮೇಟ್ಟಿಲೇರುವ ಸಾಧ್ಯತೆ ದಟ್ಟವಾಗಿದೆ.
ಈಗಾಗಲೇ ವಾರ್ಡ್‌ಗಳ ವ್ಯಾಪ್ತಿಯ ಗಡಿಗಳ ಚೆಕ್ಕುಬಂದಿ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸ ಲಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳು ಕೂಡ ಸ್ವೀಕಾರವಾಗುತ್ತಿವೆ. ಈ ಮಧ್ಯೆ ಬಿಜೆಪಿಯ ಭದ್ರಕೋಟೆ ಎನಿಸಿರುವ ಪದ್ಮನಾಭನಗರ, ಬೊಮ್ಮನಹಳ್ಳಿ, ರಾಜ ರಾಜೇಶ್ವರಿ ನಗರ, ಮಹದೇವಪುರ, ಯಲಹಂಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಕಡಿತಗೊಳಿಸಿದ್ದು ಅಲ್ಲದೆ ಕೆಲವು ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಅಲ್ಪಸಂಖ್ಯಾತರು ಮತ್ತು ಕೊಳಗೇರಿ ನಿವಾಸಿಗಳು ಹೆಚ್ಚಿರುವ ಪ್ರದೇಶಗಳನ್ನು ಸೇರಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಕಾಂಗ್ರೆಸ್ ತನಗೆ ಅನುಕೂಲವಾಗುವ ರೀತಿಯಲ್ಲಿ ವಾರ್ಡ್‌ಗಳ ವ್ಯಾಪ್ತಿಯನ್ನು ಗಡಿಗಳ ಚೆಕ್ ಬಂದಿ ರೂಪಿಸಿದೆ. ವಾರ್ಡ್ ಮರು ವಿಂಗಡಣೆ ಅವೈಜ್ಞಾನಿಕ ವಾಗಿದೆ. ಕಾಂಗ್ರೆಸ್ ಕೇವಲ ಗೆಲುವಿನ ಲೆಕ್ಕಾಚಾರವಷ್ಟೇ ಇದರಲ್ಲಿ ಅಡಗಿದೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ದೂರುತ್ತಾರೆ.
ಬಿಜೆಪಿ ಅಭ್ಯರ್ಥಿಗಳೇ ಗೆದ್ದುಬರುತ್ತಿರುವ ವಾರ್ಡ್ ಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂಬ ದುರುದ್ದೇಶದಿಂದ ಆ ವಾರ್ಡ್‌ಗಳಿಗೆ ಸಂಬಂಧ ಪಡದೇ ಇರುವಂತಹ ಅಲ್ಪಸಂಖ್ಯಾತರುಗಳ ಪ್ರದೇಶ, ಕೊಳಗೇರಿ ನಿವಾಸಿಗಳ ಪ್ರದೇಶ ಸೇರಿಸುವ ಹುನ್ನಾರ ನಡೆದಿದೆ. ಈಗಾಗಲೇ ಕೆಲವು ಸಂಘ-ಸಂಸ್ಥೆಗಳು ಇದರ ವಿರುದ್ಧ ಆಕ್ಷೇಪಣೆ ಸಲ್ಲಿಸಿವೆ. ತಪ್ಪು ಸರಿಪಡಿಸದೆ ಹೋದರೆ ಬಿಜೆಪಿ ಕೂಡ ಹೈಕೋರ್ಟ್ ಮೇಟ್ಟಿಲೇರಲಿದೆ ಎನ್ನುತ್ತಾರೆ.
ಯಾರಬ್, ಇಲಿಯಾಸ್ ನಗರ ಸೇರ್ಪಡೆ: ಬಿಜೆಪಿಯ ಭದ್ರಕೋಟೆ ಎನಿಸಿರುವ ಪದ್ಮನಾಭನಗರ, ಜಯನಗರ, ಚಿಕ್ಕಪೇಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಮತಗಳು ನಾಲ್ಕುಸಾವಿರ ಇರುವಂತೆ ನೋಡಿಕೊಂಡಿದೆ. ಜತೆಗೆ ಹೆಚ್ಚು ವಾರ್ಡ್ ಗೆಲ್ಲಬೇಕು ಎಂಬ ಉದ್ದೇಶದಿಂದ ವಕ್ರ ಆಕಾರವಾಗಿ, ಲಂಬಾಕಾರವಾಗಿ ವಾರ್ಡ್ ಪುನರ್ ವಿಂಗಡಿಸಲಾಗಿದೆ.
ಈ ಹಿಂದೆ ಪದ್ಮನಾಭನಗರದಲ್ಲಿದ್ದ ಕರೀಸಂದ್ರ ವಾರ್ಡ್ ಇಲ್ಲವಾಗಿದೆ. ಗಣೇಶ ಮಂದಿರ ವಾರ್ಡ್, ದೇವಗಿರಿ ವಾರ್ಡ್ ಮಾಡಲಾಗಿದೆ. ಆದರೆ ಇಲ್ಲಿ ದೂರದ ಯಾರಾಬ್ ನಗರ, ಇಲಿಯಾಸ್ ನಗರ ಪ್ರದೇಶಗಳನ್ನು ಸೇರಿಸಲಾಗಿದೆ. ಜಯನಗರದಲ್ಲೂ ಕೂಡ ಇದೇ ಕೆಲಸ ಮಾಡಲಾಗಿದೆ. ಚಿಕ್ಕಪೇಟೆ ಕ್ಷೇತ್ರದಲ್ಲಿ ಬಡೆಮಕಾನ್ ಪ್ರದೇಶ ಸೇರಿಸುವ ಕೆಲಸ ನಡೆದಿದೆ. ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್‌ನಲ್ಲಿ ಮೈನಾರೀಟಿ ವೋಟ್ ಸೇರಿಸುವ ಷಡ್ಯಂತ್ರ ನಡೆದಿದೆ ಎಂದು ಬಿಜೆಪಿ ಮುಖಂಡರು ದೂರುತ್ತಾರೆ.
ಜನಸಂಖ್ಯೆ ಆಧರಿಸಿ ವಾರ್ಡ್ ವಿಂಗಡಣೆ :
ಈ ಹಿಂದೆ ಬಿಜೆಪಿ ಅಧಿಕಾರ ಅವಧಿಯಲ್ಲಿ ವಾರ್ಡ್‌ಗಳ ಪುನರ್ ವಿಂಗಡಣೆ “ಸಿಲೋನ್ ಮ್ಯಾಪ್’ ರೀತಿಯಲ್ಲಿತ್ತು. ಅದನ್ನು ಈಗ ಸರಿಪಡಿಸಲಾಗಿದೆ. ವಾರ್ಡ್‌ವಾರು ಪುನರ್ ವಿಂಗಡಣೆಯಲ್ಲಿ ಸಾಮಾಜಿಕ ನ್ಯಾಯ ಕಾಪಾಡಲಾಗಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಪಿ.ಆರ್.ರಮೇಶ್ ಹೇಳುತ್ತಾರೆ. ಬಿಜೆಪಿ ಆಡಳಿತ ಅವಧಿಯಲ್ಲಿ ಆ ತಾಂತ್ರಿಕವಾಗಿ ವಾರ್ಡ್‌ಗಳ ರಚಿಸಲಾಗಿತ್ತು. ಜನಸಂಖ್ಯೆ ಆಧರಿಸಿ ವಾರ್ಡ್ ವಿಂಗಡಿಸಲಾಗಿದೆ. ಬಿಜೆಪಿಯವರು ಮಾಡುತ್ತಿರುವ ಆರೋಪಗಳಲ್ಲಿ ಹುರಳಿಲ್ಲ. ತಮ್ಮ ಲೋಪ ಮುಚ್ಚಿಕೊಳ್ಳುವ ನಿಟ್ಟಿನಲ್ಲಿ ದೂರುತ್ತಿದ್ದಾರೆ. ಸರಿಯಾದ ನಿಟ್ಟಿನಲ್ಲೇ ವಾರ್ಡ್ ವಿಂಗಡಿಸಲಾಗಿದೆ ಎಂದು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.