BBMP: ಅ.17ಕ್ಕೆ ಬಿಬಿಎಂಪಿಯಿಂದ “ನಾಯಿಗಳಿಗಾಗಿ ಉತ್ಸವ’

Team Udayavani, Oct 13, 2024, 12:13 PM IST

BBMP: ಅ.17ಕ್ಕೆ ಬಿಬಿಎಂಪಿಯಿಂದ “ನಾಯಿಗಳಿಗಾಗಿ ಉತ್ಸವ’

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಈಗ ಅ. 17ರಂದು “ನಾಯಿಗಳಿಗಾಗಿ ಉತ್ಸವ’ ಹಮ್ಮಿಕೊಂಡಿದೆ.

ಸಹವರ್ತಿನ್‌ ಅನಿಮಲ್‌ ವೆಲ್‌ ಫೇರ್‌ ಟ್ರಸ್ಟ್‌ ಸೇರಿದಂತೆ ಮತ್ತಿತರರ ಸಂಘ ಸಂಸ್ಥೆಗಳ ಜತೆಗೂಡಿ ಪಾಲಿಕೆ ಪಶುಸಂಗೋಪನೆ ವಿಭಾಗವು ಈ ಉತ್ಸವ ಆಯೋಜಿಸುತ್ತಿದೆ. ಪಾಲಿಕೆ ಎಂಟೂ ವಲಯಗಳ ಪ್ರತಿ ವಾರ್ಡ್‌ಗಳಲ್ಲಿ ಸಹಬಾಳ್ವೆಯ ಚಾಂಪಿಯನ್‌ ಗಳನ್ನು ಸಕ್ರಿಯಗೊಳಿಸುವ ನಿರ್ಧಾರವನ್ನು ಮಾಡಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಸುರಳ್ಕರ್‌ ವಿಕಾಸ್‌ ಕಿಶೋರ್‌ ಹೇಳಿದ್ದಾರೆ.

ನಾಯಿ ಕಡಿತ ಹಾಗೂ ದಾಳಿಯ ಭಯದಿಂದ ನಾಯಿಗಳ ಮೇಲೆ ನಕಾರಾತ್ಮಕ ಭಾವನೆ ಹೆಚ್ಚಾಗುತ್ತಿದೆ. ಆದರೆ ನಾಯಿಗಳು ಬಹಳ ನಿಷ್ಠಾವಂತ, ವಿಧೇಯ ಹಾಗೂ ಭಾವನಾತ್ಮಕ ಪ್ರಾಣಿ ಕೂಡ ಹೌದು. ಪ್ರಾಣಿಗಳೊಂದಿಗಿನ ಸಂಘರ್ಷ ಕಡಿಮೆ ಮಾಡಲು ಹಲವು ರೀತಿಯ ಯೋಜನೆಗಳನ್ನು ರೂಪಿಸಲಾಗಿದೆ.

ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳನ್ನು ಹಾಗೂ ‌ ಪಾಲಕರನ್ನು ಒಟ್ಟುಗೂಡಿಸುವ ಮೂಲಕ ಪಾಲಿಕೆಯು ನಾಯಿಗಳಿಗೆಂದು ಉತ್ಸವ (Kukur Tihar) ವನ್ನು ಆಯೋಜಿಸಲಾಗುತ್ತಿದೆ. ಈ ವೇಳೆ ನಾಯಿಗಳೊಂದಿಗಿನ ಪ್ರೀತಿ ಮತ್ತು ಬಾಂಧವ್ಯದ ಕಥೆ ಗಳನ್ನು ಪ್ರಾಣಿ ಪಾಲಕರು ಹಂಚಿಕೊಳ್ಳಲಿದ್ದಾರೆ ಎಂದಿದ್ದಾರೆ.

ಪ್ರಾಯೋಗಿಕವಾಗಿ ನಾಯಿಗೆ ಆಹಾರ: ಉತ್ಸವದ ದಿದಂದು ಬಿಬಿಎಂಪಿ ಆಯಾ ವಾರ್ಡ್‌ನ ರೆಸ್ಟೋರೆಂಟ್‌ಗಳೊಂದಿಗೆ ಸಮನ್ವಯ ಸಾಧಿಸಿ ಬೀದಿ ನಾಯಿಗಳಿಗೆ ಆಹಾರ ನೀಡುವ ಪ್ರಾಯೋಗಿಕ ಕಾರ್ಯ ಕೂಡ ನಡೆಯಲಿದೆ. 4 ವಾರ್ಡ್‌ಗಳ ಪೌರ ಕಾರ್ಮಿಕರ ಸಹಯೋಗ ದೊಂದಿಗೆ ಪ್ರಾಯೋಗಿಕವಾಗಿ ಆಹಾರ ನೀಡುವ ಕಾರ್ಯವನ್ನು ಪ್ರಾರಂಭಿಸಲಾಗುವುದು ಎಂದುಪಾಲಿಕೆ ಪಶುಪಾಲನಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ವಾರ್ಡ್‌ನಲ್ಲಿಯೂ ಆರೈಕೆದಾರರೊಂದಿಗೆ ರೆಸ್ಟೋರೆಂಟ್‌ಗಳನ್ನು ಸಂಪರ್ಕಿಸುವ ಮೂಲಕ ಉಳಿದ ಆಹಾರವನ್ನು ಸದುಪಯೋಗಿಸುವ ನಿರ್ಧಾರ ಪಾಲಿಕೆ ನಿರ್ಧರಿಸಿದೆ. ಈ ರೀತಿಯಲ್ಲಿ ನಾಯಿಗಳಿಗೆ ನಿರಂತರ ವಾಗಿ ಪ್ರತಿದಿನ ಒಂದು ಬಾರಿ ಆಹಾರವನ್ನು ನೀಡುವ ಕೆಲಸ ನಡೆಯಲಿದೆ ಎಂದಿದ್ದಾರೆ.

ನಾಯಿ ಉತ್ಸವ ಏಕೆ?:

ನಗರದಲ್ಲಿ ಸುಮಾರು 2.8 ಲಕ್ಷ ಬೀದಿ ನಾಯಿಗಳಿವೆ. ಮಾನವ-ಪ್ರಾಣಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಬಿಬಿಎಂಪಿಯ ಪಶು ಸಂಗೋಪನಾ ವಿಭಾಗವು ಈ ಉತ್ಸವವನ್ನು ಆಯೋಜಿಸುತ್ತಿದೆ. ಸಮಾಜದಲ್ಲಿ ನಾಯಿಗಳ ಬಗ್ಗೆ ನಕಾರಾತ್ಮಕ ಭಾವನೆ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಹಾಗೂ ನಾಯಿಗಳ ಜೊತೆಗೆ ಭಾವನಾತ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ “ನಾಯಿಗಳಿಗಾಗಿ ಉತ್ಸವ’ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಕಾರ್ಯಕ್ರಮ ನಡೆಯುವ ಸ್ಥಳದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.

ಏನೇನು ಇರಲಿದೆ?:

ಉತ್ಸವ ದಿನದಂದು ಪಾಲಿಕೆಯ ಆಯಾ ವಾರ್ಡ್‌ನ ರೆಸ್ಟೋರೆಂಟ್‌ಗಳ ಸಹಯೋಗದೊಂದಿಗೆ ಬೀದಿ ನಾಯಿಗಳಿಗೆ ಆಹಾರ ನೀಡಲಾಗುವುದು. ಪ್ರಾಯೋಗಿಕವಾಗಿ 4 ವಾರ್ಡ್‌ಗಳಲ್ಲಿ ಪೌರಕಾರ್ಮಿಕರ ಸಹಕಾರದೊಂದಿಗೆ ಆಹಾರ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್‌ನಲ್ಲೂ ಆರೈಕೆದಾರರೊಂದಿಗೆ ರೆಸ್ಟೋರೆಂಟ್‌ಗಳನ್ನು ಸಂಪರ್ಕಿಸುವ ಮೂಲಕ ಉಳಿದ ಆಹಾರವನ್ನು ಸದುಪಯೋಗ ಪಡಿಸಿಕೊಳ್ಳಲು ನಾಯಿಗಳಿಗೆ ನೀಡಲಾಗುತ್ತದೆ. ಈ ರೀತಿಯಲ್ಲಿ ನಾಯಿಗಳಿಗೆ ನಿರಂತರವಾಗಿ ಪ್ರತಿದಿನ ಒಂದು ಬಾರಿ ಆಹಾರ ಪೂರೈಸಲು ಚಿಂತಿಸಲಾಗಿದೆ. ಜೊತೆಗೆ ಕಾರ್ಯಕ್ರಮದಲ್ಲಿ ನಾಯಿಗಳೊಂದಿಗಿನ ಪ್ರೀತಿ ಮತ್ತು ಬಾಂಧವ್ಯದ ಕಥೆಗಳನ್ನು ಪ್ರಾಣಿ ಪಾಲಕರು ಹಂಚಿಕೊಳ್ಳಲಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

1-reee

Virat Kohli ಅವರನ್ನು ಭಾರತ ಹೊರಗಿಟ್ಟಿತ್ತೇ?:ಬಾಬರ್ ಕೈಬಿಟ್ಟಿದ್ದಕ್ಕೆ ಫಖರ್ ಜಮಾನ್ ಆಕ್ರೋಶ

Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..‌ಕಮೆಂಟ್‌ ಮಾಡಿದವರಿಗೆ ಎಂಜಾಯ್‌ ಮಾಡಿ ಎಂದ ನಟಿ

Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..‌ಕಮೆಂಟ್‌ ಮಾಡಿದವರಿಗೆ ಎಂಜಾಯ್‌ ಮಾಡಿ ಎಂದ ನಟಿ

Kageri

Sirsi: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್‌ ಪಡೆದು ಕಾಂಗ್ರೆಸ್‌ ಸರಕಾರದಿಂದ ಅಪರಾಧ: ಕಾಗೇರಿ

siddanna-2

B.Y.Vijayendra; ಏನು ಪುರೋಹಿತನಾ? ಜ್ಯೋತಿಷಿನಾ?…: ಸಿದ್ದರಾಮಯ್ಯ ಕಿಡಿ

rape

Agra; 3 ದಿನ ಒತ್ತೆಯಾಳಾಗಿಟ್ಟು ಡ್ಯಾನ್ಸರ್ ಮೇಲೆ ಅತ್ಯಾ*ಚಾರಗೈದ ಇವೆಂಟ್ ಮ್ಯಾನೇಜರ್

1-deee

Viral Video; ಬೆಂಕಿ ಹೊತ್ತಿಕೊಂಡ ಬಳಿಕ ಚಾಲಕನಿಲ್ಲದೆ ಚಲಿಸಿದ ಕಾರು!!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

JC Nagar Dussehra: ಜೆ.ಸಿ.ನಗರ ದಸರಾದಲ್ಲಿ ನೂರಾರು ಪಲ್ಲಕ್ಕಿಗಳ ಉತ್ಸವ

Threat: ನಿನ್ನ ಪತ್ನಿ ಸರಿಯಾಗಿ ಬಟ್ಟೆ ಹಾಕದಿದ್ದರೆ ಆ್ಯಸಿಡ್‌ ಎರಚುವೆ: ಕಿಡಿಗೇಡಿ ಬೆದರಿಕೆ

Threat: ನಿನ್ನ ಪತ್ನಿ ಸರಿಯಾಗಿ ಬಟ್ಟೆ ಹಾಕದಿದ್ದರೆ ಆ್ಯಸಿಡ್‌ ಎರಚುವೆ: ಕಿಡಿಗೇಡಿ ಬೆದರಿಕೆ

Arrested: ಈವೆಂಟ್‌ ಮ್ಯಾನೇಜ್‌ಮೆಂಟ್‌ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ

Arrested: ಈವೆಂಟ್‌ ಮ್ಯಾನೇಜ್‌ಮೆಂಟ್‌ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ

Missing Case: 20 ಲಕ್ಷ ರೂ. ಸಾಲ ಮಾಡಿ ಮನೆ ತೊರೆದ ಬ್ಯಾಂಕ್‌ ಉದ್ಯೋಗಿ

Missing Case: 20 ಲಕ್ಷ ರೂ. ಸಾಲ ಮಾಡಿ ಮನೆ ತೊರೆದ ಬ್ಯಾಂಕ್‌ ಉದ್ಯೋಗಿ

Bengaluru: ಫೋಟೋ ಕ್ಲಿಕ್ಕಿಸುವಾಗ ಅಡ್ಡ ಬಂದ ಎಚ್‌ಎಎಲ್‌ ನೌಕರನ ಮೇಲೆ ಹಲ್ಲೆ

Bengaluru: ಫೋಟೋ ಕ್ಲಿಕ್ಕಿಸುವಾಗ ಅಡ್ಡ ಬಂದ ಎಚ್‌ಎಎಲ್‌ ನೌಕರನ ಮೇಲೆ ಹಲ್ಲೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

1-reee

Virat Kohli ಅವರನ್ನು ಭಾರತ ಹೊರಗಿಟ್ಟಿತ್ತೇ?:ಬಾಬರ್ ಕೈಬಿಟ್ಟಿದ್ದಕ್ಕೆ ಫಖರ್ ಜಮಾನ್ ಆಕ್ರೋಶ

Kaup: ಮಳೆ ಸಿಂಚನದ ನಡುವೆ ಉಚ್ಚಿಲ ದಸರಾಕ್ಕೆ ವಿಜೃಂಭಣೆಯ ತೆರೆ

Kaup: ಮಳೆ ಸಿಂಚನದ ನಡುವೆ ಉಚ್ಚಿಲ ದಸರಾಕ್ಕೆ ವಿಜೃಂಭಣೆಯ ತೆರೆ

Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..‌ಕಮೆಂಟ್‌ ಮಾಡಿದವರಿಗೆ ಎಂಜಾಯ್‌ ಮಾಡಿ ಎಂದ ನಟಿ

Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..‌ಕಮೆಂಟ್‌ ಮಾಡಿದವರಿಗೆ ಎಂಜಾಯ್‌ ಮಾಡಿ ಎಂದ ನಟಿ

Kageri

Sirsi: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್‌ ಪಡೆದು ಕಾಂಗ್ರೆಸ್‌ ಸರಕಾರದಿಂದ ಅಪರಾಧ: ಕಾಗೇರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.