ಬಿಬಿಎಂಪಿ ಗ್ರೀನ್‌ ಆ್ಯಪ್‌ ಇನ್ನಿಲ್ಲ!


Team Udayavani, Dec 19, 2017, 11:51 AM IST

BBMP-Green.jpg

ಬೆಂಗಳೂರು: ನಗರವನ್ನು ಹಸಿರಾಗಿಸುವ ನಿಟ್ಟಿನಲ್ಲಿ 10 ಲಕ್ಷ ಸಸಿಗಳನ್ನು ನೆಡುವ ಉದ್ದೇಶದೊಂದಿಗೆ ಭಿವೃದ್ಧಿ ಪಡಿಸಿದ್ದ “ಬಿಬಿಎಂಪಿ ಗ್ರೀನ್‌’ ಆ್ಯಪ್‌ ತನ್ನ ಕಾರ್ಯ ಸ್ಥಗಿತಗೊಳಿಸಿದೆ. ನಗರೀಕರಣ ಹೆಚ್ಚಾದಂತೆ ಹಸಿರು ಪರಿಸರ ಗಣನೀಯವಾಗಿ ಕಡಿಮೆಯಾಗುತ್ತಿದೆ.

ಜತೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ನೂರಾರು ಮರಗಳು ಬಲಿಯಾಗುತ್ತಿವೆ. ಹೀಗಾಗಿ ನಗರದಲ್ಲಿ ಹಸಿರು ವಾತಾವರಣ ಹೆಚ್ಚಿಸಲು ಪ್ರಸಕ್ತ ಸಾಲಿನಲ್ಲೇ ನಗರದ ವಿವಿಧೆಡೆ 10 ಲಕ್ಷ ಗಿಡಗಳನ್ನು ನೆಡುವುದಾಗಿ ಪಾಲಿಕೆ ಪಾಲಿಕೆಯ ಬಜೆಟ್‌ನಲ್ಲಿ ಘೋಷಿಸಿತ್ತು. 

ಇಷ್ಟೋಂದು ಸಂಖ್ಯೆಯ ಸಸಿಗಳನ್ನು ನೆಡಲು ಪಾಲಿಕೆ ವ್ಯಾಪ್ತಿಯಲ್ಲಿ ಅಗತ್ಯ ಸಿಬ್ಬಂದಿ ಇಲ್ಲದ ಕಾರಣ, ಸಸಿ ನೆಡುವ ಕಾರ್ಯದಲ್ಲಿ ನಾಗರಿಕರನ್ನು ಭಾಗಿಯಾಗಿಸಿಕೊಳ್ಳಲು ಬಿಬಿಎಂಪಿ ಯೋಜನೆ ರೂಪಿಸಿ, “ಬಿಬಿಎಂಪಿ ಗ್ರೀನ್‌’ ಆ್ಯಪ್‌ ಅನ್ನು ಪಾಲಿಕೆ ಅಭಿವೃದ್ಧಿಪಡಿಸಿತ್ತು.

ಆ್ಯಪ್‌ ಮೂಲಕ ಮನವಿ ಸಲ್ಲಿಸುವ ನಾಗರಿಕರಿಗೆ, ಅವರಿರುವ ಸ್ಥಳದ ಸಮೀಪದಲ್ಲೇ ಇರುವ ಪಾರ್ಕ್‌ಗಳಲ್ಲಿ ಸಸಿಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಯೋಜನೆಗೆ ನಾಗರಿಕರಿಂದ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ. ಈ ಕಾರಣದಿಂದ ಆ್ಯಪ್‌ ಸೇವೆ ಸ್ಥಗಿತಗೊಳಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

“ಬಿಬಿಎಂಪಿ ಗ್ರೀನ್‌’ ಆ್ಯಪ್‌ಗೆ ಮೇ 21ರಂದು ಚಿತ್ರನಟ ಯಶ್‌ ಚಾಲನೆ ನೀಡಿದ್ದರು. ಆರಂಭದಲ್ಲಿ ಸಸಿಗಳಿಗಾಗಿ ನಾಗರಿಕರಿಂದ ಹೆಚ್ಚಿನ ಮನವಿಗಳು ಬಂದಿದ್ದವು. ಆದರೆ, ನಂತರದಲ್ಲಿ ನಾಗರಿಕರಿಂದ ಸಸಿಗಳಿಗಾಗಿ ಮನವಿಗಳು ಬರದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗ್ರೀನ್‌ ಆ್ಯಪ್‌ ಅಪ್ಲಿಕೇಷನ್‌ ಸ್ಥಗಿತಗೊಳಿಸಿದ್ದಾರೆ.

ಹತ್ತು ಸಾವಿರ ಮನವಿಯೂ ಇಲ್ಲ: ಒಂದು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಬೆಂಗಳೂರು ನಗರದಲ್ಲಿ ಸಸಿಗಳಿಗಾಗಿ ಬಿಬಿಎಂಪಿ ಆ್ಯಪ್‌ ಮೂಲಕ ಮನವಿ ಸಲ್ಲಿಸಿದವರ ಸಂಖ್ಯೆ 10 ಸಾವಿರ ಸಹ ಮೀರಿಲ್ಲ. ಗ್ರೀನ್‌ ಆ್ಯಪ್‌ ಆರಂಭವಾಗಿ ಐದು ತಿಂಗಳ ನಂತರ ಅ.31ಕ್ಕೆ ಸೇವೆ ಸ್ಥಗಿತಗೊಂಡಿದೆ.

ಈ ಅವಧಿಯಲ್ಲಿ ಸಸಿಗಳಿಗಾಗಿ ಪಾಲಿಕೆಗೆ 9,670 ಜನರು ಮಾತ್ರ ಮನವಿ ಸಲ್ಲಿಸಿ, ಒಟ್ಟು 2,68,873 ಸಸಿಗಳನ್ನು ಪಡೆದಿದ್ದಾರೆ. ಇನ್ನು ಬಿಬಿಎಂಪಿ ಪಾಲಿಕೆ ಸದಸ್ಯರು 90 ಸಾವಿರ ಸಸಿಗಳನ್ನು ಪಡೆದಿದ್ದು, ಪಾಲಿಕೆಯಿಂದ ನಗರದ ವಿವಿದೆಡೆ 1 ಲಕ್ಷ ಗಿಡಗಳನ್ನು ನೆಡಲಾಗಿದೆ. ಅದರಂತೆ ಒಟ್ಟು 4.58 ಲಕ್ಷ ಸಸಿಗಳು ಈವರೆಗೆ ವಿತರಿಸಲಾಗಿದ್ದು, ಇನ್ನು 5.42 ಲಕ್ಷ ಸಸಿಗಳು ಪಾಲಿಕೆಯ ನರ್ಸರಿಗಳಲ್ಲಿಯೇ ಉಳಿದಿವೆ. 

ಗಿಡ ನೆಡಲು ಜಾಗವಿಲ್ಲ: ನಗರ ಸಂಪೂರ್ಣವಾಗಿ ಕಾಂಕ್ರಿಟ್‌ ಮಯವಾಗಿರುವುದರಿಂದ ಕೇಂದ್ರ ಭಾಗದ ಯಾವುದೇ ಪ್ರದೇಶದಲ್ಲೂ ಹೆಚ್ಚು ಸಸಿಗಳನ್ನು ನೆಡಲು ಸಾಧ್ಯವಾಗಿಲ್ಲ. ಉಳಿದಂತೆ ಹೊರ ವಲಯದ ಹಲವು ಭಾಗಗಳಲ್ಲಿ ಸಸಿಗಳನ್ನು ನೆಡಲಾಗಿದ್ದು, ಕೇಂದ್ರ ಭಾಗದಲ್ಲಿ ಜಾಗ ಲಭ್ಯವಿರುವ ಕಡೆ, ರಸ್ತೆ ವಿಭಜಕ ಹಾಗೂ ಪಾದಚಾರಿ ಮಾರ್ಗದ ಸಮೀಪದಲ್ಲಿ ಸಸಿಗಳನ್ನು ನೆಡಲಾಗಿದೆ.

ನರ್ಸರಿಗಳಲ್ಲೇ ಉಳಿದ 5 ಲಕ್ಷ ಸಸಿ: ಬಿಬಿಎಂಪಿ ವತಿಯಿಂದ ಗ್ರೀನ್‌ ಆ್ಯಪ್‌ ಅಭಿವೃದ್ಧಿಪಡಿಸಿದಾಗ ಪಾಲಿಕೆಯ ನರ್ಸರಿಗಳಲ್ಲಿ ಮೂರು ಹಾಗೂ ಐದು ಅಡಿಯ 10 ಲಕ್ಷ ಸಸಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಅದರಂತೆ ಕೆಂಪಾಪುರ ನರ್ಸರಿಯಲ್ಲಿ 3.5 ಲಕ್ಷ, ಯಲಹಂಕದ ಅಟ್ಟೂರಿನಲ್ಲಿ 2.5 ಲಕ್ಷ, ಸುಮ್ಮನಹಳ್ಳಿಯಲ್ಲಿ 45 ಸಾವಿರ,

ಜ್ಞಾನಭಾರತಿಯಲ್ಲಿ 1.8 ಲಕ್ಷ, ಕೂಡ್ಲು ಮತ್ತು ಹೆಸರುಘಟ್ಟ ನರ್ಸರಿಗಳಲ್ಲಿ ತಲಾ 2.25 ಲಕ್ಷ ಸಸಿಗಳು ಸೇರಿ 10.50 ಲಕ್ಷ ಸಸಿಗಳಿವೆ ಎಂದು ಹೇಳಲಾಗಿತ್ತು. ಆದರೆ, ಪಾಲಿಕೆಯ ಯಾವ ನರ್ಸರಿಯಿಂದ ಎಷ್ಟು ಸಸಿಗಳನ್ನು ವಿತರಿಸಲಾಗಿದೆ, ಮತ್ತು ಎಷ್ಟು ಸಸಿಗಳು ಉಳಿದಿವೆ ಎಂಬ ಕುರಿತು ಪಾಲಿಕೆಯ ಅಧಿಕಾರಿಗಳ ಬಳಿಯೇ ಮಾಹಿತಿಯಿಲ್ಲ. 

ಪಾಲಿಕೆಯವರು ಸಸಿ ಕೊಡಲೇ ಇಲ್ಲ!: ಒಂದೆಡೆ ಸಾರ್ವಜನಿಕರಿಂದ ಸ್ಪಂದನೆ ಸಿಕ್ಕಿಲ್ಲ ಎಂಬ ಕಾರಣ ನೀಡಿ ಪಾಲಿಕೆ ಧಿಕಾರಿಗಳು ಬಿಬಿಎಂಪಿ ಗ್ರೀನ್‌ ಆ್ಯಪ್‌ ಸೇವೆ ಸ್ಥಗಿತಗೊಳಿಸಿದ್ದಾರೆ. ಆದರೆ ಆ್ಯಪ್‌ ಸ್ಟೋರ್‌ನಲ್ಲಿ “ಬಿಬಿಎಂಪಿ ಗ್ರೀನ್‌’ಗೆ ಬಂದಿರುವ ಕಮೆಂಟ್‌ಗಳು ಬೇರೆಯದೇ ಕತೆ ಹೇಳುತ್ತಿವೆ.

ಆ್ಯಪ್‌ಗೆ 4 ಸ್ಟಾರ್‌ ಸಿಕ್ಕಿದೆ. ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ 229 ಮಂದಿ ಪೈಕಿ 140 ಬಳಕೆದಾರರು 5 ಸ್ಟಾರ್‌ ರೇಟಿಂಗ್‌ ನೀಡಿದರೆ,  40 ಮಂದಿ ಕೇವಲ ಒಂದು ಸ್ಟಾರ್‌ ರೇಟಿಂಗ್‌ ಕೊಟ್ಟಿದ್ದಾರೆ. ಉಳಿದವರು 2, 3 ರೇಟಿಂಗ್‌ ನೀಡಿದ್ದಾರೆ. ಇನ್ನು 40 ಬಳಕೆದಾರರು ಕಮೆಂಟ್‌ ಮಾಡಿದ್ದು, ಶೇ.80ರಷ್ಟು ಮಂದಿ “ಇದೊಂದು ಕೆಟ್ಟ ಆ್ಯಪ್‌’, “ಸಮಯ ವ್ಯರ್ಥ’,

ಕೆಲಸವಿಲ್ಲದವರು ಗಿಡಕ್ಕೆ ಆರ್ಡರ್‌ ಮಾಡಬೇಕು’, “ಮನವಿ ಸಲ್ಲಿಸಿ ಎರಡು ತಿಂಗಳಾದರೂ ಸಸಿ ಕೊಟ್ಟೇ ಇಲ್ಲ’, “ನಿಗದಿತ ಸ್ಥಳಕ್ಕೆ ಹೋಗಿ ಕಾದು ಕಾದು ಸಾಕಾಯಿತು,’ ಎಂದೆಲ್ಲಾ ಆರೋಪಿಸಿದ್ದಾರೆ. ಬಹುತೇಕರು ತಮಗೆ “ಪಾಲಿಕೆಯಿಂದ ಸಸಿಯನ್ನೇ ನೀಡಿಲ್ಲ’ ಎಂದು ಹೇಳಿದ್ದರೆ, “ಮನವಿ ಸಲ್ಲಿಸಿದರೆ ಆ ಕಡೆಯಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ’ ಎಂದು ಹಲವರು ಬರೆದಿದ್ದಾರೆ.

“ಗರಿಷ್ಠ 750 ಸಸಿಗಳನ್ನು ಪಡೆಯಬಹುದು ಎಂದು ತಿಳಿಸಿದ್ದರಿಂದ ಹತ್ತು ಬಗೆಯ 750 ಸಸಿಗಳಿಗೆ ಮನವಿ ಸಲ್ಲಿಸಿದ್ದೆ. ಆದರೆ ಪಾಲಿಕೆಯವರು ನನಗೆ ಕೊಟ್ಟಿದ್ದು ಒಂದೇ ಬಗೆಯ ಹತ್ತು ಸಸಿಗಳನ್ನು ಮಾತ್ರ,’ ಎಂದು  ಬ್ರಿಗಿಟ್ಟೆ ಜಚಾರಿಯಾ ಎಂಬುವವರು ದೂರಿದ್ದಾರೆ. ಪ್ಲೇಸ್ಟೋರ್‌ನಲ್ಲಿ 4 ಸ್ಟಾರ್‌ ರೇಟಿಂಗ್‌ ಇದ್ದರೂ, ಕಮೆಂಟ್‌ಗಳಲ್ಲಿ ನಕಾರಾತ್ಮಕ ಅನಿಸಿಕೆಗಳೇ ಹೆಚ್ಚಿವೆ. ಹೀಗಾಗಿ ಯೋಜನೆ ಸ್ಥಗಿತಗೊಳ್ಳಲು ಅಸಲಿ ಕಾರಣವೇನು ಎಂದು ಅಧಿಕಾರಿಗಳೇ ಹೇಳಬೇಕಿದೆ.

ಆ್ಯಪ್‌ ವೈಫ‌ಲ್ಯಕ್ಕೆ ಕಾರಣವೇನು?: ಆ್ಯಪ್‌ ಮೂಲಕ ಗಿಡಗಳನ್ನು ಕೋರಿದರೂ ಪಾಲಿಕೆಯ ಅಧಿಕಾರಿಗಳು ಸಮರ್ಪಕವಾಗಿ ನಾಗರಿಕರಿಗೆ ತಲುಪಿಸುವ ವ್ಯವಸ್ಥೆ ಮಾಡಿಲ್ಲ. ಇದರೊಂದಿಗೆ ಸಸಿಗಳಿಗಾಗಿ ಮನವಿ ಮಾಡಿದ ನಂತರ ಗಿಡಗಳನ್ನು ಪಡೆಯಲು ಉದ್ಯಾನಗಳ ಬಳಿಗೆ ಹೋದರೂ ಸಸಿ ವಿತರಿಸುತ್ತಿರಲಿಲ್ಲ.

ಯಾವ ಸಮಯದಲ್ಲಿ ಸಸಿಗಳನ್ನು ವಿತರಿಸಲಾಗುತ್ತದೆ ಎಂಬ ಮಾಹಿತಿ ನೀಡದ ಕಾರಣ ಸಾರ್ವಜನಿಕರು ಉದ್ಯಾನಗಳ ಬಳಿಗೆ ಹೋಗಿ, ಕಾದು ವಾಪಸ್‌ ಬಂದಿದ್ದಾರೆ.  “ಇಲ್ಲಿ ಸಸಿ ಸಿಗುತ್ತದೆ’ ಎಂದು ಹಲವು ವಾರ್ಡ್‌ಗಳ ಉದ್ಯಾನಗಳ ಹೆಸರು ಹಾಕಿದ್ದರೂ, ಬಹುತೇಕ ಉದ್ಯಾನಗಳಿಗೆ ಸಸಿಗಳೇ ಬಂದಿಲ್ಲ. ಈ ಎಲ್ಲ ಕಾರಣಗಳಿಂದಾಗಿ ನಾಗರಿಕರು ಸಸಿಗಳನ್ನು ಪಡೆಯಲು ಮುಂದಾಗಿಲ್ಲ ಎನ್ನಲಾಗಿದೆ.

ಮಳೆಗಾಲ ಮುಗಿದಿರುವುದರಿಂದ ಹಾಗೂ ಸಸಿಗಳನ್ನು ನೆಡಲು ಸೂಕ್ತ ವಾತಾವರಣ ಇಲ್ಲದಿರುವ ಕಾರಣ ಸಾರ್ವಜನಿಕರಿಂದ ಸಸಿಗಳಿಗೆ ಮನವಿ ಬರುತ್ತಿಲ್ಲ. ಈ ಕಾರಣದಿಂದ ಪಾಲಿಕೆಯ ಮಾಹಿತಿ ತಂತ್ರಜ್ಞಾನ ವಿಭಾಗದ ಅಧಿಕಾರಿಗಳು ಗ್ರೀನ್‌ಆ್ಯಪ್‌ ಸ್ಥಗಿತಗೊಳಿಸಿದ್ದಾರೆ. ನರ್ಸರಿಗಳಲ್ಲಿರುವ ಸಸಿಗಳನ್ನು ಮುಂದಿನ ವರ್ಷ ನೆಡಲಾಗುವುದು.
-ಅಪ್ಪುರಾವ್‌, ಬಿಬಿಎಂಪಿ ಅರಣ್ಯ ವಿಭಾಗದ ಡಿಸಿಎಫ್

* ವೆಂ.ಸುನೀಲ್‌ಕುಮಾರ್‌

ಟಾಪ್ ನ್ಯೂಸ್

Henley Passport Index: Singapore tops: How strong is India’s passport?

Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?

12-protest

Trasi: ಸಾಂಪ್ರದಾಯಿಕ ‌ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ,‌ ಗೋಪಾಲ ಪೂಜಾರಿ ಭಾಗಿ

Trump ಹೆಬ್ಬಯಕೆ: ಗ್ರೀನ್ ಲ್ಯಾಂಡ ಖರೀದಿಸಲು ಟ್ರಂಪ್ ಯಾಕೆ ಪ್ರಯತ್ನಿಸುತ್ತಿದ್ದಾರೆ?

Trump ಹೆಬ್ಬಯಕೆ: ಗ್ರೀನ್ ಲ್ಯಾಂಡ್ ಖರೀದಿಸಲು ಟ್ರಂಪ್ ಯಾಕೆ ಪ್ರಯತ್ನಿಸುತ್ತಿದ್ದಾರೆ?

Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ

Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ

After Kohli-Rohit, Jadeja’s place is also up for grabs: BCCI to take tough decision

ಕೊಹ್ಲಿ-ರೋಹಿತ್‌ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ

ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

Divorce: ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

4-bng

Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Henley Passport Index: Singapore tops: How strong is India’s passport?

Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?

7

Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್‌; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!

12-protest

Trasi: ಸಾಂಪ್ರದಾಯಿಕ ‌ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ,‌ ಗೋಪಾಲ ಪೂಜಾರಿ ಭಾಗಿ

Trump ಹೆಬ್ಬಯಕೆ: ಗ್ರೀನ್ ಲ್ಯಾಂಡ ಖರೀದಿಸಲು ಟ್ರಂಪ್ ಯಾಕೆ ಪ್ರಯತ್ನಿಸುತ್ತಿದ್ದಾರೆ?

Trump ಹೆಬ್ಬಯಕೆ: ಗ್ರೀನ್ ಲ್ಯಾಂಡ್ ಖರೀದಿಸಲು ಟ್ರಂಪ್ ಯಾಕೆ ಪ್ರಯತ್ನಿಸುತ್ತಿದ್ದಾರೆ?

Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ

Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.