BBMP: ಬಿಬಿಎಂಪಿಗೆ ನನ್ನನ್ನೇ ಮೇಯರ್ ಮಾಡಿ: ವ್ಯಕ್ತಿಯಿಂದ ಅರ್ಜಿ!
Team Udayavani, Oct 23, 2024, 3:35 PM IST
![BBMP: ಬಿಬಿಎಂಪಿಗೆ ನನ್ನನ್ನೇ ಮೇಯರ್ ಮಾಡಿ: ವ್ಯಕ್ತಿಯಿಂದ ಅರ್ಜಿ!](https://www.udayavani.com/wp-content/uploads/2024/10/7-33-620x372.jpg)
![BBMP: ಬಿಬಿಎಂಪಿಗೆ ನನ್ನನ್ನೇ ಮೇಯರ್ ಮಾಡಿ: ವ್ಯಕ್ತಿಯಿಂದ ಅರ್ಜಿ!](https://www.udayavani.com/wp-content/uploads/2024/10/7-33-620x372.jpg)
ಬೆಂಗಳೂರು: “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ’ (ಬಿಬಿಎಂಪಿ)ಗೆ ಚುನಾವಣೆ ನಡೆಸುವುದು ಬೇಡ, ಸರ್ಕಾರ, ರಾಜ್ಯ ಚುನಾವಣಾ ಆಯೋಗ, ರಾಜಕೀಯ ಪಕ್ಷಗಳು ಒಟ್ಟಾಗಿ ಸೇರಿ ತಮ್ಮನ್ನೇ ಮಧ್ಯಂತರ ಮೇಯರ್ ಆಗಿ ಕಾರ್ಯನಿರ್ವಹಿ ಸುವಂತೆ ಮನವಿ ಮಾಡಿ ಕೊಳ್ಳಲು ನಿರ್ದೇಶನ ನೀಡ ಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಹೈಕೋರ್ಟ್‌ಗೆ ಅಪರೂಪದ ಸಾರ್ವ ಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ತನ್ನನ್ನು ತಾನು ನೂತನ ಬಿಬಿಎಂಪಿಯ ತಂದೆ ಎಂದು ಘೋಷಿಸಿ ಕೊಂಡಿರುವ ನಗರದ ಲ್ಯಾವೆಲ್ಲೆ ರಸ್ತೆಯ ನಿವಾಸಿ 66 ವರ್ಷದ ಮುರಳಿ ಕೃಷ್ಣ ಬ್ರಹ್ಮಾನಂದಂ ಎಂಬುವರು 2022ರಲ್ಲಿ ಈ ಅರ್ಜಿ ಸಲ್ಲಿಸಿದ್ದು ಅದು ಮುಖ್ಯ ನ್ಯಾಯ ಮೂರ್ತಿ ಎನ್.ವಿ.ಅಂಜಾರಿ ಯಾ, ನ್ಯಾ. ಕೆ.ವಿ. ಅರವಿಂದ್ ಅವರಿದ್ದ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.
ವಿಚಾರಣೆಗೆ ಕರೆ ದಾಗ ಅರ್ಜಿದಾರರು ಹಾಜರಿರಲಿಲ್ಲ. ಅಂತೆಯೇ ಹಿಂದಿನ ಯಾವ ವಿಚಾ ರಣೆಗೂ ಹಾಜರಾಗಿರಲಿಲ್ಲ. ವಿಚಾರಣೆ ವೇಳೆ ಸರ್ಕಾರದ ಪರ ವಕೀ ಲರು, ಅರ್ಜಿ ಯಲ್ಲಿನ ಅಂಶ, ಮನವಿ ಅಸಂಬದ್ಧವಾಗಿದ್ದು ಅರ್ಜಿ ವಿಚಾರಣೆಗೆ ಪರಿಗಣಿಸದೆ ವಜಾಗೊಳಿಸಬೇಕು ಎಂದು ಮನವಿ ಮಾಡಿದರು. ಅದಕ್ಕೆ ನ್ಯಾಯ ಪೀಠ, ಇಲ್ಲ ನಾವು ವಜಾ ಮಾಡುವುದಿಲ್ಲ, ಅರ್ಜಿ ಸಲ್ಲಿಸಿದ ಮಹಾ ನುಭಾವ ಯಾರು ಎಂದು ನೋಡ ಬೇಕಿದೆ ಎಂದು ಹೇಳಿ ವಿಚಾರಣೆಯನ್ನು ಮುಂದೂಡಿತು.