ಸಾಕು ನಾಯಿಗೆ ಪರವಾನಗಿ ಕಡ್ಡಾಯಗೊಳಿಸಿ ಬಿಬಿಎಂಪಿ ಆದೇಶ
Team Udayavani, Jun 5, 2018, 11:53 AM IST
ಬೆಂಗಳೂರು: ಬೆಂಗಳೂರಿನಲ್ಲಿರುವ ಸಾಕು ನಾಯಿಗಳಿಗೆ ಪರವಾನಗಿ ಪಡೆಯುವುದು ಕಡ್ಡಾಯಗೊಳಿಸಿ ಬಿಬಿಎಂಪಿ ಆಯುಕ್ತರು ಸೋಮವಾರ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಸಾಕುನಾಯಿಗಳಿಗೆ ಪರವಾನಗಿ ಪಡೆಯದವರು ಇನ್ನುಮುಂದೆ ದಂಡ ಪಾವತಿಸಬೇಕಾಗುತ್ತದೆ.
ಬೀದಿ ನಾಯಿಗಳ ಕಾರ್ಯಾಚರಣೆ ವೇಳೆ ಸುಲಭವಾಗಿ ಸಾಕು ನಾಯಿಗಳನ್ನು ಗುರುತಿಸಲು ಹಾಗೂ ನಾಯಿಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸಿರುವ ಮಾಹಿತಿ ತಿಳಿಯುವ ಉದ್ದೇಶದಿಂದ ಪರವಾನಗಿ ಕಡ್ಡಾಯಗೊಳಿಸಲಾಗಿದೆ. ಪಾಲಿಕೆಯ ಪ್ರಸ್ತಾವನೆಗೆ ನಗರಾಭಿವೃದ್ಧಿ ಇಲಾಖೆಯಿಂದ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಪರವಾನಗಿ ಕಡ್ಡಾಯಗೊಳಿಸಿ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ನಾಯಿ ಸಾಕುವವರಿಗೆ 12 ಷರತ್ತುಗಳನ್ನು ವಿಧಿಸಲಾಗಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸದವರು ದಂಡ ಪಾವತಿಸಬೇಕಾಗುತ್ತದೆ. ಅಪಾರ್ಟ್‌ಮೆಂಟ್‌ಗಳ ಫ್ಲ್ಯಾಟ್‌ಗಳಲ್ಲಿ ನೆಲೆಸಿದವರಿಗೆ ಒಂದು ನಾಯಿ ಹಾಗೂ ಇತರೆಡೆ ಮನೆಗೆ 3 ನಾಯಿ ಸಾಕಲು ಬಿಬಿಎಂಪಿ ಅವಕಾಶ ನೀಡಿದ್ದು, ಅಕ್ಕಪಕ್ಕದ ಮನೆಯವರಿಗೆ ನಾಯಿ ಹಾವಳಿಯಿಂದ ತೊಂದರೆಯಾಗಬಾರದೆಂಬ ಷರತ್ತು ವಿಧಿಸಲಾಗಿದೆ.
ನೀವೇ ಸ್ವತ್ಛಗೊಳಿಸಬೇಕು: ಸಾಕು ನಾಯಿ ಮಾಲೀಕರು ತಮ್ಮ ನಾಯಿಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಲ-ಮೂತ್ರ ವಿಸರ್ಜನೆ ಮಾಡಿಸುವಂತಿಲ್ಲ. ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಸಾಕು ನಾಯಿಗಳು ಮಲ-ಮೂತ್ರ ಮಾಡಿದರೆ ಮಾಲೀಕರೇ ಅದನ್ನು ಸುಚಿಗೊಳಿಸಬೇಕು. ಅದನ್ನು ತಪ್ಪಿದ್ದಲ್ಲಿ ಪಾಲಿಕೆಯಿಂದ ಮೊದಲ ಬಾರಿಗೆ 100 ರೂ. ಹಾಗೂ ಆನಂತರದಲ್ಲಿ 200 ರೂ. ದಂಡ ವಿಧಿಸಲಾಗುತ್ತದೆ.
ಮೈಕ್ರೋ ಚಿಪ್ ಕಡ್ಡಾಯ: ನಾಯಿಯ ಮಾಲೀಕರು ಪಾಲಿಕೆಯಿಂದ ಪರವಾನಗಿ ಪಡೆಯುವುದರೊಂದಿಗೆ ನಾಯಿಗೆ ತಮ್ಮದೇ ಖರ್ಚಿನಲ್ಲಿ ಮೈಕ್ರೋ ಚಿಪ್ ಅಳವಡಿಸಿಕೊಳ್ಳಬೇಕು. ಇದರಿಂದಾಗಿ ನಾಯಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸಿರುವ ಹಾಗೂ ಮಾಲೀಕರ ಮಾಹಿತಿ ಸುಲಭವಾಗಿ ಲಭ್ಯವಾಗಲಿದೆ.
ಅನಾಥ ನಾಯಿಗಳ ಹರಾಜು: ಸಾಕು ನಾಯಿ ಬೀದಿಯಲ್ಲಿ ಅನಾಥವಾಗಿ ಓಡಾಡುತ್ತಿದ್ದರೆ ಅಂತಹ ನಾಯಿಯನ್ನು ಪಾಲಿಕೆಯ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ನಾಯಿ ಮಾಲೀಕರು 72 ಗಂಟೆಗಳಲ್ಲಿ 450 ರೂ. ದಂಡ ಪಾವತಿಸಿ ಅದನ್ನು ಬಿಡಿಸಿಕೊಂಡು ಹೋಗಬೇಕು. ಇಲ್ಲವಾದರೆ ಅಂತಹ ನಾಯಿಯನ್ನು ಹರಾಜು ಅಥವಾ ದತ್ತು ನೀಡಲಾಗುತ್ತದೆ. ಇಲ್ಲವೆ ಪಾಲಿಕೆಯ ನಾಯಿಗೂಡುಗಳಲ್ಲಿ ಇರಿಸಿ ಸಾಕಲಾಗುತ್ತದೆ.
ಲೈಸೆನ್ಸ್ ಪಡೆಯದಿದ್ದರೆ ದಂಡ: ನಾಯಿಗಳಿಗೆ ಪರವಾನಗಿ ಪಡೆಯಲು ಕಾಲವಕಾಶ ನೀಡಿದ ನಂತರವೂ ಮಾಲೀಕರು ಪರವಾನಗಿ ಪಡೆಯದಿದ್ದರೆ, ಅಂತಹವರಿಗೆ 1,000 ರೂ. ದಂಡ ವಿಧಿಸಲಾಗುತ್ತದೆ. ದಂಡ ಪಾವತಿಸಿ ಪರವಾನಗಿ ಪಡೆಯದಂತಹ ಮಾಲೀಕರ ನಾಯಿಯನ್ನು ಪಾಲಿಕೆ ಸಿಬ್ಬಂದಿ ನಾಯಿಯನ್ನು ವಶಕ್ಕೆ ಪಡೆಯಲಿದ್ದಾರೆ.
ಉದಯವಾಣಿ ಪ್ರಕಟಿಸಿತ್ತು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಸಾಕು ನಾಯಿಗಳಿಗೆ ಪರವಾನಗಿ ಕಡ್ಡಾಯಗೊಳಿಸುವ ಕುರಿತಂತೆ ಶೀಘ್ರದಲ್ಲಿಯೇ ಬಿಬಿಎಂಪಿ ಅಧಿಸೂಚನೆ ಹೊರಡಿಸಲಿರುವ ಕುರಿತಂತೆ ಉದಯವಾಣಿ ಜೂನ್ 1 ರಂದು “ಶ್ವಾನ ಪಾಲನೆಗೆ ಬೇಕು ಲೈಸೆನ್ಸ್’ ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.
ಪಾಲಿಕೆ ವ್ಯಾಪ್ತಿಯಲ್ಲಿ ಸಾಕು ನಾಯಿಗಳಿಗೆ ಪರವಾನಗಿ ಕಡ್ಡಾಯಗೊಳಿಸುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ. ಹೀಗಾಗಿ ಸಾಕಿ ಸಾಕುವವರು ಇನ್ನು ಮುಂದೆ ಪರವಾನಗಿ ಪಡೆಯಲು ಮುಂದಾಗಬೇಕು.
-ಡಾ.ಆನಂದ್, ಬಿಬಿಎಂಪಿ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.