![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 2, 2020, 11:27 AM IST
ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿನ ಆಸ್ತಿಗಳನ್ನು ಇ- ಆಸ್ತಿ ವ್ಯಾಪ್ತಿಗೆ (ಡಿಜಿಟಲೀಕರಣ) ಮಾಡಲು ಪಾಲಿಕೆ ಮುಂದಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 20 ಲಕ್ಷ ಆಸ್ತಿ ಗಳಿವೆ. ಇಲ್ಲಿಯವರೆಗೆ ಪಾಲಿಕೆ ವ್ಯಾಪ್ತಿಯಲ್ಲಿನ ಆಸ್ತಿಗ ಳನ್ನು ಡಿಜಿಟಲೀಕರಣ ಮಾಡುವ ಕೆಲಸವಾಗಿರಲಿಲ್ಲ. ಇದೀಗ ಡಿಜಟಲೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗು ತ್ತಿದ್ದು, ಆಸ್ತಿಗಳ ವಿವರವನ್ನು ಇ- ಆಸ್ತಿ ವ್ಯಾಪ್ತಿಗೆ ತರು ವುದರಿಂದ ಹಲವು ಸಮಸ್ಯೆಗೆ ಪರಿಹಾರ ಸಿಗುವ ಸಾಧ್ಯತೆ ಇದೆ.
ಬಿಬಿಎಂಪಿ ಅಭಿವೃದ್ಧಿ ಪಡಿಸುತ್ತಿರುವ ಇ-ತಂತ್ರಾಂಶದಲ್ಲಿ ಮೂರು ಅಂಶಗಳಿಗೆ ಆದ್ಯತೆ ನೀಡಲಾಗಿದೆ. ಆಸ್ತಿ (ಜಾಗದ)ವಿವರ, ನಕ್ಷೆ ಹಾಗೂ ಮ್ಯಾಪಿಂಗ್, ಮಾಲೀಕತ್ವ ಹಾಗೂ ಇದರ ಒಟ್ಟಾರೆ ವಿವರ ಲಭ್ಯವಾಗಲಿದೆ. ಇನ್ನು ಆಸ್ತಿದಾರರು ಯಾವಾಗ ಪಾಲಿಕೆಗೆ ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ. ಇನ್ನು ಎಷ್ಟು ಬಾಕಿ ಉಳಿಸಿಕೊಂಡಿದ್ದಾರೆ ಎಂಬುದನ್ನು ಒಂದು ನಿರ್ದಿಷ್ಟ ಸಂಖ್ಯೆ ನಮೂದಿಸುವ ಮೂಲಕ ಸುಲಭವಾಗಿ ಪಡೆಯಬಹುದು. ಆದರೆ, ಆಸ್ತಿಯ ವಿವರ ನೋಡುವುದಕ್ಕೆ ಕೆಲವು ನಿಯಮಗಳನ್ನು ವಿಧಿಸುವ ಸಾಧ್ಯತೆ ಇದೆ. ತಂತ್ರಾಂಶ ಅಭಿವೃದ್ಧಿಯಿಂದ ನಿರ್ದಿಷ್ಟ ಆಸ್ತಿಗೆ ಸಂಬಂಧಿಸಿದ ನಕ್ಷೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದ ವಿವರವೂ ಸಿಗಲಿದೆ. ಅಲ್ಲದೆ, ಆಸ್ತಿ ಖರೀದಿ ವೇಳೆ ಅವ್ಯವಹಾರಕ್ಕೂ ಕಡಿವಾಣ ಬೀಳಲಿದೆ. ಮಾರಾಟ ಹಾಗೂ ಖರೀದಿಗೂ ಇದರಿಂದ ಅನುಕೂಲ ಆಗಲಿದೆ. ಪಾಲಿಕೆ ಇದರಲ್ಲಿ ಆಸ್ತಿ ತೆರಿಗೆ ವಿಭಾಗ ಸೇರಿಸಲು ನಿರ್ಧರಿಸಿದ್ದು, ಇದರಿಂದ ಆಸ್ತಿ ತೆರಿಗೆದಾರರ ಬಾಕಿ-ಪಾವತಿ ಸೇರಿದಂತೆ ಪೂರ್ಣ ಮಾಹಿತಿ ಕ್ಷಣಾರ್ಧದಲ್ಲಿ ಸಿಗಲಿದೆ. ಇ- ತಂತ್ರಾಂಶ ಅಭಿವೃದ್ಧಿಯಿಂದ ಅನುಕೂಲ: ಇ- ತಂತ್ರಾಂಶ ಅಭಿವೃದ್ಧಿಯಿಂದ ಪಾಲಿಕೆಗೆ ಗುತ್ತಿಗೆ ನೀಡಿರುವ ಆಸ್ತಿಗಳ ವಿವರ, ಅದರ ಅವಧಿ ಮಾಹಿತಿ ಲಭ್ಯವಾಗಲಿದೆ. ಅಲ್ಲದೆ, ಯಾವ ಭಾಗದಲ್ಲಿ ಎಷ್ಟು ವಿಸ್ತೀರ್ಣದ ಆಸ್ತಿ ಇದೆ ಎನ್ನುವ ಮಾಹಿತಿಯೂ ಸಿಗಲಿದೆ. ಇದರಿಂದ ಪಾಲಿಕೆ ಯಾವುದಾದರು ನೂತನ ಯೋಜನೆ ಅನುಷ್ಠಾನ ಮಾಡಲು ಸುಲಭವಾಗಿ ಜಾಗದ ವಿವರವನ್ನು ಪಡೆಯಬಹುದಾಗಿದೆ. ಅಲ್ಲದೆ, ಪಾಲಿಕೆಯ ಆಸ್ತಿ ಕಬಳಿಕೆ ಹಾಗೂ ದುರುಪಯೋಗ ಪಡೆಸಿಕೊಳ್ಳುತ್ತಿರುವ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇ- ತಂತ್ರಾಂಶ ಅಭಿವೃದ್ಧಿಪಡಿಸುವುದರಿಂದ ಅದಕ್ಕೂ ಕಡಿವಾಣ ಹಾಕಬಹುದಾಗಿದೆ.
ಏನಿದು ಇ- ಆಸ್ತಿ ಪರಿಕಲ್ಪನೆ? : ರಾಜ್ಯದ ವಿವಿಧ ಜಿಲ್ಲೆಗಳು ಆಯಾ ಜಿಲ್ಲಾ ವ್ಯಾಪ್ತಿಯಲ್ಲಿನ ಆಸ್ತಿಗಳ ಸಂರಕ್ಷಣೆ ಹಾಗೂ ಸುಲಭ ಪತ್ತೆಗೆ ತಮ್ಮದೇ ವೆಬ್‌ಸೈಟ್ ಹಾಗೂ ಆ್ಯಪ್ ಸೇರಿದಂತೆ ವಿವಿಧ ತಂತ್ರಾಂಶವನ್ನು ಅಳವಡಿಸಿಕೊಂಡಿವೆ. ಇದರಿಂದ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿನ ಆಸ್ತಿಗಳ ವಿವರ ಹಾಗೂ ಅದು ಯಾರ ಮಾಲೀಕತ್ವದಲ್ಲಿದೆ ಎಂಬ ವಿವರ ಸುಲಭವಾಗಿ ಲಭ್ಯವಾಗಲಿದೆ. ಇದೇ ರೀತಿ ಬಿಬಿಎಂಪಿಯೂ ತನ್ನ ವ್ಯಾಪ್ತಿಯಲ್ಲಿರುವ ಪಾಲಿಕೆ, ಸರ್ಕಾರಿ ಹಾಗೂ ಸಾರ್ವಜನಿಕರ ಆಸ್ತಿಗಳನ್ನು ಇ- ತಂತ್ರಾಂಶಕ್ಕೆ ಅಳವಡಿಸಿಕೊಳ್ಳಲು ಮುಂದಾಗಿದೆ. ಇದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮುಖ್ಯವಾಗಿ ಒಂದು ನಿರ್ದಿಷ್ಟ ಆಸ್ತಿ ಯಾರ ಮಾಲೀಕತ್ವದಲ್ಲಿದೆ. ಇದರ ಬೆಲೆ ಏನು ಎನ್ನುವ ಮಾಹಿತಿ ಸಿಗಲಿದ್ದು, ಅವ್ಯವಹಾರಕ್ಕೆ ಕಡಿವಾಣ ಬೀಳಲಿದೆ.
ಪಾಲಿಕೆಗೆ ತನ್ನದೇ ತಂತ್ರಾಂಶ ಅಗತ್ಯ : ನಗರದಲ್ಲಿನ ಆಸ್ತಿಗಳಿಗೆ ಜಿಐಎಸ್ ಮ್ಯಾಪಿಂಗ್ (ಭೌಗೋಳಿಕ ಮಾಹಿತಿ ನೀಡುವ ತಂತ್ರಾಂಶ) ಮಾಡಬೇಕು. ಪಾಲಿಕೆ ತನ್ನದೇ ತಂತ್ರಾಂಶ ಅಭಿವೃದ್ಧಿಪಡಿಸಿಕೊಳ್ಳಬೇಕಿದೆ. ಅದು ಜಲಮಂಡಳಿ, ಬಿಡಿಎ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳಿಗೂ ಅನ್ವಯಿಸುವಂತೆ ಇದ್ದರೆ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎನ್ನುತ್ತಾರೆನಗರಾಭಿವೃದ್ಧಿ ತಜ್ಞ ವಿ. ರವಿಚಂದರ್. ಪ್ರತಿ ಇಲಾಖೆಯೂ (ಆಸ್ತಿ ವಿವರ ಅಥವಾ ಆಸ್ತಿಗೆ ಗುರುತಿನ ಸಂಖ್ಯೆ) ಒಂದೊಂದು ತಂತ್ರಾಂಶವನ್ನು ಅಭಿವೃದ್ಧಿ ಮಾಡುವುದರಿಂದ ಹಣ, ಸಂಪನ್ಮೂಲ ವ್ಯಯವಾಗುವ ಜತೆಗೆ ಗೊಂದಲ ಸೃಷ್ಟಿಯಾಗಲಿದೆ. ಒಂದೇ ತಂತ್ರಾಂಶ ಇದ್ದರೆ ಪೊಲೀಸ್ ಇಲಾಖೆಗೂ ಸಹಕಾರಿಯಾಗಲಿದೆ. ಒಂದು ಆಸ್ತಿಗೆ ಒಂದೇ ಸಂಖ್ಯೆ ಹಾಗೂ ವಿವರ ಇದ್ದರೆ ವಿವಿಧ ಇಲಾಖೆ ನಡುವೆ ಸಮನ್ವಯತೆ ಸಾಧ್ಯವಿದೆ ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ಆಸ್ತಿ ಗಳನ್ನು ಇ- ತಂತ್ರಾಂಶದ ಅಡಿ ತರುವು ದಕ್ಕೆ ಕಳೆದ ಮೂರು ತಿಂಗಳಿಂದ ಸಿದ್ಧತೆ ನಡೆಯುತ್ತಿದೆ. ಬಿಬಿಎಂಪಿ ಆಯುಕ್ತರ ಸೂಚನೆ ಯಂತೆ ಇದನ್ನು ಅಭಿವೃದ್ಧಿ ಮಾಡಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಇ- ಆಸ್ತಿಯ ಸಂಬಂಧ ರೂಪರೇಷಗಳು ಅಂತಿಮವಾಗಲಿದೆ. ನಗರದ ಒಳಭಾಗ ಹಾಗೂ ಹೊರಭಾಗ ಎಂದು ಎರಡು ಹಂತದಲ್ಲಿ ತಂತ್ರಾಂಶ ಅಭಿವೃದ್ಧಿ ಮಾಡಲಿದ್ದೇವೆ. –ಡಾ.ಎಸ್. ಬಸವರಾಜ್. ಪಾಲಿಕೆ ವಿಶೇಷ ಆಯುಕ್ತ (ಕಂದಾಯ)
– ಹಿತೇಶ್ ವೈ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.