ಮಳೆ ಹಾನಿ ಪರಿಹಾರ: 10 ಸಾವಿರ ರೂ. ಭರವಸೆ ಕೊಟ್ಟು, 1 ರೂ. ಪರಿಹಾರ ಹಾಕಿದ ಬಿಬಿಎಂಪಿ
Team Udayavani, May 31, 2022, 3:56 PM IST
ಬೆಂಗಳೂರು: ಮಳೆ ಹಾನಿಗೆ ಸೂಕ್ತ ಪರಿಹಾರ ನೀಡದ ಹಿನ್ನೆಲೆಯಲ್ಲಿ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ವಾರ್ಡ್ ನಿವಾಸಿಗಳು ಸೋಮವಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಭೇಟಿಯಾಗಿ ಪರಿಹಾರಕ್ಕಾಗಿ ಮನವಿ ಸಲ್ಲಿಸಿದರು.
ನಗರದಲ್ಲಿ ಕಳೆದ 6 ತಿಂಗಳ ಹಿಂದೆ ಸುರಿದ ಮಳೆಯಿಂದಾಗಿ ಗಾಳಿ ಆಂಜನೇಯ ಸ್ವಾಮಿದೇವಸ್ಥಾನ ವಾರ್ಡ್‌ನ 70ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿತ್ತು. ಆ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದಬಿಬಿಎಂಪಿ ಅಧಿಕಾರಿಗಳು ಸರ್ವೆ ನಡೆಸಿ ಪ್ರತಿ ಮನೆಗೆ ತಲಾ 10 ಸಾವಿರ ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೆ ಪರಿಹಾರ ದೊರೆತಿಲ್ಲ. ಅದರ ನಡುವೆ ಕಳೆದ 15 ದಿನಗಳ ಹಿಂದೆಸುರಿದ ಭಾರಿ ಮಳೆಗೆ ಮತ್ತೆ ಮನೆಗಳಿಗೆ ನೀರು ನುಗ್ಗಿ ನಷ್ಟವುಂಟಾಗಿದೆ. ಹೀಗಾಗಿ 6 ತಿಂಗಳ ಹಿಂದಿನ ಪರಿಹಾರ ಹಾಗೂ ಹೊಸ ಪರಿಹಾರ ಸೇರಿ 35 ಸಾವಿರ ರೂ. ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸುವಂತೆ ಕೋರಿದರು.
1 ರೂ. ಪರಿಹಾರ ನೀಡಿದ ಬಿಬಿಎಂಪಿ: ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ವಾರ್ಡ್‌ನಲ್ಲಿ ಮಳೆ ಬಂದಾಗ ಸರ್ವೆ ನಡೆಸಿದ್ದ ಅಧಿಕಾರಿಗಳು, ಸಂತ್ರಸ್ತರ ವಿವರ, ಬ್ಯಾಂಕ್ ಖಾತೆ ಸೇರಿ ಇನ್ನಿತರ ಮಾಹಿತಿ ಪಡೆದುಕೊಂಡಿದ್ದರು. ಅದಾದ ಒಂದು ವಾರದೊಳಗಾಗಿ 10 ಸಾವಿರ ರೂ. ಪರಿಹಾರ ಬ್ಯಾಂಕ್ ಖಾತೆಗೆಹಾಕಲಾಗುವುದು ಎಂದು ಭರವಸೆ ನೀಡಿದ್ದರು. ಅದರನಂತರ ಬ್ಯಾಂಕ್ ಖಾತೆ ಸರಿಯಾಗಿದೆಯೇ ಎಂದು ಪರೀಕ್ಷಿಸಲು ಎಲ್ಲರ ಖಾತೆಗೆ 1 ರೂ. ಹಾಕಲಾಗಿತ್ತು. ಅದನ್ನು ಹೊರತುಪಡಿಸಿದರೆ ಯಾವುದೇ ಹಣಪಾವತಿಯಾಗಿಲ್ಲ ಎಂಬುದು ಸಂತ್ರಸ್ತರ ಆರೋಪ.
ಪರಿಶೀಲಿಸಿ ಕ್ರಮದ ಭರವಸೆ: ಆಮ್ ಆದ್ಮಿ ಪಕ್ಷದಎಸ್.ಜಿ.ಕೇಶವಮೂರ್ತಿ ನೇತೃತ್ವದಲ್ಲಿ ಸಂತ್ರಸ್ತರು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಭೇಟಿಯಾಗಿ ಸಮಸ್ಯೆ ತೋಡಿಕೊಂಡರು.
ಅದಕ್ಕೆ ಪ್ರತಿಕ್ರಿಯಿಸಿದ ತುಷಾರ್ ಗಿರಿನಾಥ್, ಪರಿಹಾರ ನೀಡದಿರುವುದಕ್ಕೆ ಕಾರಣವೇನು ಎಂಬುದನ್ನು ಪರಿಶೀಲಿಸುತ್ತೇನೆ. ಈ ಬಾರಿಯ ಮಳೆಗೆ ಪ್ರವಾಹಸೃಷ್ಟಿಯಾಗಿದ್ದರೆ ಅದಕ್ಕೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಓಟ್ ಕೇಳ್ಳೋಕೆ ಬರಲಿ : ಮುಖ್ಯ ಆಯುಕ್ತರ ಭೇಟಿಗೂ ಮುನ್ನಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತರು,ಚುನಾವಣೆ ಬಂದಾಗ ಮನೆ ಬಾಗಿಲಿಗೆ ಬರುವಜನಪ್ರತಿನಿಧಿಗಳು ಅದಾದ ನಂತರ ಜನರ ಕಷ್ಟಏನು ಎಂಬುದನ್ನು ನೋಡುವುದಿಲ್ಲ. ಈ ಬಾರಿಬಿಬಿಎಂಪಿ ಅಥವಾ ವಿಧಾನಸಭಾ ಚುನಾವಣೆಗೆಮತ ಕೇಳ್ಳೋಕೆ ಬರಬೇಕು. ಆಗ ಪಾಠ ಕಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮಗಳಲ್ಲಿ ಮಾತನಾಡಿದ್ದಕ್ಕೆ ಪರಿಹಾರವಿಲ್ಲ? : ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದಾಗ ಸ್ಥಳಕ್ಕೆಬಂದಿದ್ದ ಮಾಧ್ಯಮಗಳೊಂದಿಗೆ ಕಷ್ಟವನ್ನುಹೇಳಿಕೊಂಡಿದ್ದೆವು. ಅದಕ್ಕಾಗಿಯೇ ನಮಗೆಪರಿಹಾರ ನೀಡಲಿಲ್ಲ. ಸ್ಥಳೀಯ ಜನಪ್ರತಿನಿಧಿಗಳವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರಣಕ್ಕಾಗಿಪರಿಹಾರ ನೀಡುವಲ್ಲಿ ತಾರತಮ್ಯತೋರಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.