ಟ್ರೇಡಿಂಗ್ ಲೆಸೆನ್ಸ್ ಪಡೆಯುವಿಕೆಯಲ್ಲಿ ಕುಸಿತ
Team Udayavani, Feb 21, 2022, 1:22 PM IST
ಬೆಂಗಳೂರು: 2019 -20ರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೊಸದಾಗಿ ಟ್ರೇಡಿಂಗ್ ಲೆಸೆನ್ಸ್ ಪಡೆಯುವವರ ಸಂಖ್ಯೆಯಲ್ಲಿ ಕುಸಿತ ಕಂಡು ಬಂದಿದೆ.
ಕೋವಿಡ್ ತಂದಿಟ್ಟಿರುವ ಆರ್ಥಿಕ ಸಂಕಷ್ಟ ಸೇರಿದಂತೆ ಮತ್ತಿತರರ ಕಾರಣಗಳಿಂದಾಗಿ ಟ್ರೇಡಿಂಗ್ ಲೆಸೆನ್ಸ್ ನವೀಕರಣದ ಸಂಖ್ಯೆಯ ಕೂಡ ಇಳಿಕೆ ಹಾದಿ ಹಿಡಿದೆ. ಒಂದು ಅಂಕಿ- ಅಂಶದ ಪ್ರಕಾರ 2021-22ರ ಅವಧಿಯಲ್ಲಿ ಶೇ.62ರಷ್ಟು ಮಾತ್ರ ನಗರವ್ಯಾಪಾರಿಗಳು ತಮ್ಮ ವ್ಯಾಪಾರ ಪರ ವಾನಿಗೆಯನ್ನು ನವೀಕರಿಸಲಿದ್ದಾರೆ.
ಕೋವಿಡ್ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ನಗರದಲ್ಲಿ ನೆಲೆ ಕಂಡುಕೊಂಡಿದ್ದ ಹಲವು ಸಣ್ಣ ಪ್ರಮಾಣದ ವ್ಯಾಪಾರಿಗಳು ಈಗಾಗಲೇ ಊರು ಸೇರಿಕೊಂಡಿ ದ್ದಾರೆ. ಇನ್ನೂ ಕೆಲವು ವ್ಯಾಪಾರಿಗಳು ಅಂಗಡಿಗಳನ್ನು ಬಂದ್ ಮಾಡಿದ್ದು, ಬಂಡವಾಳ ಹಾಕಿ ಮತ್ತೆ ಹೋಟೆಲ್ ಸೇರಿದಂತೆ ಇನ್ನಿತರ ವ್ಯಾಪಾರವನ್ನು ಆರಂ ಭಿಸುವ ಮನಸು ಮಾಡುತ್ತಿಲ್ಲ. ಈ ಎಲ್ಲಾ ಕಾರಣಗಳಿಂ ದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೊಸ ಟ್ರೇಡಿಂಗ್ ಲೈಸೆನ್ಸ್ ಪಡೆದುಕೊಳ್ಳುವವರ ಸಂಖ್ಯೆಯಲ್ಲಿ ಕುಸಿತ ಕಂಡು ಬಂದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2019-20ರ ಅವಧಿಯಲ್ಲಿ 51,564 ಟ್ರೆಡ್ ಲೈಸೆನ್ಸ್ ನೀಡಿದೆ. ಹಾಗೆಯೇ 2020-21ನೇ ಹಣಕಾಸುಅವಧಿಯಲ್ಲಿ ಈ ಸಂಖ್ಯೆಯನ್ನು ಹೋಲಿಕೆ ಮಾಡಿದಾಗ ಕುಸಿತ ಕಂಡುಬಂದಿ ರುವುದನ್ನು ಕಾಣಬಹುದಾಗಿದೆ.
2019-20ನೇ ಸಾಲಿನ ಹಣಕಾಸು ವರ್ಷದಲ್ಲಿ ಬಿಬಿಎಂಪಿ 51,564 ಟ್ರೇಡಿಂಗ್ ಲೆಸೆನ್ಸ್ ನೀಡಿದ್ದು ಈ ಸಂಖ್ಯೆ 2020-21ಕ್ಕೆ 45,388ಕ್ಕೆ ಇಳಿಕೆಯಾಗಿದೆ. ಇದರಲ್ಲಿ 8,572 ಹೊಸ ವ್ಯಾಪಾರ ಪರವಾನಿಗೆ ನೀಡಿರುವುದು ಕೂಡ ಸೇರಿದೆ ಎಂದು ಪಾಲಿಕೆಯ ಮೂಲಗಳು ತಿಳಿಸಿವೆ.
46.65 ಕೋಟಿ ರೂ.ಆದಾಯ ಸಂಗ್ರಹ: 2019- 20ರಲ್ಲಿ ಹೊಸದಾಗಿ 13,171 ಮಂದಿ ವ್ಯಾಪಾರಿಗಳಿಗೆ ಪರವಾನಿಗೆ ನೀಡಲಾಗಿತ್ತು. ಇದರಿಂದಾಗಿ ಪಾಲಿಕೆಗೆ 9.3ಕೋಟಿ ರೂ.ಆದಾಯ ರೂಪದಲ್ಲಿ ಹರಿದು ಬಂದಿತ್ತು. ಜತೆಗೆ 38,398 ಪರವಾನಿಗೆ ನವೀಕರಿಸಲಾಗಿತ್ತು ಇದರಿಂದಾಗಿ ಬಿಬಿಎಂಪಿಗೆ ಸುಮಾರು 37.35 ಕೋಟಿ ರೂ. ಸಂಗ್ರಹವಾಗಿತ್ತು. ಒಟ್ಟಾರೆ ಲೆಸನ್ಸ್ ಪರವಾನಿಗೆಯಿಂದಲೇ ಆ ವರ್ಷ ಪಾಲಿಕೆಗೆ ಸುಮಾರು 37.35 ಕೋಟಿ ರೂ.ಆದಾಯ ಸಂಪನ್ಮೂಲ ಸಂಗ್ರಹವಾಗಿತ್ತು.
2020-21ರಲ್ಲಿ ಹೊಸದಾಗಿ ಪರವಾನಿಗೆ ಪಡೆಯುವ ಸಂಖ್ಯೆಯಲ್ಲಿ 8,678 ಆಗಿದ್ದು 6.2 ಕೋಟಿ ರೂ.ತೆರಿಗೆ ಸಂಗ್ರಹವಾಗಿತ್ತು. ಹಾಗೆಯೇ 36,710 ಟ್ರೇಡಿಂಗ್ ಲೆಸನ್ಸ್‌ಗಳನ್ನು ನವೀಕರಣ ಮಾಡಲಾಗಿತ್ತು. ಆದರೆ ತೆರಿಗೆ ಪ್ರಮಾಣ 54 ಕೋಟಿ ರೂ. ಸಂಗ್ರಹವಾಗಿ ಅಲ್ಪಮಟ್ಟಿನ ಹೆಚ್ಚಳವಾಗಿತ್ತು.
ಆದಾಯ ತೆರಿಗೆಯಲ್ಲಿ ಮತ್ತೆ ಇಳಿಕೆ: ಹಲವು ಕ್ಷೇತ್ರಗಳ ವ್ಯಾಪಾರಿಗಳು ತಮ್ಮ ಪರವಾನಿಗೆಯನ್ನು ನವೀಕರಸದೇ ಇರುವುದರ ಜತೆಗೆಹೇಳಿಕೊಳ್ಳುವಷ್ಟು ಮಟ್ಟದಲ್ಲಿ ಹೊಸ ಪರವಾನಿಗೆ ಅರ್ಜಿಗಳಲು ಬಾರದೇ ಇರುವುದರಿಂದ ಪಾಲಿಕೆಯ ಸಂಪನ್ಮೂಲ ಕ್ರೋಢೀಕರಣದಲ್ಲೂ ಕೂಡ ಇಳಿಕೆಯಾಗಿರುವುದನ್ನು ಅಂಕಿ ಅಂಶಗಳೇ ಬಿಚ್ಚಿಡುತ್ತವೆ. 2021-22ನೇ ಆರ್ಥಿಕ ವರ್ಷದಲ್ಲಿ ಹೊಸದಾಗಿ 8,572 ಟ್ರೇಡ್ ಲೆಸನ್ಸ್ ನೀಡಲಾಗಿದ್ದು ಇದರಿಂದ 7.5ಕೋಟಿ ರೂ.ಆದಾಯ ಸಂಗ್ರಹವಾಗಹಿದೆ. ಜತೆಗೆ 28,939 ಪರವಾನಿಗೆ ನವೀಕರಿಸಲಾಗಿದ್ದು ಇದರಿಂದ 32.6 ಕೋಟಿ ರೂ.ಸಂಗ್ರಹವಾಗಿದೆ. ಒಟ್ಟಾರೆ ಪಾಲಿಕೆಗೆ 2021-22ನೇ ಸಾಲಿನಲ್ಲಿ 40.1ಕೋಟಿ ರೂ. ಸಂಪನ್ಮೂಲ ಕ್ರೋಢೀಕರಣವಾಗಿದೆ. ಈ ಬಗ್ಗೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ನಗರದ ಕೆಲವು ಕಡೆಗಳಲ್ಲಿ ಪರವಾನಿಗೆ ನವೀಕರಿಸದೇ ತಮ್ಮ ವ್ಯಾಪಾರವನ್ನು ಮುಂದುವರೆಸಿರುವವರ ಬಗ್ಗೆ ಮಾಹಿತಿಯನ್ನು ಕೂಡ ಕಲೆಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಜತೆಗೆ 2022ಕ್ಕೆ ದಂಡವಿಲ್ಲದೆ ತಮ್ಮಪರವಾನಗಿಗಳನ್ನು ನವೀಕರಿಸಲು ವ್ಯಾಪಾರಿಗಳಿಗೆ ಫೆಬ್ರವರಿ ಅಂತ್ಯದವರೆಗೆ ಸಮಯವಿದೆ ಆ ಹಿನ್ನೆಲೆಯಲ್ಲಿ ಈ ಸಂಖ್ಯೆಯಲ್ಲಿ ದ್ವಿಗುಣವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಶೇ.30 ರಿಂದ 40ರಷ್ಟು ಸಣ್ಣ ವ್ಯಾಪಾರದ ಮೇಲೆ ಕೋವಿಡ್ ಆರ್ಥಿಕ ಪೆಟ್ಟುನೀಡಿದೆ. ಹೀಗಾಗಿ ಬೆಂಗಳೂರಿನ ಹಲವುಪ್ರತಿಷ್ಠಿತ ಬಡಾವಣೆಗಳಲ್ಲಿ ಬಾಡಿಗೆ ಕಟ್ಟಲಾಗದೆ ವ್ಯಾಪಾರಿಗಳು ಅಂಗಡಿಗಳಿಗೆ ಬೀಗಹಾಕಿದ್ದಾರೆ. ಜತೆಗೆ ಹೊಸದಾಗಿ ಬಂಡವಾಳಹಾಕುವ ಸ್ಥಿತಿಯಲ್ಲಿ ಹಲವರಿಲ್ಲ. ಈ ಎಲ್ಲಾಕಾರಣಗಳಿಂದಾಗಿಯೇ ಪಾಲಿಕೆಯಿಂದ ಹೊಸ ಲೆಸನ್ಸ್ ಪಡೆಯುವಿಕೆಯ ಹಾಗೂನವೀಕರಿಸುವಿಕೆಯಲ್ಲಿ ಸಂಖ್ಯೆಯಲ್ಲಿ ಕುಸಿತವಾಗಿದೆ.-ರಾಜು, ಕಾಸಿಯಾದ ಮಾಜಿ ಅಧ್ಯಕ್ಷ
-ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.