ಬಿಡಿಎ ಪ್ರಕರಣ ಇತ್ಯರ್ಥಕ್ಕೆ ಸಲಹಾ ಸಂಸ್ಥೆ

Team Udayavani, Jul 18, 2022, 1:17 PM IST

ಬಿಡಿಎ ಪ್ರಕರಣ ಇತ್ಯರ್ಥಕ್ಕೆ ಸಲಹಾ ಸಂಸ್ಥೆ

ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋರ್ಟ್‌ ಪ್ರಕರಣಗಳಿಂದ ಹೈರಾಣಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ),ಪ್ರಕರಣಗಳ ನಿವಾರಣೆಗೆ ಪ್ರತ್ಯೇಕ ಕಾನೂನು ಸಲಹೆಗಾರರನ್ನು ನೇಮಿಸಿಕೊಳ್ಳಲು ಮುಂದಾಗಿದೆ.

ಭೂಸ್ವಾಧೀನ, ಫ್ಲಾಟ್‌ಗಳ ಹಂಚಿಕೆ, ನಿವೇಶನಗಳಹಂಚಿಕೆಯಲ್ಲಿ ವಿವಾದ ಸೇರಿ ಇನ್ನಿತರಕಾರಣಗಳಿಂದಾಗಿ ಬಿಡಿಎ ಮೇಲೆ ಸಾರ್ವಜನಿಕರು ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆ. ಅದರಲ್ಲೂ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಭೂಮಾಲೀಕರಿಂದ ಅತಿಹೆಚ್ಚಿನ ಪ್ರಕರಣಗಳು ಬಿಡಿಎ ಮೇಲೆ ದಾಖಲಾಗಿವೆ.

ಈ ಪ್ರಕರಣ ಇತ್ಯರ್ಥ ವಿಳಂಬವಾಗುತ್ತಿದ್ದು, ಅದರಿಂದ ಬಿಡಿಎ ಯೋಜನೆಗಳ ಅನುಷ್ಠಾನದ ಮೇಲೂ ಪರಿಣಾಮ ಬೀರುವಂತಾಗಿದೆ. ಹೀಗಾಗಿಯೇ ಬಿಡಿಎ ಇದೀಗ ಪ್ರತ್ಯೇಕ ಕಾನೂನು ಸಲಹಾ ಸಂಸ್ಥೆಯನ್ನು ನೇಮಿಸಿಕೊಳ್ಳುತ್ತಿದೆ.  ಈ ಸಂಸ್ಥೆಯು ಬಿಡಿಎಗೆ ಸಂಬಂಧಿಸಿದ ಪ್ರಕರಣ ಇತ್ಯರ್ಥಕ್ಕೆ ನೆರವು ನೀಡಲಿದೆ.

ಭೂವ್ಯಾಜ್ಯ ಕುರಿತು ಪರಿಣಿತಿ ಇರಬೇಕು: ಕಾನೂನು ಸಲಹಾ ಸಂಸ್ಥೆಯು ಬಿಡಿಎ ಪ್ರಕರಣಗಳ ಕುರಿತುಸಲಹೆ ನೀಡಲು 6 ವಕೀಲರ ತಂಡವನ್ನುನೇಮಿಸಬೇಕಿದೆ. ಅವರು 20 ವರ್ಷ, 10 ವರ್ಷಹಾಗೂ 5 ವರ್ಷ ಅನುಭವವುಳ್ಳ ತಲಾ ಇಬ್ಬರು ವಕೀಲರಾಗಿರಬೇಕಿದೆ. ಅವರು ಪ್ರಮುಖವಾಗಿಭೂಸ್ವಾಧೀನ, ಭೂವ್ಯಾಜ್ಯ, ನಿವೇಶನ ಹಂಚಿಕೆ ಸೇರಿಇನ್ನಿತರ ವಿಷಯಗಳಿಗೆ ಸಂಬಂಧಿಸಿದ ಪರಿಣಿತಿಯನ್ನು ಹೊಂದಿರಬೇಕು.

ಪ್ರಕರಣ ಇತ್ಯರ್ಥಕ್ಕೆ ಸಲಹೆ: ಕಾನೂನು ಸಲಹಾ ಸಂಸ್ಥೆಗೆ ಬಿಡಿಎ ಪ್ರಕರಣಗಳ ಕುರಿತಂತೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ಆ ಪ್ರಕರಣದ ಬಿಡಿಎಪರವಾಗಿ ತೀರ್ಪು ಬರುವಂತೆ ಮಾಡಲು ಯಾವ ರೀತಿಯಲ್ಲಿ ಕೆಲಸ ಮಾಡಬೇಕು, ಕೋರ್ಟ್‌ಗೆ ಯಾವ ರೀತಿಯ ಅಫಿಡವಿಟ್‌ ಸಲ್ಲಿಸಬೇಕು ಎಂಬ ಬಗ್ಗೆ ಸಲಹೆ ನೀಡಬೇಕಿದೆ.

ಸಮನ್ವಯಕಾರರ ನೇಮಕ: ಕೋರ್ಟ್‌ ಪ್ರಕರಣಗಳ ಕುರಿತು ಕಾನೂನು ಸಲಹಾ ಸಂಸ್ಥೆ ಅಥವಾ ವಕೀಲರಿಗೆ ಮಾಹಿತಿ ನೀಡುವುದಕ್ಕೆ ಬಿಡಿಎಯಿಂದ ಪ್ರತ್ಯೇಕಸಮನ್ವಯಕಾರರನ್ನು ನೇಮಿಸಲಾಗುತ್ತದೆ. ಅವರುಪ್ರಕರಣ ಯಾವ ನ್ಯಾಯಾಲಯದಲ್ಲಿದೆ, ಈವರೆಗೆನಡೆದಿರುವ ಬೆಳವಣಿಗೆಗಳು, ಮುಂದಿನ ವಿಚಾರಣೆ ಯಾವ ದಿನಾಂಕದಲ್ಲಿದೆ ಎಂಬಿತ್ಯಾದಿ ಮಾಹಿತಿಯನ್ನುಕಾನೂನು ಸಲಹಾ ಸಂಸ್ಥೆ ಜತೆಗೆ ಹಂಚಿಕೊಳ್ಳಲಿದ್ದಾರೆ.ಆಮೂಲಕ ಪ್ರಕರಣದ ಬಗೆಗಿನ ಸಂಪೂರ್ಣ ಮಾಹಿತಿ ಲಭ್ಯವಾಗುವಂತೆ ಮಾಡಲಾಗುತ್ತದೆ.

5619 ಪ್ರಕರಣಗಳು: ನ್ಯಾಯಾಲಯಗಳಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣಗಳೇ ಹೆಚ್ಚಿವೆ. ಆ ಪ್ರಕರಣಗಳು ಸಿವಿಲ್‌ ನ್ಯಾಯಾಲಯ, ಗ್ರಾಹಕ ನ್ಯಾಯಾಲಯ, ರೇರಾ, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ಗಳಲ್ಲಿ ದಾಖಲಾಗಿವೆ. ಒಟ್ಟಾರೆ ವಿವಿಧ ನ್ಯಾಯಾಲಯಗಳಲ್ಲಿ ಬಿಡಿಎ ವಿರುದ್ಧ 5,619 ಪ್ರಕರಣಗಳಿವೆ. ಅವುಗಳ ಇತ್ಯರ್ಥ ಬಿಡಿಎಗೆ ದೊಡ್ಡ ತಲೆನೋವಾಗಿದೆ.

ಪ್ರಕರಣ ಇತ್ಯರ್ಥವಾಗದಿದ್ದರೆ ದಂಡ: ಕಾನೂನು ಸಲಹಾ ಸಂಸ್ಥೆ ನ್ಯಾಯಾಲಯಗಳಲ್ಲಿ ಬಿಡಿಎ ಪರವಾಗಿ ಪ್ರಕರಣ ಇತ್ಯರ್ಥವಾಗುವಂತೆ ಮಾಡಬೇಕಿದೆ. ಅದಕ್ಕೆತಕ್ಕಂತೆ ಸಲಹೆಗಳನ್ನು ನೀಡಬೇಕಿದೆ. ಒಂದು ವೇಳೆಪ್ರಕರಣ ಬಿಡಿಎ ಪರವಾಗಿ ಆಗದಿದ್ದರೆ ಬಿಡಿಎಕಾನೂನು ಸಲಹಾ ಸಂಸ್ಥೆಗೆ ದಂಡ ವಿಧಿಸಲಿದೆ. ಸ್ವಲ್ಪಮಟ್ಟಿನ ವೈಫ‌ಲ್ಯಕ್ಕೆ ಸಲಹಾ ಸಂಸ್ಥೆಗೆ ನೀಡಲಾಗುವಬಿಲ್‌ನಲ್ಲಿ ಶೇ. 10 ದಂಡದ ರೂಪದಲ್ಲಿ ಕಡಿತಗೊಳಿಸಲಾಗುತ್ತದೆ. ಒಂದು ವೇಳೆ ಪೂರ್ಣ ವೈಫ‌ಲ್ಯ ಕಂಡರೆ ಕಾನೂನು ಸಲಹಾ ಸಂಸ್ಥೆ ಬಿಡಿಎಗೆ ನೀಡುವ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಿದೆ.

ಬಿಡಿಎ ಪ್ರಕರಣಗಳ ಶೀಘ್ರ ಇತ್ಯರ್ಥ ಮತ್ತು ಬಿಡಿಎ ಪರವಾಗಿ ತೀರ್ಪು ಬರುವಂತೆ ಮಾಡಲು ಪ್ರತ್ಯೇಕ ಕಾನೂನು ಸಲಹಾ ಸಂಸ್ಥೆಯನ್ನು ನೇಮಿಸಲಾಗುತ್ತದೆ. ಅವರಿಗೆಪ್ರಮುಖ ಪ್ರಕರಣಗಳ ಮಾಹಿತಿ ನೀಡಿ ಪ್ರಕರಣ ನಮ್ಮ ಪರವಾಗಿ ತೀರ್ಪು ಬರುವಂತೆಮಾಡಲು ಸಲಹೆ ಕೋರಲಾಗುವುದು. -ರಾಜೇಶ್‌ ಗೌಡ, ಬಿಡಿಎ ಆಯುಕ್ತ

-ಗಿರೀಶ್‌ ಗರಗ

ಟಾಪ್ ನ್ಯೂಸ್

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.