ಕ್ಲಬ್‌ಹೌಸ್ ನಿರ್ಮಾಣಕ್ಕೆ ಬಿಡಿಎ ನಿರ್ಧಾರ
Team Udayavani, Nov 21, 2018, 11:50 AM IST
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮೈಸೂರು ರಸ್ತೆ ಸಮೀಪದ ಕಣ್‌ಮಿಣಿಕೆ ಸಮುತ್ಛಯ ನಿವೇಶನಗಳ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೂಂದು ಮರಳಿಯತ್ನ ಮಾಡುವ ಕಾರ್ಯಕ್ಕೆ ಮುಂದಾಗಿದ್ದು “ಕ್ಲಬ್ ಹೌಸ್’ ನಿರ್ಮಾಣ ಮಾಡಿ ಗ್ರಾಹಕರನ್ನು ತನ್ನತ್ತ ಸೆಳೆಯುವ ಕನಸು ಕಾಣುತ್ತಿದೆ.
ಗೌರಿ -ಗಣೇಶ ಹಬ್ಬದ ಸಂದರ್ಭದಲ್ಲಿ ಕಣ್‌ಮಿಣಿಕೆ ಫ್ಲ್ಯಾಟ್‌ಗಳ ಮೇಲೆ ಶೇ.5 ಮತ್ತು 10 ರಿಯಾಯಿತಿಯನ್ನು ಬಿಡಿಎ ಘೋಷಣೆ ಮಾಡಿತ್ತು. ರಿಯಾಯಿತಿ ಪ್ರಕಟಿಸಿದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕಣ್‌ಮಿಣಿಕೆ ಫ್ಲ್ಯಾಟ್‌ಗಳನ್ನು ಖರೀದಿಸಲು ಮುಂದೆ ಬಂದಿಲ್ಲ. ಈ ದೃಷ್ಟಿಯಿಂದ ಗಂಭೀರ ಆಲೋಚನೆಯಲ್ಲಿ ತೊಡಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ ಕಣ್‌ಮಿಣಿಕೆ ವಸತಿ ಸಮುತ್ಛಯದಲ್ಲಿ ” ಕ್ಲಬ್‌ಹೌಸ್’ ನಿರ್ಮಾಣ ಮಾಡಿ ಖರೀದಿದಾರರನ್ನು ಆಕರ್ಷಿಸುವ ಮತ್ತೂಂದು ಪ್ರಯತ್ನಕ್ಕೆ ಹೆಜ್ಜೆ ಇರಿಸಿದೆ.
ಆಡಳಿತ ಮಂಡಳಿಯಲ್ಲಿ ಚರ್ಚೆ: ಬಿಡಿಎ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಬಿಡಿಎ ಆಯುಕ್ತ ರಾಕೇಶ್ ಸಿಂಗ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಕಣ್‌ಮಿಣಿಕೆ ಫ್ಲ್ಯಾಟ್ ಮಾರಾಟದ ವಿಷಯ ಚರ್ಚೆಗೆ ಬಂತು. ಈ ವೇಳೆ ರಿಯಾಯಿತಿ ನೀಡಿದರೂ, ಗ್ರಾಹಕರು ಯಾಕೆ ಫ್ಲ್ಯಾಟ್‌ಕೊಳ್ಳಲು ಮುಂದಾಗುತ್ತಿಲ್ಲ ಎಂಬ ಬಗೆಗಿನ ಸಮಾಲೋಚನೆ ಕೂಡ ನಡೆಯಿತು.
ಹೀಗಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಸಮುತ್ಛಯಗಳಲ್ಲಿನ ನಿವೇಶನಗಳತ್ತ ಗ್ರಾಹಕರನ್ನು ಸೆಳೆಯಲು ಯೋಜನೆಗಳನ್ನು ರೂಪಿಸಿ ಎಂದು ಹಿರಿಯ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕ್ಲಬ್ ಹೌಸ್ ನಿರ್ಮಿಸಲು ನೀಲಿ ನಕ್ಷೆಯನ್ನು ರೂಪಿಸಿದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
17.35ಕೋಟಿ ರೂ.ವೆಚ್ಚದಲ್ಲಿ ಕ್ಲಬ್ ಹೌಸ್: ಕ್ಲಬ್‌ಹೌಸ್ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸುಮಾರು 17.35 ಕೋಟಿ.ರೂ ವೆಚ್ಚ ಮಾಡಲಿದೆ. ಆಧುನಿಕ ವ್ಯಾಯಾಮ ಕೇಂದ್ರ, ಸುಸಜ್ಜಿತ ಈಜು ಕೊಳ ಸೇರಿದಂತೆ ಹಲವು ಸೌಲಭ್ಯಗಳು ಇಲ್ಲಿರಲಿವೆ. ಜತಗೆ “ಬ್ಯಾಡ್ಮಿಂಟನ್ ಕೋರ್ಟ್, ಓದುಗರಿಗೆ ಅನುಕೂಲಕ್ಕಾಗಿ ಸುಸಜ್ಜಿತ “ಗ್ರಂಥಾಲಯ, ಮಕ್ಕಳು ಆಟವಾಡಲು ಅನುಕೂಲವಾಗಲಿ ಎಂಬ ಕಾರಣಕ್ಕಾಗಿ “ಚಿಲ್ಡ್ರನ್ ಪ್ಲೇಯಿಂಗ್ ಏರಿಯಾ’ ಕೂಡ ನಿರ್ಮಾಣವಾಗಲಿದೆ.
ಐಷಾರಾಮಿ ರೆಸ್ಟೋರೆಂಟ್: ಕ್ಲಬ್‌ಹೌಸ್‌ನಲ್ಲಿ ಗ್ರಾಹಕರಿಗೆ ಅನುಕೂಲಕ್ಕೆ “ಐಷಾರಾಮಿ ರೆಸ್ಟೋರೆಂಟ್’ ನಿರ್ಮಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ವಿಶೇಷ ಶುಭ ಸಮಾರಂಭಗಳಿಗೆ ಸದ್ಬಳಕೆಯಾಗಲಿ ಎಂಬ ದೃಷ್ಟಿಯಿಂದ “ಕಮ್ಯೂನಿಟಿ ಹಾಲ್’ ಕೂಡ ನಿರ್ಮಾಣ ಮಾಡಲಿದೆ ಎಂದು ಬಿಡಿಎ ಹಿರಿಯ ಎಂಜಿನಿಯರ್ ರೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.
ಮಾರಾಟವಾಗಬೇಕಾಗಿವೆ: ಹೊಸ ಸಮುತ್ಛಯಗಳನ್ನು ನಿರ್ಮಿಸಲು ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಬಿಡಿಎ ಈ ಹಿಂದೆ ಒಂದು ಫ್ಲ್ಯಾಟ್ ಖರೀದಿಸುವವರಿಗೆ ಶೇ.5 ಮತ್ತು ಒಂದಕ್ಕಿಂತ ಹೆಚ್ಚು ಫ್ಲ್ಯಾಟ್‌ಗಳನ್ನು ಖರೀದಿಸಿದವರಿಗೆ ಶೇ.10 ರಷ್ಟು ರಿಯಾಯ್ತಿ ನೀಡಿತ್ತು. ಈ ವೇಳೆ 2 ಬಿಎಚ್‌ಕೆಯ ಐದುನೂರ ನಾಲ್ವತ್ತಾರು ನಿವೇಶನಗಳ ಪೈಕಿ, 225 ಫ್ಲ್ಯಾಟ್‌ಗಳು ಮಾರಾಟವಾಗಿದ್ದು ಇನ್ನೂ 271 ನಿವೇಶನಗಳು ಮಾರಾಟವಾಗದೆ ಹಾಗೇ ಉಳಿದಿವೆ.
ಬಿಡಿಎ ನಿರ್ಮಿಸಿರುವ ನಿವೇಶನಗಳಿಗೆ ಭಾರೀ ಬೇಡಿಕೆ ಇದೆ. ಕಣ್‌ಮಿಣಿಕೆ ಫ್ಲ್ಯಾಟ್‌ಗಳತ್ತ ಗ್ರಾಹಕರನ್ನು ಸೆಳೆಯಲು ಪ್ರಾಧಿಕಾರ ಹಲವು ಯೋಜನೆಗಳನ್ನು ರೂಪಿಸಿದ್ದು ಇದರಲ್ಲಿ ಕ್ಲಬ್ ಹೌಸ್ ಕೂಡ ಸೇರಿದೆ.
-ರಾಕೇಶ್ ಸಿಂಗ್, ಬಿಡಿಎ ಆಯುಕ್ತ.
* ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.