ಗ್ರಾಹಕರೇ, ಆನ್‌ಲೈನ್‌ ಶಾಪಿಂಗ್‌ ಮುನ್ನ ಜೋಕೆ


Team Udayavani, Mar 14, 2022, 12:23 PM IST

ಗ್ರಾಹಕರೇ, ಆನ್‌ಲೈನ್‌ ಶಾಪಿಂಗ್‌ ಮುನ್ನ ಜೋಕೆ

ಒತ್ತಡದ ಜೀವನದಲ್ಲಿ ಎಲ್ಲವೂ ಆನ್‌ಲೈನ್‌ನಲ್ಲಿಯೇ ವ್ಯವಹಾರ ನಡೆಸುತ್ತಿದ್ದೇವೆ. ಹೀಗಾಗಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಆನ್‌ಲೈನ್‌ ಇ-ಕಾಮರ್ಸ್‌ ವೆಬ್‌ಸೈಟ್‌ಗಳು ಹೆಚ್ಚಾಗಿವೆ. ಆದರೆ, ಅವು ಅಸಲಿಯೋ, ನಕಲಿಯೋ ಎಂಬ ಬಗ್ಗೆ ಗ್ರಾಹಕರು ಎಚ್ಚರಿಕೆ ವಹಿಸಬೇಕಿದೆ. ಯಾಕೆಂದರೆ ನಕಲಿ ವೆಬ್‌ಸೈಟ್‌ಗಳ ಹಾವಳಿ ಹೆಚ್ಚಾಗಿದ್ದು, ಆಫ‌ರ್‌, ರಿಯಾಯಿತಿ ನೆಪದಲ್ಲಿ ಗ್ರಾಹಕರ ಹಣ ಸುಲಿಗೆ ಮಾಡಲಾಗುತ್ತಿದೆ. ಅಂತಹ ಪ್ರಕರಣಗಳ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿವೆ. ಈ ಕುರಿತ ಗ್ರಾಹಕರು ಮೋಸ ಕೆಲ ಪ್ರಕರಣಗಳನ್ನು ಉಲ್ಲೇಖೀಸಿ, ಜನರು ಎಚ್ಚರವಹಿಸುವ ಬಗ್ಗೆ ವಿಶೇಷ ವರದಿ ಇಲ್ಲಿದೆ.

ಪ್ರಕರಣ-1 : ಜೆ.ಪಿ.ನಗರ ನಿವಾಸಿ ವೆಂಕಟೇಶ್‌ ಅಯ್ಯರ್‌ ಸಂಬಂಧಿ ಯೊಬ್ಬರಿಗೆ ಗುಜರಾತಿ ಗಾಗ್ರಾ ಖರೀದಿಸಲು ಲೋಕ್ಯಾಂಟೋ ವೆಬ್‌ಸೈಟ್‌ ಶೋಧಿಸಿದ್ದರು. ಅದರಲ್ಲಿ ಉಲ್ಲೇಖೀಸಿದ್ದ ಮೊಬೈಲ್‌ ನಂಬರ್‌ಗೆ ಕರೆ ಮಾಡಿದಾಗ ಆರೋಪಿಗಳು, ಉತ್ತಮ ಕಂಪನಿಯ ಗಾಗ್ರಾ ಇದ್ದು, ಕಳುಹಿಸುತ್ತೇವೆ. ಮುಂಗಡವಾಗಿ ಡೆಲಿವರಿ ಶುಲ್ಕ ಎಂದು ಹಂತ-ಹಂತವಾಗಿ 4,400 ರೂ. ದೋಚಿದ್ದಾರೆ. ನಂತರ ಮೊಬೈಲ್‌ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ. ವೆಂಕಟೇಶ್‌ ಆಗ್ನೇಯ ವಿಭಾಗದ ಸೆನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ-2 : ಯಲಹಂಕ ನಿವಾಸಿ ಪುರುಷೋತ್ತಮ್‌ ಉತ್ತಮ ಕಂಪ ನಿಯ ಮೊಬೈಲ್‌ ಖರೀದಿಗೆ ಮುಂದಾಗಿದ್ದರು. ಆಗ ಇನ್‌ಸ್ಟ್ರಾಗ್ರಾಂನಲ್ಲಿ ಬಂದಿದ್ದ ವೆಬ್‌ಸೈಟ್‌ವೊಂದರ ಲಿಂಕ್‌ ತೆರೆದು, 39 ಸಾವಿರ ರೂ. ಮೌಲ್ಯದ ಮೊಬೈಲ್‌ ಬುಕ್‌ ಮಾಡಿದ್ದಾರೆ. ಆದರೆ, ಮೊಬೈಲ್‌ ಬಂದಿಲ್ಲ. ಈಶಾನ್ಯ ವಿಭಾಗದ ಸೆನ್‌ ಠಾಣೆಯಲ್ಲಿ ಪುರುಷೋತ್ತಮ್‌ ದೂರು ದಾಖಲಿಸಿದ್ದಾರೆ.

ಪ್ರಕರಣ-3 : ಚಾಮರಾಜಪೇಟೆ ನಿವಾಸಿ ಮಧುಸೂದನ್‌, ಓಎಲ್‌ ಎಕ್ಸ್‌ನಲ್ಲಿ ನೀಡಿದ್ದ ವಾಹನ ಮಾರಾಟದ ಜಾಹೀರಾತು ಕಂಡು, ಉಲ್ಲೇಖೀಸಿದ್ದ ಮೊಬೈಲ್‌ ನಂಬರ್‌ಗೆ ಕರೆ ಮಾಡಿದ್ದಾರೆ. ಮುಂಗಡ ಹಣ ಕೊಡಬೇಕೆಂದು 15 ಸಾವಿರ ರೂ. ವರ್ಗಾವಣೆ ಮಾಡಿಸಿಕೊಂಡು, ನಂಬರ್‌ ಮೊಬೈಲ್‌ ಸ್ವಿಚ್‌x ಆಫ್ ಮಾಡಿಕೊಂಡಿದ್ದಾನೆ. ಅಲ್ಲದೆ, ಜಾಹೀರಾತು ಕೂಡ ಡಿಲೀಟ್‌ ಮಾಡಲಾಗಿದೆ. ಈ ಕುರಿತು ಪಶ್ಚಿಮ ವಿಭಾಗದ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೀಗೆ ಅಸಲಿ ಇ-ಕಾಮರ್ಸ್‌ ವೆಬ್‌ಸೈಟ್‌ಗಳನ್ನೇ ಬೆರಗುಗೊಳಿಸುವಂತೆ ನಕಲಿ ಆನ್‌ಲೈನ್‌ ಶಾಂಪಿಂಗ್‌ ವೆಬ್‌ಸೈಟ್‌ಗಳು ಜನರಿಂದ ಹಣ ಸುಲಿಗೆ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ನಗರದ ಸೈಬರ್‌ ಎಕಾನಾಮಿಕ್ಸ್‌ ಮತ್ತು ನಾರ್ಕೋಟಿಕ್ಸ್‌(ಸಿಇಎನ್‌) ಠಾಣೆಗಳಲ್ಲಿ ಇಂತಹ ಪ್ರಕರಣಗಳು ಪ್ರತಿ ನಿತ್ಯ 2-4 ದಾಖಲಾಗಿದ್ದು, ಅಂದಾಜು ವರ್ಷಕ್ಕೆ ಸಾವಿರ ಗಡಿ ದಾಟುತ್ತಿದೆ.

ಸಾಮಾನ್ಯವಾಗಿ ಇ-ಕಾಮರ್ಸ್‌ ವೆಬ್‌ಸೈಟ್‌ ತೆರೆ ಯಲು ಕೆಲವೊಂದು(ಲೈಸೆನ್ಸ್‌ ಹಾಗೂ ಇತರೆ) ಮಾನ ದಂಡಗಳು ಇವೆ. ಆದರೆ, ನಕಲಿ ವೆಬ್‌ಸೈಟ್‌ಗಳು ಯಾವುದೇ ನಿಯಮ ಪಾಲಿಸದೆ ಕೇವಲ 10-20 ಸಾವಿರ ರೂ.ನಲ್ಲಿ ವೆಬ್‌ಸೈಟ್‌ ಸೃಷ್ಟಿಸಿ, ಅಸಲಿ ವೆಬ್‌ ಸೈಟ್‌ ಮಾದರಿಯಲ್ಲಿ ವಸ್ತುಗಳ ಖರೀದಿಗೆ ಅವಕಾಶ ನೀಡುತ್ತವೆ. ಅಲ್ಲದೆ, ಉತ್ತಮ ಗುಣಮಟ್ಟದ ವಸ್ತುಗಳಿಗೆ ಆಫ‌ರ್‌ಗಳು, ರಿಯಾಯಿತಿ ಇವೆ ಎಂದು ಇನ್‌ ಸ್ಟ್ರಾಗ್ರಾಂ, ಫೇಸ್‌ಬುಕ್‌ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡುತ್ತಿವೆ.  ಅಂತಹ ವೆಬ್‌ಸೈಟ್‌ಗೆ ಭೇಟಿ ನೀಡಿದ ಕೂಡಲೇ ಕೆಲ ಮಾಹಿತಿ ಪರೋಕ್ಷವಾಗಿ ವಂಚಿಸುತ್ತಿದ್ದಾರೆ. ಜತೆಗೆ ವಸ್ತುಗಳ ಖರೀದಿಗೆ ಮುಂಗಡವಾಗಿಯೇ ಹಣ ಕಟ್ಟಿಸಿಕೊಂಡು ಮೋಸ ಮಾಡುತ್ತಿದ್ದಾರೆ.

ನಕಲಿ ಇ-ಕಾಮರ್ಸ್‌ ವೆಬ್‌ಸೈಟ್‌ ಪತ್ತೆ ಕಷ್ಟ: ಸಾಮಾ ನ್ಯವಾಗಿ ನಕಲಿ ಇ-ಕಾಮರ್ಸ್‌ ವೆಬ್‌ಸೈಟ್‌ಗಳು ಪತ್ತೆ ಹಚ್ಚುವುದು ಸಾಮಾನ್ಯ ವ್ಯಕ್ತಿಗೆ ಕಷ್ಟವಾಗುತ್ತದೆ. ವೆಬ್‌ ಸೈಟ್‌ ಯಾರದ್ದು? ಮಾಲಿಕರ್ಯಾರು? ಎಂದೆಲ್ಲ ಶೋಧಿ ಸುವುದು ಸವಾಲಿನ ಕೆಲಸ. ಜತೆಗೆ ಅಸಲಿ ವೆಬ್‌ಸೈಟ್‌ ಗಳ ಮಾದರಿಯಲ್ಲೇ ಇರುವುದರಿಂದ, ಕೆಲವೊಂದು ರಿಯಾಯಿತಿಗಳ ಆಮಿಷವೊಡ್ಡುವುದರಿಂದ ಸಾರ್ವಜ ನಿಕರು ಬೇಗನೆ ವಂಚನೆಗೊಳ್ಳಗಾಗುತ್ತಿದ್ದಾರೆ. ಮತ್ತೂಂ ದೆಡೆ ವೆಬ್‌ಸೈಟ್‌ ತೆರೆಯಲು ಕಠಿಣವಾದ ನಿಯಮಗಳು ಭಾರತದಲ್ಲಿ ಇಲ್ಲ. ಕೇಂದ್ರ ಸರ್ಕಾರ ನಕಲಿ ವೆಬ್‌ ಸೈಟ್‌ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡುವ ಬದಲು, ಕಠಿಣವಾದ ಮಾನದಂಡಗಳನ್ನು ಜಾರಿಗೆ ತರಲಿ. ಅವುಗಳನ್ನು ಪೂರೈಸದಿರುವ ವೆಬ್‌ಸೈಟ್‌ಗಳನ್ನು ನಿಷ್ಟ್ರೀಯಗೊಳಿಸಬೇಕು ಎನ್ನುತ್ತಾರೆ ಸೈಬರ್‌ ತಜ್ಞೆ ಶುಭಮಂಗಳ.

ರಿಯಾಯಿತಿ ಬಗ್ಗೆ ಎಚ್ಚರವಿರಲಿ: ಓಎಲ್‌ಎಕ್ಸ್‌ ವೆಬ್‌ ಸೈಟ್‌ ಅನ್ನು ಕಳ್ಳರು ದುರುಪಯೋಗ ಪಡಿಸಿಕೊಳ್ಳುತ್ತಿ ದ್ದಾರೆ. ಕಳವು ಮಾಡಿದ ವಸ್ತುಗಳನ್ನು ಅದರಲ್ಲಿ ಮಾರಾಟಕ್ಕಿಟ್ಟು ಹಣ ಸಂಪಾದಿಸುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಅಪರಿಚಿತ ವಾಹನ ಅಥವಾ ವಸ್ತುಗಳ ಪೋಟೋ ಹಾಕಿ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸುತ್ತಿದ್ದಾರೆ. ಇನ್‌ಸ್ಟ್ರಾಗ್ರಾಂ, ಫೇಸ್‌ಬುಕ್‌ನಲ್ಲಿ ಮಾರಾಟ ವಸ್ತುಗಳ ಜಾಹಿರಾತು ಅಥವಾ ಫೋಟೋಗಳನ್ನು ಸಾರ್ವಜನಿಕರು ನಂಬಬಾರದು. ಸ್ಟಾಂಡರ್ಡ್‌ ಕಂಪ ನಿಗಳಲ್ಲಿ ವಸ್ತುಗಳ ಖರೀದಿಸಿದರೆ ಉತ್ತಮ. ಜತೆಗೆ ಅಪರಿಚಿತ ಮತ್ತು ಅಧಿಕೃತ ಜಾಹೀರಾತು ನೀಡದ ವೆಬ್‌ಸೈಟ್‌ಗಳಲ್ಲಿ ಯಾವುದೇ ವ್ಯವಹಾರ ನಡೆಸಬಾರದು. ಉತ್ತಮ ಗುಣಮಟ್ಟದ ವಸ್ತುಗಳ ರಿಯಾಯಿತಿ,. ಆಫ‌ರ್‌ಗಳ ಬಗ್ಗೆ ಶೋಧಿಸುವುದು ಅಗತ್ಯ. ಮತ್ತೂಂದೆಡೆ ಇಂತಹ ವೆಬ್‌ಸೈಟ್‌ಗಳ ವಿಮರ್ಶೆ ಕೂಡ ನಕಲಿಯಾಗಿರುತ್ತದೆ. ಅದನ್ನು ನಂಬಬಾರದು ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್‌ ಶೆಟ್ಟಿ ಹೇಳಿದರು. ಕೇಂದ್ರ ಸರ್ಕಾರ ಸೈಬರ್‌ ಭದ್ರತೆ ಬಗ್ಗೆ ಕಠಿಣ ಕ್ರಮಕೈಗೊಳ್ಳುತ್ತಿಲ್ಲ.

ಸಾರ್ವಜನಿಕರು ಏನು ಮಾಡಬೇಕು?:

  ಯಾವುದೇ ಇ-ಕಾಮರ್ಸ್‌ ವೆಬ್‌ಸೈಟ್‌ಗೆ ಭೇಟಿ ನೀಡುವ ಮೊದಲು ಪರಿಶೀಲಿಸಬೇಕು.

  ವಿಮರ್ಶೆಗಳ ಬಗ್ಗೆ ಜಾಗೃತರಾಗಿರಿ.

  ಒಂದು ವೇಳೆ ವೆಬ್‌ಸೈಟ್‌ ಬಗ್ಗೆ ಅನುಮಾನವಿದ್ದರೆ “ಕ್ಯಾಶ್‌ ಆನ್‌ ಡೆಲಿವರಿ’ ಆಯ್ಕೆ ಮಾಡಿಕೊಳ್ಳಿ.

  ಯಾವುದೇ ಕಾರಣಕ್ಕೂ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಮಾಹಿತಿ, ನೆಟ್‌ಬ್ಯಾಂಕ್‌ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನೋಂದಾಯಿಸಬೇಡಿ.

ನಕಲಿ ವೆಬ್‌ಸೈಟ್‌ಗಳನ್ನು ನಿಷ್ಕ್ರಿಯಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕಿದೆ. ಭವಿಷ್ಯದಲ್ಲಿ ಎದುರಾಗುವ ಸೈಬರ್‌ ಸಮಸ್ಯೆ ತಡೆಯಲು ಈಗಲೇ ಪ್ರಮುಖವಾಗಿ ಕೇಂದ್ರದಲ್ಲಿ ಸೈಬರ್‌ ಸೆಕ್ಯೂರಿಟಿ ಸಚಿವಾಲಯ ತೆರೆಯಬೇಕಿದೆ. -ಶುಭಮಂಗಳ, ಸೈಬರ್‌ ತಜ್ಞೆ

ನಕಲಿ ಇ-ಕಾಮರ್ಸ್‌ ವೆಬ್‌ಸೈಟ್‌ಗಳ ವಂಚನೆ ಬಗ್ಗೆ ಇತ್ತೀಚೆಗೆ ಆಗಾಗ್ಗೆ 3-4 ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಯಾವುದೇ ವೆಬ್‌ಸೈಟ್‌ನಲ್ಲಿ ವಸ್ತುಗಳ ಖರೀದಿಗೆ ಪ್ರಮುಖವಾಗಿ ಕ್ಯಾಶ್‌ ಆನ್‌ ಡಿಲಿವರಿ ಮಾಡಿಕೊಳ್ಳಬೇಕು. ಜತೆಗೆ ಬ್ಯಾಂಕ್‌ಗೆ ಸಂಬಂಧಿಸಿದ ಮಾಹಿತಿ ವೆಬ್‌ಸೈಟ್‌ನಲ್ಲಿ ನೋಂದಾಯಿಸಬೇಡಿ. – ಅನೂಪ್‌ ಶೆಟ್ಟಿ, ಡಿಸಿಪಿ ಈಶಾನ್ಯವಿಭಾಗ

 

– ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ! 

Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ

Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

5

Drunk & Drive Case: ಅತಿ ವೇಗದ ಚಾಲನೆ: 522 ಕೇಸ್‌, 1.29 ಲಕ್ಷ ದಂಡ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

1

Puttur: ತಮ್ಮನ ಹ*ತ್ಯೆ ಆರೋಪಿಗೆ ಜಾಮೀನು

9-mudhol

Mudhol: ನನ್ನ ಮೇಲಿನ ಆರೋಪ‌ ನಿರಾಧಾರ: ತಿಮ್ಮಾಪುರ

1

Kundapura: ವೈದ್ಯರ ಮೇಲೆ ಹಲ್ಲೆಗೆ ಯತ್ನ; ಬೆದರಿಕೆ; ದೂರು ದಾಖಲು

fraudd

Hiriydaka: ಆನ್‌ಲೈನ್‌ ಮೂಲಕ ಯುವತಿಗೆ 2.80 ಲಕ್ಷ ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.