ಸೆಕ್ಯೂರಿಟಿ ಗಾರ್ಡ್ ನೇಮಿಸಿಕೊಳ್ಳುವ ಮುನ್ನ ಎಚ್ಚರ!
ನೇಪಾಳಿ ಮೂಲದ ಗ್ಯಾಂಗ್‌ನಿಂದ ಕೃತ್ಯಗಳು ; ಮೋಜಿನ ಬಾಳಿಗಾಗಿ ಮಾಲೀಕರ ಮನೆಯನ್ನೇ ದೋಚುವ ಖದೀಮರು
Team Udayavani, Sep 1, 2021, 2:31 PM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ಹಗಲು ಸೆಕ್ಯೂರಿಟಿ ಗಾರ್ಡ್ ಕೆಲಸ. ರಾತ್ರಿ ಮನೆ, ಬ್ಯಾಂಕ್‌ಗಳಿಗೆ ಕನ್ನ. ಜೀವನೋಪಾಯಕ್ಕಾಗಿ ಬಂದವರು ಕೆಲಸದ ಜತೆಗೆ
ಕಳ್ಳತನದಲ್ಲೂ ತೊಡಗಿದ್ದಾರೆ.
ಇದು “ನೇಪಾಳಿ’ ಗ್ಯಾಂಗ್‌ನ ಮೋಡ್ ಆಫ್ ಅಪೆಂಡಿ. ನೇಪಾಳ ದೇಶದಿಂದ ಸೆಕ್ಯೂರಿಟಿ ಕೆಲಸಕ್ಕಾಗಿ ಬಂದಿರುವ ಸಾವಿರಾರು ಮಂದಿ ಕೆಲಸದ ಜತೆಗೆ ಮನೆ, ಬ್ಯಾಂಕ್‌ಗಳಿಗೆ ಕನ್ನ ಹಾಕುತ್ತಿದ್ದಾರೆ. ಕೃತ್ಯ ಎಸಗಿದ ಕೂಡಲೇ ನೇಪಾಳದಲ್ಲಿ ತಲೆಮರೆಸಿಕೊಳ್ಳುವ ಈ ಮಂದಿ ಒಂದಷ್ಟು ದಿನ ಮೋಜಿನ ಜೀವನ ನಡೆಸಿ ಹಣ ಖಾಲಿಯಾದ ಬಳಿಕ ಮತ್ತೆ ಬೆಂಗಳೂರಿಗೆ ಬಂದು ಬೇರೆಡೆ ಕೆಲಸ ಮಾಡುತ್ತಾರೆ. ಇತ್ತೀಚೆಗೆ ಮನೆಕಳವು, ಫೈನಾನ್ಸ್ ಕಳುವಿಗೆ ಯತ್ನ ಸೇರಿ 10ಕ್ಕೂ ಅಧಿಕ ಮಂದಿ ನೇಪಾಳಿ ಪ್ರಜೆಗಳನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಕೆಲ ವೇಳೆ ಕಳವು
ಮಾಡಲು ಸಂಚು ರೂಪಿಸಿ ಫೈನಾನ್ಸ್, ಬ್ಯಾಂಕ್‌ಗಳಿಗೆ ಭೇಟಿ ನೀಡಿ ಯಾವ ಭಾಗದಲ್ಲಿ ಸಿಸಿ ಕ್ಯಾಮೆರಾಗಳಿವೆ. ಮುಖ್ಯದ್ವಾರ ಎಲ್ಲವನ್ನು ಪರಿಶೀಲಿ
ಸುತ್ತಾರೆ. ಒಂದು ವೇಳೆ ಆ ಸ್ಥಳದಲ್ಲಿ ತಮ್ಮ ನೇಪಾಳಿ ಪ್ರಜೆಯಿದ್ದರೆ, ಆತನಿಗೆ ಹಣದ ಆಮಿಷವೊಡ್ಡಿ ಸ್ಥಳದ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಾರೆ. ನಂತರ ಸರಣಿ ಸರ್ಕಾರಿ ರಜೆಗಳು, ವಾರಾಂತ್ಯ ಸಂದರ್ಭದಲ್ಲಿ ಗೋಡೆ ಕೊರೆದು, ಇಲ್ಲವೇ ನಕಲಿ ಕೀ ಬಳಸಿ ಒಳಪ್ರವೇಶಿಸಿ ಸಿಸಿ ಕ್ಯಾಮೆರಾ, ಅಲರಾಂಗಳನ್ನು ನಿಷ್ಕ್ರಿಯಗೊಳಿಸಿ ಲಕ್ಷಾಂತರ ರೂ. ಹಣ ದೋಚುತ್ತಾರೆ. ಬಳಿಕ ನೇರವಾಗಿ ನೇಪಾಳಕ್ಕೆ ತೆರಳಿ ಮೋಜಿನ
ಜೀವನ ನಡೆಸಿ ಆರೇಳು ತಿಂಗಳ ಬಳಿಕ ಮತ್ತೆ ಬೆಂಗಳೂರಿಗೆ ಬಂದು ಸೆಕ್ಯೂರಿಟಿ ಏಜೆನ್ಸಿಗಳ ಮೂಲಕ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇತ್ತೀಚೆಗೆ ಫೈನಾನ್ಸ್‌ವೊಂದರಲ್ಲಿ ಕಳುವಿಗೆ ಯತ್ನಿಸಿದ್ದ ಇಬ್ಬರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ:ಸುದೀಪ್ ಹುಟ್ಟುಹಬ್ಬಕ್ಕೆ ‘ಚಿನ್ನದ ಹುಡುಗನ’ ವಿಶ್
ನಿಯಮ ಪಾಲನೆ ಆಗುತ್ತಿಲ್ಲ: ಕಳೆದ ನಾಲ್ಕೈದು ವರ್ಷಗಳ ಹಿಂದೆ ನಗರದಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಿಂದ ಸಾಕಷ್ಟು ಕಳವು ಪ್ರಕರಣಗಳು
ದಾಖಲಾಗುತ್ತಿದ್ದವು. ಈ ಸಂಬಂಧ ನಗರ ಆಯುಕ್ತರು, ಸೆಕ್ಯೂರಿಟಿ ಗಾರ್ಡ್ ನೇಮಿಸಿಕೊಳ್ಳುವ ಮೊದಲು ಕಡ್ಡಾಯವಾಗಿ ಆತನ ಪೂರ್ವಪರ ಪರಿಶೀಲಿಸಬೇಕು. ಸೆಕ್ಯೂರಿಟಿ ಏಜೆನ್ಸಿಗಳು ತಮ್ಮ ನೇಮಿಸಿಕೊಳ್ಳುವ ವ್ಯಕ್ತಿಗಳ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಇತರೆ ಮಾಹಿತಿಗಳು ಪಡೆದುಕೊಳ್ಳಬೇಕು. ಮುಖ್ಯವಾಗಿ ಅಪರಾಧ ಹಿನ್ನೆಲೆ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಬೇಕು ಎಂದು ಸೂಚಿಸಿದ್ದರು. ಆದರೆ, ಈ ನಿಯಮ ಪಾಲಿಸುತ್ತಿಲ್ಲ ಎಂದಆರೋಪ ಕೇಳಿ ಬಂದಿದೆ.
ಕಳ್ಳತನಕ್ಕೆ ಪ್ಲಾನ್ ಹೇಗೆ?
ನೇಪಾಳದಿಂದ ಬಂದಿರುವ ಸಾವಿರಾರು ಮಂದಿ ನಗರದ ನಾನಾಕಡೆಗಳಲ್ಲಿ ವಾಸವಾಗಿದ್ದಾರೆ. ಸೆಕ್ಯೂರಿಟಿ ಏಜೆನ್ಸಿ ಅಥವಾ ಪರಿಚಯಸ್ಥರ ಮೂಲಕ ನೇರವಾಗಿ ಉದ್ಯಮಿ, ಅಪಾರ್ಟ್‌ಮೆಂಟ್‌ಗಳು, ರಿಯಲ್ ಎಸ್ಟೇಟ್ ವ್ಯಾಪಾರಸ್ಥರು, ಫೈನಾನ್ಸ್, ಬ್ಯಾಂಕ್‌ಗಳಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ದಿನಕಳೆದಂತೆ ಮನೆ ಮಾಲೀಕರ ವಿಶ್ವಾಸಗಳಿಸಿ ಮನೆಯ ಒಳಗಡೆ ಸುತ್ತಾಡಿ ಯಾವ ಸ್ಥಳದಲ್ಲಿ ಏನಿದೆ ಎಂಬ ಮಾಹಿತಿ
ಪಡೆದುಕೊಳ್ಳುತ್ತಾರೆ. ನಂತರ ಮನೆ ಮಾಲೀಕರು ಯಾವುದಾದರೂ ಊರು ಅಥವಾ ಕಾರ್ಯನಿಮಿತ್ತ ಹೊರಗಡೆ ಹೋದಾಗ ಸಿಸಿ ಕ್ಯಾಮೆರಾ ಗಳಿದ್ದರೆ ಅವುಗಳನ್ನು ನಿಷ್ಕ್ರಿಯಗೊಳಿಸಿ ನಕಲಿ ಬೀಗ ಬಳಸಿ ಮನೆ ದರೋಡೆ ಮಾಡಿ ಮೊಬೈಲ್ ಸ್ವಿಚ್x ಆಫ್ ಮಾಡಿಕೊಂಡು ಪರಾರಿಯಾಗುತ್ತಾರೆ
-ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು
New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್ ಕಸ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.