ಮೂರೇ ವಾರದಲ್ಲಿ ಸಿದ್ಧವಾಗುತ್ತೆ ಸುಂದರ ಮನೆ
Team Udayavani, Jan 19, 2018, 11:23 AM IST
ಬೆಂಗಳೂರು: ಎರಡು ಮಲಗುವ ಕೊಠಡಿ, ಅಡುಗೆ ಕೋಣೆ, ಸ್ನಾನಗೃಹ ಹಾಗೂ ಶೌಚಾಲಯ ಹೊಂದಿರುವ ಮನೆಯೊಂದನ್ನು ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣ ಮಾಡಲು ಕನಿಷ್ಠ 20ರಿಂದ 25 ಲಕ್ಷ ರೂ. ಬೇಕು. ಆದರೆ, ಕೆಇಎಫ್ ಇನ್‌ಫ್ರಾ ಸಂಸ್ಥೆ ಅದೇ ಮನೆಯನ್ನು ಆಫ್ಸೈಟ್ ಉತ್ಪಾದನಾ ತಂತ್ರಜ್ಞಾನ ಬಳಿಸಿ ಕೇವಲ 6 ಲಕ್ಷದಲ್ಲಿ ನಿರ್ಮಿಸಿ ಕೊಡಲಿದೆ.
2 ರಿಂದ 3 ವಾರದೊಳಗೆ ಮನೆ ಸಿದ್ಧವಾಗಲಿದೆ. ಉತ್ಪಾದನ ತ್ಯಾಜ್ಯವೂ ಕಡಿಮೆ ಇರುತ್ತದೆ. ಮನೆ ಮಾತ್ರವಲ್ಲ ಆಸ್ಪತ್ರೆ, ಖಾಸಗಿ ಸಂಸ್ಥೆಗಳ ಕಟ್ಟಡ, ಶಾಲೆಗಳನ್ನು ನಿರ್ಮಾಣ ಮಾಡುತ್ತಾರೆ. ನಿರ್ಮಾಣ ಕಾಮಗಾರಿ ನಿವೇಶನದಲ್ಲಿ ನಡೆಯುವುದಿಲ್ಲ. ಬದಲಾಗಿ, ತಮಿಳುನಾಡಿನ ಕೃಷ್ಣಗಿರಿಯಲ್ಲಿರುವ ಕೆಇಎಫ್ ಇನ್‌ಫ್ರಾ ಸಂಸ್ಥೆಯ ಉತ್ಪಾದನಾ ಘಟಕದಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕೆ ಬೇಕಾದ ಸಿದ್ಧಪಡಿಸಿದ ವಸ್ತುಗಳನ್ನು, ದೊಡ್ಡದಾದ ವಾಹನದ ಮೂಲಕ ಸ್ಥಳಕ್ಕೆ ತಂದು ಜೋಡಣೆ ಮಾಡುತ್ತಾರೆ.
ಇಂದಿರಾ ಕ್ಯಾಂಟೀನ್ ಕೊಠಡಿ ನಿರ್ಮಾಣ: ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲಿ 175 ಇಂದಿರಾ ಕ್ಯಾಂಟೀನ್ ಕಟ್ಟಡ ಹಾಗೂ 20 ಅಡಿಗೆ ಕೊಠಡಿಯನ್ನು ನಿರ್ಮಿಸಲಾಗಿದೆ. ಹಾಗೆಯೇ ರಾಜ್ಯಾದ್ಯಂತ 262 ಇಂದಿರಾ ಕ್ಯಾಂಟೀನ್ ಹಾಗೂ ಅಡುಗೆ ಕೋಣೆಯನ್ನು ಸದ್ಯದಲ್ಲೇ ನಿರ್ಮಾಣ ಮಾಡಲಿದೆ. ಇನ್ಫೋಸಿಸ್ ಎರಡನೇ ಹಂತದ ಕಟ್ಟಡ ಪೂರ್ಣಗೊಳಿಸಿದೆ.
ಗುಡಿಸಲು ಮುಕ್ಕ ಯೋಜನೆಗೆ ಪೂರಕ: ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆಇಎಫ್ ಇನ್‌ಫ್ರಾ ಮತ್ತು ಕೆಇಎಫ್ ಹೋಲ್ಡಿಂಗ್ಸ್‌ನ ಅಧ್ಯಕ್ಷ ಫೈಜಲ್ ಇ. ಕೊಟ್ಟಿಕೊಲೊನ್, ವಿದೇಶಗಳಲ್ಲಿ ಇಂತಹ ತಂತ್ರಜ್ಞಾನವನ್ನು ಈಗಾಗಲೇ ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಗುಡಿಸಲು ಮುಕ್ತ ಭಾರತದ ಯೋಜನೆಗೆ ಈ ವ್ಯವಸ್ಥೆ ಪುರಕವಾಗಿದೆ.
ಮನೆ ಹಾಗೂ ಕಟ್ಟಡಕ್ಕೆ ಬೇಕಾದ ಕಂಬಿಗಳು, ಗೋಡೆ, ಶೌಚಾಲಯ, ಸ್ನಾನಗೃಹ, ಫೈಬರ್, ಗ್ಲಾಸ್ ಇತ್ಯಾದಿ ಎಲ್ಲವನ್ನು ಉತ್ಪಾದನಾ ಘಟಕದಲ್ಲಿ ಸಿದ್ಧಪಡಿಸಿ, ವಾಹನದ ಮೂಲಕ ನಿವೇಶನದ ಜಾಗಕ್ಕೆ ಕೊಂಡೊಯ್ಯಲಾಗುತ್ತದೆ. ಅತ್ಯಂತ ಕಡಿಮೆ ಸಮಯದಲ್ಲಿ ಅದರ ಜೋಡಣೆ ಮಾಡುತ್ತೇವೆ. ಸುರಕ್ಷತೆ ಹಾಗೂ ಭದ್ರತೆಗೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ನೀಡುತ್ತೇವೆ. ಸ್ಥಳೀಯ ಸಂಸ್ಥೆಯಿಂದಲೂ ಅನುಮತಿ ಪಡೆದಿದ್ದೇವೆ ಎಂದರು.
ಸಂಸ್ಥೆಯಿಂದ ಕೇರಳದ ಸರ್ಕಾರಿ ಶಾಲೆಗಳನ್ನು ಇದೇ ಮಾದರಿಯಲ್ಲಿ ನಿರ್ಮಾಣ ಮಾಡುತ್ತಿದ್ದೇವೆ. ಈಗಾಗಲೇ ಒಂದು ಶಾಲೆಯನ್ನು ನಿರ್ಮಾಣ ಮಾಡಿದ್ದೇವೆ. 2021ರ ವೇಳೆಗೆ 100 ಶಾಲೆಗಳ ನಿರ್ಮಾಣದ ಗುರಿ ಹೊಂದಿದ್ದೇವೆ. ಕರ್ನಾಟಕದ ಸರ್ಕಾರಿ ಶಾಲೆಯನ್ನು ಇದೇ ಮಾದರಿಯಲ್ಲಿ ನಿರ್ಮಿಸುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು. ಸಂಸ್ಥೆಯ ಸಹ ಸಂಸ್ಥಾಪಕಿ ಹಾಗೂ ಉಪಾಧ್ಯಕ್ಷೆ ಶಬಾನಾ ಫೈಜಲ್ ಇತರರಿದ್ದರು.
ತಮಿಳುನಾಡಿನ ಕೃಷ್ಣಗಿರಿಯಲ್ಲಿ 42 ಎಕರೆ ಜಾಗದಲ್ಲಿ 650 ಕೋಟಿ ವೆಚ್ಚದಲ್ಲಿ ಉತ್ಪಾದನಾ ಘಟಕ ನಿರ್ಮಾಣ ಮಾಡಿದ್ದೇವೆ. ಬೆಂಗಳೂರಿನ ಕೃಷ್ಣರಾಜಪುರದಲ್ಲಿ 50 ಲಕ್ಷ ವೆಚ್ಚದಲ್ಲಿ ಈಜುಕೊಳ ಹೊಂದಿರುವ ಮನೆಯನ್ನು 90 ದಿನದಲ್ಲಿ ನಿರ್ಮಿಸಿದ್ದೇವೆ. ಲಕ್ನೋದಲ್ಲಿ ಶಾಪಿಂಗ್ ಮಾಲ್ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದೆ. ದೆಹಲಿ, ಹೈದರಬಾದ್ ಘಟಲ ತೆರೆಯುವ ಯೋಜನೆ ಇದೆ.
-ಫೈಜಲ್ ಇ. ಕೊಟ್ಟಿಕೊಲೊನ್, ಕೆಇಎಫ್ ಇನ್‌ಫ್ರಾ,ಹೋಲ್ಡಿಂಗ್ಸ್‌ನ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.