ಮಹಿಳೆಯಿಂದ ಸುಂದರ ಸಂಸಾರ
Team Udayavani, Jul 3, 2018, 12:18 PM IST
ಬೆಂಗಳೂರು: ಸುಂದರ ಸಂಸಾರ ಮತ್ತು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಅತಿ ಮುಖ್ಯ ಎಂದು ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಪ್ರೊ.ಪದ್ಮಶೇಖರ್ ಅಭಿಪ್ರಾಯಪಟ್ಟರು. ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದಿಂದ ಸೋಮವಾರ ಜ್ಞಾನಭಾರತಿ ಆವರಣದ ಪ್ರೊ.ಕೆ.ವೆಂಕಟಗಿರಿಗೌಡ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಮಗಳು’ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ತಾಯಿ, ಮಗಳು, ಅಕ್ಕ, ತಂಗಿ ಹೀಗೆ ನಾನಾ ರೂಪದಲ್ಲಿ ಮಹಿಳೆ ಸಮಾಜ ಹಾಗೂ ಸಂಸಾರದಲ್ಲಿ ಸೇವೆ ಸಲ್ಲಿಸುತ್ತಾಳೆ. ಮಹಿಳೆಯ ಮೇಲಿನ ದೌರ್ಜನ್ಯ ಸಂಪೂರ್ಣ ನಿಲ್ಲಬೇಕು. ಹೆಣ್ಣು ಸಂಸಾರದ ಕಣ್ಣು, ಸಮಾಜದ ಸಂಪತ್ತು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಹೆಣ್ಣು ಮಕ್ಕಳು ಹುಟ್ಟಿದಾಗ ಉಂಟಾಗುವ ತಿರಸ್ಕಾರ ಭಾವನೆ ದೂರಾಗಬೇಕು ಎಂದರು.
ಐಜಿಪಿ ಡಿ.ರೂಪಾ, ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್, ಕುಲಸಚಿವ ಪ್ರೊ.ಬಿ.ಕೆ.ರವಿ, ಮೌಲ್ಯಮಾಪನ ಕುಲಸಚಿವ ಪ್ರೊ.ಸಿ.ಶಿವರಾಜ ಮೊದಲಾದವರು ಉಪಸ್ಥಿರಿದ್ದರು. ವಿವಿಯಲ್ಲಿ ಕಾರ್ಯ ನಿರ್ವಸುತ್ತಿರುವ ಬೋಧಕರಾದ ಡಾ.ಗೋಮತಿ ದೇವಿ, ಡಾ.ಹಸೀನ್ ತಾಜ್, ಡಾ.ಕೆ.ಎಸ್.ವೈಶಾಲಿ, ಡಾ.ಎನ್.ನಂದಿನಿ,
ಡಾ.ಬೇಲಜೂಟ್ಸೆ, ಡಾ.ಹಂಸೀನಿ ನಾಗೇಂದ್ರ, ಡಾ.ಎಂ.ಕೆ.ಕೋಕಿಲಾ, ಡಾ.ಬಿ.ಎನ್. ಮೀರಾ, ಡಾ.ಟಿ.ಶರ್ಮಿಳಾ ಬೋಧಕೇತರ ವರ್ಗದವರಾದ ಸುನಂದಮ್ಮ ಮತ್ತು ಸಂಗಮಿತ್ರ ಸೇರಿ ಸ್ನಾತಕೋತ್ತರ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.