ಬೆಳಗಾವಿಯಲ್ಲಿ ಪಕ್ಷೇತರರದ್ದೇ ಮೇಲುಗೈ
Team Udayavani, Sep 4, 2018, 6:20 AM IST
ಬೆಳಗಾವಿ: ಜಿಲ್ಲೆಯಲ್ಲಿ ಎರಡು ನಗರಸಭೆ, 10 ಪುರಸಭೆ ಮತ್ತು 2 ಪ.ಪಂ.ಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷೇತರರು ಅಧಿಕ ಸ್ಥಾನಗಳಲ್ಲಿ ಜಯಗಳಿಸಿ ಗಮನ ಸೆಳೆದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ತಲಾ ನಾಲ್ಕು ಕಡೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿವೆ.
14 ನಗರ ಸ್ಥಳೀಯ ಸಂಸ್ಥೆಗಳ 343 ವಾರ್ಡುಗಳ ಪೈಕಿ 14 ಕಡೆಗಳಲ್ಲಿ ಅವಿರೋಧ ಆಯ್ಕೆ ನಡೆದಿತ್ತು. ಒಟ್ಟಾರೆ
ಫಲಿತಾಂಶದಲ್ಲಿ ಪಕ್ಷೇತರ ಅಭ್ಯರ್ಥಿಗಳು 144 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.
ಬಿಜೆಪಿಯ 104 ಅಭ್ಯರ್ಥಿಗಳು ಜಯಗಳಿಸಿ 2ನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ 85 ಸ್ಥಾನಗಳಿಸಿ 3ನೇ ಸ್ಥಾನಕ್ಕೆ
ತೃಪ್ತಿಪಟ್ಟಿದೆ. ಜೆಡಿಎಸ್ ಅಭ್ಯರ್ಥಿಗಳು ಕೇವಲ 10 ಕಡೆ ಮಾತ್ರ ಜಯಗಳಿಸಿ ಮುಖಭಂಗ ಅನುಭವಿಸಿದ್ದಾರೆ.
ಸಂಕೇಶ್ವರ ಪುರಸಭೆ ಹಾಗೂ ನಿಪ್ಪಾಣಿ ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಆಗಿದೆ. ನಾಲ್ಕು ಕಡೆ ಪಕ್ಷೇತರರು ಅಧಿಕ ಸಂಖ್ಯೆಯಲ್ಲಿ ಜಯಗಳಿಸಿ ಅಧಿಕಾರ ಹಿಡಿಯುತ್ತಿದ್ದಾರೆ. ಗೋಕಾಕ ನಗರಸಭೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಬೆಂಬಲಿತ ಗುಂಪು ಮೇಲುಗೈ ಸಾಧಿಸಿದೆ. ಅದೇ ಕೊಣ್ಣೂರ ಪುರಸಭೆಯಲ್ಲಿ ಸಹ ರಮೇಶ ಜಾರಕಿಹೊಳಿ ಗುಂಪು ಮತ್ತೆ ಅಧಿಕಾರಕ್ಕೆ ಬಂದಿದೆ.
ಚಿಕ್ಕೋಡಿ ಪುರಸಭೆಯಲ್ಲಿ ಬಿಜೆಪಿ ಬೆಂಬಲಿತ ಗುಂಪು ಅಧಿಕಾರ ಹಿಡಿದಿದೆ. ಕಳೆದ ಬಾರಿ ಇಲ್ಲಿ ಕಾಂಗ್ರೆಸ್ ಗುಂಪು ಅಧಿಕಾರ ನಡೆಸಿತ್ತು. ಖಾನಾಪುರದಲ್ಲಿ ಸಹ ಪಕ್ಷೇತರರ ಗುಂಪು ಮರಳಿ ಅಧಿಕಾರ ಹಿಡಿಯಲಿದೆ. ಇಲ್ಲಿ ಕಾಂಗ್ರೆಸ್ ಹೆಸರಿನಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಬಿಜೆಪಿ ಕೇವಲ ಮೂರು ಕಡೆ ಮಾತ್ರ ಸ್ಪರ್ಧೆ ಮಾಡಿದ್ದು, ಎಲ್ಲರಲ್ಲೂ ಸೋತಿದೆ.
ನಿಪ್ಪಾಣಿ ನಗರಸಭೆಯಲ್ಲಿ ಯಾರಿಗೂ ಸ್ಪಷ್ಟಬಹುಮತ ಬರದೇ ಅತಂತ್ರ ಸ್ಥಿತಿ ನಿರ್ಮಾಣ ಆಗಿದೆ. ಒಟ್ಟು 31 ಸ್ಥಾನಗಳ
ಪೈಕಿ 13 ಸ್ಥಾನಗಳಿಸಿ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿ ಆರು ಸ್ಥಾನಗಳಿಸಿರುವ ಪಕ್ಷೇತರರ ಮೇಲೆ ಅವಲಂಬಿಸುವಂತಾಗಿದೆ. ಪಕ್ಷೇತರರಲ್ಲಿ ಕೆಲವರು ಬಿಜೆಪಿ ಬೆಂಬಲಿತರಾಗಿರುವುದರಿಂದ ಅಧಿಕಾರ ರಚನೆಗೆ ಯಾವುದೇ ಸಮಸ್ಯೆ ಕಾಣುತ್ತಿಲ್ಲ. ಸಂಕೇಶ್ವರ ಪುರಸಭೆಯಲ್ಲೂ ಅತಂತ್ರ ಸ್ಥಿತಿ ನಿರ್ಮಾಣ ಆಗಿದೆ. ಒಟ್ಟು 23 ಸದಸ್ಯರ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 11 ಸ್ಥಾನ ಗಳಿಸಿದ್ದು, ಒಂದು ಕಡೆ ಜಯಗಳಿಸಿರುವ ಪಕ್ಷೇತರ ಅಭ್ಯರ್ಥಿನಿರ್ಣಾಯಕರಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಸಹ ಪಕ್ಷೇತರರೇ ಮೇಲುಗೈ ಸಾಧಿಸಿದ್ದು, ಏಳು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರಾಗಿ ಅಧಿಕಾರ ರಚನೆ ಮಾಡಿದ್ದರು. ಬಿಜೆಪಿ ಐದು ಕಡೆ ಬಹುಮತ ಪಡೆದು ಅಧಿಕಾರ ಮಾಡಿದ್ದರೆ ಕಾಂಗ್ರೆಸ್ ಎರಡು ಕಡೆ ಬಹುಮತ ಗಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.