![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 27, 2021, 11:17 AM IST
ಬೆಂಗಳೂರು: “ಬೆಡ್ ಇದೆ ಬನ್ನಿ ಎಂದು ನಮ್ಮ ತಂದೆಯನ್ನು ಚಿಕಿತ್ಸೆಗೆ ದಾಖಲಿಸಿ ಕೊಂಡಿದ್ದರು. ನಮ್ಮ ತಂದೆ ಧೂಮಪಾನ, ಮದ್ಯಪಾನ ಮಾಡುತ್ತಿರಲಿಲ್ಲ.ಶುಗರ್, ಬಿಪಿ ಯಾವುದೇ ಕಾಯಿಲೆ ಇರಲಿಲ್ಲ. ತುಂಬಾ ಆರೋಗ್ಯವಾಗಿದ್ದರು. ಆದರೆ, ವೈದ್ಯರು ದಿಢೀರನೆ ಕರೆ ಮಾಡಿ ನಿಮ್ಮ ತಂದೆ ಸಾವನ್ನಪ್ಪಿದ್ದಾರೆ ಎಷ್ಟು ಸುಲಭವಾಗಿ ಹೇಳಿದರು ಸರ್.. ಆಸ್ಪತ್ರೆಯಲ್ಲೇ ನಮ್ಮಪ್ಪನ್ನು ಸಾಯಿಸಿಬಿಟ್ಟರು. ಅವರೇ ಏನೋ ಮಾಡಿದ್ದಾರೆ. ನಮ್ಮ ಅಪ್ಪ ಸಾಯುವಂತಹ ಮನುಷ್ಯನೇ ಅಲ್ಲ ಸರ್..’
ಹೀಗೆ.. ಕೋವಿಡ್ ಸೋಂಕಿನಿಂದ ತನ್ನ ತಂದೆಯನ್ನು ಕಳೆದುಕೊಂಡ ಮಗಳು ನಗರದ ಸುಮನಹಳ್ಳಿ ಚಿತಾಗಾರದ ಬಳಿ ಸೋಮವಾರ ತಂದೆಯನ್ನುನೆನೆದು ಕಣ್ಣೀರಿಟ್ಟರು. ಆ ಆಸ್ಪತ್ರೆಗೆ ದಾಖಲಿಸಬಾರದಿತ್ತು:”ಕಳೆದ ವಾರ ನಮ್ಮ ತಂದೆಗೆ ಕೋವಿಡ್ ದೃಢವಾಗಿತ್ತು. ಖಾಸಗಿಆಸ್ಪತ್ರೆಯಲ್ಲಿ ಒಂದು ದಿನಕ್ಕೆ 20 ಸಾವಿರ ರೂ. ಹಣ ಕೇಳಿದರು. ಅದಕ್ಕೆ ನಮ್ಮ ತಂದೆ, ಖಾಸಗಿ ಆಸ್ಪತ್ರೆ ಬೇಡ. ಸರ್ಕಾರಿ ಆಸ್ಪತ್ರೆಯಲ್ಲೇ ಉತ್ತಮವಾಗಿ ಚಿಕಿತ್ಸೆ ಕೊಡುತ್ತಾರೆ ಎಂದರು. ಬಳಿಕ ಸರ್ಕಾರಿ ಆಸ್ಪತ್ರೆಯಲ್ಲಿ ರ್ಯಾಪಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂತು. ಬಳಿಕ ಬಿಯು ನಂಬರ್ ಕೊಟ್ಟರು. ಕೂಡಲೇ ಕರೆ ಮಾಡಿ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಬೆಡ್ ಇದೆ. ನಿಮ್ಮ ತಂದೆಗೆ ಆಕ್ಸಿಜನ್ ಅವಶ್ಯಕತೆ ಇದೆ ಎಂದು ಹೇಳಿದರು.
ಹೀಗಾಗಿ, ಎಲ್ಲೂ ಬೆಡ್ ಸಿಗಲ್ಲ ಎಂದು ದಾಖಲಿಸಿ, ತಪ್ಪುಮಾಡಿಬಿಟ್ಟೆವು ಸರ್..’ ಎಂದು ಕಣ್ಣೀರಾದರು.2 ದಿನವಾದರೂ ಚಿಕಿತ್ಸೆ ನೀಡಿಲ್ಲ: “ಆಸ್ಪತ್ರೆ ಗೆ ದಾಖಲಿಸಿದ ಮೊದಲ ದಿನ ನಮ್ಮ ತಂದೆಗೆ ಕರೆ ಮಾಡಿದ್ದೆ. ಆಗ ಅಪ್ಪ, ನನಗೆ ಏನೂ ಚಿಕಿತ್ಸೆ ಕೊಟ್ಟಿಲ್ಲ. ಬರೀ ಒಂದು ಮಾತ್ರೆ, ಸಿರಫ್ ಕೊಟ್ಟರು. ವೈದ್ಯರು ಬಂದು ನೋಡಿಲ್ಲ ಎಂದರು.ಬಳಿಕ ಎರಡು ದಿನ ಆದ ಮೇಲೆ ವೈದ್ಯರು ತಂದೆಗೆ ಚಿಕಿತ್ಸೆನೀಡಿದ್ದಾರೆ. ವೈದ್ಯರು, ಮಂಗಳವಾರ ಡಿಸ್ಚಾರ್ಜ್‌ಮಾಡುತ್ತೇವೆ ಎಂದಿದ್ದರು ಸರ್..’ ಎಂದು ತಮ್ಮ ಅಳಲು ತೋಡಿಕೊಂಡರು.
ಚಿಕಿತ್ಸೆ ಕೊಡದೇ ಸಾಯಿಸಿದ್ದಾರೆ: “ಭಾನುವಾರ ಸಂಜೆ 6ಗಂಟೆಗೆ ತಂದೆಗೆ ಕರೆ ಮಾಡಿದಾಗ ನರ್ಸ್ ಕರೆ ಸ್ವೀಕರಿಸಿ, ನಿಮ್ಮ ತಂದೆ ಮಾಸ್ಕ್ ಹಾಕಿಕೊಳ್ಳಿ ಎಂದರೆ ಹಾಕುತ್ತಿಲ್ಲ.ಆಕ್ಸಿಜನ್ ಲೆವೆಲ್ ಕಡಿಮೆಯಾಗಿದೆ ಎಂದು ಕರೆ ಕಟ್‌ಮಾಡಿದರು. ಬಳಿಕ ಸೋಮವಾರ ಬೆಳಗ್ಗೆ 10 ಗಂಟೆಗೆಆಸ್ಪತ್ರೆಯಿಂದ ಕರೆ ಮಾಡಿ ನಿಮ್ಮ ತಂದೆ ಮೃತಪಟ್ಟಿದ್ದಾರೆಎಂದು ಎಷ್ಟು ಸುಲಭವಾಗಿ ಹೇಳಿದರು. ಚಿಕಿತ್ಸೆ ಕೊಡದೇ ಅವರೇ ಸಾಯಿಸಿದ್ದಾರೆ ಸರ್..’ ಗೋಳಾಡಿದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.