Bengaluru: ಭಿಕ್ಷಾಟನೆಗಾಗಿ ಯುವಕನ ಮರ್ಮಾಂಗ ಕತ್ತರಿಸಿದ ಮಂಗಳಮುಖಿಯರ ಗ್ಯಾಂಗ್!
3 ವರ್ಷಗಳ ಕಾಲ ಭಿಕ್ಷಾಟನೆ ಮಾಡಿದ ಯುವಕ.. ಪ್ರತಿದಿನ 2 ಸಾವಿರ ರೂ..!!!
Team Udayavani, Aug 21, 2024, 8:48 AM IST
ಬೆಂಗಳೂರು: ಯುವಕನೊಬ್ಬನನ್ನು ಮಂಗಳ ಮುಖಿಯಾಗಿ ಪರಿವರ್ತಿಸಲು ಇಂಜೆಕ್ಷನ್ ನೀಡಿ ಪ್ರಜ್ಞೆ ತಪ್ಪಿಸಿ ಆತನ ಮರ್ಮಾಂಗಕ್ಕೆ ಹಾನಿ ಮಾಡಿದ ಆರೋಪದಡಿ ಐವರು ಮಂಗಳಮುಖಿಯರ ವಿರುದ್ಧ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ.ಜೆ.ಹಳ್ಳಿ ನಿವಾಸಿ 18 ವರ್ಷದ ಯುವಕ ನೀಡಿದ ದೂರಿನ ಮೇರೆಗೆ ಮಂಗಳಮುಖಿಯರಾದ ಚಿತ್ರಾ, ಪ್ರೀತಿ, ಕಾಜಲ್,ಅಶ್ವಿನಿ, ಮುಗಿಲ ಎಂಬುವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಡಿ.ಜೆ.ಹಳ್ಳಿಯಲ್ಲಿ ವಾಸವಾಗಿದ್ದ ಯುವಕ ಅಂಬೇಡ್ಕರ್ ಕಾಲೇಜು ಸಮೀಪದ ಟೀ
ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಅದೇ ಟೀ ಅಂಗಡಿಗೆ ಬರುತ್ತಿದ್ದ ಮಂಗಳಮುಖಿಯರು ಯುವಕನಿಗೆ ತಮ್ಮೊಂದಿಗೆ ಬಂದರೆ, ಒಳ್ಳೆಯ ಮನೆಗೆ ಸೇರಿಸುತ್ತೇವೆ. ಆಗ ಒಳ್ಳೆಯ ಸಂಪಾದನೆ ಮಾಡಬಹುದು ಎಂದು ಪುಸಲಾಯಿಸಿದ್ದಾರೆ.
ಆರಂಭದಲ್ಲಿ ಯುವಕ ಆರೋಪಿಗಳ ಜತೆ ಹೋಗಲು ನಿರಾಕರಿಸಿದ್ದಾನೆ. ನಂತರ ಯುವಕನಿಗೆ ಬೆದರಿಸಿದ ಆರೋಪಿಗಳು, ಟ್ಯಾನರಿ ರಸ್ತೆಯಲ್ಲಿರುವ ತಮ್ಮ ಮನೆಗೆ ಕರೆದೊಯ್ದು ಕೆಲ ದಿನಗಳ ಕಾಲ ಗೃಹ ಬಂಧನದಲ್ಲಿ ಇರಿಸಿದ್ದರು. ಜತೆಗೆ ಆತನ ಮನೆಯವರನ್ನು ಹತ್ಯೆ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿ, ಆತನಿಂದ ಭಿಕ್ಷಾಟನೆ ಮಾಡಿಸಿದ್ದಾರೆ.
ಇದನ್ನೂ ಓದಿ: National Award; ಗೆದ್ದ ಬೆನ್ನಲ್ಲೇ ಬಾಲಿವುಡ್ ಭಾರತವನ್ನು ಕೆಟ್ಟದಾಗಿ ತೋರಿಸಿದೆ ಎಂದ ರಿಷಬ್
ಹೀಗೆ 3 ವರ್ಷಗಳ ಕಾಲ ಭಿಕ್ಷಾಟನೆ ಮಾಡಿದ ಯುವಕ ಆರೋಪಿಗಳಿಗೆ ಪ್ರತಿದಿನ 2 ಸಾವಿರ ರೂ. ತಂದು ಕೊಟ್ಟಿದ್ದಾನೆ. ಇನ್ನೂ ಹೆಚ್ಚು ಸಂಪಾದಿಸಬೇಕು, ನೀನು ಈಗ ಗಂಡು ಆಗಿರುವಾಗಲೇ ದಿನಕ್ಕೆ 2 ಸಾವಿರ ದುಡಿಯುತ್ತಿದ್ದೀಯಾ, ಇನ್ನು ಹೆಣ್ಣಾದರೆ ಹೆಚ್ಚು ಸಂಪಾದಿಸಬಹುದು? ಎಂದು ಲಿಂಗ ಪರಿವರ್ತನೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ಯುವಕ ಒಪ್ಪದಿದ್ದಾಗ ಆತನನ್ನು ಹಿಂಸಿಸಿ ಅಮಲು ಬರುವ
ಇಂಜೆಕ್ಷನ್ ಕೊಟ್ಟು ಯುವಕನ ಮರ್ಮಾಂಗಕ್ಕೆ ಹಾನಿ ಮಾಡಿದ್ದಾರೆ. ಕೆಲ ಹೊತ್ತಿನ ಬಳಿಕ ಯುವಕನಿಗೆ ಎಚ್ಚರವಾದಾಗ ಆತನ ಮರ್ಮಾಂಗ ಕತ್ತರಿಸಿ, ಪೈಪ್ ಅಳವಡಿಸಿರುವುದು ಕಂಡು ಬಂದಿದೆ. ಬಳಿಕ ಮನೆಯಲ್ಲಿ ಪೂಜೆ ಮಾಡಿಸಿ “ಲೈಂಗಿಕ ಕಾರ್ಯಕರ್ತಳಾಗಿ ಕೆಲಸ ಮಾಡು’ ಎಂದು ಪೀಡಿಸಿದ್ದಾರೆ.ಅಲ್ಲದೆ, 5 ಲಕ್ಷ ರೂ. ತಂದುಕೊಡು ಎಂದು ಬೆದರಿಸಿದ್ದಾರೆ. ಅದರಿಂದ ಯುವಕ ಅವರಿಂದ ತಪ್ಪಿಸಿಕೊಂಡು ಬಂದು ಐವರ
ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.