Bengaluru; ಹಲವರ ಮೇಲೆ ದಾಳಿ: ಭೀತಿ ಮೂಡಿಸಿದ್ದ ಚಿರತೆ ಗುಂಡಿಗೆ ಬಲಿ
ಅರಣ್ಯ ಇಲಾಖೆ ಭಾರೀ ಕಾರ್ಯಾಚರಣೆ ನಡೆಸಿತ್ತು...
Team Udayavani, Nov 1, 2023, 4:17 PM IST
ಬೆಂಗಳೂರು: ಬೊಮ್ಮನಹಳ್ಳಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಪ್ರತ್ಯಕ್ಷವಾಗುತ್ತ ಜನರಲ್ಲಿ ಭೀತಿ ಮೂಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬಂದಿ ನಡೆಸಿದ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಗುಂಡೇಟು ತಗುಲಿ ಮೃತಪಟ್ಟಿದೆ.
ಕಳೆದ ಮೂರು ದಿನಗಳಲ್ಲಿ ಹಲವೆಡೆ ಪ್ರತ್ಯಕ್ಷವಾಗಿ ಭೀತಿ ಮೂಡಿಸಿ ಜನರನ್ನು ಕಂಗಾಲಾಗಿಸಿತ್ತು. ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದರೂ ಸುಲಭದಲ್ಲಿ ಬಲೆಗೆ ಬಿದ್ದಿರಲಿಲ್ಲ. ಬುಧವಾರ ಬೆಳಗ್ಗೆ ಅರಿವಳಿಕೆ ಚುಚ್ಚುಮದ್ದು ನೀಡುತ್ತಿದ್ದ ವೈದ್ಯ ಕಿರಣ್ ಅವರ ಕತ್ತಿನ ಭಾಗಕ್ಕೆ ಪರಚಿತ್ತು, ಲೆಪರ್ಡ್ ಟಾಸ್ಕ್ಫೋರ್ಸ್ ಶಾರ್ಪ್ ಶೂಟರ್ ಧನ್ರಾಜ್ ಮೇಲೆಯೂ ಎರಗಿತ್ತು, ಅವರ ಕಾಲು ಮತ್ತು ಭುಜಕ್ಕೆ ಗಾಯವಾಗಿದೆ. ಕಾರ್ಯಾಚರಣೆಗೆ ನೆರವಾಗುತ್ತಿದ್ದ ಬಿಬಿಎಂಪಿ ಸಿಬಂದಿ ಮಹೇಶ್ ಅವರಿಗೂ ಪರಚಿ ಕಾಲಿಗೆ ಗಾಯಮಾಡಿತ್ತು.
ಕೊನೆಗೂ ರಣತಂತ್ರ ನಡೆಸಿದ ಅರಣ್ಯ ಇಲಾಖೆ ಸಿಬಂದಿಗಳು ಮೈಸೂರು ಲೆಪರ್ಡ್ ಟಾಸ್ಕ್ ಫೋರ್ಸ್ ನೆರವಿನಿಂದ ಕಾರ್ಯಾಚರಣೆ ನಡೆಸಿ ಥರ್ಮಲ್ ಡ್ರೋನ್ ಬಳಸಿ ಕೂಡ್ಲುಗೇಟ್ ಬಳಿ ಪಾಳುಬಿದ್ದ ಕಟ್ಟಡದಲ್ಲಿದ್ದ ಚಿರತೆಯನ್ನು ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದಿದ್ದರು. ಈ ವೇಳೆ ಗುಂಡು ಹಾರಿಸಲಾಗಿದ್ದು ಗಾಯಗೊಂಡಿದ್ದ ಚಿರತೆ ಯನ್ನು ಬೋನ್ ನಲ್ಲಿ ಹಾಕಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರ ಮಾಡಲಾಗಿತ್ತು. ಅಲ್ಲಿ ಸಾವನ್ನಪ್ಪಿದೆ ಎಂದು ವರದಿಯಾಗಿದೆ.
ಅರಣ್ಯ ಇಲಾಖೆ ಡಿಸಿಎಫ್ ರವೀಂದ್ರ ಅವರು ಬೆಳಗ್ಗೆಯಿಂದಲೂ ಕಾರ್ಯಚರಣೆ ಸ್ಥಳದಲ್ಲಿದ್ದು ಮಾರ್ಗದರ್ಶನ ನೀಡಿದ್ದರು. ಶಾಸಕ ಶಾಸಕ ಸತೀಶ್ ರೆಡ್ಡಿ ಸ್ಥಳಕ್ಕೆ ಆಗಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.