Auto rickshaw: ನಗರದ ರಸ್ತೆಗಿಳಿಯಲಿವೆ ಮತ್ತೆ ಲಕ್ಷ ಆಟೋ


Team Udayavani, Jul 8, 2024, 10:37 AM IST

Auto rickshaw: ನಗರದ ರಸ್ತೆಗಿಳಿಯಲಿವೆ ಮತ್ತೆ ಲಕ್ಷ ಆಟೋ

ಬೆಂಗಳೂರು: ಆಟೋ ಬಾಡಿಗೆ ದರ ಪರಿಷ್ಕರಣೆ ಮಾಡುವಂತೆ ಚಾಲಕರು ಈಚೆಗೆ ಒತ್ತಾಯ ಮಾಡಿದ್ದರು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಸರ್ಕಾರ ಆಟೋಗಳ ಸಂಖ್ಯೆಯನ್ನೇ ಹೆಚ್ಚಳ ಮಾಡಲು ತೀರ್ಮಾನಿಸಿದೆ. ಅದರಂತೆ ನಗರದಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಒಂದು ಲಕ್ಷ ಆಟೋಗಳು ರಸ್ತೆಗಿಳಿಯಲಿವೆ!

ಈಗಾಗಲೇ 1.55 ಲಕ್ಷ ಆಟೋಗಳಿದ್ದು, ಇನ್ನೂ ಒಂದು ಲಕ್ಷ ಆಟೋಗಳಿಗೆ ಸಾರಿಗೆ ಇಲಾಖೆ ಪರ್ಮಿಟ್‌ ನೀಡಲು ನಿರ್ಧರಿಸಿದೆ. ಇದರೊಂದಿಗೆ ನಗರದಲ್ಲಿ ಆಟೋಗಳ ಸಂಖ್ಯೆ ಈಗಿರುವುದಕ್ಕಿಂತ ಶೇ.65ರಷ್ಟು ಹೆಚ್ಚಳ ಆಗಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಂದಿನ 5 ವರ್ಷಗಳಲ್ಲಿ ಈ ಒಂದು ಲಕ್ಷ ಹೊಸ ಆಟೋರಿಕ್ಷಾ ಪರ್ಮಿಟ್‌ ನೀಡಲಾಗುವುದು. ಇದರಿಂದ ಪ್ರಸ್ತುತ ಇರುವ 1,55,000 ಆಟೋರಿಕ್ಷಾ ಪರ್ಮಿಟ್‌ ಮಿತಿ 2,55,000ಕ್ಕೆ ಹೆಚ್ಚಳ ಆಗಲಿದೆ. ಈ ಸಂಬಂಧ ಶನಿವಾರ ಅಧಿಸೂಚನೆ ಹೊರಡಿಸಲಾಗಿದೆ.

ನಗರದ ಬೆಳವಣಿಗೆ ಮತ್ತು ಆಟೋ ಪರ್ಮಿಟ್‌ಗಾಗಿ ಕೇಳಿಬರುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಜತೆಗೆ ನಗರದಲ್ಲಿನ ವಾಯು ಮತ್ತು ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬಿಎಸ್‌-6 ಮಾದರಿಯ ಹೊಸ ಎಲ್‌ಪಿಜಿ/ಸಿಎನ್‌ಜಿ/ಎಲೆಕ್ಟ್ರಿಕ್‌ ಆಟೋ ರಿಕ್ಷಾಗಳನ್ನು ರಸ್ತೆಗಿಳಿಸಲು ಉದ್ದೇಶಿಸಲಾಗಿದೆ.

ಆಟೋ ರಿಕ್ಷಾಗಳ ಪರ್ಮಿಟ್‌ಗಾಗಿ ಅನಗತ್ಯ ಸ್ಪರ್ಧೆ ಉಂಟಾಗುವುದರ ಜತೆಗೆ ಪರ್ಮಿಟ್‌ಗಳ ಕಾಳಸಂತೆಯನ್ನು ನಿಯಂತ್ರಿಸುವ ಸಲುವಾಗಿ ಆಟೋರಿಕ್ಷಾ ಪರ್ಮಿಟ್‌ ಮಿತಿಯನ್ನು ಹೆಚ್ಚಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಕೂಲಂಕಷ ಪರಿಶೀಲನೆ ಬಳಿಕ ಆಟೋ ರಿಕ್ಷಾ ಪರ್ಮಿಟ್‌ ಸಂಖ್ಯೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದೂ ಇಲಾಖೆ ಸ್ಪಷ್ಟಪಡಿಸಿದೆ.

ಈ ಮೊದಲು 2018ರಲ್ಲಿ ಆಟೋ ರಿಕ್ಷಾ ಪರ್ಮಿಟ್‌ ನೀಡಲು ಸಾರಿಗೆ ಇಲಾಖೆ ಅನುಮತಿ ನೀಡಿತ್ತು. 5 ವರ್ಷದ ಅವಧಿಗೆ 1,25,000 ಲಕ್ಷ ಆಟೋ ರಿಕ್ಷಾ ಪರ್ಮಿಟ್‌ ಸಂಖ್ಯೆಯನ್ನು 1,55,000ಕ್ಕೆ ಏರಿಕೆ ಮಾಡಲಾಗಿತ್ತು. ಆ ಮೂಲಕ 30 ಸಾವಿರ ಹೊಸ ಆಟೋರಿûಾ ಪರ್ಮಿಟ್‌ ನೀಡಲು ತೀರ್ಮಾನಿಸಲಾಗಿತ್ತು. ಅದಕ್ಕೂ ಮೊದಲು 2011ರಲ್ಲಿ ಬೆಂಗಳೂರಲ್ಲಿ ಹೊಸ ಆಟೋ ಪರ್ಮಿಟ್‌ ನೀಡಲಾಗಿತ್ತು. ಇದೀಗ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಲಾಗುತ್ತಿದೆ.

ಕಂಪನಿಗಳ ಲಾಬಿ; ಸಂಘದ ಆರೋಪ: “ನಾವು ಕೇಳಿದ್ದು ದರ ಪರಿಷ್ಕರಣೆ ಮಾಡಿ ಅಂತ. ಆದರೆ, ಸರ್ಕಾರ ಆಟೋಗಳ ಸಂಖ್ಯೆಯನ್ನೇ ಹೆಚ್ಚಿಸಿದೆ. ಇರುವ ಆಟೋ ಚಾಲಕರಿಗೇ ನಿರೀಕ್ಷಿತ ಆದಾಯ ಬರುತ್ತಿಲ್ಲ. ಈ ಮಧ್ಯೆ ಮತ್ತೆ ಒಂದು ಲಕ್ಷ ಆಟೋಗಳನ್ನು ರಸ್ತೆಗಿಳಿಸುತ್ತಿರುವುದು ಸರಿಯಾದ ಕ್ರಮವಲ್ಲ. ಆಟೋ ತಯಾರಿಕಾ ಕಂಪನಿಗಳ ಲಾಬಿ ಇದರ ಹಿಂದೆ ಇದ್ದಂತಿದೆ. ಇರುವ ಚಾಲಕರಿಗೆ ಸಾರಿಗೆ ಇಲಾಖೆಯಿಂದ ತರಬೇತಿ ನೀಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಮುಂದಾಗಬೇಕಿತ್ತು. ಇಲಾಖೆಯ ಈ ಆದೇಶಕ್ಕೆ ನಮ್ಮ ಆಕ್ಷೇಪ ಇದೆ. ಇದನ್ನು ವಾಪಸ್‌ ಪಡೆದು, ದರ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಲಾಗುವುದು’ ಎಂದು ಆಟೋರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ತಿಳಿಸಿದರು.

ಒಂದು ಲಕ್ಷ ಹೊಸ ಆಟೋರಿಕ್ಷಾ ಪರ್ಮಿಟ್‌ ನೀಡುವ ಮೂಲಕ ಬೆಂಗಳೂರಲ್ಲಿ ವಾಹನ ದಟ್ಟಣೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಈಗಾಗಲೇ ಬೆಂಗಳೂರು ನಗರ ವಾಹನ ದಟ್ಟಣೆಯಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಅದರಲ್ಲೂ ಬೇಕಾಬಿಟ್ಟಿ ಓಡಾಟ ನಡೆಸುವ ಆಟೋರಿಕ್ಷಾಗಳ ಪರ್ಮಿಟ್‌ ಸಂಖ್ಯೆಯನ್ನು ಹೆಚ್ಚಿಸಿದರೆ ನಗರದ ಟ್ರಾಫಿಕ್‌ ಬವಣೆ ಮತ್ತಷ್ಟು ಬಿಗಡಾಯಿಸಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಷರತ್ತುಗಳಿವು: 

ಎಲ್‌ಪಿಜಿ/ಸಿಎನ್‌ಜಿ/ಎಲೆಕ್ಟ್ರಿಕ್‌ ಕಿಟ್‌ ಹಾಗೂ ಡಿಜಿಟಲ್‌ ದರ ಮೀಟರ್‌ನೊಂದಿಗೆ ಬಿಎಸ್‌-6 ನಾಲ್ಕು ಸ್ಟ್ರೋಕ್‌ ಎಂಜಿನ್‌ನ ಹಸಿರು ಆಟೋರಿಕ್ಷಾ ಗಳಿಗೆ ಪರ್ಮಿಟ್‌ ನೀಡಲಾಗುತ್ತದೆ.

ಈಗಾಗಲೇ ಆಟೋರಿಕ್ಷಾ ಪರ್ಮಿಟ್‌ ಹೊಂದಿದ ವ್ಯಕ್ತಿಗೆ ಹೊಸ ಪರ್ಮಿಟ್‌ ಇಲ್ಲ. ಪರ್ಮಿಟ್‌ ಕೋರಿ ಅರ್ಜಿ ಸಲ್ಲಿಸುವವರು ಆಧಾರ್‌ ಅಥವಾ ಮತದಾರರ ಗುರುತಿನ ಚೀಟಿ ಅಥವಾ ಪಡಿತರಚೀಟಿ ಅಥವಾ ಪಾನ್‌ಕಾರ್ಡ್‌ ಸಲ್ಲಿಸಬೇಕು

ಪರ್ಮಿಟ್‌ ಕೋರಿ ಅರ್ಜಿ ಹಾಕುವ ವ್ಯಕ್ತಿ ಎಲ್‌ಪಿಜಿ/ಸಿಎನ್‌ಜಿ/ ವಿದ್ಯುತ್‌ಚಾಲಿತ ಆಟೋರಿಕ್ಷಾ ಓಡಿಸುವ ಚಾಲನಾ ಅನುಜ್ಞಾಪತ್ರ ಹೊಂದಿರಬೇಕು.

ಟಾಪ್ ನ್ಯೂಸ್

INDvsBAN: New openers for India in T20; Who is the opener with Sharma?

INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್‌ ಯಾರು?

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-ksrtc-dasara

Bengaluru: ಕೆಎಸ್‌ಆರ್‌ಟಿಸಿಯಿಂದ ದಸರಾಗೆ 2000 ಹೆಚ್ಚುವರಿ ಬಸ್‌ ಸಂಚಾರ

19-bbmp

Bengaluru: ಆನ್‌ಲೈನ್‌ನಲ್ಲೇ ಆಸ್ತಿ ಇ-ಖಾತಾ ಪಡೆಯಿರಿ

18-wonderla

Bengaluru: ವಂಡರ್‌ಲಾದಲ್ಲಿ 2 ಟಿಕೆಟ್‌ ಖರೀದಿಸಿದರೆ 1 ಟಿಕೆಟ್‌ ಫ್ರೀ

16-bng

Bengaluru: ದಸರಾ ಬೊಂಬೆಗಳ ಹಬ್ಬದಲ್ಲೂ ಅಯೋಧ್ಯಾ ಶ್ರೀ ರಾಮಮಂದಿರ

14-bng

Bengaluru: 5ನೇ ಮಹಡಿಯಿಂದ ಜಿಗಿದು ಮಹಿಳಾ ಟೆಕಿ ಆತ್ಮಹತ್ಯೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

INDvsBAN: New openers for India in T20; Who is the opener with Sharma?

INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್‌ ಯಾರು?

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.