ಬೆಂಗಳೂರು ಈಗ ಕೋವಿಡ್ ರಾಜಧಾನಿ: ಮಹಾನಗರಗಳ ಪೈಕಿ ಬೆಂಗಳೂರಲ್ಲೇ ಹೆಚ್ಚು ವೈರಸ್!
Team Udayavani, Oct 8, 2020, 7:38 AM IST
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈಗ ದೇಶಕ್ಕೆ ಕೋವಿಡ್ ರಾಜಧಾನಿಯಾಗಿ ಪರಿವರ್ತನೆ ಗೊಂಡಿದೆ! ಕಳೆದ ಒಂದು ವಾರದಲ್ಲಿ ದೇಶದ ಮಹಾ ನಗರಗಳ ಪೈಕಿ ಅತಿ ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳು ಕಾಣಿಸಿಕೊಂಡಿರುವುದು ಬೆಂಗಳೂರಿನಲ್ಲಿಯೇ.
ಸದ್ಯ ಬೆಂಗಳೂರು ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿರಬಹುದು. ಆದರೆ, ಮಅಕ್ಟೋಬರ್‌ನಿಂದೀಚೆಗೆ ಬೆಂಗಳೂರಿನಲ್ಲಿ ಪ್ರಕರಣಗಳ ತೀವ್ರತೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅ.1 ರಿಂದ 7 ರ ನಡುವೆ ಬೆಂಗಳೂರಿನಲ್ಲಿ 29,578 ಮಂದಿಗೆ ಸೋಂಕು ತಗುಲಿದೆ. ಅಂದರೆ ನಿತ್ಯ ಸರಾಸರಿ 4,225 ಮಂದಿ ಸೋಂಕಿತರಾಗಿದ್ದಾರೆ. ಇದೇ ಅವಧಿಯಲ್ಲಿ ನಿತ್ಯ ಸರಾಸರಿ ಪೂನಾದಲ್ಲಿ 2,195, ಮುಂಬೈನಲ್ಲಿ 2099, ದೆಹಲಿಯಲ್ಲಿ 3,111 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಕೋವಿಡ್ ಸೋಂಕು ಪ್ರಕರಣಗಳಲ್ಲಿ ದೇಶದ ಎಲ್ಲಾ ಮಹಾನಗರಗಳನ್ನು ಬೆಂಗಳೂರು ಮೀರಿಸಿದೆ.
ಐದು ಸಾವಿರಕ್ಕೆ ಹೆಚ್ಚಳ: ಕಳೆದ ಎರಡು ದಿನಗಳಿಂದ ಮುಂಬೈ, ದೆಹಲಿ, ಪೂನಾದಲ್ಲಿ 3 ಸಾವಿರದ ಆಸುಪಾಸಿನಲ್ಲಿ ಸೋಂಕು ವರದಿಯಾಗುತ್ತಿವೆ. ಆದರೆ, ಬೆಂಗಳೂರಿನಲ್ಲಿ 5ಸಾ ವಿರಕ್ಕೆ ಹೆಚ್ಚಳವಾಗಿವೆ. ಸೋಂಕಿನ ತೀವ್ರತೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಪ್ರಕರಣಗಳ ಪಟ್ಟಿಯಲ್ಲಿಯೂ ಬೆಂಗಳೂರು ಅಗ್ರಸ್ಥಾನಕ್ಕೇರಲಿದೆ.
250ಕ್ಕೂ ಹೆಚ್ಚು ಮಂದಿ ಸಾವು: ಸೋಂಕಿತರ ಸಾವಿನ ವಿಚಾರದಲ್ಲಿಯೂ ಬೆಂಗಳೂರು ಮುಂಚೂಣಿಯಲ್ಲಿದೆ. ಕಳೆದ 1 ವಾರದಲ್ಲಿ 254 ಸೋಂಕಿತರು ಮೃತಪಟ್ಟಿದ್ದಾರೆ. ನಿತ್ಯ ಸರಾಸರಿ 37 ಮಂದಿ ಮೃತಪಟ್ಟಂತಾಗಿದೆ. ಇತರೆ ಮಹಾನಗರಗಳಲ್ಲಿಯೂ ನಿತ್ಯ 40 ಸೋಂಕಿತರ ಸಾವಾಗುತ್ತಿದೆ.
30 ಸಾವಿರ ಸೋಂಕು ಪರೀಕ್ಷೆ: ನಗರದಲ್ಲಿ ಸೋಂಕು ಪರೀಕ್ಷೆಗಳ ಸಂಖ್ಯೆಯೂ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸೆಪ್ಟೆಂಬರ್‌ನಲ್ಲಿ ನಿತ್ಯ ಸರಾಸರಿ 20 ಸಾವಿರ ಪರೀಕ್ಷೆ ನಡೆದಿದ್ದವು. ಸದ್ಯ ಆ ಪ್ರಮಾಣ 30 ಸಾವಿರಕ್ಕೆ ಹೆಚ್ಚಳವಾಗಿದೆ. ಅ.1 ರಿಂದ ಅ.7ರವರೆಗೆ ಒಟ್ಟು 2,16,739 ಸೋಂಕು ಪರೀಕ್ಷೆಗಳು ನಡೆದಿವೆ. ಬುಧವಾರ ಹಿಂದೆಂದಿಗಿಂತಲೂ ಅತಿ ಹೆಚ್ಚು 35183 ಪರೀಕ್ಷೆ ನಡೆದಿವೆ. ಇನ್ನು ದೇಶದಲ್ಲಿಯೇ ದೆಹಲಿ ಹೊರತುಪಡಿಸಿದರೆ ಅತಿ ಹೆಚ್ಚು ಪರೀಕ್ಷೆ ಬೆಂಗಳೂರಿನಲ್ಲಿ ನಡೆಯುತ್ತಿವೆ. ಇದೇ ಕಾರಣಕ್ಕೆ ಸೋಂಕು ಹೆಚ್ಚಳವಾಗಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.
ಸದ್ಯ ಅತಿ ಹೆಚ್ಚು ಸೋಂಕಿತರು ಬೆಂಗಳೂರಿನಲ್ಲಿದ್ದಾರೆ!: ನಿರಂತರ ಗುಣಮುಖರ ಸಂಖ್ಯೆಗಿಂತಲೂ ಸೋಂಕು ಪ್ರಕರಣಗಳ ಹೆಚ್ಚಾದ ಹಿನ್ನೆಲೆ ಬೆಂಗಳೂರಿನ ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನಕ್ಕೇ ತಲುಪಿದೆ. ಅಂದರೆ, ಸದ್ಯ ದೇಶದಲ್ಲಿಯೇ ಅತಿಹೆಚ್ಚು ಪಾಸಿಟಿವ್ ಪ್ರಕರಣ ಇಲ್ಲಿವೆ. ಮಂಗಳವಾರ ದವರೆಗೂ ಪೂನಾ ಮೊದಲ ಸ್ಥಾನದಲ್ಲಿತ್ತು. ಆದರೆ, ಬುಧವಾರ ದೇಶದಲ್ಲಿಯೇ ಅತಿ ಹೆಚ್ಚು ಪ್ರಕರಣ ಬೆಂಗಳೂರಿನಲ್ಲಿ ವರದಿ ಯಾದ ಪರಿಣಾಮ ಸಕ್ರಿಯ ಪ್ರಕರಣಗಳ ಸಂಖ್ಯೆ 58624 ಸಾವಿರಕ್ಕೆ ತಲುಪಿದೆ. ಪೂನಾ 57926 ಪ್ರಕರಣಗಳೊಂದಿಗೆ2ನೇ ಸ್ಥಾನಕ್ಕೆ ಇಳಿಕೆಯಾಗಿದೆ.
ಒಂದೇ ದಿನ 35 ಸಾವಿರ ಸೋಂಕು
ಪಾಲಿಕೆ ಬುಧವಾರ ಒಂದೇ ದಿನ 35 ಸಾವಿರ ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸಿದೆ. ಕಳೆದ 10ದಿನಗಳಿಂದ ನಗರದಲ್ಲಿ ಸೋಂಕು ಪರೀಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ. ಆದರೆ, ಇದೇ ಮೊದಲ ಒಂದೇ ದಿನ 35 ಸಾವಿರ ಜನರಿಗೆ ಸೋಂಕು ಪರೀಕ್ಷೆ ನಡೆಸಲಾಗಿದೆ. ಬುಧವಾರ 35,183 ಮಂದಿ ಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ25,053 ಆರ್‌ಟಿಪಿಸಿಆರ್, 10,130 ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ನಡೆಸಲಾಗಿದೆ ಎಂದು ಪಾಲಿಕೆ ಆರೋ ಗ್ಯಾಧಿ ಕಾರಿಗಳು ತಿಳಿಸಿದ್ದಾರೆ. ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್, ಮೃತರ ಪ್ರಮಾಣ ಶೇ.1ಕ್ಕಿಂತ ಕಡಿಮೆ ಮಾಡುವ ಉದ್ದೇಶದಿಂದ ಹೆಚ್ಚು ಪರೀಕ್ಷೆ ಮಾಡಲಾಗುತ್ತಿದೆ ಎಂದರು.
ಮಹಾನಗರಗಳ ಪೈಕಿ ಬೆಂಗಳೂರಲ್ಲೇ ಹೆಚ್ಚು ವೈರಸ್!
ಅ. 1ರಿಂದ 7 ರ ನಡುವೆ 29,578 ಮಂದಿಗೆ ಸೋಂಕು
ಮಹಾನಗರ | ಸೋಂಕು ಪ್ರಕರಣ | ಸಾವು ಪ್ರಕರಣ | ಸಕ್ರಿಯ ಪ್ರಕರಣ |
ಬೆಂಗಳೂರು | 29,578 | 254 | 58624 |
ದೆಹಲಿ | 21,782 | 255 | 22186 |
ಪೂನಾ | 15,370 | 260 | 57926 |
ಮುಂಬೈ | 14,693 | 276 | 26544 |
ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.