30 ಪ್ಲಸ್ ಮಹಿಳೆಯರೇ ಟಾರ್ಗೆಟ್
ಮ್ಯಾಟ್ರಿಮೋನಿಯಲ್‌ನಲ್ಲಿ ಮಹಿಳೆಯರ ಪರಿಚಯಿಸಿಕೊಂಡು ವಂಚನೆ :ಬಂಧನ
Team Udayavani, Sep 2, 2021, 3:10 PM IST
ಬೆಂಗಳೂರು: ಮ್ಯಾಟ್ರಿಮೋನಿಯಲ್‌ನಲ್ಲಿ ವಿಚ್ಛೇಧಿತ ಮತ್ತು 30 ವರ್ಷ ಮೇಲ್ಪಟ್ಟ ಮಹಿಳೆಯರನ್ನು ಪರಿಚಯಿಸಿಕೊಂಡು ಮದುವೆ ಯಾಗುವುದಾಗಿ ನಂಬಿಸಿ ಹಣ, ಚಿನ್ನಾಭರಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.
ಉಲ್ಲಾಳು ನಿವಾಸಿ ಜಗನ್ನಾಥ್ ಸಜ್ಜನರ್ (32) ಬಂಧಿತ. ಆರೋಪಿಯಿಂದ 1.6 ಲಕ್ಷ ನಗದು, 116 ಗ್ರಾಂ ಚಿನ್ನಾಭರಣ, ಐದು ಮೊಬೈಲ್, 20ಕ್ಕೂ ಹೆಚ್ಚು ಸಿಮ್ ಕಾರ್ಡ್, ಒಂದು ಕಾರು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ವಿಜಯಪುರ ಜಿಲ್ಲೆಯ ಮೂಲದವನಾದ ಆರೋಪಿ ಬಿಎ ಪದವೀಧರನಾಗಿದ್ದಾನೆ. ಹಲವು ವರ್ಷಗಳಿಂದ ಕುಟುಂಬದಿಂದ ಆರೋಪಿ ದೂರ
ವಾಗಿದ್ದು, ಉಲ್ಲಾಳುನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆರಂಭದಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಅವಿವಾಹಿತನಾಗಿರುವ ಆರೋಪಿ, ಮ್ಯಾಟ್ರಿಮೋನಿಯಲ್ ಮೂಲಕ ಹಣ ಸಂಪಾದಿಸಲು ಚಿಂತಿಸಿದ್ದಾನೆ.
ಈ ಹಿನ್ನೆಲೆಯಲ್ಲಿ ಮ್ಯಾಟ್ರಿಮೋನಿಯಾದಲ್ಲಿ 30 ವರ್ಷ ಮೇಲ್ಪಟ್ಟ ಯುವತಿಯರು ಅಥವಾ ವಿಚ್ಛೇಧಿತ ಮಹಿಳೆಯರ ಪ್ರೊಫೈಲ್ ಪಡೆದು ಕರೆ ಮಾಡುತ್ತಿದ್ದ. ಈ ವೇಳೆ ನಾನು ಎಂಜಿನಿಯರ್ ಆಗಿದ್ದು, ಒಳ್ಳೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನೀವು ಹಾಗೂ ನಿಮ್ಮ ಪ್ರೊಫೈಲ್ ಇಷ್ಟವಾಗಿದ್ದು, ಭೇಟಿಯಾಗುವಂತೆ ಯುವತಿಯರನ್ನು ಕೇಳುತ್ತಿದ್ದ. ಬಳಿಕ ಕಾಫಿ ಡೇಗಳಲ್ಲಿ ಯುವತಿಯರನ್ನು ಭೇಟಿಯಾಗುತ್ತಿದ್ದ.
ಇದನ್ನೂ ಓದಿ:ನನ್ನ ತವರು ಎಂದಿಗೂ ಮರೆಯಲ್ಲ : ಸಿಎಂ ಬಸವರಾಜ ಬೊಮ್ಮಾಯಿ
ಈ ವೇಳೆ ತಾನೊಬ್ಬ ಶ್ರೀಮಂತನಂತೆ ಬಿಂಬಿಸಿಕೊಳ್ಳುತ್ತಿದ್ದ.ಆಕ್ಷಣದಲ್ಲಿ ಯುವತಿಯರನ್ನು ತನ್ನೆಡೆ ಸೆಳೆದುಕೊಂಡು ಅವರ ನಂಬರ್ ಪಡೆದು ನಿತ್ಯ ವಾಟ್ಸ್‌ಆ್ಯಪ್ ಚಾಟಿಂಗ್, ಕರೆ ಮಾಡಿ ಮಾತನಾಡುತ್ತಿದ್ದ. ನಂತರ ಅನಾರೋಗ್ಯ, ಅಪಘಾತ ಹೀಗೆ ನಾನಾ ಕಾರಣಗಳನ್ನು ನೀಡಿ ಯುವತಿಯರಿಂದ ಹಣ ವಸೂಲಿ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಅನಾರೋಗ್ಯದ ನಾಟಕ: ಯುವತಿಯರ ಬಳಿ ಆತ್ಮೀಯತೆ ಬೆಳೆಸಿಕೊಂಡಿದ್ದ ಆರೋಪಿ,ಕೆಲ ದಿನಗಳ ಬಳಿಕ ನನಗೆ ಅಪಘಾತವಾಗಿದೆ. ಅನಾರೋಗ್ಯಕ್ಕೊಳಗಾಗಿದ್ದೇನೆ. ಇದೇ ವೇಳೆ ತನ್ನ ಹಣವನ್ನು ಕಳೆದುಕೊಂಡಿದ್ದೇನೆ ಎಂದು ಯುವತಿಯರಿಗೆ ಸುಳ್ಳು ಹೇಳುತ್ತಿದ್ದ. ಬಳಿಕ ಚಿಕಿತ್ಸೆ ವೆಚ್ಚಕ್ಕೆ ಹಣ ಬೇಕೆಂದು ಲಕ್ಷಾಂತರ ರೂ. ಪಡೆಯುತ್ತಿದ್ದ. ಅಲ್ಲದೆ, ನಾನು ಮದುವೆ ಆಗುತ್ತಿರುವ ಹುಡುಗಿ ಎಂಬ ಕಾರಣಕ್ಕೆ ಹಣ ಕೇಳುತ್ತಿದ್ದೇನೆ. ಸ್ವಲ್ಪ ದಿನಗಳ ಬಳಿಕ ಹಣ ವಾಪಸ್ ನೀಡುತ್ತೇನೆ ಎಂದು ಸುಳ್ಳು ಹೇಳಿ ನಂಬಿಸುತ್ತಿದ್ದ. ಆತನ ಮಾತನ್ನು ನಂಬಿ ಯುವತಿಯರು ಹಣ ನೀಡುತ್ತಿದ್ದರು. ಅನಂತರ ಅದೇ ಯುವತಿಯರನ್ನು ನೇರವಾಗಿ ಭೇಟಿಯಾಗಿ ಚಿನ್ನಾಭರಣಗಳನ್ನು ಪಡೆದು ಅಡಮಾನ ಇರಿಸಿ ಹಣ ಪಡೆದು ಕೊಂಡಿದ್ದಾನೆ.
ಕೆಲ ತಿಂಗಳ ಹಿಂದೆ ಹೆಣ್ಣೂರು ಠಾಣಾ ವ್ಯಾಪ್ತಿಯ ಯುವತಿಯೊಬ್ಬರ ಬಳಿ ಕೈಗೆ ಬ್ಯಾಂಡೇಜ್ ಹಾಕಿಕೊಂಡು 4.40 ಲಕ್ಷ ರೂ. ಪಡೆದು ವಂಚಿಸಿದ್ದ. ಈ ಸಂಬಂಧ ಆಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಹೆಣ್ಣೂರು ಠಾಣೆ ಇನ್ಸ್ಪೆಕ್ಟರ್ ಎಂ. ವಸಂತಕುಮಾರ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಪೂರ್ವ ವಿಭಾಗ ಡಿಸಿಪಿ ಎಸ್.ಡಿ.ಶರಣಪ್ಪ ಹೇಳಿದರು.
ಯುವತಿ ಬದಲಾಗುತ್ತಿದ್ದಂತೆ ಸಿಮ್ ಚೇಂಜ್
ಆರೋಪಿ 30 ವರ್ಷ ಮೇಲ್ಪಟ್ಟ ಯುವತಿಯರು ಹಾಗೂ ವಿಚ್ಛೇಧಿತ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮ್ಯಾಟ್ರಿಮೋನಿಯಾದಲ್ಲಿ ಪರಿಚಯಿಸಿಕೊಳ್ಳುತ್ತಿದ್ದ. 30 ವರ್ಷ ವಯಸ್ಸಾದವರು ಗಂಡು ಸಿಕ್ಕಿಲ್ಲ ಎಂಬ ಕಾರಣಕ್ಕೆ ಬೇಗ ಒಪ್ಪಿಕೊಳ್ಳುತ್ತಾರೆ. ಇಲ್ಲವಾದರೆ ವಿಚ್ಛೇಧಿತ ಮಹಿಳೆಯರು ಹೊಸ ಜೀವನ ಕಟ್ಟಿಕೊಳ್ಳಲು ಒಪ್ಪಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಆರೋಪಿ ಇದೇ ವರ್ಗದವರನ್ನು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದ. ಪ್ರತಿ ಬಾರಿ ಹೊಸ ಮಹಿಳೆಯರನ್ನು ಪರಿಚಯ ಮಾಡಿಕೊಂಡ ಬಳಿಕ ಹೊಸ ನಂಬರ್‌ಕೊಡುತ್ತಿದ್ದ. ಅವರ ಜತೆ ಆತ್ಮೀಯತೆ ಬೆಳೆಯುತ್ತಿದ್ದಂತೆ ಉಡುಪಿ, ಮಂಗಳೂರು ಸೇರಿ ಕಡಲ ತೀರದ ಪ್ರದೇಶಗಳಿಗೆ ಕರೆದೊಯ್ದು ಮೋಜು ಮಾಡುತ್ತಿದ್ದ. ಈ ಬಗ್ಗೆ ಯಾರು ದೂರು ನೀಡಿಲ್ಲ. ಹೊಸ
ಯುವತಿಯರನ್ನು ಸಂಪರ್ಕ ಮಾಡಿದಾಗಲೆಲ್ಲ ಹೊಸ ಸಿಮ್‌ಕಾಡ್ ಬಳಕೆ ಮಾಡುತ್ತಿದ್ದ. ಹಣ ಸುಲಿಗೆ ಮಾಡಿದ ಬಳಿಕ ಸಿಮ್ ಕಾರ್ಡ್ ಬಳಕೆ ಮಾಡುತ್ತಿರಲಿಲ್ಲ. ವಾರದಲ್ಲಿ ಒಬ್ಬರನ್ನು ಇದೇ ರೀತಿ ವಂಚನೆ ಮಾಡುತ್ತಿದ್ದ. ಒಟ್ಟು10ಕ್ಕೂ ಹೆಚ್ಚು ಮಂದಿಗೆ ಆರೋಪಿ ವಂಚನೆ ಮಾಡಿರುವುದು ಗೊತ್ತಾಗಿದೆ. ಆದರೆ, ವಂಚನೆಗೊಳಗಾದರು ದೂರುಕೊಡಲು ಮುಂದೆ ಬರುತ್ತಿಲ್ಲ. ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Arrested: ಮಾದಕವಸ್ತು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
Bengaluru: ಸೆಂಟ್ರಿಂಗ್ ಮರ ಬಿದ್ದು ಬಾಲಕಿ ಸಾವು: ಎಂಜಿನಿಯರ್ ವಶಕ್ಕೆ
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.