Crime: ತೃತೀಯ ಲಿಂಗಿಯ ಕತ್ತು ಬಿಗಿದು ಕೊಂದ ಮಹಿಳೆ


Team Udayavani, May 11, 2024, 11:34 AM IST

Crime: ತೃತೀಯ ಲಿಂಗಿಯ ಕತ್ತು ಬಿಗಿದು ಕೊಂದ ಮಹಿಳೆ

ಬೆಂಗಳೂರು: ಸಣ್ಣ-ಪುಟ್ಟ ಜಗಳಕ್ಕೆ, 20 ವರ್ಷಗಳಿಂದ ಜೊತೆಗಿದ್ದ ತೃತೀಯ ಲಿಂಗಿಯ ಕತ್ತು ಬಿಗಿದು ಕೊಲೆ ಮಾಡಿದ ಮಹಿಳೆಯನ್ನು ಜೀವನ್‌ ಭೀಮಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುರುಗೇಶ್‌ ಪಾಳ್ಯದ ನಿವಾಸಿ ಮಂಜು ನಾಯ್ಕ್ (42) ಕೊಲೆ ಯಾದ ತೃತೀಯ ಲಿಂಗಿ. ‌ಪ್ರೇಮಾ (51) ಬಂಧಿತೆ.

ಮೇ 3 ರಂದು ಬೆಳಗ್ಗೆ ಜೀವನ್‌ಭೀಮಾನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಮುರುಗೇಶ್‌ ಪಾಳ್ಯದ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ತೃತೀಯ ಲಿಂಗಿ ಮಂಜು ನಾಯ್ಕ್  ಶವ ಪತ್ತೆಯಾಗಿತ್ತು. ಈ ಬಗ್ಗೆ ಮೃತಳ ತಮ್ಮ ಅಣ್ಣನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಅದರಂತೆ ಜೆ.ಬಿ ನಗರ ಪೊಲೀಸ್‌ ಠಾಣೆಯಲ್ಲಿ ಯು.ಡಿ.ಆರ್‌. ಪ್ರಕರಣವನ್ನು ದಾಖಲಿಸಲಾಗಿತ್ತು.‌

ನಂತರ ಶವವನ್ನು ಮರ ಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ಮರ ಣೋತ್ತರ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳು ಉಸಿರುಗಟ್ಟಿಸಿ ಈ ಸಾವು ಸಂಭವಿಸಿರಬಹುದೆಂದು ವರದಿ ನೀಡಿದ್ದರು. ಈ ಮೇರೆಗೆ ಜೆ.ಬಿ.ನಗರ ಪೊಲೀಸ್‌ ಠಾಣೆಯಲ್ಲಿ ವರದಿಯಾಗಿದ್ದ ಯು.ಡಿ.ಆರ್‌ ಪ್ರಕರಣ ವನ್ನು ಮೇ 7ರಂದು ಕೊಲೆ ಪ್ರಕರಣವಾಗಿ ದಾಖಲಿಸಲಾಗಿತ್ತು.

ಆರೋಪಿ ಖಾಕಿ ಬಲೆಗೆ ಬಿದ್ದಿದ್ದು ಹೇಗೆ?: ಜೆ.ಬಿ. ನಗರ ಪೊಲೀಸರು ತನಿಖೆ ನಡೆಸಿದಾಗ ಮಂಜು ನಾಯ್ಕ ಜೊತೆ ಪ್ರೇಮಾ ಎಂಬಾಕೆ ವಾಸಿಸುತ್ತಿದ್ದ ಸುಳಿವು ಸಿಕ್ಕಿತ್ತು. ಬಾತ್ಮಿದಾರರಿಂದ ಪ್ರೇಮಾ ಬಗ್ಗೆ ಪೊಲೀ ಸರಿಗೆ ಮಾಹಿತಿ ದೊರಕಿತ್ತು. ತಾಂತ್ರಿಕ ಕಾರ್ಯಾ ಚರಣೆ ನಡೆಸಿದಾಗ ಪ್ರೇಮಾ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಅಯ್ಯರಹಳ್ಳಿ ಗ್ರಾಮ ದಲ್ಲಿರುವ ಆಕೆಯ ತಾಯಿಯ ಮನೆಯಲ್ಲಿ ರು ವುದು ಪತ್ತೆಯಾಗಿತ್ತು. ಮೇ 8ರಂದು ಹಾಸನಕ್ಕೆ ತೆರ ಳಿದ ಪೊಲೀಸರು ಆರೋಪಿ ಪ್ರೇಮಾಳನ್ನು ವಶಕ್ಕೆ ಪಡೆದು ಸುದೀರ್ಘ‌ವಾಗಿ ವಿಚಾರಣೆಗೊಳಪಡಿಸಿದ್ದರು.

20 ವರ್ಷಗಳಿಂದ ತೃತೀಯ ಲಿಂಗಿ ಜತೆ ವಾಸ: ಪ್ರೇಮಾ ಪತಿ ಸುಮಾರು ವರ್ಷಗಳ ಹಿಂದೆ ಸಾವನ್ನ ಪ್ಪಿದ್ದರು. ಆ ನಂತರ ಪ್ರೇಮಾ ತೃತೀಯ ಲಿಂಗಿ ಮಂಜು ನಾಯ್ಕ್ ಜೊತೆ ಸುಮಾರು 20 ವರ್ಷಗಳಿಂದ ಬೆಂಗಳೂರಿನ ಮುರುಗೇಶ್‌ ಪಾಳ್ಯದ ಶ್ರೀರಾಮ ನಗರಿಯ ಮನೆಯೊಂದರಲ್ಲಿ ಜೊತೆಗೆ ವಾಸವಾಗಿದ್ದಳು. ಏ.26ರಂದು ರಾತ್ರಿ ನಮ್ಮಿಬ್ಬರ ನಡುವೆ ಜಗಳವಾಗಿ ಮಂಜು ನಾಯ್ಕ್ ಚಾಕುವಿನಿಂದ ನನ್ನನ್ನು ಸಾಯಿಸಲು ಬಂದಾಗ ನಾನು ಟವಲ್‌ನಿಂದ ಮಂಜು ನಾಯ್ಕ್‌  ಕುತ್ತಿಗೆ ಬಿಗಿದಿದ್ದೆ. ಆ ವೇಳೆ ಮಂಜು ನಾಯ್ಕ್ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಪ್ರೇಮಾ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ. ಪ್ರೇಮಾಳನ್ನು ಮೇ 8 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

ಚೀಟಿ ಹಣ ಕೇಳಿದ್ದಕ್ಕೆ ಕೊಲೆ? : ಮಂಜು ನಾಯ್ಕ ಕಂಪನಿಯೊಂದರ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿಕೊಂಡಿದ್ದರೆ, ಪ್ರೇಮಾ ಹೌಸ್‌ ಕೀಪಿಂಗ್‌ ಕೆಲಸ ಮಾಡುತ್ತಿದ್ದಳು. ಇಬ್ಬರ ನಡುವೆ ಆಗಾಗ ಸಣ್ಣ-ಪುಟ್ಟ ವಿಚಾರಕ್ಕೆ ಜಗಳವಾಗುತ್ತಿತ್ತು. ಮಂಜು ನಾಯ್ಕ್  ಹಾಕಿದ್ದ ಚೀಟಿ ಹಣವನ್ನು ಕೊಡುವಂತೆ ಪ್ರೇಮಾ ಕೇಳಿದ್ದಳು. ಏ.26ರಂದು ಮದ್ಯದ ಅಮಲಿನಲ್ಲಿ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿತ್ತು. ಆ ವೇಳೆ ಚಾಕುವಿನಿಂದ ಚುಚ್ಚಲು ಮುಂದಾಗಿದ್ದ ಮಂಜು ನಾಯ್ಕ್‌ ನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಪ್ರೇಮಾ ಟವಲ್‌ನಿಂದ ಮಂಜು ನಾಯ್ಕ್ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ‌

ಟಾಪ್ ನ್ಯೂಸ್

Bidar-Contracter-Sis

Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್‌ ಸಹೋದರಿ ಸುರೇಖಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

1-deee

Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್

BY-Vijayendra

Contracter Case: ಸಚಿನ್‌ ಪಾಂಚಾಳ್‌ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ

Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ

Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ

ud-sp

Udupi ಹೊಸ ವರ್ಷಾಚರಣೆ: ಹಾನಿಕಾರಕ ಸಂದೇಶ ಎಚ್ಚರ ವಹಿಸಲು ಎಸ್‌ಪಿ ಸೂಚನೆ

allu arjun

Theatre stampede case: ಅಲ್ಲು ಅರ್ಜುನ್ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ನ್ಯಾಯಾಲಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Bengaluru Crime: ವಾಟರ್‌ ಹೀಟರ್‌ನಿಂದ ಸ್ನೇಹಿತನ ಕೊಲೆಗೈದವ ಸೆರೆ

8

State Govt: ಸರ್ಕಾರದ ಬಳಿಯೇ ಇದೆ ಪಂಚಾಯತ್‌ ಅಧಿಕಾರ!

Fraud Case: ಉದ್ಯಮಿಗೂ 5 ಕೋಟಿ ರೂ. ವಂಚಿಸಿದ್ದ ಐಶ್ವರ್ಯ: ಆರೋಪ

Fraud Case: ಉದ್ಯಮಿಗೂ 5 ಕೋಟಿ ರೂ. ವಂಚಿಸಿದ್ದ ಐಶ್ವರ್ಯ: ಆರೋಪ

Bengaluru: ನಕಲಿ ದಾಖಲೆ ನೀಡಿ ಹುದ್ದೆ ಪಡೆದ ಆರೋಪದಡಿ ಪಿಎಸ್‌ಐ ವಿರುದ್ಧ ಕೇಸ್‌

Bengaluru: ನಕಲಿ ದಾಖಲೆ ನೀಡಿ ಹುದ್ದೆ ಪಡೆದ ಆರೋಪದಡಿ ಪಿಎಸ್‌ಐ ವಿರುದ್ಧ ಕೇಸ್‌

Fraud Case: ಸಾಗರದ ಚಿನ್ನದಂಗಡಿಗೂ 20 ಲಕ್ಷ ವಂಚಿಸಿದ್ದ ವರ್ತೂರು ಆಪ್ತೆ ಶ್ವೇತಾ!

Fraud Case: ಸಾಗರದ ಚಿನ್ನದಂಗಡಿಗೂ 20 ಲಕ್ಷ ವಂಚಿಸಿದ್ದ ವರ್ತೂರು ಆಪ್ತೆ ಶ್ವೇತಾ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bidar-Contracter-Sis

Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್‌ ಸಹೋದರಿ ಸುರೇಖಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

1-deee

Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್

BY-Vijayendra

Contracter Case: ಸಚಿನ್‌ ಪಾಂಚಾಳ್‌ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ

1-up

Dandeli; ಕುಸಿದು ಬಿದ್ದು ಯುಪಿ ಮೂಲದ ಯುವಕ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.