ಬೆಳೆಯುತ್ತಿದೆ ಬೆಂಗಳೂರು… ಬತ್ತುತ್ತಿದೆ ಜೀವಜಲ

ಬೇಸಿಗೆ ಬವಣೆ ಜತೆಗೆ ನೀರಿನ ಹಾಹಾಕಾರ,ಕೆರೆಗಳ ರಕ್ಷಣೆ, ಅಂತರ್ಜಲ ಅಭಿವೃದ್ಧಿಗೆ ಬೇಕು ಕಠಿಣ ಕ್ರಮ

Team Udayavani, Apr 5, 2021, 11:59 AM IST

ಬೆಳೆಯುತ್ತಿದೆ ಬೆಂಗಳೂರು… ಬತ್ತುತ್ತಿದೆ ಜೀವಜಲ

ಬೆಂಗಳೂರು: ಕಳೆದೆರಡು ದಶಕಗಳಲ್ಲಿ ವಿಸ್ತೀರ್ಣ ಹೆಚ್ಚು-ಕಡಿಮೆ ನಾಲ್ಕು ಪಟ್ಟು ಹಿಗ್ಗಿದ್ದು, ಜನಸಂಖ್ಯೆಯೂ ಮೂರುಪಟ್ಟು ಅಂದರೆ ಅಂದಾಜು 43 ಲಕ್ಷದಿಂದ 1.27 ಕೋಟಿ ತಲುಪಿದೆ.2001-2011ರಲ್ಲೇ ಪ್ರತಿ ಚದರ ಕಿ.ಮೀ.ಗೆ ಜನದಟ್ಟಣೆ 7,880ರಿಂದ11,330 ಆಗಿದೆ (ಈಗ ಇದು ಇನ್ನಷ್ಟು ಏರಿಕೆ ಆಗಿರುವ ಸಾಧ್ಯತೆಇದೆ). ಆದರೆ ಇದೇ ಅವಧಿಯಲ್ಲಿ ಜಲಮೂಲಗಳಾದ ನೂರಾರು ಕೆರೆಗಳು ಕಣ್ಮರೆಯಾಗಿವೆ.

ಅಂತರ್ಜಲ ಮಟ್ಟ 28 ಮೀ.ನಿಂದ 300 ಮೀ.ಗೆ ಕುಸಿದಿದೆ.ಮೂರು ದಶಕಗಳಲ್ಲಿ ತಾಪಮಾನದಲ್ಲಿ 2ರಿಂದ 2.5 ಡಿಗ್ರಿ ಸೆಲ್ಸಿಯಸ್‌ಏರಿಕೆ ಕಂಡಿದೆ. ಜಲಮಂಡಳಿ ಪ್ರಕಾರ ಸರಾಸರಿ ಪ್ರತಿ ವ್ಯಕ್ತಿಗೆ 120 ಲೀ.ನೀರು ಪೂರೈಕೆ ಆಗುತ್ತಿದ್ದು, ಹೊರವಲಯದಲ್ಲಿ 100 ಲೀ.ಗಿಂತ ಕಡಿಮೆ ಇದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ಮಾನದಂಡ 135 ಲೀ. ಇದು ಜಾಗತಿಕ ಮಟ್ಟದಲ್ಲಿ ಇತ್ತೀಚೆಗೆ “ಅತ್ಯುತ್ತಮ ವಾಸಯೋಗ್ಯ’ದ ಗರಿ ಮುಡಿ ಗೇರಿಸಿಕೊಂಡಿ ರುವ ಉದ್ಯಾನ ನಗರಿಯ ಸ್ಥಿತಿ! ತಾನು “ವಾಸಯೋಗ್ಯ’ವಾಗಿರುವ ಕಾರಣಕ್ಕೆ ನಗರವು ಹೆಚ್ಚು ಜನರನ್ನು ಆಕರ್ಷಿಸುತ್ತಿದೆ.

ಹೀಗೆ ಬಂದವರಿಗೆ ಆಶ್ರಯ ನೀಡುವ ಭರದಲ್ಲಿ ಬೆಂಗಳೂರು ಮೂಲ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. 1973ಕ್ಕೆ ಹೋಲಿಸಿದರೆ, ಇದುವರೆಗೆ ನಗರೀಕರಣ ಪ್ರಮಾಣ ಶೇ. 1,055ರಷ್ಟು ಹೆಚ್ಚಳವಾಗಿದೆ. ಪ್ರತಿಯಾಗಿಶೇ. 73 ಜೌಗುಪ್ರದೇಶ ಕಳೆದುಹೋಗಿದೆ. ಅಷ್ಟೇ ಅಲ್ಲ, ಲಭ್ಯವಿರುವ ಜಲ ಮೂಲಗಳ ಮೇಲೆ ಒತ್ತಡವೂ ಹೆಚ್ಚಾಗಿದ್ದು, ಗುಣಮಟ್ಟ ಮತ್ತು ನಿರೀಕ್ಷಿತ ಪ್ರಮಾಣದ ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ.

ಮೇಲ್ನೋಟಕ್ಕೆ ನಗರ ಆಕರ್ಷಕವಾಗಿ ಕಾಣುತ್ತಿದೆ. ಆದರೆ, ಈಗಲೂ ಇಲ್ಲಿ ಪಡಿತರ ರೂಪದಲ್ಲಿ ನೀರಿನ ಪೂರೈಕೆ ಆಗುತ್ತಿದೆ. ಹೊರವಲಯಗಳಲ್ಲಿ ಮೂರ್‍ನಾಲ್ಕು ದಿನಗಳಿಗೊಮ್ಮೆ ನೀರು ಸಿಗುತ್ತದೆ. ಬೆಳಗಾದರೆ ಕ್ಯಾನ್‌ಗಳನ್ನು ವಾಹನಗಳಿಗೆ ಅಥವಾ ಬೈಸಿಕಲ್‌ಗ‌ಳಿಗೆ ಹಾಕಿಕೊಂಡು ಶುದ್ಧ ಕುಡಿವ ನೀರಿನ ಘಟಕಗಳ ಹುಡುಕಾಟ ನಡೆಯುತ್ತದೆ. ಪಾಲಿಕೆಗೆ ಸೇರಿಕೊಂಡು ಒಂದೂವರೆ ದಶಕ ಕಳೆದರೂಇನ್ನೂ ಸಮರ್ಪಕವಾಗಿ ನೀರು ಕಾಣದ 100ಕ್ಕೂ ಹೆಚ್ಚು ಹಳ್ಳಿಗಳಿವೆ.ಇದ್ದ ಕೆರೆಗಳ ನೀರು ವಿಷಕಾರಿಯಾಗಿದ್ದು, ಇದರಿಂದ ಬೆಳೆವ ಬೆಳೆಯಲ್ಲೂ ಲೋಹದ ಅಂಶ ಪತ್ತೆಯಾಗಿದೆ.

ಜಲಮೂಲಗಳಿಗೆ “ತಾತ್ಕಾಲಿಕ ರಿಲೀಫ್’?: ಪುನಃಶ್ಚೇತನಗೊಂಡ ಕೆರೆಗಳ ನೀರಿನ ಗುಣಮಟ್ಟವೂ ಯೋಗ್ಯವಾಗಿಲ್ಲ. ಈ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆ ಈಚೆಗೆ ಅಧ್ಯಯನ ನಡೆಸಿದ್ದು, 47 ಕೆರೆಗಳಪೈಕಿ ಶೇ. 53 ನೀರಿನ ಗುಣಮಟ್ಟ “ತುಂಬಾ ಕಳಪೆ’ ಹಾಗೂ ಶೇ. 34 ಕೆರೆಗಳ ನೀರಿನ ಗುಣಮಟ್ಟ “ಕಳಪೆ’ ಆಗಿವೆ ಎಂದು ವರದಿ ನೀಡಿದೆ. ಇನ್ನು ನಗರದ ಅಂತರ್ಜಲಮಟ್ಟವೂ ಇದಕ್ಕಿಂತ ಭಿನ್ನವಾಗಿಲ್ಲ.ಸಾವಿರಾರು ಅಡಿಗೆ ಕುಸಿದಿದ್ದು, ಇತ್ತೀಚೆಗೆ ಕೋವಿಡ್‌ ಹಾವಳಿಯಿಂದ ಮರು ವಲಸೆಯಿಂದಾಗಿ ಕೊಳವೆಬಾವಿಗಳ ಮೇಲಿನ ಅವಲಂಬನೆ ಕಡಿಮೆ ಆಗಿದೆ ಎನ್ನುತ್ತಾರೆ ತಜ್ಞರು. “ಜನಸಂಖ್ಯೆ ಹೆಚ್ಚಿದ್ದು, ಹಸಿರೀಕರಣಶೇ. 88 ಕಡಿಮೆಯಾಗಿದೆ. ನೀರಿನ ಹಾಹಾಕಾರ ಮಾತ್ರ ತೀವ್ರವಾಗುತ್ತಿದೆ. ಕೆರೆಗಳು ಕಳೆದುಹೋಗಿವೆ. ಉಳಿದವೂ ಕುಡಿಯಲು ಯೋಗ್ಯವಾಗಿಲ್ಲ. ಉದಾಹರಣೆಗೆ ನಾಗಶೆಟ್ಟಿಹಳ್ಳಿಯಲ್ಲಿ ಕೆರೆ ಇದ್ದಾಗ ಕೇವಲ 150 ಅಡಿಗೆ ನೀರು ಸಿಗುತ್ತಿತ್ತು. ಈಗ 1,500 ಅಡಿ ಹೋಗಬೇಕಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್‌ ಫಾರ್‌ ಇಕಾಲಾಜಿಕಲ್‌ ಸೈನ್ಸಸ್‌ನ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ ತಿಳಿಸುತ್ತಾರೆ.

ಸಮಸ್ಯೆಗೆ ಪರಿಹಾರವೇನು? :

ಬೆಂಗಳೂರು ಮೂಲತಃ ಕೆರೆಗಳ ತವರು. ಇಲ್ಲಿ ಕೆರೆಗಳ ಮೂಲಕ ಮಳೆ ನೀರು ಸಂಗ್ರಹ ಹೆಚ್ಚು ಪರಿಣಾಮಕಾರಿಯಾಗಿ ಮಾಡಲು

ಸಾಧ್ಯವಿದೆ. ಮಳೆ ನೀರು ಕೆರೆಗಳಿಗೆ ಸೇರುವಂತೆ ಮಾಡಬೇಕು. ಚರಂಡಿ ನೀರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಈ ವ್ಯವಸ್ಥೆಸಮರ್ಪಕವಾಗಿ ಜಾರಿಗೆ ಬಂದರೆ, ನೀರಿನ ಬೇಡಿಕೆ ಶೇ.30ರಿಂದ 40ರಷ್ಟು ತಗ್ಗಿಸಬಹುದು. ಮಳೆ ನೀರು ಕೆರೆಗಳಲ್ಲಿಸಂಗ್ರಹವಾಗುವುದರಿಂದ ಸುತ್ತಲಿನ ವಾತಾವರಣತಂಪಾಗಿರುತ್ತದೆ. ಇದಕ್ಕೂ ಮುನ್ನ ಕೆರೆಗಳು ಸರಪಳಿಯಂತೆ ಒಂದಕ್ಕೊಂದು ಲಿಂಕ್‌ ಆಗಿವೆ. ಆ ಕೆರೆಗಳ ಮೇಲ್ಮೆ„ ಮತ್ತುಅಂತರ್ಜಲ, ಆ ಭಾಗದಲ್ಲಿನ ಮಳೆ ಪ್ರಮಾಣ, ಅದರಗುಣಲಕ್ಷಣ ಸೇರಿದಂತೆ ಸಮಗ್ರ ಅಧ್ಯಯನ ವೈಜ್ಞಾನಿಕವಾಗಿಇದುವರೆಗೂ ನಡೆದಿಲ್ಲ. ಈ ಕೆಲಸ ಮೊದಲು ಆಗಬೇಕು ಎಂದುಜಲ ವಿಜ್ಞಾನಿ ಡಾ.ವಿ.ಎಸ್‌. ಪ್ರಕಾಶ್‌ ತಿಳಿಸುತ್ತಾರೆ. ಇನ್ನು ಮಳೆನೀರು ಕೊಯ್ಲು ಕಡ್ಡಾಯ ಎಂದು ಸರ್ಕಾರಿ ಸಂಸ್ಥೆಗಳು ಹೇಳುತ್ತವೆ. ಸೂಕ್ತ ಅನುಷ್ಟಾನವಾದರೆ ಅಂತರ್ಜಲ ವೃದ್ಧಿಸುತ್ತದೆ.

ನಗರಕ್ಕೆ ಪೂರೈಕೆಯಾಗುವ ನೀರು :

  • 230 ಕೋಟಿ ಲೀ. ನಗರದ ದಿನದ ನೀರಿನ ಬೇಡಿಕೆ
  • 145 ಕೋಟಿ ಲೀ. ಕಾವೇರಿಯಿಂದ ಪೂರೈಕೆಯಾಗುವ ನೀರು
  • ಶೇ. 30 ಪೂರೈಕೆಯಾಗುವ ನೀರಿನ ಸೋರಿಕೆ

ಯಾವ ಹಂತದಲ್ಲಿ ಎಷ್ಟು ನೀರು ಪೂರೈಕೆ? :

  • 2 ಕೋಟಿ ಲೀ. ಕಾವೇರಿ ಮೊದಲ ಹಂತದಲ್ಲಿ ಪೂರೈಕೆ
  • 9 ಕೋಟಿ ಲೀ. ಎರಡನೇ ಹಂತ
  • 9 ಕೋಟಿ ಲೀ. ಮೂರನೇ ಹಂತ
  • 1 ಕೋಟಿ ಲೀ. ನಾಲ್ಕನೇ ಹಂತದ 1ನೇ ಘಟ್ಟ
  • 9 ಕೋಟಿ ಲೀ. ಕಾವೇರಿ 4ನೇ ಹಂತದ 2ನೇ ಘಟ್ಟ

ಟಾಪ್ ನ್ಯೂಸ್

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

3

Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ 

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.