Bengaluru Kambala: ಐಟಿ ಸಿಟಿಯಲ್ಲಿ ಕಂಬಳ

ಕರಾವಳಿ ಗ್ರಾಮೀಣ ನೆಲದ ಕ್ರೀಡೆಗೆ ಸಾಕ್ಷಿಯಾಗಲಿದೆ ಅರಮನೆ ಮೈದಾನ

Team Udayavani, Nov 20, 2023, 10:56 AM IST

TDY-4

ಕಂಬಳ’ ಹೆಸರು ಕೇಳಿದಾಕ್ಷಣ ತುಳುನಾಡಿನ ಜನರಲ್ಲಿ ಅದೇನೋ ಒಂದು ತೆರನಾದ ನವೋಲ್ಲಾಸ, ಹುರುಪು, ಸಂಭ್ರಮ. ಕಂಬಳ ಧಾರ್ಮಿಕ ಆಚರಣೆ, ಪ್ರತಿಷ್ಠೆಯ ಸಂಕೇತವೂ ಹೌದು. ಶತಮಾನದ ಇತಿಹಾಸವಿರುವ ಕಂಬಳ ಅಪ್ಪಟ ಕರಾವಳಿ ಗ್ರಾಮೀಣ ನೆಲದ ಕ್ರೀಡೆ. ಮೊದಲ ಬಾರಿಗೆ ಸಿಲಿಕಾನ್‌ ಸಿಟಿಯಲ್ಲಿ ಆಯೋಜಿಸಲಾಗುತ್ತಿದೆ. ಮೂಲಕ ರಾಜ್ಯ ಹಾಗೂ ರಾಷ್ಟ್ರದಿಂದ ಬಂದ ಬೆಂಗಳೂರಿನಲ್ಲಿ ನೆಲೆಸಿದವರಿಗೆ ಕರಾವಳಿ ಗ್ರಾಮೀಣ ಕ್ರೀಡೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಕಂಬಳದ ತಯಾರಿ ಹೇಗಿದೆ? ಬನ್ನಿ ಒಂದು ಸುತ್ತು ಹಾಕಿ ಬರೋಣ.

ಕರಾವಳಿಯ ಕೆಸರು ಗದ್ದೆಯಲ್ಲಿ ಬಿರುಸಿನಿಂದ ಓಡಿ ವಿಜಯ ಪತಾಕೆ ಹಾರಿಸುತ್ತಿದ್ದ ಕಂಬಳದ ಕೋಣಗಳು ನಿಧಾನವಾಗಿ ಸಿಲಿಕಾನ್‌ ಸಿಟಿಯತ್ತ ಹೆಜ್ಜೆ ಹಾಕಲಾರಂಭಿಸಿವೆ. ಕಡಲತಡಿಯ ಜನರಿಗೆ ಸೀಮಿತವಾಗಿದ್ದ “ಕಂಬಳ’ ಎಂಬ ಸಂಸ್ಕೃತಿಯನ್ನು ನಾನಾ ಭಾಗದ ಜನರಿರುವ ಬೆಂಗಳೂರಿಗೆ ಪರಿಚಯಿಸುವುದರ ಜತೆಗೆ, ಇಲ್ಲಿ ನೆಲೆಸಿರುವ ಕರಾವಳಿಗರಿಗೂ ರಸಗವಳದ ಸವಿ ನೀಡಲಿದೆ.

ತಮ್ಮದೇ ಸಂಸ್ಕೃತಿಯನ್ನು ತಾವಿರುವಲ್ಲೇ ಆಚರಿಸುವ ಸಡಗರದೊಂದಿಗೆ ಕಡಲೂರ ಮಕ್ಕಳು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಕಂಬಳವನ್ನು ಉತ್ಸವದ ರೀತಿಯಲ್ಲಿ ಆಚರಿಸುತ್ತಾರೆ. ಅದೇ ಸಡಗರ ಹಾಗೂ ಉತ್ಸಾಹವನ್ನು ಬೆಂಗಳೂರಿನಲ್ಲಿ ಸಹ ಕಾಣಬಹುದಾಗಿದೆ. ಕೆಸರುಗದ್ದೆಯ ಪರಿಮಳ, ಕಂಬಳದ ವಾದ್ಯ, ಕಹಳೆ, ಡೋಲುಗಳ ನಾದಗಳ ವೈಭೋಗಕ್ಕೆ ಬೆಂಗಳೂರು ಕಂಬಳ ಸಾಕ್ಷಿಯಾಗಲಿದೆ.

ವಿಶಾಲವಾದ 70 ಎಕರೆ ಸ್ಥಳವಿರುವ ಅರಮನೆ ಮೈದಾನದ ಗೇಟ್‌ 5ರಲ್ಲಿ ಕಂಬಳ ಕ್ರೀಡಾಕೂಟ ನಡೆಯಲಿದೆ. ನ.25ರಂದು ಕಂಬಳಕ್ಕೆ ಚಾಲನೆ ಸಿಗಲಿದೆ. ಅಂದು ಬೆಳಗ್ಗೆ 10.30ರಿಂದ ನ.26ರ ಸಂಜೆವರೆಗೆ ನಿರಂತರವಾಗಿ ಕಂಬಳ ನಡೆಯಲಿದೆ.

ದಾಖಲೆ ನಿರ್ಮಿಸಿದ ಕಣ:

ಪ್ರಸ್ತುತ ಬೆಂಗಳೂರಿನ ಅರಮನೆ ಮೈದಾನದ 70 ಸ್ಥಳದಲ್ಲಿ ಕಂಬಳವನ್ನು ಆಯೋಜಿಸಲಾಗಿದೆ. 155 ಮೀಟರ್‌ನ ಕೆರೆ (ಕಣ) ನಿರ್ಮಿಸುವ ಮೂಲಕ ಅತೀ ದೊಡ್ಡ ಕೆರೆ ಎನ್ನುವ ಇತಿಹಾಸ ಸೃಷ್ಟಿ ಮಾಡಿದೆ. ಸಾಮಾನ್ಯ ಕರಾವಳಿ ಕಂಬಳದಲ್ಲಿ ಕೆರೆ 147 ಮೀಟರ್‌ ಇರುತ್ತದೆ. ಕೆರೆಯಲ್ಲಿ ಏಕಕಾಲಕ್ಕೆ ಎರಡು ಜೋಡು ಕೋಣಗಳು ಓಡಲು ಅವಕಾಶ ಕಲ್ಪಿಸಲಾಗಿದೆ.

ಕಣದ ವಿಶೇಷತೆ:

ಹಸನಾದ ಮಣ್ಣು ಜಿಗುಟಾಗದಿರಲು ಮರಳು ಸೇರಿಸಿ ನೀರು ನಿಲ್ಲಿಸಿ ಕೃತಕವಾಗಿ ಕೆಸರ ಗದ್ದೆ ನಿರ್ಮಾಣ ಮಾಡಲಾಗಿದೆ. ಕಣವು ಒಂದು ಬದಿಯಿಂದ ಇಳಿಜಾರಾಗಿ ಕಣದೊಳಕ್ಕೆ ಕೋಣಗಳನ್ನು ಇಳಿಸಲು ದಾರಿ ನಿರ್ಮಿಸಲಾಗಿದೆ. ಮುಕ್ತಾಯದ ಕೊನೆಯಲ್ಲಿ ಕಣದಿಂದ ಏರಿಯೊಂದನ್ನು ರಚಿಸಿರುತ್ತಾರೆ. ವೇಗವಾಗಿ ಓಡಿ ಬಂದ ಕೋಣಗಳ ವೇಗಕ್ಕೆ ಈ ಏರಿಯು ಕಡಿವಾಣ ಹಾಕುತ್ತದೆ.

200 ಕೋಣಗಳು ಆಗಮನ!:  

ಉಡುಪಿ, ಮಂಗಳೂರು ಭಾಗದಿಂದ 200ಕ್ಕೂ ಅಧಿಕ ಕೋಣಗಳ ಮಾಲೀಕರು ಕಂಬಳದಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡಿದ್ದಾರೆ. 13 ಸೆಕೆಂಡಿನಲ್ಲಿ ಓಟ ಮುಗಿಸುವ ಕೋಣಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ನ.23ರಂದು ಉಪ್ಪಿನಂಗಡಿಯಿಂದ ಲಾರಿ ಮೂಲಕ ಬೆಂಗಳೂರಿಗೆ ಹೊರಡಲಿವೆ. ಅಷ್ಟೂ ಕೋಣಗಳನ್ನು ಹಾಸನ ಹಾಗೂ ನೆಲಮಂಗಲದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಗುತ್ತದೆ. ಕೋಣಗಳಿಗೆ ಈಜಾಡಲು ಹಾಗೂ ವಿಶ್ರಾಂತಿ ತೆಗೆದುಕೊಳ್ಳಲು ಅರಮನೆ ಮೈದಾನದ ಕೆರೆಯನ್ನು ಬಳಸಿಕೊಳ್ಳಲಾಗುತ್ತಿದೆ.

ತಾರೆಯ ದಂಡು!

ಕಂಬಳಕ್ಕೆ ಬಾಲಿವುಡ್‌ ನಟಿ ಐಶ್ವರ್ಯಾ ರೈ, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ , ಯಶ್‌, ದರ್ಶನ್‌, ಸುನೀಲ್‌ ಶೆಟ್ಟಿ ಸೇರಿದಂತೆ ಚಿತ್ರರಂಗದಲ್ಲಿ ಇರುವ ಕರಾವಳಿ ಮೂಲದ ಸಿನಿಮಾತಾರೆಯರು ಆಗಮಿಸಲಿದ್ದಾರೆ. ಇನ್ನೂ ಕ್ರಿಕೆಟಿಗ ಕೆ.ಎಲ್‌. ರಾಹುಲ್‌, ಮೊಹಮ್ಮದ್‌ ಶಮಿ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರು ಕಂಬಳದ ಮೆರಗು ಹೆಚ್ಚಿಸಲಿದ್ದಾರೆ.

ಪ್ರತಿಷ್ಠೆಯ ಸಂಕೇತ:

ಕಂಬಳದ ಕೋಣವನ್ನು ಸಾಕುವುದೆಂದರೆ ಅದು ಸಾಮಾನ್ಯವಲ್ಲ. ಒಳ್ಳೆಯ ಜಾತಿಯ ಕೋಣವನ್ನು ಆರಿಸಿ ಆರೈಕೆ ಮಾಡಿ, ಕಂಬಳಕ್ಕೆ ಸಜ್ಜುಗೊಳಿಸುವುದರ ಜತೆಗೆ ಅಂತಹ ಕೋಣಗಳನ್ನು ಓಡಿಸಲು ಬೇಕಾದ ಜನವನ್ನು ತಯಾರಿ ಮಾಡುವುದೂ ಕೋಣದ ಯಜಮಾನನಿಗೆ ಅಗತ್ಯ. ಇದು ಖರ್ಚಿನ ಬಾಬ್ತೂ  ಹೌದು, ಆ ಕಾರಣಕ್ಕಾಗಿ ಪ್ರತಿಷ್ಠೆಯ ಸಂಕೇತವೂ ಹೌದು.

8 ಲಕ್ಷ ಜನರ ನಿರೀಕ್ಷೆ: 

ಮೊದಲ ಬಾರಿಗೆ ಸಿಲಿಕಾನ್‌ ಸಿಟಿಯಲ್ಲಿ ಕಂಬಳ ನಡೆಯುತ್ತಿರುವ ಹಿನ್ನೆಲೆಯಲ್ಲಿ 5 ರಿಂದ 8 ಲಕ್ಷ ಜನರು ಬರುವ ನಿರೀಕ್ಷೆ ಇದೆ. ಕರಾವಳಿಯಿಂದ ಉದ್ಯೋಗ ಅರಿಸಿಕೊಂಡ ಬಂದವರು ಹಾಗೂ ಕಂಬಳ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಬಂದವರಿಗೆ ಕಂಬಳ ವೀಕ್ಷಣೆಗೆ ಬೇಕಾದ ವಿವಿಐಪಿಗಳಿಗೆ 10,000 ಆಸನದ ವ್ಯವಸ್ಥೆಯನ್ನು ಸಹ ಕಲ್ಪಿಸಲಿದ್ದಾರೆ. ಜತೆಗೆ ಸಾರ್ವಜನಿಕರು ಕಂಬಳವನ್ನು ಕರಾವಳಿ ಗ್ರಾಮೀಣ ಭಾಗದಲ್ಲಿ ವೀಕ್ಷಿಸುವ ಶೈಲಿಯಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಬಹುಮಾನ ಘೋಷಣೆ ಹೇಗೆ?:

ವಿವಿಧ ಭಾಗದಲ್ಲಿ ಕಂಬಳ ನಡೆಯಲಿದ್ದು, ಅದರ ವಿಜಯಶಾಲಿಗಳ ಆಯ್ಕೆ ಭಿನ್ನವಾಗಿರಲಿದೆ. ಹಗ್ಗ, ನೇಗಿಲು, ಹಲಗೆ ಓಟಗಳಲ್ಲಿ ವೇಗ ಮುಖ್ಯವಾಗಿರುತ್ತದೆ. ಯಾವ ಜೋಡಿ ವೇಗವಾಗಿ ಓಟ ಮುಗಿಸುತ್ತವೆಯೋ ಅವು ವಿಜಯೀ ಜೋಡಿಗಳು. ಕೆನೆ ಹಲಗೆ ಓಟ ಸ್ವಲ್ಪ ಭಿನ್ನ, ಓಟದ ಗದ್ದೆಯ ಮಧ್ಯೆ ಅಡ್ಡ ಹಾಯುವಂತೆ ನಿಗದಿತ ಎತ್ತರದಲ್ಲಿ ಮೇಲೆ ಕಟ್ಟಲಾದ ಬಟ್ಟೆಗೆ ತಾಗುವಂತೆ ಕೆನೆ ಹಲಗೆಯ ಮೂಲಕ ಕೆಸರು ನೀರು ಚಿಮ್ಮಿಸಬೇಕು. ಯಾವ ಜೋಡಿ ಅತೀ ಎತ್ತರಕ್ಕೆ ಕೆಸರು ನೀರನ್ನು ಚಿಮ್ಮಿಸುತ್ತವೆಯೋ ಅವು ವಿಜಯಿಯಾಗುತ್ತವೆ. ಹೆಚ್ಚಾಗಿ 7.50 ಕೋಲು ಎತ್ತರದಿಂದ ಈ ಸ್ಪರ್ಧೆ ಆರಂಭವಾಗುತ್ತದೆ. ಈ ಪ್ರತಿಯೊಂದು ವಿಧದಲ್ಲೂ ಕಿರಿಯ ಮತ್ತು ಹಿರಿಯ ವಿಭಾಗಗಳಿರುತ್ತವೆ.

ಯಾವಾಗ ಕಂಬಳ?

ನ.25, 26ರಂದು

8000:  ಕಾರು ಹಾಗೂ ಬೈಕ್‌ ಪಾರ್ಕಿಂಗ್‌

600:  ವಿಐಪಿ ಕಾರು ಪಾರ್ಕಿಂಗ್‌

200:  ಲಾರಿಗಳಿಗೆ ಪ್ರತ್ಯೇಕ ವ್ಯವಸ್ಥಿತ ಪಾರ್ಕಿಂಗ್‌

ಗೆದ್ದವರಿಗೆ ಚಿನ್ನ!:

ಕರಾವಳಿಯಲ್ಲಿ ನಡೆಯುವ ಕಂಬಳದಲ್ಲಿ ಗೆದ್ದ ಜೋಡಿ ಕೋಣಗಳಿಗೆ 1 ಪವನ್‌ (8 ಗ್ರಾಂ) ಚಿನ್ನ ಹಾಗೂ 50,000 ನಗದು ಪುರಸ್ಕಾರ ನಿಗದಿಯಾಗಿರುತ್ತದೆ. ಆದರೆ, ಬೆಂಗಳೂರು ಕಂಬಳದಲ್ಲಿ ಪ್ರಥಮ ಬಹುಮಾನ ಪಡೆದ ಜೋಡಿಗೆ 2 ಪವನ್‌ (16 ಗ್ರಾಂ) ಚಿನ್ನ ಹಾಗೂ 1 ಲಕ್ಷ ನಗದು, ದ್ವಿತೀಯ ಬಹುಮಾನ 1 ಪವನ್‌ ಚಿನ್ನ ಹಾಗೂ 50 ಸಾವಿರ ನಗದು, 3ನೇ ಬಹುಮಾನ 25,000 ರೂ. ನಗದು ಬಹುಮಾನವಿದೆ.

170 ಸ್ಟಾಲ್‌- ಕರಾವಳಿ ಖಾದ್ಯ:

ಕಂಬಳದಲ್ಲಿ 170 ಮಳಿಗೆಗಳು ಕರಾವಳಿಯ ಖಾದ್ಯಗಳನ್ನು ಉಣಬಡಿಸಲಿವೆ. ಪುಂಡಿ ಗಸಿ, ನೀರು ದೋಸೆ, ಚಿಕನ್‌ ಸುಕ್ಕಾ, ಕೊಟ್ಟೆ ಕಡಬು, ಮಂಗಳೂರು ಬನ್ಸ್‌, ಸುಕ್ಕಿನ ಉಂಡೆ, ಗೋಳಿ ಬಜೆ, ಪತ್ರೊಡೆ, ಫಿಶ್‌ ಫ್ರೈ, ಮೀನ್‌ ಸಾರು, ಹಾಲು ಬಾಯಿ, ಚಟ್ನಿ ಸಾರು, ಮರ ಗೆಣಸು ಸೇರಿದಂತೆ ಖಾದ್ಯಗಳು ಇರಲಿವೆ.

ಯಾವ ಓಟಗಳಿವೆ?:

ಬೆಂಗಳೂರು ಕಂಬಳದಲ್ಲಿ ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ಕಂಬಳ ಕ್ರೀಡಾಕೂಟ ನಡೆಯಲಿದೆ. ಹಗ್ಗದ ಓಟ :

ಎರಡು ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗದ ಮಧ್ಯೆ ಹಗ್ಗವೊಂದನ್ನು ಕಟ್ಟಿ, ಆ ಹಗ್ಗವನ್ನು ಹಿಡಿದು ಕೋಣಗಳನ್ನು ಓಡಿಸುವುದು.

ನೇಗಿಲು ಓಟ:

ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗವೊಂದರ ಮಧ್ಯೆ ಮರದ ದಂಡವನ್ನು ಕಟ್ಟಿ, ಆ ದಂಡದ ಕೊನೆಗೆ ಸಣ್ಣ ನೇಗಿಲಿನಾಕಾರದ ಮರದ ತುಂಡೊಂದನ್ನು ಜೋಡಿಸಿ, ಆ ನೇಗಿಲನ್ನು ಹಿಡಿದು ಕೋಣಗಳನ್ನು ಓಡಿಸುವುದು.

ಅಡ್ಡ ಹಲಗೆ ಓಟ:

ನೊಗದ ಮಧ್ಯೆ ಉದ್ದನೆಯ ದಂಡು ಇರುವ ಅಡ್ಡ ಹಲಗೆಯನ್ನು ಕಟ್ಟಿ, ಆ ಹಲಗೆಯ ಮೇಲೆ ನಿಂತು ಕೋಣಗಳನ್ನು ಓಡಿಸುವುದು. ಈ ತರಹದ ಹಲಗೆಯನ್ನು ಉತ್ತ ಗದ್ದೆಯ ಮಣ್ಣನ್ನು ಸಮನಾಗಿ ಹರಡಲು ಉಪಯೋಗಿಸುತ್ತಾರೆ.

ಕೆನೆ ಹಲಗೆ ಓಟ:

ನೊಗದ ಮಧ್ಯೆ ಉದ್ದನೆಯ ದಂಡು ಇರುವ ದಪ್ಪನೆಯ ಮರದ ತುಂಡಿನಿಂದ ಮಾಡಿದ ಕೆನೆ ಹಲಗೆಯನ್ನು ಕಟ್ಟಿ ಅದರ ಮೇಲೆ ಒಂದು ಕಾಲನ್ನಿಟ್ಟು ಕೋಣಗಳನ್ನು ಓಡಿಸುವುದು. ಇದರಲ್ಲಿ ಕೆನೆ ಹಲಗೆಯಿಂದ ಮೇಲಕ್ಕೆ ಕೆಸರು ನೀರು ಚಿಮ್ಮಿಸುವುದು ಮುಖ್ಯ

ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.