Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Team Udayavani, Nov 18, 2024, 8:18 AM IST
ಬೆಂಗಳೂರು: ತೋಟಗಾರಿಕೆ ಬೆಳೆ, ಆಹಾರ ಉತ್ಪನ್ನ ಬೆಳೆ, ಆಧುನಿಕ ಕೃಷಿ ಉಪಕರಣಗಳು, ಔಷಧ-ಗೊಬ್ಬರ, ಬೀಜಗಳ ಮಾರಾಟ, ತಲಾವಾರು ಹಸು, ಹೋರಿ, ಕೋಳಿ, ಕುರಿ, ಮೀನು, ಜೇನು ಹೀಗೆ ವಿವಿಧ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಕಣಜವಾಗಿದ್ದ “ಕೃಷಿ ಮೇಳ’ಕ್ಕೆ ಭಾನುವಾರ ಅದ್ಧೂರಿ ತೆರೆ ಬಿದ್ದಿತು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ ಆವರಣದಲ್ಲಿ ಕಳೆದ 4 ದಿನಗಳಿಂದ ಹಮ್ಮಿಕೊಂಡಿದ್ದ “ಕೃಷಿ ಮೇಳ-2024’ಕ್ಕೆ ವಾರಾಂತ್ಯ ಹಾಗೂ ಕೊನೆಯ ದಿನವಾಗಿದ್ದ ಭಾನುವಾರವು ಲಕ್ಷ-ಲಕ್ಷ ಸಂಖ್ಯೆಯಲ್ಲಿ ಜನ ಆಗಮಿಸಿ, ಕೃಷಿ ಮೇಳವನ್ನು ಯಶಸ್ವಿಗೊಳಿಸಿದರು. ಕೆಲವರು ಆಹಾರ ಉತ್ಪನ್ನ ಬೆಳೆ, ಪಾಲಿಹೌಸ್ ಬೆಳೆ ಹಾಗೂ ಆಧುನಿಕ ಕೃಷಿ ಯಂತ್ರೋಪಕರಣಗಳತ್ತ ಗಮನ ಹರಿಸಿದರೆ, ಇನ್ನೂ ಕೆಲವರು ಪ್ರಾಣಿ-ಪಕ್ಷಿ, ಜಲಚರಗಳತ್ತ ಆಸಕ್ತಿ ತೋರುತ್ತಿದ್ದದ್ದು ಕಂಡು ಬಂದಿತು.
ಒಟ್ಟು 34.13 ಲಕ್ಷ ಜನ ಭಾಗಿ: ಕಳೆದ ಗುರುವಾರದಿಂದ ಪ್ರಾರಂಭಾಗಿದ್ದ ಕೃಷಿ ಮೇಳಕ್ಕೆ ಭಾನುವಾರ ತೆರೆ ಕಂಡಿದ್ದು, ಮೊದಲ ದಿನ 3.82 ಲಕ್ಷ ಮಂದಿ ಆಗಮಿಸಿದ್ದರು. ಅದೇ ರೀತಿ ಎರಡನೇ ದಿನ (ಶುಕ್ರವಾರ) 7.60 ಲಕ್ಷ, 3ನೇ ದಿನ (ಶನಿವಾರ) 10.25 ಲಕ್ಷ ಹಾಗೂ ಕೊನೆಯ ದಿನ (ಭಾನುವಾರ) 12.46 ಲಕ್ಷ ಭೇಟಿ ನೀಡಿದ್ದು, 4 ದಿನಗಳಲ್ಲಿ ಒಟ್ಟಾರೆ 34.13 ಲಕ್ಷ ಮಂದಿ ಕೃಷಿ ಮೇಳಕ್ಕೆ ಭೇಟಿ ನೀಡಿದ್ದಾರೆ.
6 ಕೋಟಿ ರೂ. ವಹಿವಾಟು: ಕೃಷಿ ಮೇಳದಲ್ಲಿ ಊಟ, ಗಿಡ ಖರೀದಿ, ಬೀಜ ಖರೀದಿ ಹಾಗೂ ಇನ್ನಿತರೆ ಮಳಿಗೆಗಳಿಂದ ಮೊದಲ ದಿನ 85 ಲಕ್ಷ ರೂ., 2ನೇ ದಿನ 1.25 ಕೋಟಿ ರೂ., 3ನೇ ದಿನ 1.75 ಕೋಟಿ ಹಾಗೂ ಕೊನೆಯ ದಿನ 2.32 ಕೋಟಿ ರೂ. ಸೇರಿ ಒಟ್ಟು ನಾಲ್ಕು ದಿನಗಳಲ್ಲಿ 6.17 ಕೋಟಿ ರೂ.ಗಳಷ್ಟು ವಹಿವಾಟು ನಡೆದಿದೆ. ಅದೇ ರೀತಿ, ಕೃಷಿ ವಿವಿಯಿಂದ ಆಯೋಜಿಸಿದ್ದ ಹಳ್ಳಿ ಸೊಗಡಿನ ಭೋಜನಾಯದಲ್ಲಿ ಮೊದಲ ದಿನ 9,350 ಮಂದಿ ರಿಯಾಯಿತಿ ದರದಲ್ಲಿ ಮಧ್ಯಾಹ್ನದ ಊಟ ಸವಿದರೆ, 2ನೇ ದಿನ 13,611 ಮಂದಿ, 3ನೇ ದಿನ 15,500 ಜನ ಹಾಗೂ ಕೊನೆಯ ದಿನ 14,650 ಸೇರಿ ಒಟ್ಟು 4 ದಿನದಲ್ಲಿ 53,111 ಮಂದಿ ಮಧ್ಯಾಹ್ನ ಮುದ್ದೆ ಊಟ ಸವಿದಿದ್ದಾರೆ. ಬೆಂಗಳೂರು ಗ್ರಾಮಾಂತರ ಹಾಗೂ ಸುತ್ತಲಿನ ಜಿಲ್ಲೆಗಳಿಂದ ನರ್ಸರಿ ಮಳಿಗೆಗಳನ್ನು ಹಾಕಲಾಗಿದ್ದು, ಎಲ್ಲಾ ಮಳಿಗೆಗಳಲ್ಲಿ ಗಿಡ ಖರೀದಿಗೆ ಜನ ಮುಗಿಬಿದ್ದಿದ್ದರು. ತೋಟಗಾರಿಕಾ ಗಿಡಗಳಾದ ಮಾವು, ಹಲಸು, ಸಪೋಟ, ನಿಂಬೆ ಇತ್ಯಾದಿ, ಅಲಂಕಾರಿ ಗಿಡಗಳು, ಶ್ರೀಗಂಧ, ತೇಗ, ಬೀಟೆ, ತುಳಸಿ, ತರಕಾರಿ ಸಸಿಗಳನ್ನು ಹೆಚ್ಚಾಗಿ ಖರೀದಿಸಿದರು.
ಎಣ್ಣೆ ಗಾಣ: ಕೃಷಿಮೇಳದಲ್ಲಿ ಅಳವಡಿಸಿದ್ದ ಎಣ್ಣೆ ಗಾಣವನ್ನು ಸಾರ್ವಜನಿಕರು ಸುತ್ತಲೂ ನಿಂತು ವೀಕ್ಷಿಸಿದರೆ, ಮಕ್ಕಳು ಎಣ್ಣೆ ಗಾಣದ ಮೇಲೆ ಕುಳಿತು ಗಾಣವನ್ನು ತಿರುಗಿಸುತ್ತಾ, ಸಂತೋಷ ಪಡುತ್ತಿದ್ದರು.
ಗಮನ ಸೆಳೆದ ಸಗಣಿ ಉತ್ಪನ್ನಗಳು: ಸಾಮಾನ್ಯವಾಗಿ ಸಗಣಿಯಿಂದ ಗೊಬ್ಬರ, ಧೂಮ, ವಿಭೂತಿ ತಯಾರಿಸುತ್ತಾರೆ. ಆದರೆ, ಇಲ್ಲೊಬ್ಬರು ಸಗಣಿಯಿಂದ ಗಣೇಶ, ಬುದ್ಧ, ಕೃಷ್ಣ, ಹಸು-ಕರು ಇತ್ಯಾದಿ ಮೂರ್ತಿಗಳು, ಬಾಗಿಲು ತೋರಣ, ಕೀ-ಬಂಚ್, ಮನೆ ಹಾಗೂ ಆಫೀಸ್ ಟೇಬಲ್ ಅಲಂಕಾರಿಕ ವಸ್ತುಗಳು ಹಾಗೂ ಉಡುಗೊರೆ ಕೊಡುವ ಕಲಾಕೃತಿಗಳನ್ನು ತಯಾರಿಸುತ್ತಾರೆ. ಅವರೇ ಮಳವಳ್ಳಿಯ ಪ್ರತಾಪ್ ಜಾದವ್. ಪ್ರತಾಪ್ ಅವರು ಸುಮಾರು 5 ವರ್ಷಗಳಿಂದ ಉತ್ಪನ್ನಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಪ್ರತಾಪ್ ಮನೆಯಲ್ಲಿ 15 ನಾಟಿ ಹಸುಗಳಿದ್ದು, ಅವುಗಳ ಸಗಣಿಯಿಂದ ಕುಟುಂಬಸ್ಥರು ಸೇರಿಕೊಂಡು ಅವರದ್ದೇ ಆದ ಶೈಲಿಯ ಉತ್ಪನ್ನಗಳನ್ನು ತಯಾರಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.