Bengaluru rain: ಮಧ್ಯಾಹ್ನದ ವರುಣಾರ್ಭಟಕ್ಕೆ ನಗರ ಕೂಲ್‌


Team Udayavani, May 4, 2024, 10:34 AM IST

1

ಬೆಂಗಳೂರು: ಬಿಸಿಲಿನ ಧಗೆಯಿಂದ ಕಾದ ಹೆಂಚಾಗಿದ್ದ ಸಿಲಿಕಾನ್‌ ಸಿಟಿ ವರುಣನ ಸಿಂಚನಕ್ಕೆ ತಂಪಾಯಿತು. ಸತತ ಎರಡನೇ ದಿನವೂ ಹಲವು ಪ್ರದೇಶಗಳಲ್ಲಿ ಮಳೆಯ ಆಟಾಟೋಪ ಮುಂದು ವರಿಯಿತು. ಬಸವಳಿದಿದ್ದ ಜನ ಸಂಚಾರದಟ್ಟಣೆ, ರಸ್ತೆಗಳ ಜಲಾವೃತದ ನಡುವೆಯೂ ವರ್ಷದ ಮಳೆಗೆ ಮೈಯೊಡ್ಡಿ ಸಂಭ್ರಮಿಸಿದರು.

ಮಳೆಯಿಂದ ಹಲವು ರಸ್ತೆಗಳು ಜಲಾವೃತ ಗೊಂ ಡವು. ಸಂಚಾರಕ್ಕೆ ಅಡ್ಡಿ ಉಂಟಾಯಿತು. ಸಂಜೆ ವೇಳೆ ಕೆಲಸ ಮುಗಿಸಿ ಮನೆಯತ್ತ ತೆರಳುತ್ತಿದ್ದವರು ಪರದಾಡಿದರು. ಮಳೆಯ ಹಿನ್ನೆಲೆಯಲ್ಲಿ ಬೈಕ್‌ ಸವಾರರು ಅಲ್ಲಲ್ಲಿ ಬಸ್‌ನಿಲ್ದಾಣಗಳು, ಅಂಡರ್‌ಪಾಸ್‌ಗಳ ಮೊರೆಹೋದರೆ, ಹಲವರು ಮಳೆ ನಡುವೆಯೇ ಪಯಣ ಮುಂದು ವರಿಸಿದರು. ತೊಯ್ದುತೊಪ್ಪೆಯಾದರೂ ಮಳೆಯಿಂದ ಮುಖದಲ್ಲಿ ನೆಮ್ಮದಿಯ ನಿಟ್ಟುಸಿರು ಕಂಡುಬಂತು.

ಮಳೆಯಲ್ಲಿ ಮಿಂದೆದ್ದ ನಗರದ ಸೌಂದರ್ಯವನ್ನು ಅಪಾರ್ಟ್‌ಮೆಂಟ್‌, ವಾಣಿಜ್ಯ ಸಂಕೀರ್ಣಗಳು ಸೇರಿದಂತೆ ತಾವಿದ್ದಲ್ಲಿಂದಲೇ ಮೊಬೈಲ್‌ನಲ್ಲಿ ಸೆರೆಹಿಡಿ ಯುವ ದೃಶ್ಯಗಳು ಸಾಮಾನ್ಯವಾಗಿದ್ದವು. ನಂತರ ಅವೆಲ್ಲಾ ಸಾಮಾಜಿಕ ಜಾಲತಾಣಗಳು, ಸ್ಟೇಟಸ್‌ನಲ್ಲೆಲ್ಲಾ ವಿಜೃಂಭಿಸಿದವು.

ಇನೋವಾ ಕಾರು, ಓಮ್ನಿ ಜಖಂ: ಆರ್‌.ಟಿ. ನಗರದಲ್ಲಿ ಮರ ಉಳಿಬಿದ್ದ ಹಿನ್ನೆಲೆಯಲ್ಲಿ ಇನೋವಾ ಹಾಗೂ ಓಮಿನಿ ಕಾರು ಜಖಂಗೊಂಡವು. ರವೀಂದ್ರ ನಾಥ್‌ ಠಾಗೋರ್‌ ಸರ್ಕಲ್‌ನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದಿತ್ತು. ಅದೃಷ್ಟವಶಾತ್‌ ಕಾರಿನಲ್ಲಿ ಇದ್ದವರಿಗೆ ಯಾವುದೇ ತೊಂದರೆ ಆಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ, ಬಿಬಿಎಂಪಿ ಸಿಬ್ಬಂದಿ ದೌಡಾಯಿ ಸಿದ್ದು, ಮರ ತೆರವುಗೊಳಿಸಿದರು.

ಅಂಡರ್‌ ಪಾಸ್‌ ಬಂದ್‌: ಆನೇಕಲ್‌, ಎಲೆಕ್ಟ್ರಾನಿಕ್‌ ಸಿಟಿ, ಚಂದಾಪುರ, ಅತ್ತಿಬೆಲೆ, ಹೆಬ್ಬಗೋಡಿ ಸೇರಿದಂತೆ ಈ ಭಾಗದ ಹಲವು ಪ್ರದೇಶಗಳಲ್ಲಿ ಜೋರು ಮಳೆ ಸುರಿದಿದೆ. ವಿಧಾನಸೌಧ ಪಕ್ಕದಲ್ಲಿರುವ ಎಂ.ಎಸ್‌ ಬಿಲ್ಡಿಂಗ್‌ ಸುತ್ತಮುತ್ತಲಿನ ರಸ್ತೆಯಲ್ಲಿ ನೀರು ಹರಿಯು ತ್ತಿತ್ತು. ಎಂಎಸ್‌ ಬಿಲ್ಡಿಂಗ್‌ ಸಮೀಪವೇ ಇರುವ ಅಂಡರ್‌ ಪಾಸ್‌ಗಳಿಗೆ ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಲಾಗಿತ್ತು. ಭಾರೀ ಮಳೆಗೆ ಹೊರ ವರ್ತೂಲ ರಸ್ತೆಯ ಹೊರಮಾವು ಅಂಡರ್‌ ಪಾಸ್‌ (ಕೆ.ಆರ್‌ ಪುರಂ ಕಡೆಯಿಂದ ನಾಗವಾರ ಕಡೆಗೆ) ನಲ್ಲಿ ನೀರು ನಿಂತಿತ್ತು. ಮಾನ್ಯತಾ ಟೆಕ್‌ ಪಾರ್ಕ್‌ ಬಳಿಯ ರಸ್ತೆಯಲ್ಲಿ ನೀರು ನಿಂತು ಜನರ ಓಡಾಟಕ್ಕೆ ತೊಂದರೆ ಉಂಟಾಗಿತ್ತು. ಇದ ರಿಂದ ನಾಗವರ ಜಂಕ್ಷನ್‌ ಕಡೆಗೆ ಸಂಚರಿಸುವ ವಾಹನ ಗಳು ನಿಧಾನಗತಿಯಲ್ಲಿ ಸಂಚರಿಸಲು ಸೂಚಿಸಲಾಗಿತ್ತು. ಭರ್ಜರಿ ಮಳೆಗೆ ಕಸ್ತೂರಿ ನಗರದ ಕೆಳಸೇತುವೆ ಬಳಿ ರಸ್ತೆಯಲ್ಲಿ ನೀರು ನಿಂತಿತ್ತು. ಇದರಿಂದ ರಾಮಮೂರ್ತಿ ನಗರದ ಕಡೆಗೆ ನಿಧಾನಗತಿಯ ಸಂಚಾರವಿತ್ತು. ಟ್ರಾಫಿಕ್‌ ಪೊಲೀಸರು ಸಂಚಾರ ದಟ್ಟಣೆ ನಿವಾರಿಸಿದರು.

ಮಳೆ ಆರ್ಭಟಕ್ಕೆ ಕೆ.ಆರ್‌. ಪುರ, ಮಹದೇವಪುರ, ಹೊರಮಾವು ಸೇರಿದಂತೆ ಹಲವು ಪ್ರದೇಶಗಳಲ್ಲಿ ಮರಗಳು ನೆಲಕಚ್ಚಿವೆ. ಆರ್‌.ಟಿ. ನಗರ ಸಮೀಪ ಕಾರಿನ ಮೇಲೆ ಮರಬಿದ್ದಿದ್ದು ಯಾವುದೇ ಅಪಾಯ ಸಂಭವಿ ಸಿಲ್ಲ. ಕೊತ್ತನೂರಿನಲ್ಲಿ ಕಾರ್‌ ಮೇಲೆ ವಿದ್ಯುತ್‌ ಕಂಬಬಿದ್ದ ಬಗ್ಗೆ ವರದಿಯಾಗಿದೆ. ಎಚ್ಚೆತ್ತ ಪಾಲಿಕೆ ಸಿಬ್ಬಂದಿ ಅಪಾಯದ ಸ್ಥಳಕ್ಕೆ ದೌಡಾಯಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ರಾಮಮೂರ್ತಿ ನಗರ ಸೇಂಟ್‌ ಆನ್ಸ್‌ ಶಾಲೆ ಸಮೀಪ ಮಳೆ ನೀರು ಮನೆಯ ಮುಂದೆ ನಿಂತಿತ್ತು. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಪಾಲಿಕೆಯ ಸಹಾಯವಾಣಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಧರೆಗುರುಳಿದ ಮರಗಳು: ಕೆಆರ್‌ ಪುರ, ನಾರಾಯ ಣಪುರ, ಕೊತ್ತನೂರು, ಹೊರಮಾವು, ರಾಜರಾಜೇಶ್ವರಿ ಸರ್ಕಲ್‌, ಜ್ಞಾನಭಾರತಿ, ಕೆ.ಆರ್‌.ಸರ್ಕಲ್‌, ಆರ್‌. ಟಿ.ನಗರ, ಮಹದೇವಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ 15ಕ್ಕೂ ಅಧಿಕ ಮರಗಳು ಧರೆಗು ರುಳಿವೆ. ಮಹಾದೇವಪುರ ವ್ಯಾಪ್ತಿಯಲ್ಲಿ ನಾಲ್ಕೈದು ಮರಗಳು ಬಿದ್ದಿರುವ ಬಗ್ಗೆ ವರದಿಯಾಗಿದೆ ಎಂದು ಬಿಬಿಎಂಪಿ ಕಂಟ್ರೋಲ್‌ ರೂಂ ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಸ್ತೆಯ ಮೇಲೆ ಬಿದ್ದ ಮರ ಗಳನ್ನು ಈಗಾಗಲೇ ತೆರೆವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಎಲ್ಲೂ ಕೂಡ ರಸ್ತೆಗಳ ಮೇಲೆ ನೀರು ನಿಂತಿಲ್ಲ ಎಂದು ತಿಳಿಸಿದ್ದಾರೆ.

ತೀವ್ರ ಗಾಳಿ, ಮಳೆಗೆ ಟ್ರಾನ್ಸ್‌ಫಾರ್ಮರ್ ಸ್ಫೋಟ : ಬೆಂಗಳೂರಿನ ಐಟಿಐ ಲೇಔಟ್‌ನಲ್ಲಿ ಮಳೆಗೆ ಟ್ರಾನ್ಸ್‌ಫಾರ್ಮರ್‌ ಶಾರ್ಟ್‌ ಸರ್ಕಿಟ್‌ ಆಗಿ ಸ್ಫೋಟಗೊಂಡಿತು. ಗಾಳಿ ಮಳೆಗೆ ಮರಗಳ ಎಲೆ ತಾಗಿ ಟಾನ್ಸ್‌ಫಾರ್ಮರ್‌ನಲ್ಲಿ ತಕ್ಷಣ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿತು. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಟ್ರಾನ್ಸ್‌ಫಾರ್ಮರ್‌ ಸ್ಫೋಟದಿಂದಾಗಿ ವಿದ್ಯುತ್‌ ಕಡಿತವಾಗಿತ್ತು. ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ವಿದ್ಯುತ್‌ ತಡೆಯಾಗದಂತೆ ನೋಡಿಕೊಂಡರು. ಕೊತ್ತನೂರು ಬಳಿ ಕಾರಿನ ಮೇಲೆ ವಿದ್ಯುತ್‌ ಕಂಬ ಬಿದ್ದು ಕಾರಿನ ಬ್ಯಾನೆಟ್‌ ಹಾಳಾಗಿತ್ತು. ವಿದ್ಯುತ್‌ ಸಂಪರ್ಕ ಕೆಲಕಾಲ ಸ್ಥಗಿತವಾಗಿತ್ತು. ‌

6, 7ರಂದು ಬೆಂಗ್ಳೂರಲ್ಲಿ ಅಧಿಕ ಮಳೆ‌ ಸಾಧ್ಯತೆ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಭರ್ಜರಿ ಮಳೆಯಾಗಿದ್ದು, ಮೇ 6 ಹಾಗೂ 7ರಂದು ಇನ್ನೂ ಅಧಿಕ ಮಳೆಯಾಗುವ ಲಕ್ಷಣವಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಉಷ್ಣಾಂಶದ ಬೇಗೆಗೆ ಕಂಗೆಟ್ಟು ಹೋಗಿದ್ದ ಸಿಲಿಕಾನ್‌ ಸಿಟಿಯಲ್ಲಿ ಶುಕ್ರವಾರ ಭರ್ಜರಿ ಮಳೆ ಯಾಗಿದ್ದು, ಮತ್ತೆ ಹಿಂದಿನಂತೆ ಕೂಲ್‌ ಸಿಟಿಯಾಗಿ ಮಾರ್ಪಟ್ಟಿದೆ. ಶನಿವಾರ ಹಾಗೂ ಭಾನುವಾರವೂ ಇದೇ ಮಾದರಿಯಲ್ಲಿ ಮಳೆ ಮುಂದುವರೆಯುವ ಲಕ್ಷಣ ಗೋಚರಿಸಿದೆ. ಮೇ 6 ಹಾಗೂ 7ರಂದು ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಟಾಪ್ ನ್ಯೂಸ್

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Lokayukta

MUDA ಮಾಜಿ ಆಯುಕ್ತ ನಟೇಶ್‌ಗೆ ಲೋಕಾ ನೋಟಿಸ್‌

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.