Bengaluru Rain: ರಾಜಧಾನಿಯ ಹಿಂಡಿ ಹಿಪ್ಪೆ ಮಾಡಿದ ಹಿಂಗಾರು
Team Udayavani, Oct 24, 2024, 12:33 PM IST
ಬೆಂಗಳೂರು: ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಸಿಲಿಕಾನ್ ಸಿಟಿ ಭಾಗಶಃ ನುಲುಗಿ ಹೋಗಿದ್ದು, ಇನ್ನೇನು ಕೊಂಚ ಚೇತರಿಸಿಕೊಳ್ಳ ಬೇಕೆನ್ನುವಷ್ಟರಲ್ಲಿ ಬುಧವಾರ ಸಂಜೆ ಮತ್ತೆ ಮಳೆ ಸುರಿದು ಕೆಲವೆಡೆ ಅವಾಂತರ ಸೃಷ್ಟಿಯಾಗಿದೆ.
ಹಲವೆಡೆ ಮಳೆಗೆ ರಸ್ತೆಗಳು ಜಲಾವೃತವಾಗಿ ಕೆರೆಯಂತೆ ನೀರು ನಿಂತಿದ್ದರೆ ಆ ರಸ್ತೆಯಲ್ಲಿ ಸಾಗುವ ವಾಹನ ಸವಾರರ ಪರದಾಟ ಹೇಳತೀರದು. ರಿಚ್‌ಮಂಡ್ ಟೌನ್ ಸೇರಿದಂತೆ ನಗರದ ಕೆಲವು ರಸ್ತೆ ಗಳಲ್ಲಿ ಬೃಹದಾಕಾರದ ಮರ ಧರೆ ಗುರುಳಿ ಜನಜೀವನ ಅಸ್ತವ್ಯಸ್ತಗೊಂಡಿದೆ, ಮತ್ತೂಂ ದೆಡೆ ಮನೆ ಮುಂದೆ ನಿಲುಗಡೆ ಮಾಡಿದ ಕಾರುಗಳು, ಬೈಕ್‌ಗಳು ನೀರಿನಲ್ಲಿ ಅರ್ಧ ಮುಳುಗಿರುವ ದೃಶ್ಯ ಅಲ್ಲಲ್ಲಿ ಕಂಡುಬಂದವು.
ರಾಜ್ಯ ರಾಜಧಾನಿಯಾದ್ಯಂತ ಕಳೆದ 3 ದಿನಗಳಿಂದ ಸಂಜೆಯಾಗುತ್ತಿದ್ದಂತೆ ಮೋಡ ಕವಿದ ಕಾರ್ಮೋಡ ಉಂಟಾಗಿ ಭಾರಿ ಮಳೆ ಸುರಿ ಯುತ್ತಿದೆ. ಇದೇ ವಾತಾವರಣ ಬುಧ ವಾರ ಸಂಜೆಯೂ ಮುಂದು ವರಿದಿದೆ. ಬೆಳಗ್ಗೆ ಬಿಸಿಲಿನ ವಾತಾವರಣವಿದ್ದರೂ ಸಂಜೆಯಾಗುತ್ತಿದ್ದಂತೆ ಮಳೆರಾಯ ಅಬ್ಬರಿಸಿದ್ದಾನೆ. ಮಲ್ಲೇಶ್ವರದ ಹಳ್ಳಿಮನೆ ಮುಂದೆ ಬೃಹದಾಕಾರದ ಮರ ಧರೆಗುರುಳಿ ಅವಾಂತರ ಸೃಷ್ಟಿಯಾದರೆ, ರಿಚ್‌ಮಂಡ್ ಟೌನ್‌ಬಳಿ ಕೊಂಬೆ ಯೊಂದು ರಸ್ತೆಗೆ ಬಿದ್ದು ಸಂಚಾರಕ್ಕೆ ಅಡ್ಡಿ ಯಾಗಿದೆ.
ಇನ್ನು ಜೆ.ಪಿ.ನಗರದಲ್ಲಿ ಆಲಿಕಲ್ಲು ಮಳೆಯಾದರೆ, ವಿಧಾನ ಸೌಧ, ಕೆ.ಆರ್.ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್, ಕೆ.ಆರ್.ಮಾರು ಕಟ್ಟೆ, ಶಾಂತಿನಗರ, ರಿಚ್ಮಂಡ್ ವೃತ್ತ, ಡಾಲರ್ಸ್ ಕಾಲೋನಿ, ಹೆಬ್ಬಾಳ, ಸಂಜಯ್ ನಗರ, ಬಿಇಎಲ್ ರಸ್ತೆ, ಕೆಂಗೇರಿ ಸುತ್ತಮುತ್ತ ಸುರಿದ ಮಳೆಗೆ ರಸ್ತೆಗಳಲ್ಲಿ ನೀರು ತುಂಬಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ಎಲ್ಲೆಂದರಲ್ಲಿ ಟ್ರಾಫಿಕ್ ಜಾಮ್: ಡಾಲರ್ಸ್ ಕಾಲೋನಿ, ರಿಚ್ಮಂಡ್ ಟೌನ್, ಯಲಹಂಕ, ಜಯ ನಗರ, ಮೆಜೆಸ್ಟಿಕ್, ಕೆಆರ್ ಸರ್ಕಲ್, ಶಾಂತಿ ನಗರ, ವಿಧಾನ ಸೌಧ ಸೇರಿದಂತೆ ನಗರದ ಬಹುತೇಕ ಕಡೆ ಗುಡುಗು ಮಿಂಚಿನ ಸಹಿತ ಮಳೆ ಅರ್ಭಟಿಸಿದ ಪರಿಣಾಮ ಈ ಭಾಗಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ಕೆಲವು ಕಡೆಗಳಲ್ಲಿ ಟ್ರಾಫಿಕ್ ಜಾಮ್‌ಗೆ ಜನ ಸಂಪೂರ್ಣವಾಗಿ ಹೈರಾಣಾಗಿ ಹೋಗಿದ್ದಾರೆ.
ಬಹುತೇಕ ನೌಕರರಿಗೆ ಕಚೇರಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಸಮಯದಲ್ಲೇ ಮಳೆ ರಾಯನ ದರ್ಶನವಾಗಿದೆ. ಇನ್ನು ಹೆಬ್ಟಾಳ, ಮೈಸೂರು ರಸ್ತೆ, ತುಮಕೂರು ರಸ್ತೆ, ಎಂಜಿ ರಸ್ತೆ, ಬಳ್ಳಾರಿ ರಸ್ತೆ, ಹೊಸೂರು ರಸ್ತೆ, ಶಾಂತಿ ನಗರ, ಕೋರಮಂಗಲ, ಎಚ್‌ಎಸ್ ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಮಾರತ್ತ ಹಳ್ಳಿ, ಜಯನಗರ, ಜೆಪಿನಗರದಲ್ಲಿ ಸಾಲುಗಟ್ಟಲೆ ವಾಹನಗಳು ರಸ್ತೆಗಳಲ್ಲಿ ನಿಂತಿರುವುದು ಕಂಡು ಬಂತು.
ಕಾರ್ಮೋಡಕ್ಕೆ ಬೆದರಿದ ನಾಗರಿಕರು: ಜಯ ನಗರ, ಜೆ.ಪಿ .ನಗರ, ಎಂ.ಜಿ. ರಸ್ತೆ, ವಿಜಯ ನಗರ, ರಾಜ ರಾಜೇ ಶ್ವರಿ ನಗರ, ರಾಜಾಜಿ ನಗರ ಹಾಗೂ ಕೆ.ಆರ್. ಮಾರು ಕಟ್ಟೆ ಸೇರಿ ದಂತೆ ಬಹುತೇಕ ಮಧ್ಯಾಹ್ನ ಕಪ್ಪು ಕಾರ್ಮೋಡ ಆವರಿಸಿತ್ತು. ಆಗಸದಲ್ಲಿ ಕಪ್ಪು ಮೋಡ ಆವರಿಸುತ್ತಿದ್ದಂತೆ ಜನ ಮಳೆಯ ಮುನ್ನೆಚ್ಚರಿಕೆ ವಗಹಿಸಿ ಕಚೇರಿಗಳಿಂದ ತಮ್ಮ ಮನೆಗಳತ್ತ ಮುಖ ಮಾಡಿರುವ ದೃಶ್ಯ ಕಂಡು ಬಂತು. ಹಲವೆಡೆ ವಿದ್ಯುತ್ ಕಡಿತ ಉಂಟಾದರೆ, ಮಳೆ ಆರಂ ಭಕ್ಕೂ ಮುನ್ನ ಬೆಂಗಳೂರಿನ ಕೆಲವೆಡೆ ಮುನ್ನೆ ಚ್ಚರಿಕಾ ಕ್ರಮವಾಗಿ ವಿದ್ಯುತ್ ಕಡಿತ ಗೊಳಿಸ ಲಾಯಿತು. ಮಳೆ ಸುರಿದ ವೇಳೆ ಇಂಟ ರ್ನೆಟ್ ಸಮಸ್ಯೆಯಿಂದಾಗಿ ಮನೆಯಿಂ ದಲೇ ಕೆಲಸ ನಿರ್ವಹಿಸುವವರು ಒದ್ದಾಡುತ್ತಿದ್ದಾರೆ.
ಜಯನಗರದಲ್ಲಿ 30 ನಿಮಿಷ ವರ್ಷಧಾರೆ: ಜನ ತತ್ತರ: ಜಯನಗರ ಹಾಗೂ ಜೆಪಿನಗರದಲ್ಲಿ ಸುಮಾರು 30 ನಿಮಿಷಗಳ ಕಾಲ ಗುಡುಗಿನಿಂದ ಕೂಡಿದ ಬಿರುಗಾಳಿ ಮಳೆ ಸುರಿದಿದೆ. ಈ ಮಳೆಗೆ ಅಲ್ಲಿನ ನಿವಾಸಿಗಳು ತತ್ತರಿಸಿ ಹೋದರೆ, ಪ್ರಮುಖ ರಸ್ತೆಗಳು, ಬಡಾವಣೆಗಳಲ್ಲಿ ಓಡಾಡಲು ಸಾಧ್ಯವಾಗದೇ ಜನ ಸಾಮಾನ್ಯರು ಪರ್ಯಾಯ ರಸ್ತೆ ಹುಡುಕುತ್ತಿರಯುವುದು ಕಂಡು ಬಂತು. ಧಾರಾಕಾರ ಮಳೆಗೆ ಜಯನಗದಲ್ಲಿ ಮ್ಯಾನ್ ಹೋಲ್ ತೆರೆದು ಚರಂಡಿ ನೀರು ಉಕ್ಕಿ ಹರಿದಿದೆ.
ಬಿಟಿಎಂ ಲೇಔಟ್‌ನಲ್ಲಿ ಗರಿಷ್ಠ 3.8 ಸೆಂ.ಮೀ. ಮಳೆ: ಬಿಟಿಎಂ ಲೇಔಟ್‌ನಲ್ಲಿ 3.8 ಸೆಂ.ಮೀ. ಮಳೆಯಾಗಿದ್ದು, ಇದು ಬುಧವಾರ ಬೆಂಗಳೂರಿನಲ್ಲಿ ಸುರಿದ ಅತ್ಯಧಿಕ ಮಳೆಯ ಪ್ರಮಾಣವಾಗಿದೆ. ಬಿಟಿಎಂ ಲೇಔಟ್ ಆಸು-ಪಾಸಿನಲ್ಲಿರುವ ಜಯನಗರ, ಜೆ.ಪಿ.ನಗರ ಭಾಗವೂ ಇದೇ ವ್ಯಾಪ್ತಿಗೆ ಸೇರುತ್ತವೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಳೆ ಸುರಿದಿರುವುದು ಕಂಡು ಬಂದಿದೆ. ಉಳಿದಂತೆ ದೊರೆಸಾನಿಪಾಳ್ಯ 3.7 ಸೆಂ.ಮೀ., ಪುಲಕೇಶಿನಗರ 3.5, ಬೊಮ್ಮನಹಳ್ಳಿ 3.3, ಮಾರತ್ತಹಳ್ಳಿ 2.9, ಸಂಪಂಗಿರಾಮನಗರ 2.8, ಹಂಪಿನಗರ 2.7, ಕೋಡಿಗೆಹಳ್ಳಿ 2.7, ಅರಕೆರೆ 2.6, ಎಚ್‌ಎಸ್‌ಆರ್ ಲೇಔಟ್ 2.4, ಮಾರುತಿ ಮಂದಿರ 2.3, ಎಚ್‌ಎಎಲ್ 2, ಮನೋರಾಯನಪಾಳ್ಯ 1.9, ಹೆರೋಹಳ್ಳಿ 1.8, ವಿ.ನಾಗೇನಹಳ್ಳಿ 1.3, ವಿವಿಪುರ 1.3, ರಾಜರಾಜೇಶ್ವರಿ ನಗರದಲ್ಲಿ 1.2 ಸೆಂ.ಮೀ. ಮಳೆಯಾಗಿದೆ. ಈ ತಿಂಗಳು ಈವರೆಗೆ ವಾಡಿಕೆಗಿಂತ ಶೇ.92ರಷ್ಟು ಹೆಚ್ಚುವರಿ ಮಳೆ: ಹವಾಮಾನ ಇಲಾಖೆಯು ಗುರುವಾರವೂ ಬೆಂಗಳೂರಿನಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹಳದಿ ಅಲರ್ಟ್ ಘೋಷಿಸಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಅ.1ರಿಂದ 23ರ ವರೆಗೆ ನಗರದಲ್ಲಿ 21.8 ಸೆಂ.ಮೀ. ಮಳೆ ಸುರಿದಿದೆ. 11.3 ಸೆಂ.ಮೀ. ವಾಡಿಕೆ ಮಳೆಯಾಗಿದೆ. ಆದರೆ, ವಾಡಿಕೆಗಿಂತ ಶೇ.92ರಷ್ಟು ಹೆಚ್ಚುವರಿ ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.