Bengaluru: ಅಂಗಡಿ ಮಾಲಿಕನಿಗೆ ಹಲ್ಲೆ: ಇಬ್ಬರ ಸೆರೆ
ಸಿಗರೆಟ್ ನೀಡುವಂತೆ ಮಾಲಿಕನಿಗೆ ಬೆದರಿಕೆ ; ಸಂಜಯನಗರದಲ್ಲಿ ಘಟನೆ
Team Udayavani, Jan 11, 2025, 12:30 PM IST
ಬೆಂಗಳೂರು: ಸಿಗರೆಟ್ ಕೊಡುವ ವಿಚಾರವಾಗಿ ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಇಬ್ಬರನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗುರು (28) ಹಾಗೂ ವಿಶ್ವಾಸ್ (24) ಬಂಧಿತ ಆರೋಪಿಗಳು.
ಬುಧವಾರ ಸಂಜೆ ಸಂಜಯನಗರದ ಭೂಪಸಂದ್ರದಲ್ಲಿರುವ ಶ್ರೀ ಗುರು ರಾಘವೇಂದ್ರ ಕಾಂಡಿಮೆಂಟ್ಸ್ಗೆ ಆರೋಪಿಗಳು ಬಂದಿದ್ದರು. ಸಿಗರೆಟು ಕೊಡುವಂತೆ ಅವಾಚ್ಯ ಶಬ್ದಗಳಿಂದ ಅಂಗಡಿ ಸಿಬ್ಬಂದಿಯನ್ನು ನಿಂದಿಸಿದ್ದರು. ಗ್ರಾಹಕರ ಮುಂದೆ ಜಗಳ ಬೇಡ, ಹಣ ಕೊಟ್ಟರೆ ಸಿಗರೆಟ್ ನೀಡುವುದಾಗಿ ಕಾಂಡಿಮೆಂಟ್ಸ್ ಮಾಲಿಕ ಹೇಳಿದ್ದರು. “ನಮ್ಮ ಬಳಿ ಹಣ ಕೇಳುತ್ತೀಯಾ, ನಾವು ಕೇಳಿದಾಗ ಸಿಗರೆಟ್ ಕೊಡಬೇಕು. ಇಲ್ಲದಿದ್ದರೆ ಅಂಗಡಿ ನಡೆಸಲು ಬಿಡುವುದಿಲ್ಲ’ ಎಂದು ನಿಂದಿಸಿ ಮಾಲಿಕನ ಮೇಲೆ ಹಲ್ಲೆ ಮಾಡಿದ್ದರು.
ಅಂಗಡಿಯಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಆರೋಪಿಗಳು ಹಲ್ಲೆ ನಡೆಸಿರುವ ವಿಡಿಯೋ ಸೆರೆಯಾಗಿತ್ತು. ನಂತರ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಕಾಂಡಿಮೆಂಟ್ಸ್ನ ಸಿಬ್ಬಂದಿಯಿಂದ ದೂರು ಪಡೆದ ಸಂಜಯನಗರ ಠಾಣೆ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಂಜಯ್ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.