ಬೆಂಗಳೂರು ಹಲವೆಡೆ ಭಾರೀ ಮಳೆ; ಧರೆಗುರುಳಿದ ಮರ, ಟ್ರಾಫಿಕ್ ಜಾಮ್
Team Udayavani, Apr 17, 2017, 6:26 PM IST
ಬೆಂಗಳೂರು: ಬಿಸಿಲ ಬೇಗೆಯಿಂದ ಬೇಯುತ್ತಿದ್ದ ಸಿಲಿಕಾನ್ ಸಿಟಿಯಲ್ಲಿ ಸೋಮವಾರ ಸಂಜೆ ಕೆಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆ ಸುರಿಯುವ ಮೂಲಕ ಸ್ವಲ್ಪ ತಂಪನ್ನೆರೆದಿದೆ. ಮತ್ತೊಂದೆಡೆ ಗಾಳಿಗೆ ಮರಗಳು ಧರೆಗುಳಿರುಳಿದ ಘಟನೆ ನಡೆದಿದೆ.
ನಗರದ ಹಲವೆಡೆ ಗಾಳಿ ಸಹಿತ ಸುರಿದ ಮಳೆಗೆ ಕಾಡುಗೋಡಿಯ ಬೆಳ್ತೂರಿನಲ್ಲಿ ಮರವೊಂದು ಧರೆಗುರುಳಿದ ಪರಿಣಾಮ ಫುಟ್ಪಾತ್ ಮೇಲೆ ಇದ್ದ ಪಾನಿಪೂರಿ ಅಂಗಡಿ, ಬೈಕ್ ಜಖಂಗೊಂಡಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿ ತಿಳಿಸಿದೆ.
ಕೋರಮಂಗಲ,ಕೆಆರ್ ಮಾರ್ಕೆಟ್, ಮೆಜೆಸ್ಟಿಕ್, ಎಂಜಿ ರಸ್ತೆ, ಆಡುಗೋಡಿ, ಶಾಂತಿನಗರ, ಚಾಮರಾಜಪೇಟೆ ಸೇರಿದಂತೆ ಹಲವೆಡೆ ಮಳೆ ಸುರಿದಿದೆ. ಮಳೆಯಿಂದಾಗಿ ಬಹುತೇಕ ಕಡೆ ಟ್ರಾಫಿಕ್ ಜಾಮ್ ಸಂಭವಿಸಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.