ವೀಕೆಂಡ್ ನಲ್ಲಿ 34.50 ಲಕ್ಷ ದಂಡ ಸಂಗ್ರಹಿಸಿದ ಬೆಂಗಳೂರು ಸಂಚಾರಿ ಪೊಲೀಸರು!
Team Udayavani, Sep 15, 2019, 5:45 PM IST
ಬೆಂಗಳೂರು: 1988ರ ಮೋಟಾರು ವಾಹನ ಕಾಯ್ದೆ ಅಧಿನಿಯಮಕ್ಕೆ ಕೇಂದ್ರ ಸರಕಾರವು ತಿದ್ದುಪಡಿ ತಂದು ದೇಶಾದ್ಯಂತ ಜಾರಿಗೊಳಿಸಿದ ಬಳಿಕ ಇದೀಗ ಎಲ್ಲೆಡೆಯೂ ದಂಡ ವಸೂಲಾತಿಯದ್ದೇ ಸುದ್ದಿ. ಇತ್ತ ಉದ್ಯಾನ ನಗರಿ ಬೆಂಗಳೂರಿನಲ್ಲೂ ಸಹ ನಗರ ಸಂಚಾರ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರ ಮೇಲೆ ದಂಡ ವಿಧಿಸುತ್ತಿದ್ದಾರೆ.
ಬೆಂಗಳೂರು ನಗರ ಸಂಚಾರ ಪೊಲೀಸ್ ಪ್ರಕಟಿಸಿರುವ ಮಾಹಿತಿಯಂತೆ ಸೆಪ್ಟಂಬರ್ 14ರ ಶನಿವಾರ ಬೆಳಿಗ್ಗೆ 10.00 ಗಂಟೆಯಿಂದ ಸೆಪ್ಟಂಬರ್ 15ರ ಆದಿತ್ಯವಾರ ಬೆಳಗ್ಗಿನ 10.00 ಗಂಟೆಗಳವರೆಗೆ ನಗರದಲ್ಲಿ ವಿವಿಧ ಸಂಚಾರಿ ನಿಯಮ ಉಲ್ಲಂಘನೆಗಳಿಗಾಗಿ ವಾಹನ ಸವಾರರಿಂದ ಸಂಗ್ರಹಿಸಿದ ದಂಡ ಮೊತ್ತ ಬರೋಬ್ಬರಿ 34,72,500 ರೂಪಾಯಿಗಳು!
ಇದರಲ್ಲಿ ಹೆಲ್ಮೆಟ್ ರಹಿತ ಪ್ರಯಾಣಕ್ಕೆ ಸಂಬಂಧಿಸಿದಂತೆ ಅತೀ ಹೆಚ್ಚಿನ ಅಂದರೆ 1909 ಪ್ರಕರಣಗಳು ದಾಖಲಾಗಿದ್ದು ಒಟ್ಟು 4,42,900 ರೂಪಾಯಿಗಳ ದಂಡ ಸಂಗ್ರಹವಾಗಿದೆ. ಇನ್ನು ಹಿಂಬದಿ ಸವಾರರು ಹೆಲ್ಮೆಟ್ ಧರಿಸದೇ ಇದ್ದ 1386 ಪ್ರಕರಣಗಳು ದಾಖಲುಗೊಂಡಿದ್ದು ಇದರಿಂದಾಗಿ ಒಟ್ಟು 4,60,800 ರೂಪಾಯಿಗಳ ದಂಡ ಸಂಗ್ರಹವಾಗಿದೆ.
ಅಸಮಂಜಸ ಪಾರ್ಕಿಂಗ್ ಗೆ ಸಂಬಂಧಪಟ್ಟಂತೆ 1259 ಪ್ರಕರಣಗಳು ದಾಖಲುಗೊಂಡಿದ್ದು ಇದರಿಂದಾಗಿ ಒಟ್ಟಾರೆ 2,84,300 ರೂಪಾಯಿಗಳ ದಂಡ ಸಂಗ್ರಹವಾಗಿದೆ.
ಇನ್ನುಳಿದಂತೆ ಟ್ರಾಫಿಕ್ ಸಿಗ್ನಲ್ ಉಲ್ಲಂಘನೆಯ 1229 ಪ್ರಕರಣ, ನೋ ಎಂಟ್ರಿಯಲ್ಲಿ ವಾಹನ ಚಲಾಯಿಸಿದ 639 ಪ್ರಕರಣ, ಸೀಟ್ ಬೆಲ್ಟ್ ಧರಿಸದಿರುವ 157 ಪ್ರಕರಣ, ಇನ್ಷ್ಯೂರೆನ್ಸ್ ಇಲ್ಲಿದಿರುವ 12 ಪ್ರಕರಣ, ನಂಬರ್ ಪ್ಲೇಟ್ ಇಲ್ಲದಿರುವ 32 ಪ್ರಕರಣ ಹೀಗೆ ಇನ್ನೂ ಹಲವು ಸಂಚಾರಿ ನಿಯಮ ಉಲ್ಲಂಘನೆಗಳಿಗಾಗಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸ್ ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದಿನಾಂಕ 14-09-2019 ಬೆಳಿಗ್ಗೆ 10.00 ಗಂಟೆಯಿಂದ ದಿನಾಂಕ 15-09-2019 ಬೆಳಿಗ್ಗೆ 10.00 ಗಂಟೆಯವರೆಗೆ ಹೊಸ ಅಧಿಸೂಚನೆಯ ನಿರ್ದೇಶನದಂತೆ ದಾಖಲಿಸಲಾದ ಪ್ರಕರಣಗಳು ಮತ್ತು ಸಂಗ್ರಹಿಸಲಾದ ದಂಡದ ಮೊತ್ತ. @blrcitytraffic pic.twitter.com/yrsRzHf21i
— Dr.B.R. Ravikanthe Gowda IPS (@jointcptraffic) September 15, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.