ಪಶು ಕಲ್ಯಾಣ ಸಹಾಯವಾಣಿಗೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ : ಸಚಿವ ಪ್ರಭು ಚವ್ಹಾಣ್
Team Udayavani, Jul 24, 2021, 6:40 PM IST
ಬೆಂಗಳೂರು: ಪಶು ಕಲ್ಯಾಣ ಸಹಾಯವಾಣಿಗೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದು ಪ್ರಾಣಿಗಳ ಆರೋಗ್ಯ ಮತ್ತು ಪಶುವೈದ್ಯಕೀಯ ಸೇವೆಗಳು, ಪಶುಸಂಗೋಪನೆ ಸೇವೆಗಳು, ಪ್ರಾಣಿ ಕಲ್ಯಾಣ ಮತ್ತು ಕ್ರೌರ್ಯ ತಡೆಗಟ್ಟುವಿಕೆ, ಸ್ವಯಂ ಉದ್ಯೋಗದ ಮಾಹಿತಿ ಬಗ್ಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಪ್ರಾಣಿ ಕಲ್ಯಾಣ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದ್ದು ರಾಜ್ಯದ ಎಲ್ಲ ಜಿಲ್ಲೆಗಳಿಂದ ಉತ್ತಮ ಸ್ಪಂದನೆ ದೊರಕಿದೆ. ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿ, ಕಲಬುರ್ಗಿ ಮತ್ತು ತುಮಕೂರು ಜಿಲ್ಲೆಗಳಿಂದ ಹೆಚ್ಚಿನ ಕರೆಗಳು ಬಂದಿವೆ. ಒಂದು ತಿಂಗಳಲ್ಲಿ 9 ಸಾವಿರ ಕರೆಗಳು ವಾರ್ ರೂಮ್ ಗೆ ಬಂದಿದ್ದು ಎಲ್ಲ ಕರೆಗಳನ್ನು ವ್ಯವಸ್ಥಿತವಾಗಿ ನಿಭಾಯಿಸಲಾಗಿದೆ. ಇದಲ್ಲದೇ ಹೋರ ರಾಜ್ಯದಿಂದ ನಮ್ಮ ರಾಜ್ಯದಲ್ಲಿ ಅನುಷ್ಟಾನವಾಗಿರುವ ಯೋಜನೆಗಳು ಹಾಗೂ ತಂತ್ರಜ್ಞಾನ ಕುರಿತಾಗಿ ಕರೆಗಳು ಬಂದಿವೆ.
ರಾಜ್ಯದಲ್ಲಿ ನೂತನವಾಗಿ ಪಶುಸಂಗೋಪನೆ ಇಲಾಖೆ ನಡೆಸಿದ ಈ ಪ್ರಯತ್ನ ರೈತರಿಗೆ, ಜಾನುವಾರು ಸಾಕಣೆದಾರರಿಗೆ, ಸ್ವಯಂ ಉದ್ಯೋಗ ಕಂಡುಕೊಳ್ಳುವವರಿಗೆ ಉಪಯೋಗವಾಗುತ್ತಿರುವುದು ಸಂತಸದ ಸಂಗತಿ. ದಿನದ 24 ಗಂಟೆ 3 ಶೀಪ್ಟ್ ನಲ್ಲಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಇದಲ್ಲದೇ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಟೆಲಿಗ್ರಾಂ, ಟ್ವೀಟರ್ ಮೂಲಕ 1000 ಕ್ಕೂ ಹೆಚ್ಚು ಕರೆಗಳು ಬಂದಿವೆ. ಪಶುಸಂಗೋಪನೆ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ನಡುವೆಯು ಪಶು ಕಲ್ಯಾಣ ಸಹಾಯವಾಣಿಯಿಂದ ಬಂದ ಎಲ್ಲ ಕರೆಗಳನ್ನು ಇಲಾಖೆಯ ಪಶುವೈದ್ಯರು ಹಾಗೂ ಸಿಬ್ಬಂದಿ ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವುದಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಬಿಡಾಡಿ ನಾಯಿಗಳಿಗಾಗಿ ಆಶ್ರಯ ಒದಗಿಸುವ ಕುರಿತು ಬಂದಿರುವ ಸುವಾರು 250 ಕರೆಗಳು ಮಾತ್ರ ಬಾಕಿ ಉಳಿದಿದ್ದು ಉಳಿದೆಲ್ಲ ಕರೆಗಳಿಗೆ ಸಂಪೂರ್ಣವಾಗಿ ಸ್ಪಂದನೆ ನೀಡಲಾಗಿದೆ.
ಪ್ರಾಣಿಗಳ ಆರೋಗ್ಯ ಮತ್ತು ಪಶುವೈದ್ಯಕೀಯ ಸೇವೆಗಳ ಬಗ್ಗೆ 2540 ಕರೆಗಳು, ಪಶು ಸಂಗೋಪನೆ ಸೇವೆಗಳ ಕುರಿತಾಗಿ 1989 ಕರೆಗಳು, ಪ್ರಾಣಿ ಕಲ್ಯಾಣ ಮತ್ತು ಕ್ರೌರ್ಯ ತಡೆಗಟ್ಟುವಿಕೆ ಕುರಿತಾಗಿ 934 ಕರೆಗಳು, ಪಶುಸಂಗೋಪನೆಯಲ್ಲಿ ತಂತ್ರಜ್ಞಾನದ ಹೊಸ ಬಳಕೆ ಕುರಿತಾಗಿ 53 ಕರೆಗಳು, ಸ್ವಯಂ ಉದ್ಯೋಗ, ತರಬೇತಿಗಾಗಿ 2691 ಕರೆಗಳು ಬಂದಿರುತ್ತವೆ.
ಜಿಲ್ಲಾವಾರು ಕರೆಗಳ ವಿವರ
ಬೆಂಗಳೂರು ನಗರ 1644, ಬೆಂಗಳೂರು ಗ್ರಾಮಾಂತರ 192, ಬೀದರ 283, ಬಾಗಲಕೋಟೆ 173, ವಿಜಯಪುರ 228, ಬೆಳಗಾವಿ 421, ಬಳ್ಳಾರಿ 300, ಚಾಮರಾಜನಗರ 88, ಚಿತ್ರದುರ್ಗ 221, ಚಿಕ್ಕಬಳ್ಳಾಪುರ 104, ಚಿಕ್ಕಮಗಳೂರು 124, ದಕ್ಷಣ ಕನ್ನಡ 117, ದಾವಣಗೆರೆ 126, ಧಾರವಾಡ 172, ಗದಗ 95, ಹಾಸನ 193, ಹಾವೇರಿ 133, ಕಲ್ಬುರ್ಗಿ 319, ಕೋಲಾರ 89, ಕೊಪ್ಪಳ 187, ರಾಯಚೂರು 189, ಯಾದಗಿರಿ 157, ಉತ್ತರ ಕನ್ನಡ 93, ಉಡುಪಿ 32, ಕೊಡಗು 18, ರಾಮನಗರ 136, ಮಂಡ್ಯ 197, ತುಮಕೂರು 291, ಮೈಸೂರು 220, ಶಿವಮೊಗ್ಗ 142, ಹೊರ ರಾಜ್ಯದಿಂದ 274 .
ಜಾಗೃತಿ ಮೂಡಿಸಲು ಸೂಚನೆ
ಪಶು ಕಲ್ಯಾಣ ಸಹಾಯವಾಣಿಯ ಬಗ್ಗೆ ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಲು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು ಇದರ ಲಾಭವನ್ನು ರಾಜ್ಯದ ಎಲ್ಲ ರೈತರಿಗೆ ಹಾಗೂ ಜಾನುವಾರು ಕೃಷಿಯಲ್ಲಿ ತೊಡಗಿದವರಿಗೆ ತಲುವಂತೆ ಮಾಡಿ ಎಂದು ಸಚಿವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು
MUST WATCH
ಹೊಸ ಸೇರ್ಪಡೆ
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.