31 ಮಂದಿಗೆ ಅತ್ಯುತ್ತಮ ಶಿಕ್ಷಕ ಗರಿ


Team Udayavani, Sep 5, 2017, 6:30 AM IST

Tanveer-Sait,.jpg

ಬೆಂಗಳೂರು: ಮಲೆನಾಡ ಗಾಂಧಿ ಎಚ್‌.ಜಿ.ಗೋವಿಂದಗೌಡರ ಹೆಸರಿನ ಅತ್ಯುತ್ತಮ ಶಾಲಾ ಪ್ರಶಸ್ತಿ ಸೇರಿದಂತೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ ಶಾಲೆಯ 20 ಹಾಗೂ ಪ್ರೌಢಶಾಲೆಯ 11 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

ಈ ಸಂಬಂಧ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್ ಪ್ರಸಕ್ತ ಸಾಲಿನ ಮಲೆನಾಡ ಗಾಂಧಿ ಎಚ್‌.ಜಿ. ಗೋವಿಂದಗೌಡರ ಹೆಸರಿನ ಅತ್ಯುತ್ತಮ ಶಾಲಾ ಪ್ರಶಸ್ತಿಗೆ ದೇವನಹಳ್ಳಿಯ ಬೈಚಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ತುಮಕೂರಿನ ನಾಗವಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಆಯ್ಕೆ ಆಯ್ಕೆಮಾಡಲಾಗಿದೆ. ಸೆ.5ರಂದು ಬೆಂಗಳೂರಿನ ವಸಂತನಗರದ ಡಾ.ಅಂಬೇಡ್ಕರ್‌ ಭವನದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ಗುರುಚೇತನ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ ಎಂದರು.

ಪ್ರಾಥಮಿಕ ಶಾಲಾ ವಿಭಾಗದ ಉತ್ತಮ ಶಿಕ್ಷಕರು:
*ಸಹ ಶಿಕ್ಷಕ ಎಚ್‌.ಎಂ. ಕೊಟ್ರೇಶ-ರಾಯಚೂರು
*ಮುಖ್ಯ ಶಿಕ್ಷಕ ರಂಗಪ್ಪ ಮಲ್ಲಪ್ಪ ದಾದಿ-ಬಾಗಲಕೋಟೆ
*ಸಹ ಶಿಕ್ಷಕಿ ಯು. ಅಹಲ್ಯಾ- ಉಡುಪಿ
*ಸಹ ಶಿಕ್ಷಕಿ ಎಸ್‌. ಎಚ್‌. ಶಿವಲೀಲಾ-ಕಲಬುರಗಿ
* ಮುಖ್ಯಶಿಕ್ಷಕ ನರಸಪ್ಪ ಕವಿ-ಬೀದರ್‌
*ಸಹ ಶಿಕ್ಷಕ ಪಂಚಾಕ್ಷರಯ್ಯ. ಬಿ. ಮುಧೋಳಮಠ-ಗದಗ
*ಮುಖ್ಯಶಿಕ್ಷಕ ವಿಲ್ಸನ್‌ ಜೆ.ಮೈಲಿ-ಧಾರವಾಡ
*ಸಹ ಶಿಕ್ಷಕ ಎನ್‌. ಮಂಜು-ಮಂಡ್ಯ
* ಸಹಶಿಕ್ಷಕ ಮಧುಸೂಧನ-ಹೊಸಪೇಟೆ
* ಸಹ ಶಿಕ್ಷಕ ಅಶೋಕ ಭೀಮಪ್ಪಾ ಕೌಲಗುಡ-ಬೆಳಗಾವಿ
* ಮುಖ್ಯಶಿಕ್ಷಕಿ ವೇದಾಬಾಯಿ ಗಂ.ಬಾಲಕೃಷ್ಣ ದೇಸಾಯಿ-ಕೊಪ್ಪಳ
* ಮುಖ್ಯಶಿಕ್ಷಕ ನೂರಜಹಾಂ ಎಚ್‌. ಶೇಖ್‌-ಉತ್ತರಕನ್ನಡ
* ಮುಖ್ಯಶಿಕ್ಷಕ ಎಸ್‌. ಬಸಣ್ಣ-ಬೆಂ.ಗ್ರಾಮಾಂತರ
* ಮುಖ್ಯಶಿಕ್ಷಕ ಪಿ.ಎಂ. ತಟ್ಟಿಮನಿ-ಧಾರವಾಡ
* ಮುಖ್ಯಶಿಕ್ಷಕ ನೂರುಲ್ಲಾ ಸಾಹಿಬ್‌-ಚಿಕ್ಕಬಳ್ಳಾಪುರ
* ಸಹಶಿಕ್ಷಕ ಸಿದ್ದಲಿಂಗೇಗೌಡ-ಹಾಸನ
*ಸಹ ಶಿಕ್ಷಕಿ ಎಸ್‌.ಎಂ. ಲೀಲಾವತಿ- ಬೆಂ.ಗ್ರಾಮಾಂತರ
*ಮುಖ್ಯ ಶಿಕ್ಷಕಿ ಜೋಯಾÕ ಹೆನ್ರಿಟಾ-ದಕ್ಷಿಣ ಕನ್ನಡ
* ಮುಖ್ಯಶಿಕ್ಷಕಿ ಎ.ಎಸ್‌. ಶೈಲಜ- ಶಿವಮೊಗ್ಗ
*ಸಹಶಿಕ್ಷಕಿ ಎನ್‌.ಎಚ್‌.ಪದ್ಮಾವತಿ-ಮೈಸೂರು

ಪ್ರೌಢಶಾಲಾ ವಿಭಾಗ
* ಸಹ ಶಿಕ್ಷಕ ಬಿ. ತಿಮ್ಮ ನಾಯ್ಕ-ಬ್ರಹ್ಮಾವರ
* ಸಹ ಶಿಕ್ಷಕ ರಿಜ್ವಾನ್‌ ಬಾಷಾ ಸಾಹೇಬ್‌-ತುಮಕೂರು
* ಸಹ ಶಿಕ್ಷಕ ಗಡಿಶಟ್ಟೆಪ್ಪ ಸುಂಕದ-ರಾಯಚೂರು
* ದೈಹಿಕ ಶಿಕ್ಷಕ ಆರ್‌. ಜೇಮ್ಸ್‌-ಕೆ.ಆರ್‌.ನಗರ
* ಮುಖ್ಯಶಿಕ್ಷಕ ಬಿ.ಕೆ.ಸುಂದರೇಶ-ಚಾಮರಾಜನಗರ
* ದೈಹಿಕ ಶಿಕ್ಷಕ ಡಾ.ರಮೇಶಪ್ಪ ಜಿ.-ದೇವನಹಳ್ಳಿ
* ಮುಖ್ಯಶಿಕ್ಷಕ ಎಸ್‌.ಆರ್‌.ಕಲಾದಗಿ- ಧಾರವಾಡ
* ಸಹ ಶಿಕ್ಷಕ ಟಿ. ಸದಾಶಿವಪ್ಪ-ಚಿಕ್ಕಬಳ್ಳಾಪುರ
*ಸಹ ಶಿಕ್ಷಕ ಡಾ. ಎಂ. ರವೀಂದ್ರ ರೆಡ್ಡಿ-ಸರ್ಜಾಪುರ
* ಸಹ ಶಿಕ್ಷಕ ರಮೇಶ ಎಂ.ಬಾಯಾರು ಬಂಟ್ವಾಳ
* ಚಿತ್ರಕಲಾ ಶಿಕ್ಷಕ ಸತೀಶ ವಿಶ್ವೇಶ್ವರ ಹೆಗಡೆ-ಶಿರಸಿ

ವಿಶೇಷ ಶಿಕ್ಷಕ ಪ್ರಶಸ್ತಿ:
ರಾಜೀವ್‌ ಗಾಂಧೀ ಸ್ಮಾರಕ ಅತ್ಯುತ್ತಮ ವಿಜ್ಞಾನ ಶಿಕ್ಷಕರ ಪ್ರಶಸ್ತಿಯನ್ನು ಚಾಮರಾಜನಗರ ಜಿಲ್ಲೆಯ ಎನ್‌. ದಿವಾಕರ ಹಾಗೂ ಕಲಬುರಗಿಯ ಸುರೇಖಾ ಜಗನ್ನಾಥ, ವೈಜ್ಞಾನಿಕ ಕ್ಷೇತ್ರ ವಿಶೇಷ ಶಿಕ್ಷಕ ಪ್ರಶಸ್ತಿಯನ್ನು ಬೆಂ.ಗ್ರಾಮಾಂತರ ಜಿಲ್ಲೆಯಕೆ. ಸೀತಾರಾಮಯ್ಯ, ಕೊಪ್ಪಳದ ಉಮೇಶ. ಎಸ್‌.ವಂಕಲಕುಂಟಿ, ದಾವಣಗೆರೆಯ ಜೆ.ಪಿ. ಲಿಂಗೇಶಮೂರ್ತಿ ಹಾಗೂ ಹಾವೇರಿಯ ಡಿ.ಎಚ್‌. ದಯಾನಂದ ಪಡೆದಿದ್ದಾರೆ.  ಶೈಕ್ಷಣಿಕ ಕ್ಷೇತ್ರದ ವಿಶೇಷ ಪ್ರಶಸ್ತಿಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಎಂ.ಎಂ. ಉಷಾರಾಣಿ, ಬೆಳಗಾವಿಯ ಲಲಿತಾ ಮಹಾವೀರ ಕ್ಯಾಸನ್ವರ, ಕೋಲಾದ ಅನ್ವರುಲ್ಲಾ ಹಸನ್‌ ಹಾಗೂ ಚಿತ್ರದುರ್ಗದ ಟಿ.ಎಚ್‌. ಕುಮಾರ್‌ ಪಡೆದಿದ್ದಾರೆ. ಹಾಗೆಯೇ ಗಣನೀಯ ಸಾಧನೆ ತೋರಿದ ಸರ್ಕಾರಿ  ಪಿಯು ಕಾಲೇಜಿನ 2 ಪ್ರಾಂಶುಪಾಲರು ಮತ್ತು 8 ಉಪನ್ಯಾಸಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅತ್ಯುತ್ತಮ ಎಸ್‌ಡಿಎಂಸಿಗಳು:
ಬಾಗಲಕೋಟೆಯ ತುಳಸಿಗೆರೆ ಸರ್ಕಾರಿ ಕುವೆಂಪು ಶತಮಾನೋತ್ಸವ ಮಾದರಿ ಪ್ರಾಥಮಿಕ ಶಾಲೆ, ಮೈಸೂರು ಜಿಲ್ಲೆಯ ಹೆಬ್ಟಾಳು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಡ್ಯದ ಪಾಂಡವಪುರದ ಫ್ರಂಚ್‌ರಾಕ್ಸ್‌ ಶತಮಾನೋತ್ಸವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಚಿತ್ರದುರ್ಗದ ಹೊಳಲ್ಕೆರೆಯ ಸ.ಹಿ.ಪ್ರಾ.ಶಾಲೆ ಹಾಗೂ ರಾಯಚೂರಿನ ಸ.ಹಿ.ಪ್ರಾ.ಶಾಲೆಯು ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ ಪಡೆದಿದೆ.

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

5

Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.