ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟ
Team Udayavani, Sep 4, 2018, 6:50 AM IST
ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗಾಗಿ ಪ್ರಾಥಮಿಕ ಶಾಲಾ ವಿಭಾಗದ 20
ಶಿಕ್ಷಕರು ಮತ್ತು ಪ್ರೌಢಶಾಲಾ ವಿಭಾಗದ 10 ಶಿಕ್ಷಕರನ್ನು ಮತ್ತು ಪ್ರೌಢಶಾಲಾ ವಿಭಾಗದ ಒಬ್ಬ ವಿಶೇಷ ಶಿಕ್ಷಕರನ್ನು
ಆಯ್ಕೆ ಮಾಡಲಾಗಿದೆ.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಮಣಿಪಾಲದ ಸರಳೇಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆಯ ಮುಖ್ಯ ಶಿಕ್ಷಕಿ ಬಿ.ಬೇಬಿ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಲಯದ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ಶಂಕರ್, ಸೋಮವಾರಪೇಟೆಯ ಮುಳ್ಳೂರು ಸ.ಕಿ.ಪ್ರಾ.ಶಾಲೆಯ ಸಹ ಶಿಕ್ಷಕ ಸಿ.ಎಸ್.ಸತೀಶ್, ಮಾಲೂರಿನ ಪುರಲಕ್ಕೂರು ಸ.ಕಿ.ಪ್ರಾ.ಶಾಲೆಯ ಸಹ ಶಿಕ್ಷಕ ಎಂ.ರಮೇಶ್, ತಿಪಟೂರಿನ ಉಪ್ಪಿನಹಳ್ಳಿ ಸ.ಕಿ.ಪ್ರಾ. ಶಾಲೆಯ ಸಹ ಶಿಕ್ಷಕ ಜಿ.ಕೆ.ಶ್ರೀರಾಮಯ್ಯ, ಕಾರವಾರದ ಕದ್ರಾ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ಜೈರಾಮ ಎಂ.ಭಟ್, ಲಿಂಗಸುಗೂರಿನ ಈಚನಾಳ ತಾಂಡದ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ಹುಲ್ಲಪ್ಪ ಎಸ್.ವನಕಿಹಾಳ, ಶಿರಸಿ ಶೈಕ್ಷಣಿಕ ಜಿಲ್ಲೆ ಯಲ್ಲಾಪುರ ಹಿತ್ಲಳ್ಳಿ ಸ.ಹಿ.ಪ್ರಾ. ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಯಮುನಾ ಪಿ.ನಾಯ್ಕ, ಗೋಕಾಕ್‌ನ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ಸಂತೋಷ್ ಮಡಿವಾಳಪ್ಪ ತಡಸಲಿ, ಅರಸೀಕೆರೆಯ ಮಹಾದೇವರ ಹಳ್ಳಿಯ ಸ.ಹಿ.ಪ್ರಾ.ಶಾಲೆಯ ಬಡ್ತಿ ಮುಖ್ಯ ಶಿಕ್ಷಕಿ ಮಹಾಲಕ್ಷ್ಮಮ್ಮ, ಚಿಕ್ಕಮಗಳೂರಿನ ಗಾಂಧಿಗ್ರಾಮದ ಸ.ಕಿ.ಪ್ರಾ.ಶಾಲೆಯ ಸಹ ಶಿಕ್ಷಕ ಸಿ.ತಿಮ್ಮೇಶಪ್ಪ, ಹೊಳಲ್ಕೆರೆ
ಸಿಂಗೇನಹಳ್ಳಿ ಸ.ಹಿ.ಪ್ರಾ.ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಜಿ.ರೇವಣ್ಣ, ಯಾದಗಿರಿಯ ಮುದಾಳದ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ಬಾಬುಗಂಗು ಚವ್ಹಾಣ, ಗದಗದ ಸೋಮವಾರಪುರ ಸಣ್ಣತಾಂಡೆದ ಸ.ಹಿ.ಪ್ರಾ.ಶಾಲೆಯ ಮಲ್ಲೇಶ್ ಡಿ.ಹರಿವಾಣ, ಸೇಡಂನ ಇಟಕಾಲ ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕ ಟಿ.ನೀಲಪ್ಪ, ಬೆಂಗಳೂರು ಪೂರ್ಣಪುರದ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಪ್ರಸ್ಸಿಲ್ಲ ಶಾಂತ ಕುಮಾರಿ, ಕೊಪ್ಪಳದ ಹಲವಾಗಲಿ ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕ ವೆಂಕಟರೆಡ್ಡಿ ಬಸವರೆಡ್ಡಿ ಇಮ್ಮಡಿ, ಭದ್ರಾವತಿಯ ಸುಲ್ತಾನ ಮಟ್ಟಿ ಸ.ಕಿ.ಪ್ರಾ.ಶಾಲೆಯ ಸಹ ಶಿಕ್ಷಕ ಎಂ.ಆರ್.ರೇವಣಪ್ಪ, ಬಾಗಲಕೋಟೆಯ ಗುಂಡನಪೆರ್ಲೆ ಸ.ಕ್ರಿ.ಶಾಲೆಯ ಸಹ ಶಿಕ್ಷಕ ವೈ.ಆರ್. ಭೂತಾಳಿ, ಯರಗುಪ್ಪಿ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಶಾಂತವ್ವ ಹ.ಶಿವಣ್ಣನವರ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗ: ಪ್ರೌಢಶಾಲಾ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಆಯುರ್ವೇದ
ಭೂಷಣ ಎಂ.ವಿ.ಶಾಸಿOಉ ಪ್ರೌಢಶಾಲೆಯ ಮುಖ್ಯಶಿಕ್ಷಕ ಪಿ. ಎನ್.ಪ್ರಕಾಶ್ ರಾವ್, ದ.ಕ.ಜಿಲ್ಲೆಯ ಬೆಳ್ತಂಗಡಿ
ತಾಲೂಕಿನ ನಡದ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಎಸ್.ಯಾಕೂಬ್, ತುಮಕೂರು ಸಿದಟಛಿಗಂಗಾ ಮಠದ
ಎಸ್‌ಎಸ್‌ಆರ್‌ಎಚ್‌ಎಸ್ ಪ್ರೌಢಶಾಲೆಯ ಸಹ ಶಿಕ್ಷಕ ಶಿವಕುಮಾರ್, ಹಿರಿಯೂರು ಮದಕರಿನಾಯಕನ ಕೋಟೆಯ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಚಿದಾನಂದಸ್ವಾಮಿ, ಶಿರಸಿ ಗಣೇಶನಗರ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಕೃಷ್ಣಮೂರ್ತಿ ಎಲ್.ಭಟ್, ವಿರಾಜಪೇಟೆಯ ಎಸ್‌ಸಿಸಿ ಅಧಿಕಾರಿ ಕೆ.ಎನ್. ಮಂಜುನಾಥ್, ಬೆಂಗಳೂರು ಉತ್ತರ ದಾಸರಹಳ್ಳಿ ಅಗ್ರಹಾರದ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಸ್.ಬಿರಾದಾರ್, ನವಲಗುಂದದ
ಕೊಂಡಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಬಸವರಡ್ಡಿ ಅಡಿವೆಪ್ಪ ರಂಗಣ್ಣವರ, ಮಧುಗಿರಿಯ
ಐ.ಡಿ.ಹಳ್ಳಿ ಪ್ರೌಢಶಾಲೆಯ ಸಹ ಶಿಕ್ಷಕ ರಂಗನಾಥಪ್ಪ ಮತ್ತು ಹೊಸಕೋಟೆಯ ಕಾರಿಗನೂರು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಬಿ.ಸೈಯದ್ ಆಯ್ಕೆಯಾಗಿದ್ದಾರೆ.
ವಿಶೇಷ ಶಿಕ್ಷಕರ ವಿಭಾಗದಲ್ಲಿ ಮೈಸೂರು ವರುಣದ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಸೌಮ್ಯ ಜೈನ್
ಅವರಿಗೆ ಪ್ರಶಸ್ತಿ ಲಭಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.