ಭಕ್ತಿ-ಭಾವ, ಸಡಗರದ ಹನುಮ ಜಯಂತಿ
Team Udayavani, Dec 21, 2018, 11:56 AM IST
ಬೆಂಗಳೂರು: ನಗರದೆಲ್ಲೆಡೆ ಗುರುವಾರ ಹನುಮಂತನ ಜಯಂತಿಯನ್ನು ಭಕ್ತಿಭಾವ, ಸಡಗರದಿಂದ ಆಚರಿಸಲಾಯಿತು. ನಗರದ ಎಲ್ಲಾ ಆಂಜನೇಯ ಹಾಗೂ ಶ್ರೀರಾಮ ಮಂದಿರಗಳಲ್ಲಿ ಮುಂಜಾನೆಯಿಂದಲೇ ದೇವರ ಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರ, ಹೋಮ, ವಿಶೇಷ ಪೂಜೆಗಳು ಆರಂಭವಾಗಿದ್ದವು. ಲಕ್ಷಾಂತರ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ರಾಮಭಕ್ತ ಹನುಮನ ದರ್ಶನ ಪಡೆದು ಪುನೀತರಾದರು.
ಮೈಸೂರು ರಸ್ತೆಯ ಪುರಾತನ ಗಾಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ದೇವರ ಮೂರ್ತಿಗೆ ಹೂವಿನ ಅಲಂಕಾರ, ತೋಮಾಲೆ ಹಾಗೂ ವಡೆಮಾಲೆ ಅರ್ಪಣೆ ಮಾಡಲಾಗಿತ್ತು. ದೇವಾಲಯದ ಆವರಣದಲ್ಲಿನ ಸೀತಾರಾಮ ಗುಡಿಯಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯ ಸ್ವಾಮಿಗೆ ಬೆಳ್ಳಿ ಕವಚ ಧಾರಣೆಯೊಂದಿಗೆ ವಿಶೇಷ ಹೂವಿನ ಅಲಂಕಾರ
ಮಾಡಲಾಗಿತ್ತು. ಇನ್ನು ದೇವಾಲಯದಲ್ಲಿ ಧನುರ್ಮಾಸದ ಅಂಗವಾಗಿ ದಿನ ಪೂರ್ತಿ ಭಜನಾ ಕಾರ್ಯಕ್ರಮ ನಡೆಯಿತು. ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಲಾಡು ಪ್ರಸಾದ ವಿತರಿಸಲಾಯಿತು. ದೇವಾಲಯದ ಬಳಿಯ ಪೂಜಾ ಸಾಮಗ್ರಿ ಮಳಿಗಳು ಆಂಜನೇಯ ಯಂತ್ರಕೊಳ್ಳುವ ಭಕ್ತರಿಂದ ತುಂಬಿದ್ದವು. ಯಡಿಯೂರಿನ ಪ್ರಸನ್ನ ಆಂಜನೇಯ ದೇವಸ್ಥಾನದಲ್ಲಿ ಬೆಳಿಗ್ಗೆ ಸುಪ್ರಭಾತ ಸೇವೆ, ಅಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ಮತ್ತು ಅನ್ನಪ್ರಸಾದ ಕಾರ್ಯಕ್ರಮ ಹಮ್ಮಿಕೊಳ್ಳಾಗಿತ್ತು.
ಸುವರ್ಣ ಮಹೋತ್ಸವ: ಜಯನಗರದ ರಾಗೀಗುಡ್ಡದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಈ ಬಾರಿ ಹನುಮ ಜಯಂತಿಯ ಸುವರ್ಣ ಮಹೋತ್ಸ ಆಚರಿಸಲಾಯಿತು. ಮುಂಜಾನೆ ವಿವಿಧ ಅಭಿಷೇಕಗಳನ್ನು ಮಾಡಲಾಯಿತು. ಆನಂತರ ವಜ್ರ ಕಿರೀಟ ಸಹಿತ ವಜ್ರ ಕವಚ ಧಾರಣೆಯೊಂದಿಗೆ ಹನುಮ ಮೂರ್ತಿಯನ್ನು ಶೃಂಗರಿಸಲಾಗಿತ್ತು. ಸಾವಿರಾರು ಭಕ್ತಯರು ಕಣ್ತುಂಬಿಕೊಂಡರು. ಸಂಜೆ ಭರತನಾಟ್ಯ, ಯಕ್ಷಗಾನದಂತಹ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ವಿವಿಧೆಡೆ ಹನುಮ ಜಯಂತಿ: ನಗರದಾದ್ಯಂತ ಆಂಜನೇಯ ಸ್ವಾಮಿ ದೇವಾಲಯ ಹಾಗೂ ಶ್ರೀ ರಾಮ ಮಂದಿರಗಳು ತಳಿರು ತೋರಣ, ಹೂ ಹಾಗೂ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದ್ದವು. ಪ್ರಮುಖವಾಗಿ ಲಾಲ್‌ಬಾಗ್ ಬಳಿಯ ಗುಟ್ಟೆ ವೀರಾಂಜನೇಯ ಸ್ವಾಮಿ ದೇವಸ್ಥಾನ, ಕೆ.ಆರ್. ಮಾರುಕಟ್ಟೆಯ ಕೋಟೆ ಬಳಿಯ ಆಂಜನೇಯ ಸ್ವಾಮಿ ದೇವಾಲಯ, ಅರಮನೆ ರಸ್ತೆಯ ಓಣಿ ಆಂಜನೇಯ ಮಂದಿರ, ಉಲ್ಲಾಳ ಸಮೀಪದ ಸೊಣ್ಣೇನಹಳ್ಳಿಯಲ್ಲಿಯ ವೀರಾಂಜನೇಯ ಸ್ವಾಮಿಯ ದೇವಸ್ಥಾನ, ಕತ್ತರಿಗುಪ್ಪೆಯ ಹರಕೆ ಹನುಮ ದೇವಸ್ಥಾನ,
ವಿಜಯನಗರದ ಸನಾತನ ಭಕ್ತ ಮಂಡಳಿ, ಆರ್‌ಪಿಸಿ ಬಡಾವಣೆಯ ಪಂಚಮುಖೀ ಆಂಜನೇಯ ದೇವಾಲಯ, ಮಾರತ್‌ಹಳ್ಳಿಯ ಆಂಜನೇಯಸ್ವಾಮಿ ದೇವಾಲಯ, ದಾಸನಪುರದ ವೀರಾಂಜನೇಯಸ್ವಾಮಿ, ಹೊಸಕೆರೆಹಳ್ಳಿಯ
ಅಭಯಾಂಜನೇಯ ಸ್ವಾಮಿ, ಯಶವಂತಪುರದ ದಾರಿ ಆಂಜನೇಯ ಸ್ವಾಮಿ ದೇವಾಲಯ, ಗುಟ್ಟಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಹನುಮ ಜಯಂತಿಯ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.