ಭಾವನ ಮನೆಗೆ ಕನ್ನ ಹಾಕಿದ್ದ ಮೈದುನ
Team Udayavani, Mar 19, 2017, 11:35 AM IST
ಬೆಂಗಳೂರು: ಕೆ.ಆರ್.ಪುರ ಶಾಸಕ ಭೈರತಿ ಬಸವರಾಜು ಅವರ ನಾದಿನಿ ಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಲಾರದ ಮಾಲೂರು ತಾಲೂಕಿನ ಲಕ್ಕೇನಹಳ್ಳಿಯ ಮಂಜೇಶ್(21) ಬಂಧಿತ. ಆರೋಪಿಯಿಂದ 1.60 ಕೋಟಿ ರೂ. ಮೌಲ್ಯದ 5 ಕೆ.ಜಿ ತೂಕದ ವಜ್ರ ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಮಂಜೇಶ್ ಶ್ರೀಮಂತನಾಗಬೇಕು ಎಂಬ ಆಸೆಯಿಂದ ಕಳವು ಮಾಡಿದ್ದ. ಕದ್ದ ಚಿನ್ನಾಭರಣಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಕಟ್ಟಿ ಕಪ್ಪು ಟಿ ಶರ್ಟನಲ್ಲಿ ಸುತ್ತಿ ಆವಲಹಳ್ಳಿ ಠಾಣಾ ವ್ಯಾಪ್ತಿಯ ರಾಂಪುರ ಮುಖ್ಯರಸ್ತೆಯಲ್ಲಿರುವ ನಿರ್ಮಾಣ ಹಂತದ ಎಸ್‌ಎಲ್‌ಎನ್ ಲೇಔಟ್‌ನ ಒಳಚರಂಡಿಯಲ್ಲಿ ಬಚ್ಚಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದೂರುದಾರರ ಸಂಬಂಧಿ: ಶಾಸಕ ಭೈರತಿ ಬಸವರಾಜು ಅವರ ನಾದಿನಿ ಲೀಲಮ್ಮ ಅವರ ಮಕ್ಕಳಾದ ಶ್ರೀನಿವಾಸ್ ಮತ್ತು ಗಿರೀಶ್ ಎನ್‌ಆರ್‌ಐ ಲೇಔಟ್‌ನಲ್ಲಿ ವಾಸವಾಗಿದ್ದಾರೆ. ಬಂಧಿತ ಮಂಜೇಶ್, ಗಿರೀಶ್ ಅವರ ಪತ್ನಿಯ ಸೋದರ ಎಂದು ತಿಳಿದು ಬಂದಿದೆ. ಡಿಪ್ಲೋಮಾ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟಿದ್ದ ಮತ್ತು ಸ್ಥಳೀಯವಾಗಿ ರಾಜಕೀಯ ಮಾಡಿಕೊಂಡಿದ್ದ ಮಂಜೇಶ್,
ಮಾ.15 ರ ರಾತ್ರಿ ಸುಮಾರು 8 ಗಂಟೆಗೆ ಸುಮಾರಿಗೆ ಎನ್‌ಆರ್‌ಐ ಲೇಔಟ್‌ನಲ್ಲಿರುವ ತನ್ನ ಭಾವ ಗಿರೀಶ್ ಅವರ ಮನೆಯಲ್ಲಿ ಬಾಲ್ಕನಿಯ ಬಾಗಿಲು ಮುರಿದು ಚಿನ್ನಾಭರಣಗಳನ್ನು ಕಳವು ಮಾಡಿದ್ದ. ಶಾಸಕ ಭೈರತಿ ಬಸವರಾಜು ಅವರ ಮಗಳ ಮದುವೆ ಹೋಗಿದ್ದ ಗಿರೀಶ್ ಕುಟುಂಬ ತಡರಾತ್ರಿ ಒಂದು ಗಂಟೆ ಸುಮಾರಿಗೆ ವಾಪಸ್ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಮದುವೆ ಮನೆಯಲ್ಲೇ ಇದ್ದ ಆರೋಪಿ: ಬಂಧಿತ ಮಂಜೇಶ್ ಮದುವೆ ದಿನ ಗಿರೀಶ್ ಕುಟುಂಬದ ಜತೆಯೇ ಕಾರಿನಲ್ಲಿ ಮದುವೆ ಸಮಾರಂಭಕ್ಕೆ ಹೋಗಿದ್ದ. ಅಲ್ಲಿಂದ ಹೊರಬಂದು ಗಿರೀಶ್ ಮನೆಗೆ ಹೋಗಿ ಸುಮಾರು 45 ನಿಮಿಷಗಳಲ್ಲಿ ಕಳವು ಮಾಡಿ ಅದನ್ನು ಬೇರೆಡೆ ಬಚ್ಚಿಟ್ಟು, ನಂತರ ಮತ್ತೆ ಮದುವೆ ಮನೆಗೆ ಬಂದು ಯಾರಿಗೂ ಅನುಮಾನ ಬಾರದಂತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಪತ್ತೆಗಾಗಿ ಪೊಲೀಸರು ಮದುವೆ ಮನೆ ಮತ್ತು ಗಿರೀಶ್ ಮನೆ ಬಳಿಯ ಮೊಬೈಲ್ ನಂಬರ್‌ಗಳನ್ನು ಪರಿಶೀಲಿಸಿದ್ದರು. ಈ ವೇಳೆ ಮಂಜೇಶ್ ನಂಬರ್ ಒಂದೆರಡು ಬಾರಿ ಹೊಂದಾಣಿಕೆಯಾಗುತ್ತಿತ್ತು. ಬಳಿಕ ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಕೋಟ್ಯಂತರ ರೂ.ಚಿನ್ನಾಭರಣ ಹಾಗೂ ಆಸ್ತಿ ಹೊಂದಿರುವ ಗಿರೀಶ್ ಆದಾಯ ತೆರಿಗೆ ಇಲಾಖೆಯ ತನಿಖೆ ಎದುರಿಸಬೇಕಾಗುತ್ತದೆ ಎಂದು ಪೊಲೀಸರ ಮೊರೆ ಹೋಗುವುದಿಲ್ಲ ಎಂದು ಭಾವಿಸಿ ಕೃತ್ಯವೆಸಗಿರುವುದಾಗಿ ಮಂಜೇಶ್ ವಿಚಾರಣೆ ಸಂದರ್ಭದಲ್ಲಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ
Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ
Bengaluru: ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್ ಬಂಧನ
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.