ಕಬ್ಬನ್ ಪಾರ್ಕ್ಗೆ “ಭೀಮಾ ಬಿದಿರು’ ಬಲ
Team Udayavani, May 1, 2019, 3:10 AM IST
ಬೆಂಗಳೂರು: ಹಸಿರು ಉದ್ಯಾನವನ ಕಬ್ಬನ್ ಪಾರ್ಕ್ ಇನ್ಮುಂದೆ ವಿವಿಧ ಜಾತಿಯ ದೇಶಿ ಬಿದಿರು, ಔಷಧಿಯ ಸಸಿಗಳು ಹಾಗೂ ಅಧಿಕ ಪ್ರಮಾಣದಲ್ಲಿ ಆಮ್ಲಜನಕ ಹೊರ ಸೂಸುವ ಗಿಡ ಮರಗಳಿಂದ ಕಂಗೊಳಿಸಲಿದೆ.
ಈ ಹಿಂದೆ ಕಬ್ಬನ್ಪಾರ್ಕ್ನಲ್ಲಿ ಬಿದಿರು ಅನೇಕ ಸಂಖ್ಯೆಯಲ್ಲಿತ್ತು. ಆದರೆ ಇತ್ತೀಚೆಗಷ್ಟೇ ಅವು ಹೂ ಬಿಟ್ಟು ನೆಲಕ್ಕುರುಳಿದ್ದವು. ಹೀಗಾಗಿ, ಆ ಪ್ರದೇಶ ಸೇರಿದಂತೆ ಪಾರ್ಕ್ ಸುತ್ತಮುತ್ತ ಭೀಮಾ ಬಿದಿರು, ಗ್ರೀನ್ ಬಿದಿರು, ಬುದ್ಧ ಬಿದಿರು ಸೇರಿದಂತೆ ಸುಮಾರು 12 ಜಾತಿಯ ಬಿದಿರಿನ ತಳಿಗಳನ್ನು ತೋಟಗಾರಿಕೆ ಇಲಾಖೆ ನಾಟಿ ಮಾಡಲು ಮುಂದಾಗಿದೆ.
ಹೂ ಬಿಟ್ಟು ನೆಲಕ್ಕುರುಳಿರುವ ಬಿದಿರನ್ನು ಬೇರು ಸಮೇತ ಕೀಳುವ ಕೆಲಸ ಈಗಾಗಲೇ ಕಬ್ಬನ್ಪಾರ್ಕ್ನಲ್ಲಿ ನಡೆದಿದೆ. ಈ ಕಾರ್ಯ ಪೂರ್ಣಗೊಂಡ ಕೂಡಲೇ ಹೊಸ ಬಿದಿರಿನ ನಾಟಿ ಪ್ರಕ್ರಿಯೆ ನಡೆಯಲಿದೆ. ಜತೆಗೆ, ವಿವಿಧ ಜಾತಿಯ ಗಿಡಗಳನ್ನು ನಾಟಿ ಮಾಡುವ ಯೋಜನೆಯನ್ನು ತೋಟಗಾರಿಕೆ ಇಲಾಖೆ ರೂಪಿಸಿದ್ದು, ಮಳೆ ಬಿದ್ದ ಕೂಡಲೇ ಸಸಿ ನೆಡುವ ಕಾರ್ಯ ಆರಂಭವಾಗಲಿದೆ. ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಆಕ್ಸಿಜನ್ ನೀಡುವ “ಭೀಮಾ ಬಿದಿರು’: ಕಬ್ಬನ್ ಉದ್ಯಾನವನದಲ್ಲಿ ಯಾವೆಲ್ಲಾ ಸಸಿಗಳನ್ನು ನಾಟಿ ಮಾಡಬೇಕು ಎಂಬ ಬಗ್ಗೆ ತೋಟಗಾರಿಕೆ ಇಲಾಖೆ ಈ ಹಿಂದೆ ಹಿರಿಯ ಪರಿಸರ ತಜ್ಞ ಡಾ.ಎ.ಎನ್.ಯಲ್ಪಪ್ಪ ರೆಡ್ಡಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಿತ್ತು. ಈ ತಂಡ ಈಗಾಗಲೇ ಕೇರಳ ಮತ್ತು ತಮಿಳುನಾಡಿಗೆ ಭೇಟಿ ನೀಡಿ ಆಮ್ಲಜನಕ ಹೆಚ್ಚಿನ ಪ್ರಮಾಣದಲ್ಲಿ ನೀಡುವ ಸಸಿಗಳ ಬಗ್ಗೆ ಮಾಹಿತಿ ಕಲೆಹಾಕಿದೆ.
ಅದರಂತೆ ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕ ನೀಡುವ ಬಿದಿರಿನ ತಳಿಗಳು ಸೇರಿದಂತೆ ಇನ್ನಿತರ ಜಾತಿಯ ಸಸ್ಯಗಳನ್ನು ನಾಟಿ ಮಾಡಲಾಗುತ್ತಿದೆ. ತಮಿಳುನಾಡಿನಲ್ಲಿ ತರಹೇವಾರಿ “ಭೀಮಾ ಬಿದಿರು’ ತಳಿಯಿದ್ದು, ಇದು ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಹೊರ ಸೂಸುತ್ತದೆ. ಆ ಹಿನ್ನೆಲೆಯಲ್ಲಿ ಸಮಿತಿ ಸುಮಾರು 400 ಭೀಮಾ ಬಿದಿರಿನ ಮೆಳೆ ಕಬ್ಬನ್ ಪಾರ್ಕ್ನಲ್ಲಿ ನಾಟಿ ಮಾಡುವ ತೀರ್ಮಾನ ಕೈಗೊಂಡಿದೆ.
ಆರವತ್ತೇಳು ಜಾತಿಯ ಗಿಡ: ತೋಟಗಾರಿಕೆ ಇಲಾಖೆ ಕಬ್ಬನ್ ಪಾರ್ಕ್ ತುಂಬೆಲ್ಲಾ ಸುಮಾರು 67 ವಿವಿಧ ಜಾತಿಯ ಗಿಡಗಳನ್ನು ನಾಟಿ ಮಾಡಲು ತೀರ್ಮಾನಿಸಿದೆ. ನೆರಳಿನಲ್ಲಿ ಯಾವ ಜಾತಿ ಗಿಡಗಳನ್ನು ಹಾಗೂ ಬಿಸಿನಲ್ಲಿ ಯಾವ ಜಾತಿಯ ತಳಿಗಳನ್ನು ನೆಡಬೇಕು ಎಂಬುದನ್ನು ಪರಿಸರ ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಮಳೆಗಾಲದಲ್ಲಿ ಸಸಿಗಳನ್ನು ನಾಟಿ ಮಾಡಲಾಗವುದು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
“ಭೀಮಾ ಬಿದಿರಿನ ವೈಶಿಷ್ಟ್ಯ’: ಭೀಮಾ ಬಿದಿರು ಹೆಚ್ಚಿನ ವೈಶಿಷ್ಟ್ಯತೆಯಿಂದ ಕೂಡಿದೆ. ಈ ಬಿದಿರು ಇತರ ಜಾತಿಯ ಬಿದಿರಿನಂತೆ ಹೂ ಬಿಡುವುದಿಲ್ಲ. ಆದರೆ ವೇಗವಾಗಿ ಬೆಳೆಯುತ್ತದೆ. ಹೆಚ್ಚು ದಿನಗಳ ಕಾಲ ಬಾಳುತ್ತದೆ. ಇದರ ಒಂದು ಮೆಳೆ ಎಂಟು ಜನರಿಗೆ ಸಾಕಾಗುವಷ್ಟು ಆಕ್ಸಿಜನ್ ನೀಡುವ ಸಾಮರ್ಥಯವಿದೆ. ಈ ಎಲ್ಲಾ ಗುಣಗಳನ್ನು ಗಮನಿಸಿಯೇ ಕಬ್ಬನ್ ಉದ್ಯಾನವನದಲ್ಲಿ ಭೀಮಾ ಬಿದಿರು ನಾಟಿ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹಿರಿಯ ಪರಿಸರ ತಜ್ಞ ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ತಿಳಿಸಿದ್ದಾರೆ.
“ಉದಯವಾಣಿ’ಗೆ ಯೊಂದಿಗೆ ಮಾತನಾಡಿದ ಅವರು, ಕಬ್ಬನ್ಪಾರ್ಕ್ ಹಲವು ಕಡೆಗಳಲ್ಲಿ ಔಷಧಿಯ ಸಸ್ಯಗಳನ್ನು ನಾಟಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ . ಕ್ಯಾನ್ಸರ್ ನಿವಾರಕ ಔಷಧಿ ಸಸಿಗಳನ್ನು ನಾಟಿ ಮಾಡುವ ಆಲೋಚನೆ ಇದೆ ಎಂದರು.
ಕಬ್ಬನ್ ಪಾರ್ಕ್ನಲ್ಲಿ ಆಕ್ಸಿಜನ್ ಹೆಚ್ಚು ನೀಡುವ ಬಿದಿರಿನ ಮೆಳೆಗಳನ್ನು ನಾಟಿ ಮಾಡಲಾಗುವುದು. ಜೊತೆಗೆ ಔಷಧಿ ಸಸ್ಯಗಳು ಸೇರಿದಂತೆ ಸುಮಾರು 67 ಜಾತಿಯ ಗಿಡಗಳನ್ನು ನಾಟಿ ಮಾಡುವ ಯೋಜನೆ ರೂಪಿಸಲಾಗಿದೆ.
-ಮಹಾಂತೇಶ ಮುರುಗೋಡು,ತೋಟಗಾರಿಕೆ ಇಲಾಖೆ (ಕಬ್ಬನ್ ಉದ್ಯಾನ) ಉಪನಿರ್ದೇಶಕ
* ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
Mangaluru: ‘ಹೆಲಿಟೂರಿಸಂ’ಗೆ ಮುನ್ನುಡಿ ಬರೆದ ‘ಕುಡ್ಲ ಹೈ’ದರ್ಶನ
Mulki: ಉಗುಳಿದರೆ ದಂಡ; ಹಾಕುವವರು ಯಾರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.