World Cup: ವಿಶ್ವಕಪ್‌ ಕ್ರಿಕೆಟ್‌ ವೀಕ್ಷಣೆಗೆ ದೊಡ್ಡ ಪರದೆ

Team Udayavani, Nov 19, 2023, 10:57 AM IST

World Cup: ವಿಶ್ವಕಪ್‌ ಕ್ರಿಕೆಟ್‌ ವೀಕ್ಷಣೆಗೆ ದೊಡ್ಡ ಪರದೆ

ಬೆಂಗಳೂರು: ವಿಶ್ವಕಪ್‌ ಕ್ರಿಕೆಟ್‌ ಪಂದ್ಯದ ನೇರ ಪ್ರಸಾರ ವೀಕ್ಷಣೆಗೆ ಸಿಲಿಕಾನ್‌ ಸಿಟಿಯ ಹಲವಾರು ಪಂಚತಾರಾ ಹೋಟೆಲ್‌ ಗಳು, ಅಪಾರ್ಟ್‌ಮೆಂಟ್‌ಗಳು, ಕೆಲವೊಂದು ಬಾರ್‌ಗಳು, ರೆಸ್ಟೋರೆಂಟ್‌ಗಳು, ಕ್ಲಬ್‌, ಪಬ್‌ಗಳಲ್ಲಿ ಸ್ಕ್ರೀನಿಂಗ್‌ ವ್ಯವಸ್ಥೆ ಕಲ್ಪಿಸ ಲಾಗಿದ್ದು, ಲಕ್ಷಾಂತರ ಕ್ರಿಕೆಟ್‌ ಪ್ರಿಯರು ಇಲ್ಲಿ ಟಿಕೆಟ್‌ ಪಡೆದು ಕ್ರಿಕೆಟ್‌ ವೀಕ್ಷಿಸುವ ನಿರೀಕ್ಷೆಯಿದೆ. ಜತೆಗೆ ಕೆಲವು ಕಡೆ ವಿಶೇಷ ಆಫ‌ರ್‌ ಸಹ ಘೋಷಿಸಲಾಗಿದೆ.

ಎಲೆಕ್ಟ್ರಾನಿಕ್‌ ಸಿಟಿ, ಮಾರತ್ತಹಳ್ಳಿ, ವೈಟ್‌ಫೀಲ್ಡ್‌, ಕೋರಮಂಗಲ, ಯಶವಂತಪುರ, ಯಲಹಂಕ, ಮಲ್ಲೇಶ್ವರ, ಜಯನಗರ, ಜೆಪಿ ನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಅಪಾರ್ಟ್‌ಮೆಂಟ್‌ಗಳ ಮುಂದೆ ಈಗಾಗಲೇ ದೊಡ್ಡ ಪರದೆಗಳು ನಿಂತಿವೆ. ಅಪಾರ್ಟ್‌ಮೆಂಟ್‌ ಆವರಣದಲ್ಲೇ ಫ‌ುಡ್‌ಕೌಂಟರ್‌ ತೆರೆದು ಉಪಾಹಾರ ನೀಡುವ ವ್ಯವಸ್ಥೆ ಯೂ ನಡೆಯಲಿದೆ. ಬಾಡಿಗೆಗೆ ಇರುವ ಪ್ಲ್ರಾಟ್‌ಗಳಲ್ಲೂ ಇದಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಈಗಾ ಗಲೇ ಸಾಕಷ್ಟು ಪ್ಲ್ರಾಟ್‌ಗಳು ಬುಕ್‌ ಆಗಿವೆ. ಅಪಾ ರ್ಟ್‌ಮೆಂಟ್‌ ನಿವಾಸಿಗಳು ಕ್ರಿಕೆಟ್‌ ವೀಕ್ಷಿಸಲು ತುದಿಗಾಲಲ್ಲಿ ನಿಂತು ಕಾತುರರಾಗಿದ್ದಾರೆ. ಇನ್ನು ಸೆಂಚುರಿ ಕ್ಲಬ್‌, ಗಾಲ್ಫ್ ಕ್ಲಬ್‌, ಜಯನಗರ ಕ್ಲಬ್‌ ಸೇರಿದಂತೆ ಬೆಂಗಳೂರಿನಲ್ಲಿರುವ ಶೇ.70ರಷ್ಟು ಕ್ಲಬ್‌ಗಳಲ್ಲಿ ಕ್ರಿಕೆಟ್‌ ವಿಶ್ವಕಪ್‌ ನೇರ ಪ್ರಸಾರದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ನಗರದ ಬೌರಿಂಗ್‌ ಕ್ಲಬ್‌ನಲ್ಲಿ ಬಿಗ್‌ ಸ್ಕ್ರೀನ್‌ ಹಾಕಿ 500 ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಕೇವಲ ಕ್ರಿಕೆಟ್‌ ವೀಕ್ಷಿಸುವುದು ಮಾತ್ರವಲ್ಲದೇ ವಿಶೇಷ ಖಾದ್ಯ ತಯಾರಿಸಿ ಗ್ರಾಹಕರಿಗೆ ಒದಗಿಸಲು ದೊಡ್ಡ ಮಟ್ಟದಲ್ಲಿ ಸಿದ್ಧತೆಗಳು ನಡೆದಿವೆ.

ಮದ್ಯಪ್ರಿಯರಿಗೆ ಬಗೆ ಬಗೆಯ ಮದ್ಯಗಳೂ ಲಭ್ಯ ವಿರಲಿವೆ. ಒಟ್ಟಾರೆ ವಿಶ್ವಕಪ್‌ ಪಂದ್ಯ ವೀಕ್ಷಣೆ ಗಾಗಿ ನಡೆಸಿರುವ ಸಿದ್ಧತೆ ಗಮನಿಸಿದಾಗ ರಾಜ್ಯ ರಾಜ ಧಾನಿಯಲ್ಲಿ ವಿಶ್ವಕಪ್‌ ಕ್ರಿಕೆಟ್‌ ಪಂದ್ಯ ಪ್ರಾರಂಭ ವಾಗುವ ಸಮಯದಿಂದ ಹಿಡಿದು ಮುಗಿ ಯುವವರೆಗೂ ವಿಶ್ವಕಪ್‌ ಹಬ್ಬದ ಸಂಭ್ರಮ ಕಳೆಗಟ್ಟುವ ಲಕ್ಷಣ ಗೋಚರಿಸಿದೆ. ಕ್ರಿಕೆಟ್‌ ಪ್ರಿಯರೂ ಇಲ್ಲಿ ಸಂಭ್ರಮಿಸುತ್ತಾ ವಿಶ್ವಕಪ್‌ ವೀಕ್ಷಿಸುವ ಕುತೂಹಲದಲ್ಲಿದ್ದಾರೆ.

ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು: ಬೆಂಗಳೂರಿನ ಕೆಲವೊಂದು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ 500 ರೂ.ನಿಂದ ಸಾವಿರಾರು ರೂ. ವರೆಗೆ ಶುಲ್ಕ ಪಾವತಿಸಿ ದೊಡ್ಡ ಪರದೆಯಲ್ಲಿ ಕ್ರಿಕೆಟ್‌ ವೀಕ್ಷಿಸ ಬಹುದಾಗಿದೆ. ಇನ್ನು ಕ್ರಿಕೆಟ್‌ ವೀಕ್ಷಿಸುವವರಿಗೆ ವಿಶೇಷ ಆಸನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಬಹುತೇಕ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ ದೊಡ್ಡ ದೊಡ್ಡ ಸ್ಕ್ರೀನಿಂಗ್‌ಗಳು ರಾರಾಜಿಸುತ್ತಿವೆ. ಇಲ್ಲಿ ಮದ್ಯಕ್ಕೆ ಕೊರತೆ ಆಗದಂತೆ ಹೆಚ್ಚಿನ ಪ್ರಮಾಣದ ಮದ್ಯ ಸಂಗ್ರಹಿಸಿಡಲಾಗಿದೆ.

-ಬೈಗ್‌ ಬ್ರೂಸ್ಕಿ ಬ್ರೂಯಿಂಗ್‌ ಕಂಪನಿ- ಹೆಣ್ಣೂರು, ಗೋಲ್ಡ್‌ ರಶ್‌ ಬ್ರೂಸ್‌-ಹಳೆ ಮದ್ರಾಸು ರಸ್ತೆ, ಬ್ರೂಕ್ಲಿನ್‌-ಕಲ್ಯಾಣ ನಗರ, ಸೀಕ್ರೆಟ್‌ ಸ್ಟೋರಿ- ಇಂದಿರಾನಗರ, ರಾಹಿ ನಿಯೋ ಕಿಚನ್‌ ಆ್ಯಂಡ್‌ ಬಾರ್‌-ಸೇಂಟ್‌ ಮಾರ್ಕ್ಸ್ ರಸ್ತೆ, ಡ್ಯಾಡಿ- ಇಂದಿರಾನಗರ, ಪ್ಲೈ ಓವರ್‌ ಡ್ರಿಂಕರಿ-ಎಸ್ಟೀಮ್‌ ಮಾಲ್‌, ಹೆಬ್ಟಾಳ, ಬಿಗ್‌ ಪಿಚರ್‌-ಸರ್ಜಾಪುರ ರಸ್ತೆ, ಲಾರ್ಡ್‌ ಆಫ್ ದಿ ಡ್ರಿಂಕ್ಸ್‌-ವೈಟ್‌ಫೀಲ್ಡ್‌ ಸೇರಿದಂತೆ ನಗರದಲ್ಲಿರುವ ಪ್ರಸಿದ್ಧ ಬಾರ್‌ ಆ್ಯಂಡ್‌ ರೆಸ್ಟೋ ರೆಂಟ್‌ಗಳಲ್ಲಿ  ಸ್ಕ್ರೀನಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಗಲ್ಲಿ-ಗಲ್ಲಿಗಳಲ್ಲಿ ವೀಕ್ಷಣೆ:

ಬೆಂಗಳೂರಿನ ಗಲ್ಲಿ-ಗಲ್ಲಿಗಳಲ್ಲಿರುವ ಹೋಟೆಲ್‌, ಅಂಗಡಿಗಳಲ್ಲಿ ಟೀವಿ ವೀಕ್ಷಿಸಲು ನೂರಾರು ಮಂದಿ ಸೇರುವ ಸಾಧ್ಯತೆಗಳಿವೆ. ಗಲ್ಲಿ-ಗಲ್ಲಿಗಳಲ್ಲೂ ಕ್ರಿಕೆಟ್‌ ಹುಚ್ಚು ಹೆಚ್ಚಾಗಿದ್ದು, ಮದ್ಯ ಮಾರಾಟದಲ್ಲಿ ಭಾರಿ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳ ಮಾಲೀಕರು ತಿಳಿಸಿದ್ದಾರೆ. ಆದರೆ, ಭಾನುವಾರ ಹೋಟೆಲ್‌, ಅಂಗಡಿ, ಬೀದಿ ಬದಿ ವ್ಯಾಪಾರಿಗಳಿಗೆ ಕಡಿಮೆ ವ್ಯಾಪಾರವಾಗುತ್ತದೆ. ವಿಶ್ವಕಪ್‌ ಪಂದ್ಯ ಇರುವ ಹಿನ್ನೆಲೆಯಲ್ಲಿ ರಸ್ತೆಗಿಳಿಯುವವರ ಪ್ರಮಾಣ ಕಡಿಮೆಯಾಗಲಿದೆ.

ಸ್ವಿಗ್ಗಿ, ಜೊಮ್ಯಾಟೋಗೆ ಹೆಚ್ಚಿನ ಬೇಡಿಕೆ:

ವಿಶ್ವಕಪ್‌ ಪಂದ್ಯ ವೀಕ್ಷಿಸುವ ಬಹುತೇಕ ಕ್ರಿಕೆಟ್‌ ಅಭಿಮಾನಿಗಳು ಭಾನುವಾರ ಸ್ವಿಗ್ಗಿ, ಜೋಮ್ಯಾಟೋ ಸೇರಿದಂತೆ ಆನ್‌ಲೈನ್‌ ಮೂಲಕವೇ ಹೆಚ್ಚಿನ ಆಹಾರ ತರಿಸಿಕೊಳ್ಳಲಿದ್ದಾರೆ. ಹೀಗಾಗಿ ಆನ್‌ಲೈನ್‌ ಆಹಾರ ಡೆಲಿವರಿ ಸಂಸ್ಥೆಗಳಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಹೋಟೆಲ್‌ ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.